ಒಂದೇ ಬೆಳೆ; ಕೋಟಿ ಒಡೆಯನಾದ ರೈತ..!

11 Views ಕೃಷಿ ಮಾಡಿ ಲಕ್ಷದಲ್ಲಿ ಇರಲಿ, ಸಾವಿರದಲ್ಲೂ ಸಂಪಾದನೆ ಮಾಡುವುದಕ್ಕೆ ಆಗುವುದಿಲ್ಲ ಎಂಬುದು ರೈತರ ಅಳಲು. ಆದರೆ ಇಲ್ಲೊಬ್ಬ ರೈತ ಲಕ್ಷ ಅಲ್ಲ, ಕೋಟಿ ಲೆಕ್ಕದಲ್ಲಿ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಂದೇ ಬೆಳೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಲಾಭ ಸಂಪಾದಿಸಿದ್ದಾನೆ. ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಕೂಡಾ ಎಲ್ಲಾ ರೈತರಂತೆ ಹಲವಾರು ಬಾರಿ ಕೈಸುಟ್ಟುಕೊಂಡಿದ್ದಾರೆ. ಆದರೆ ಈ ಬಾರಿ ಮಲ್ಲಿಕಾರ್ಜುನ ಅವರಿಗೆ ಬಂಪರ್ ಲಾಟರಿ ಹೊಡೆದಿದೆ. 20 […]
ಮೈಸೂರು ವೀಳ್ಯದೆಲೆ, ಉದ್ಬೂರು ಸಂತೆ; ಕೂಡಿದರೆ ವ್ಯಾಪಾರ ಜೋರು..

34 Views ಅರ್ಧ ಗಂಟೆ ಸಂತೆ.. ಅರ್ಧ ಗಂಟೆ ವ್ಯಾಪಾರ.. ಅರ್ಧ ಗಂಟೆ ಚೌಕಾಸಿ.. ಅರ್ಧ ಗಂಟೆ ಗಜಿಬಿಜಿ.. ಎಲ್ಲವೂ ಆ ಅರ್ಧ ಗಂಟೆಯಲ್ಲೇ ನಡೆದುಬಿಡುತ್ತೆ.. ಇದು ರಾಜ್ಯದಲ್ಲೇ ವಿಶೇಷವೆನಿಸುವ ಸಂತೆಯೊಂದು ಸ್ಪೆಷಾಲಿಟಿ.. ಬರೀ ವೀಳ್ಯದೆಲೆ ಮಾತ್ರ ವ್ಯಾಪಾರ ಮಾಡುವ ರಾಜ್ಯದ ಏಕೈಕ ಸಂತೆ ಇದು.. ಎಲ್ಲಾ ಸಂತೆಗಳೂ ವಾರಕ್ಕೊಮ್ಮೆ ನಡೆದರೆ, ಇಲ್ಲಿ ಪ್ರತಿದಿನವೂ ನಡೆಯುತ್ತೆ ಸಂತೆ.. ಅರ್ಧ ತಾಸಲ್ಲೇ ಮುಗಿಯೂ ಸಂತೆಯಲ್ಲಿ ನೂರಾರು ಜನ ಸೇರ್ತಾರೆ.. ಸಾವಿರಾರು ರೂಪಾಯಿ ವಹಿವಾಟು ನಡೆಯುತ್ತೆ.. ಮೈಸೂರು ನಗರದಿಂದ […]
ದೇಸಿ ಹೈದನ ವಿದೇಶಿ ಕೃಷಿ..

413 Views ಏನು ಮಾಡಿದರೂ ವಿದ್ಯೆ ತಲೆಗೆ ಹತ್ತಲಿಲ್ಲ.. ತಿಪ್ಪರಲಾಗ ಹಾಕಿದ್ರೂ ಎಸ್ಎಸ್ಎಲ್ಸಿ ಪಾಸಾಗ್ಲಿಲ್ಲ.. ಮನೆ ಪರಿಸ್ಥಿತಿಯೂ ಓದು ಮುಂದುವರೆಸೋಕೆ ಅವಕಾಶ ಕೊಡಲಿಲ್ಲ.. ಮತ್ತಿನ್ನೇನು ಮಾಡೋದು.. ಇರೋ ಆಯ್ಕೆ ಕೃಷಿ ಒಂದೇ.. ಮೂರೂವರೆ ಎಕರೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು.. ಸರಿ ಅಂತ ಹೊಲದಲ್ಲಿ ನೇಗಿಲು ಹಿಡಿದು ನಿಂತುಬಿಟ್ಟ.. ಎಸ್ಎಸ್ಎಲ್ಸಿ ಪಾಸ್ ಮಾಡೋಕೆ ಆಗದಾತ ಕೃಷಿ ವಿಷಯದಲ್ಲಿ ಮಾತ್ರ ದೊಡ್ಡ ಕನಸೇ ಕಂಡ.. ಈತನ ವಿದೇಶಿ ಕನಸು ಈಗ ತನ್ನ ಬದುಕನ್ನೇ ಹಸನು ಮಾಡಿದೆ. ಇವರ ಹೆಸರು ಯೋಗೇಶ್.. […]
ಕಾಂಕ್ರೀಟ್ ಕಾಡಲ್ಲಿ ‘ಬಾಳೆ’ ಹಸಿರಾಯಿತು..

