You cannot copy content of this page.
. . .

Category: ಮೈಸೂರು ಸ್ಪೆಷಲ್

ಮದುವೆಯಲ್ಲಿ DUSTBIN ಉಡುಗೊರೆ, ಇಲ್ಲಿ ಮಕ್ಕಳೇ ಸ್ವಚ್ಛತಾ ರಾಯಭಾರಿಗಳು..!

  ಇಲ್ಲಿ ಮಕ್ಕಳೇ ಸ್ವಚ್ಛತೆಯ ರಾಯಭಾರಿಗಳು. ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಇಡಲಾಗುತ್ತದೆ. ಪ್ರತಿದಿನ ಕಸ ವಿಲೇವಾರಿ ನಡೆಯುತ್ತದೆ. ಮದುವೆಯಲ್ಲಿ ಡಸ್ಟ್ಬಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ! ಇದು ಮಧ್ಯಪ್ರದೇಶದ ಇಂಧೋರ್‌ನ ಚಿತ್ರಣ. ಕಳೆದ ಮೂರು ಬಾರಿಯಿಂದ ಸತತವಾಗಿ ಸ್ವಚ್ಛ ನಗರಿ ಪಟ್ಟ ಪಡೆಯುತ್ತಾ ಬಂದಿರುವ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ನಾವೂ ಊಹಿಸಲೂ ಆಗದ ಸರಳ ವಿಧಾನಗಳನ್ನು ಬಳಸಿಕೊಂಡು ಸ್ವಚ್ಛತೆ ಕಪಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಗರಪಾಲಿಕೆಯೊಂದಿಗೆ ಜನರು ಕೈಜೋಡಿಸಿ ತಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ. ಇಂಧೋರ್ ೧೯ -೨೦ […]

ಸ್ವಚ್ಛತೆಗೆ ಇಂಧೋರ್ ಜನರ 7 ಹವ್ಯಾಸಗಳು, 4 ಸೂತ್ರಗಳು..!

  ಕಳೆದ 3 ವರ್ಷಗಳಿಂದ ಇಂಧೋರ್‍ ನಗರ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಯಾಕಂದ್ರೆ ಇಂಧೋರ್ ಸ್ವಚ್ಛವಾಗಿಟ್ಟುಕೊಳ್ಳಲು ಅಲ್ಲಿನ ಜನರು 7 ಪ್ರಮುಖ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ 4 ಸೂತ್ರಗಳನ್ನು ಅನುಸರಿಸಿಕೊಂಡಿದ್ದಾರೆ. ಇದನ್ನು ಮೈಸೂರಿನ ಜನರೂ ಅನುಸರಿಸಿದರೆ ನಮ್ಮ ನಗರವೂ ಸ್ವಚ್ಛವಾಗುವುದರಲ್ಲಿ ಅನುಮಾನವಿಲ್ಲ. 1. ಪ್ರತಿದಿನ ನಡೆಯುತ್ತದೆ ಕಸ ವಿಲೇವಾರಿ:   ಮುಂಚೆ ನಗರಪಾಲಿಕೆ ರಸ್ತೆಯಲ್ಲಿ ಕಸದ ಬುಟ್ಟಿಗಳನ್ನಿಟ್ಟು ಅದರಲ್ಲಿ ಕಸ ಹಾಕಲು ಜನರಿಗೆ ಹೇಳಿತ್ತು. ಆ ಪ್ರಯತ್ನ ಫಲಕಾರಿಯಾಗದ ಕಾರಣ ಜನರು ತಮ್ಮ […]

‘ಮಾಗಿ’ ಫಲ ಪುಷ್ಪಗಳಿಗೆ ‘ವಿದೇಶಿ ದುಂಬಿ’ಗಳ ಮುತ್ತಿಗೆ..

  ಮಾಗಿ ಉತ್ಸವದಿಂದ ಮೈಸೂರು ಎಂದಿಗಿಂತ ಕಳೆಗಟ್ಟಿದೆ. ಅರಮನೆ ಆವರಣದಲ್ಲಿ ವರ್ಣರಂಜಿತವಾಗಿ ನಳನಳಿಸುತ್ತಿರುವ ಹೂವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಾಗಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ. ದೂರದ ಫ್ರಾನ್ಸ್, ಇಟಲಿ, ಜರ್ಮನಿ, ಅಮೆರಿಕಾ ದೇಶಗಳಿಂದ ಪ್ರವಾಸಿಗರು ಅರಮನೆಗೆ ಆಗಮಿಸಿ ಮಾಗಿ ಉತ್ಸವದಲ್ಲಿ ಉತ್ಸಾಹದಿಂದ ಸಮಯ ಕಳೆಯುತ್ತಿದ್ದಾರೆ.  ಜೊತೆಗೆ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ನಿಂದ ಬಂದಿರುವ ಪ್ರವಾಸಿಗರನ್ನೂ ಕಾಣಬಹುದು. ವಿಶೇಷವೆಂದರೆ ಇಡೀ ಅರಮನೆ ಆವರಣದಲ್ಲಿರುವ ಶೇ.70ರಷ್ಟು ಪ್ರವಾಸಿಗರು […]

