You cannot copy content of this page.
. . .

Category: ಪ್ರಾಣಿ ಪ್ರಪಂಚ

ಕಾಡಾನೆ ದಾಳಿಗೆ ಹಸು ಬಲಿ

 ಹುಣಸೂರು: ಕಾಡಾನೆ ದಾಳಿಯಿಂದ ಹಸುವೊಂದು ಸಾವನ್ನಪ್ಪಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.  ಹೆಬ್ಬಾಳ ಗ್ರಾಮದ ವೆಂಕಟೇಶ್‌ಶೆಟ್ಟಿ ಅವರಿಗೆ ಸೇರಿದ ಹಸು ಕಾಡಾನೆ ದಾಳಿಗೆ ಬಲಿಯಾಗಿದೆ. ಹಸುವನ್ನು ಮನೆ ಮುಂದೆ ಕಟ್ಟಿದ್ದ ಸಂದರ್ಭದಲ್ಲಿ ಕಿಕ್ಕೇರಿ ಕಟ್ಟೆ ಭಾಗದ ಕಲ್ಲುಮುಂಟಿ ಭಾಗದಿಂದ ಬಂದಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ.  ಸ್ಥಳಕ್ಕೆ  ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆರ್‌ಎಫ್‌ಒ ಹನುಮಂತರಾಜು ಅವರು ಹಸುವಿನ ಮಾಲೀಕರಾದ ವೆಂಕಟೇಶ್ ಶೆಟ್ಟಿ ಅವರಿಗೆ […]

ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆ ಓಡಿಸಲು ಹರಸಾಹಸಪಟ್ಟ ಗ್ರಾಮಸ್ಥರು

 ಮೈಸೂರು: ಇಲ್ಲಿನ ಸರಗೂರು ತಾಲ್ಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಜಮೀನೊಂದಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆಯನ್ನು ಓಡಿಸಲು ಗ್ರಾಮಸ್ಥರು ಹರಸಾಹಸಪಟ್ಟರು.  ನುಗು ಜಲಾಶಯದ ಹಿನ್ನೀರಿನ ಪ್ರದೇಶದಿಂದ ಬಂದ ಕಾಡಾನೆ, ಸಂಪಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ನಂತರ ಫಸಲನ್ನು ತುಳಿದು ಹಾನಿ ಮಾಡಿ ಜಮೀನನಲ್ಲಿ ಗಂಟೆಗಂಟೆಲೆ ನಿಂತುಕೊಂಡಿದೆ. ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಆಗಮಿಸಿದ ವಾಚರ್‍ ಆನೆ ಓಡಿಸಲು ಗನ್ ತೆಗೆದುಕೊಂಡ ಬಾರದೇ ಬರಿಗೈಯಲ್ಲಿ ಬಂದಿದ್ದರು. ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.

ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವು

 ಚಾಮರಾಜನಗರ ಜಿಲ್ಲೆಯ ಕುಳೂರ್ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವನ್ನಪ್ಪಿದೆ.  ಆನೆ ಸುಮಾರು 40 ರಿಂದ 45 ವರ್ಷವಯಸ್ಸಿನದ್ದಾಗಿರಬಹುದು ಎಂದು ಹೇಳಲಾಗಿದೆ. ಬೂದಿಪಡಗ ಅರಣ್ಯ ವಲಯದ ಕಾಡಾನೆ ಇದಾಗಿದ್ದು, ಕುಳೂರ್‍ ಗ್ರಾಮದ ಶಿವರುದ್ರ ಎಂಬವರ ಜಮೀನಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಒಂದೇ ಕಡೆ ಎರಡು ಕಣ್ಣು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ; ಇದೇನು ವಿಚಿತ್ರ!

 ಒಂದೇ ಕಡೆ ಎರಡು ಕಣ್ಣುಗಳು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಇದ್ಯಾವುದೋ ವಿಚಿತ್ರ ಶಿಶು ಅಲ್ಲ. ಮೇಕೆ ಮರಿಯೊಂದರ ವಿಚಿತ್ರ ಆಕಾರವಾಗಿದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.  ಹೌದು, ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ. ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ.