114 Views ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿರುವವರ ಸಂಖ್ಯೆ ಕಡಿಮೆ. ಸೂರ್ಯನಿಂದ ನೇರವಾಗಿ ಭೂಮಿಗೆ ಬೀಳುವ ಬಿಸಿಲು ಹಾನಿಕಾರಕ. ಅವುಗಳು ಪ್ರಖರವಾಗಿ ಭೂಮಿ ಮೇಲೆ ಬೀಳದಂತೆ ಎಲ್ಲೆಡೆ ಹಸಿರು ಬೆಳೆಸಿ ಉರಿ ಬಿಸಿಲನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವ ಪದ್ಧತಿಯೇ ಬಿಸಿಲು ಕೊಯ್ಲು. ಬೆಳಕಿನ ಬೇಸಾಯ ಅಥವಾ ಬಿಸಿಲು ಕೊಯ್ಲು ಪದ್ಧತಿ ಬಗ್ಗೆ ಇನ್ನೂ ಹೆಚ್ಚು ಜನಕ್ಕೆ ತಿಳಿದಿಲ್ಲ. ಆದರೆ ಮೈಸೂರಿನ ಈ ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು […]
ಹೀಗೆ ಮಾಡಿದರೆ 6 ತಿಂಗಳಾದರೂ ಕೆಡುವುದಿಲ್ಲ ಟೊಮ್ಯಾಟೊ..!

122 Views ಟೊಮ್ಯಾಟೋ ಬೆಳೆಗಾರರದ್ದು ಯಾವಾಗಲೂ ಒಂದೇ ಗೋಳು.. ಫಸಲು ಬಂದಾಗ ಬೆಲೆ ಇರೋದಿಲ್ಲ, ಬೆಲೆ ಇದ್ದಾಗ ಫಲಸು ಬಂದಿರೋದಿಲ್ಲ ಅನ್ನೋದು.. ಸಂಗ್ರಹಿಸಿಡೋಣ ಅಂದ್ರೆ ಟೊಮ್ಯೋಟೋ ನಾಲ್ಕೈದು ದಿನದ ಮೇಲೆ ಇರೋದಿಲ್ಲ.. ಹೀಗಾಗೇ ಬೆಲೆ ಸಿಗದಿದ್ದಾಗ ರೈತರು ಮಾರುಕಟ್ಟೆಗೆ ತಂದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಾರೆ.. ಪ್ರತಿ ವರ್ಷ ಇದು ಇದ್ದಿದ್ದೇ.. ಆದ್ರೆ ಈಗ ತಾಂಜೇನಿಯಾದ ರೈತನೊಬ್ಬನ ಆವಿಷ್ಕಾರ, ಟೊಮ್ಯಾಟೋ ಬೆಳೆಗಾರರಲ್ಲಿ ಆಶಾಕಿರಣ ಮೂಡಿಸಿದೆ.. ಹೌದು, ತಾಂಜೇನಿಯಾದ ರೈತ ಡುವಿಮಾನಾ ಎಂಬಾತ 6 ತಿಂಗಳವರೆಗೆ […]
ಅರಸರಿಗೆ ಬಲು ಪ್ರಿಯ ಗಂಜಾಂ ಅಂಜೂರ..

82 Views ಗಂಜಾಂ.. ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಒಂದು ಪುಟ್ಟ ಹಳ್ಳಿ.. ಈ ಗ್ರಾಮ ಚಿನ್ನ ಹಾಗೂ ಬೆಳ್ಳಿ ಆಭರಣ ತಯಾರಿಕೆಗೆ ಹೆಚ್ಚು ಪ್ರಸಿದ್ಧಿ. ಆದರೆ ರಾಜರ ಕಾಲದಲ್ಲಿ ಆಭರಣ ತಯಾರಿಕೆಗಿಂತ ಅಂಜೂರ ಹಣ್ಣಿಗೆ ಇದು ತುಂಬಾನೇ ಫೇಮಸ್ ಆಗಿತ್ತು. ಅಲ್ಲಿನ ಮಣ್ಣಿನ ಗುಣ ಹಾಗೂ ಕಾವೇರಿ ನೀರು ಎರಡೂ ಸೇರಿದ್ದರಿಂದಾಗಿ ಗಂಜಾಂನಲ್ಲಿ ಬೆಳೆಯುತ್ತಿದ್ದ ಅಂಜೂರ ಅತ್ಯಂತ ರುಚಿಕರವಾಗಿತ್ತು. ಅದರ ಸ್ವಾದ ವಿದೇಶಗಳಿಗೂ ಹಬ್ಬಿತ್ತು ಅಂದರೆ ನೀವು ನಂಬಲೇಬೇಕು. ಗಂಜಾಂನಲ್ಲಿ ಈಗ ಕುರುಹಿಗಾಗಿ ಬೆರಳೆಣಿಕೆಯ ಅಂಜೂರದ ಗಿಡಗಳು […]