ದೇಶದ ಸಂಸ್ಕೃತಿ-ಸಾಧನೆಯ ಪ್ರತಿಬಿಂಬ; ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಸೋಮಣ್ಣ ಚಾಲನೆ

 ದೇಶದ ಸಂಸ್ಕೃತಿ-ಸಾಧನೆಯನ್ನು ಪ್ರತಿಬಿಂಬಿಸುವ ಫಲಪುಷ್ಪ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಾಂಸ್ಕೃತಿಕ ನಗರಿಯ ಅರಮನೆ ಅಂಗಳದಲ್ಲಿ ಬಗೆ ಬಗೆಯ ಮಾದರಿಯಲ್ಲಿ ಸಿಂಗಾರಗೊಂಡು ನಿಂತಿರುವ ಫಲಪುಷ್ಪಗಳು ನೋಡುಗರ ಕಣ್ಮನ ತಣಿಸುತ್ತಿದೆ.  ಮಾಗಿ ಉತ್ಸವದ ಪ್ರಯುಕ್ತ ಮೈಸೂರಿನ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.  ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಉಪಮಹಾಪೌರ ಶಫೀ ಅಹಮ್ಮದ್, ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ನಗರ ಪಾಲಿಕೆ ಆಯುಕ್ತ ಗುರುದತ್ತ […]

ಮೈಸೂರು ಆಕಾಶವಾಣಿಯಲ್ಲಿ ಸಂಗೀತ ವಾದ್ಯಗಳ ಅಪೂರ್ವ ಸಂಗಮ

`ನಾದಾಲಯ’ ಉದ್ಘಾಟಿಸಿದ ರಾಜವಂಶಸ್ಥ ಯದುವೀರ್ ಒಡೆಯರ್  ಮೈಸೂರು: ವಾದ್ಯಗಳಿಗೆ ವಯಸ್ಸಾಗಬಹುದೇ ಹೊರತು ಅದರಿಂದ ಹೊರಹೊಮ್ಮುವ ಸಂಗೀತಕ್ಕಲ್ಲ. ವೀಣೆ, ಹಾರ್ಮೋನಿಯಂ, ಕೊಳಲುಗಳನ್ನು ನುಡಿಸಿದಾಗ ಹೊರಹೊಮ್ಮುವ ಇಂಪಾದ ನಾದ ಕೇಳಿದರೆ ಆಗುವಷ್ಟೇ ಆನಂದ ಅವುಗಳನ್ನು ನೋಡಿದಾಗಲೂ ಆಗುತ್ತದೆ.  ನಗರದ ಆಕಾಶವಾಣಿಯಲ್ಲಿ ನೂತನವಾಗಿ ಸಿದ್ಧಪಡಿಸಿರುವ `ನಾದಾಲಯ-ಸಂಗೀತ ಸನ್ನಿಧಿ’ಯನ್ನು ಗುರುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.  ಸುಮಧುರ ನಾದವನ್ನು ಹೊಮ್ಮಿಸುವ ಸಂಗೀತ ವಾದ್ಯಗಳನ್ನು ನಾದಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ತಬಲ, ಮೃದಂಗ, ಕೊಳಲು, ಹಾರ್ಮೋನಿಯಂ, ಗಿಟಾರ್, ವೀಣೆ, ಪಿಟೀಲು ಮುಂತಾದ ಸಂಗೀತ […]