10 ಸಾವಿರ ಒಂಟೆಗಳ ಮಾರಣಹೋಮಕ್ಕೆ ಆಸ್ಟ್ರೇಲಿಯಾ ನಿರ್ಧಾರ!

  ಆಸ್ಟ್ರೇಲಿಯಾ ವಿಶ್ವದಲ್ಲೇ ಅತಿ ಹೆಚ್ಚು ಒಂಟೆಗಳನ್ನು ಹೊಂದಿದ ರಾಷ್ಟ್ರವಾಗಿದೆ. ವಿಪರೀತ ನೀರನ್ನು ಕುಡಿಯುವ ಮೂಲಕ ಜನರಿಗೆ ನೀರಿನ ಅಭಾವ ಉಂಟುಮಾಡುತ್ತಿರುವ ದೇಶದಲ್ಲಿರುವ 10 ಸಾವಿರಕ್ಕೂ ಹೆಚ್ಚು ಒಂಟೆಗಳ ಮಾರಣ ಹೋಮಕ್ಕೆ ಐದು ದಿನಗಳ ಅಭಿಯಾನ ಕೈಗೊಳ್ಳಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಒಂಟೆಗಳನ್ನು ಸಾಯಿಸಲು ಹೆಲಿಕಾಪ್ಟರ್‍ಗಳನ್ನು ಕಳುಹಿಸಲಾಗಿದೆ ಎಂದು ದಿ ಹಿಲ್ ಪತ್ರಿಕೆ ವರದಿ ಮಾಡಿದೆ.  ‘ಒಂಟೆಗಳು ಬೇಲಿಗಳನ್ನು ಮುರಿದು ಮನೆಗಳಿಗೆ ಬಂದು ಏರ್‍ಕಂಡೀಷನರ್‍ನಲ್ಲಿರುವ ನೀರನ್ನು ಕುಡಿದು ತೊಂದರೆ ನೀಡುತ್ತಿವೆ. ಮನೆಗಳಿಗೆ ಹಾನಿಯುಂಟು ಮಾಡುತ್ತಿವೆ. ಇದರಿಂದ ಸಾರ್ವಜನಿಕ […]

ಉರುಳಿಗೆ ಚಿರತೆ ಬಲಿ

 ಬೇಟೆಗಾರರು ಇಟ್ಟಿದ್ದ ಉರುಳಿಗೆ ಚಿರತೆ ಬಲಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ.  ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂಗಪ್ಪ ಎಂಬವರ ಕಾಫಿ ತೋಟದ ಸನಿಹದಲ್ಲಿರುವ ತೋಡಿನಲ್ಲಿ ಚಿರತೆಯ ಕಳೇಬರ ಭಾನುವಾರ ಮಧ್ಯಾಹ್ನ ದೊರೆತ್ತಿದ್ದು, ಹಿಂದಿನ ರಾತ್ರಿ ಸತ್ತಿರಬಹುದು ಎನ್ನಲಾಗಿದೆ. ಕುತ್ತಿಗೆಯಲ್ಲಿ ಉರುಳು ಕಂಡುಬಂದಿದ್ದು, ಸುಮಾರು ೪ ವರ್ಷ ಪ್ರಾಯದ ಗಂಡು ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  ಎಸಿಎಫ್, ಆರ್.ಎಫ್.ಒ, ಡಿಆರ್‌ಎಫ್‌ಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪಟ್ಟಣದ ಪಶುವೈದ್ಯ ಇಲಾಖೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮುಂದುವರಿದ ಹುಲಿ ದಾಳಿ; ಹೆಚ್ಚಿದ ಆತಂಕ

 ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಕಳೆದ ಒಂದೂವರೆ ತಿಂಗಳಿಂದ ಹುಲಿ ಅಟ್ಟಹಾಸಕ್ಕೆ ಮೂರು ಹಸುಗಳು ತುತ್ತಾಗಿವೆ. ಇದರಿಂದ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.  ತಾಲ್ಲೂಕಿನ ನಾಲ್ಕೇರಿ ಗ್ರಾಮದಲ್ಲಿ ಅಜ್ಜಿಕುಟ್ಟೀರ ರಾಜ ಎಂಬವರ ಮನೆಯ ಕೊಟ್ಟಿಗೆಗೆ ತಡರಾತ್ರಿ ದಾಳಿ ನಡೆಸಿರುವ ನುಗ್ಗಿ ಹಸುವನ್ನು ಹುಲಿ ಕೊಂದಿದೆ.

ಪ್ರವಾಸಿಗರ ಮನರಂಜಿಸುವ ಮುನ್ನಿ, ದೀಪು!

-ಮೋಹನ ಬಿ.ಎಂ   ಮೈಸೂರು: ಮೈಸೂರು ಮೃಗಾಲಯಕ್ಕೆ ಈಚೆಗಷ್ಟೇ ಅತಿಥಿಗಳಾಗಿ ಆಗಮಿಸಿರುವ ಅಪರೂಪದ ವನ್ಯಪ್ರಾಣಿ, ಮನುಷ್ಯನನ್ನೇ ಹೋಲುವಂತಹ ವಾನರ ಪ್ರಭೇದದ ಹೂಲಾಕ್ ಗಿಬ್ಬನ್‌ಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಮೈಸೂರು ಮೃಗಾಲಯ ಪ್ರವಾಸಿಗರಿಗೆ ಹೊಸವರ್ಷದ ಉಡುಗೊರೆಯನ್ನು ನೀಡಿದೆ.  ಈಶಾನ್ಯ ರಾಜ್ಯದ ಅರಣ್ಯದಲ್ಲಿ ಕಂಡು ಬರುವ ಹೂಲಾಕ್ ಗಿಬ್ಬನ್ ಮೈಸೂರು ಮೃಗಾಲಯ ಹಾಗೂ ಗೌಹಾತಿಯ ಅಸ್ಸಾಂ ಮೃಗಾಲಯದ ನಡುವಿನ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅಸ್ಸಾಂ ಮೃಗಾಲಯದಿಂದ ತರಿಸಿಕೊಳ್ಳಲಾಗಿತು. ಅಸ್ಸಾಂನಿಂದ ತರಿಸಿದ್ದ ಗಿಬ್ಬನ್‌ಗಳು ವಾತಾವರಣಕ್ಕೆ ಹೊಂದಿಕೊಳ್ಳುವವರೆಗೂ ದಿಗ್ಭಂದನದಲ್ಲಿ ಇಡಲಾಗಿತ್ತು. ಬುಧವಾರ ಅರಣ್ಯ […]

2019ರ ವರ್ಷದ ಕೊನೆಯ ದಿನ; ಮೃಗಾಲಯಕ್ಕೆ ಹೆಚ್ಚಿದ ಪ್ರವಾಸಿಗರ ಸಂಖ್ಯೆ

 ಮೈಸೂರು: 2019ರ ವರ್ಷದ ಕೊನೆ ದಿನದ ಅಂಗವಾಗಿ ಮೃಗಾಲಯ ಆಡಳಿತ ಮಂಡಳಿ ವಾರದ ರಜೆ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂದು (ಮಂಗಳವಾರ) ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.  ವಾರದ ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ಇರುತ್ತಿತ್ತು. ವರ್ಷದ ಕೊನೆಯ ದಿನ ಹಾಗೂ ಹೊಸ ವರ್ಷದ ಹಿನ್ನೆಲೆ ಪ್ರವಾಸಿಗರಿಗೆ ರಜಾ ದಿನವೂ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ವರ್ಷಾಂತ್ಯ ಮತ್ತು ಹೊಸ ವರ್ಷಚಾರಣೆ ಸಂಭ್ರಮ ಹಿನ್ನೆಲೆಯಲ್ಲಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾನಾ ಮೂಲೆಯಿಂದ ಪ್ರವಾಸಿಗರು ಆಗಮಿಸಿತ್ತಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ 2 ಚಿರತೆ ಮರಿಗಳ ರಕ್ಷಣೆ

 ಚಾಮರಾಜನಗರ ಜಿಲ್ಲೆಯ ಮುದಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಇಂದು (ಶುಕ್ರವಾರ) ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ.   ಚಿರತೆ ಮರಿಗಳನ್ನು ರಕ್ಷಿಸಲಾಗಿದೆ. ಈ ವೇಳೆ ಅರಣ್ಯ ಅಧಿಕಾರಿಗಳು ಸ್ಥಳದಲ್ಲಿದ್ದರು.