ಕಾರಂಜಿ ಕೆರೆಯಲ್ಲಿ ಉತ್ಸವದ ವೈಭವ

-ಬಿ.ಎನ್.ಚಂದ್ರಶೇಖರ್  ಸಾಂಸ್ಕೃತಿಕ ನಗರಿ ಮೈಸೂರಿನ ಕಾರಂಜಿ ಕೆರೆಯಲ್ಲಿ ಉತ್ಸವದ ವಾತಾವರಣ ರಂಗೇರಿತ್ತು. ಪ್ರಕೃತಿಯ ಮಡಿಲಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ ಪರಿಸರ ಪ್ರೇಮಿಗಳ ಕಿವಿಗೆ ಇಂಪೆರೆದಿತ್ತು. ಪ್ರಕೃತಿ ಪ್ರಿಯರು ಕೆರೆಯ ಸೊಬಗನ್ನು ಕಣ್ತುಂಬಿಕೊಂಡರು, ಹಲವರು ದೋಣಿ ವಿಹಾರ ಮಾಡಿದರು. ಕಾರಂಜಿ ಕೆರೆಯಲ್ಲಿ ಉತ್ಸವವೇ ಮೈವೆತ್ತಂತಿತ್ತು.  ೨೦ ವರ್ಷಗಳ ನಂತರ ಹೂಳೆತ್ತಿ ಅಭಿವೃದ್ಧಿಪಡಿಸಲಾದ ಕೆರಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಕಾರಂಜಿ ಕೆರೆ ಉತ್ಸವದಲ್ಲಿ’ ಪ್ರಕೃತಿ ಪ್ರೇಮಿಗಳು ಮಿಂದೆದ್ದರು. ಜೀವವೈವಿಧ್ಯ ಪುನಶ್ಚೇತನಗೊಂಡಿರುವ ಕಾರಂಜಿಕೆರೆಯಲ್ಲಿ ಯಾವುದೇ ಆಡಂಬರವಿಲ್ಲದೆ ಪರಿಸರಸ್ನೇಹಿಯಾಗಿ ನಡೆಯುತ್ತಿರುವ ಮೊದಲ […]

ಮೈಸೂರು ವೀಳ್ಯದೆಲೆ, ಉದ್ಬೂರು ಸಂತೆ; ಕೂಡಿದರೆ ವ್ಯಾಪಾರ ಜೋರು..

    ಅರ್ಧ ಗಂಟೆ ಸಂತೆ.. ಅರ್ಧ ಗಂಟೆ ವ್ಯಾಪಾರ.. ಅರ್ಧ ಗಂಟೆ ಚೌಕಾಸಿ.. ಅರ್ಧ ಗಂಟೆ ಗಜಿಬಿಜಿ.. ಎಲ್ಲವೂ ಆ ಅರ್ಧ ಗಂಟೆಯಲ್ಲೇ ನಡೆದುಬಿಡುತ್ತೆ.. ಇದು ರಾಜ್ಯದಲ್ಲೇ ವಿಶೇಷವೆನಿಸುವ ಸಂತೆಯೊಂದು ಸ್ಪೆಷಾಲಿಟಿ.. ಬರೀ ವೀಳ್ಯದೆಲೆ ಮಾತ್ರ ವ್ಯಾಪಾರ ಮಾಡುವ ರಾಜ್ಯದ ಏಕೈಕ ಸಂತೆ ಇದು.. ಎಲ್ಲಾ ಸಂತೆಗಳೂ ವಾರಕ್ಕೊಮ್ಮೆ ನಡೆದರೆ, ಇಲ್ಲಿ ಪ್ರತಿದಿನವೂ ನಡೆಯುತ್ತೆ ಸಂತೆ.. ಅರ್ಧ ತಾಸಲ್ಲೇ ಮುಗಿಯೂ ಸಂತೆಯಲ್ಲಿ ನೂರಾರು ಜನ ಸೇರ್ತಾರೆ.. ಸಾವಿರಾರು ರೂಪಾಯಿ ವಹಿವಾಟು ನಡೆಯುತ್ತೆ..     ಮೈಸೂರು ನಗರದಿಂದ ಕೇವಲ […]

ಗೆರೆಗೆ ಹೊಡಿ ಗೋಲಿ.. ಚಿತ್ರಕ್ಕೆ ಇಡಿ ಕೋಟಿ ಚುಕ್ಕಿ..!

    ಗೆರೆ ಗೀಚದೆ ಚಿತ್ರ ಬಿಡಿಸೋದಕ್ಕೆ ಆಗುತ್ತದಾ..? ಬರೀ ಚುಕ್ಕಿಗಳಲ್ಲೇ ಕಲಾಕೃತಿ ಅರಳುತ್ತಾ..? ಕಲಾವಿದ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು.. ಹೇಗೆ ಬೇಕಾದರೂ ಕಲಾಕೃತಿ ಅರಳಿಸಬಹುದು.. ಚುಕ್ಕಿಗಳಲ್ಲಿ ವಿಧವಿಧವಾದ ರಂಗೋಲಿ ಬಿಡಿಸುತ್ತಾರೆ ಎನ್ನುವುದಾದರೆ, ಅದೇ ಚುಕ್ಕಿಯಲ್ಲಿ ಕಲಾಕೃತಿ ಯಾಕೆ ರಚಿಸಬಾರದು ಅನ್ನೋ ಪ್ರಶ್ನೆ ಮೈಸೂರಿನ ಕಲಾವಿದ ಮೋಹನ್ ವರ್ಣೇಕರ್ ಅವರ ಮನಸಲ್ಲಿ ಮೂಡಿತ್ತು.. ಆ ಪ್ರಶ್ನೆಗೆ ಉತ್ತರವೇ ಈ ಕಲಾಕೃತಿಗಳು..!   ಮೋಹನ್ ವರ್ಣೇಕರ್‍ ಅವರು ವಿಧಾನಸೌಧದಲ್ಲಿ ಅಧಿಲೇಖನಾಧಿಕಾರಿಯಾಗಿದ್ದವರು. ನಿವೃತ್ತಿಯಾದ ಬಳಿಕ ಈಗ ಮೈಸೂರಿನಲ್ಲಿ […]

ಸಮಾಧಿಗೆ ಪುಷ್ಪ ನಮನ.. ಸ್ಮಶಾನದಲ್ಲಿ ಪುಸ್ತಕ ಬಿಡುಗಡೆ..!

  ಸ್ಮಶಾನದಲ್ಲಿ ಬಿಡುಗಡೆಯಾಯ್ತು ಪುಸ್ತಕ… ಸಮಾಧಿಗೆ ಸಲ್ಲಿಕೆಯಾಯ್ತು ಪುಷ್ಪ ನಮನ… ಹೌದು, ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಶೋಕಪುರಂ ರುದ್ರಭೂಮಿ ಇಂತಹದ್ದೊಂದು ವಿಶಿಷ್ಠ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಆಶೋಕಪುರಂ ಅಭಿಮಾನಿಗಳ ಬಳಗ, ದಲಿತ ವೆಲ್‌ಫೇರ್ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಂಬೇಡ್ಕರ್‌ ಗೆ ಪುಷ್ಪ ನಮನ ಹಾಗೂ ಗತಿಸಿದ ಹಿರಿಯರ ಸಮಾಧಿಗೆ ಪುಷ್ಪಾರ್ಚನೆ, ದೀಪಗಳ ನಮನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.   ಇದೇ ವೇಳೆ ಸಿದ್ದಸ್ವಾಮಿಯವರು ರಚಿಸಿದ ‘ಮೈಸೂರು ಆದಿಕರ್ನಾಟಕ ಪುರ’ ಪುಸ್ತಕವನ್ನು ಪ್ರೊ.ಕೆ.ಎಸ್ ಭಗವಾನ್ […]

ಮೈಸೂರಲ್ಲಿ ಮೊದಲ ಬಾರಿ ಅರಳಿಮರ ಸ್ಥಳಾಂತರ..

   ಖಾಸಗಿ ಜಾಗದಲ್ಲಿದ್ದ 4 ವರ್ಷದ ಅರಳಿ ಮರವನ್ನು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸ್ಥಳಾಂತರ ಮಾಡಲಾಗಿದೆ. ಅಗ್ರಹಾರ ಸರ್ಕಲ್‍ ಬಳಿಯ ಖಾಸಗಿ ಜಾಗದಲ್ಲಿ ಅರಳಿ ಮರವಿತ್ತು. ಆ ಜಾಗದಲ್ಲಿ ಮಾಲೀಕರು ಕಟ್ಟಡ ಕಟ್ಟಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ, ಆರ್‍ಟಿಒ ಹಾಗೂ O2 ಎಂಬ ಸರ್ಕಾರೇತರ ಸಂಸ್ಥೆಯ ನೇತೃತ್ವದಲ್ಲಿ ಮರವನ್ನು ಸ್ಥಳಾಂತರ ಮಾಡಲಾಯಿತು.   ಜೆಸಿಬಿ ಮೂಲಕ ಸುತ್ತಲೂ ಅಗೆದು ನಂತರ ಬೇರುಗಳ ಸಮೇತ ಮರವನ್ನು ಉರುಳಿಸಲಾಯಿತು. ನಂತರ ಕ್ರೇನ್‍ ತರಿಸಿ ಅದರ […]