You cannot copy content of this page.
. . .

ರೈತನಿಂದ ಲಂಚ ಸ್ವೀಕಾರ; ಶಿರಸ್ತೇದಾರ್‍ ಅರೆಸ್ಟ್

ರೈತರೊಬ್ಬರಿಂದ 12ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಕೆ.ಆರ್.ಪೇಟೆ ತಾಲೂಕು ಕಚೇರಿಯ ಶಿರಸ್ತೇದಾರ್ ಮಹದೇವೇಗೌಡ  ಎಸಿಬಿ ಅಧಿಕಾರಿಗಳಿಗೆ ರೆಡ್‍ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.   ಆಲಂಬಾಡಿಕಾವಲು ಗ್ರಾಮದ ರೈತ ಎಂ.ಮೋಹನ್ ಅವರು ತಮ್ಮ ಜಮೀನಿನ ಆರ್.ಟಿ.ಸಿ ಒಟ್ಟುಗೂಡಿಸಿ ಕೊಡುವ ಹಾಗೂ ಆಕಾರ್ ಬಂದ್ ತಯಾರು ಮಾಡಿಕೊಡುವ ಸಲುವಾಗಿ 2019ನೇ ಸೆಪ್ಟೆಂಬರ್ 16ರಂದು ಭೂಮಿ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ 25 ಸಾವಿರ ರೂ. ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟು ಇಲ್ಲದ ಸಬೂಬು ಹೇಳಿ ಸುಮಾರು 5 ತಿಂಗಳಿನಿಂದ […]

ಕಳ್ಳತನವಾಗಿದ್ದ 13.21 ಲಕ್ಷ ರೂ. ಮೌಲ್ಯದ ಡೆಕ್‍ ಟೈಲ್ಸ್ ಕಬ್ಬಿಣದ ಪೈಪ್ ವಶ

 ಕುಡಿಯುವ ನೀರು ಯೋಜನೆ ಕಾಮಗಾರಿಗೆ ಸಂಗ್ರಹಿಸಲಾಗಿದ್ದ ಡೆಕ್‍ ಟೈಲ್ಸ್ ಕಬ್ಬಿಣದ ಪೈಪ್‍ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 13.21 ಲಕ್ಷ ರೂ. ಮೌಲ್ಯದ ಪೈಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಶಿವನಂಜು, ಗಿರಿಧರ್, ಚೆಲುವರಾಜು, ಪ್ರಮೋದ್ ಬಂಧಿತ ಆರೋಪಿಗಳು. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಬಹುಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿಗೆ ತಾಲ್ಲೂಕಿನ ಹನಗನಹಳ್ಳಿ ಗ್ರಾಮದ ಗೇಟ್ ಸಮೀಪ ಸ್ಟಾಕ್‍ ಇಡಲಾಗಿದ್ದ ಡೆಕ್ ಟೈಲ್ಸ್ ಕಬ್ಬಿಣದ ಪೈಪುಗಳ ಕಳ್ಳತನವಾಗಿತ್ತು. ಈ ಸಂಬಂಧ ಯೋಜನೆಯ ಎಂಜಿನಿಯರ್‍ಗಳು ಪೊಲೀಸ್‍ ಠಾಣೆಯಲ್ಲಿ […]

ಹೆದ್ದಾರಿಯಲ್ಲಿ ದರೋಡೆ ಪ್ರಕರಣ; 9 ಮಂದಿ ಅರೆಸ್ಟ್

  ಹೆದ್ದಾರಿಯಲ್ಲಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದ 9 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2,54,570 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.   ಬಂಧಿತರೆಲ್ಲರೂ ಮೈಸೂರಿನವರಾಗಿದ್ದಾರೆ. ಉಪೇಂದ್ರ ಅಲಿಯಾಸ್ ಉಪ್ಪಿ, ಕಿರಣ ಅಲಿಯಾಸ್‍ ಇಸ್ಕಿ, ಪ್ರತಾಪ ಅಲಿಯಾಸ್ ಆಪು, ಮಾದಪ್ಪ ಅಲಿಯಾಸ್‍ ಶಿವು, ಶೇಖರ, ಅನೂಜ್ ಅಲಿಯಾಸ್‍ ಇಡ್ಲಿ, ಕಿರಣ ಅಲಿಯಾಸ್‍ ಆನೆ, ರವಿಕುಮಾರ ಅಲಿಯಾಸ್‍ ಅಬ್ಬು, ಶಿವಕುಮಾರ ಅಲಿಯಾಸ್‍ ಶಿವು ಬಂಧಿತರು. ಬಂಧಿತರಿಂದ 11 ಮೊಬೈಲ್, 1400 ರೂ. […]

ವೃದ್ಧೆಯ ಕಾಲಿಗೆ ಬಿದ್ದ ದೇವೇಗೌಡರು..!: ವೀಡಿಯೊ ಇದೆ

  ಪಾಂಡವಪುರದ ಹಳ್ಳಿಯೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು 92 ವರ್ಷದ ವೃದ್ದೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಇಲ್ಲಿನ ಮಾಣಿಕ್ಯನಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆಗೆ ದೇವೇಗೌಡರು ಆಗಮಿಸಿದ್ದರು. ಈ ವೇಳೆ ಗ್ರಾಮದ 92 ವರ್ಷದ ವೃದ್ದೆ ಕೆಂಪಮ್ಮ ಅವರು ದೇವೇಗೌಡರನ್ನು ನೋಡಲು ಬಂದಿದ್ದರು. ವೃದ್ಧೆಯನ್ನು ಕಂಡ ದೇವೇಗೌಡರು ವೇದಿಕೆಗೆ ಕರೆಸಿ, ಯೋಗ ಕ್ಷೇಮ ವಿಚಾರಿಸಿ ಕಾಲಿಗೆ ಬಿದ್ದರು.  ಕೆಂಪಮ್ಮರಿಂದ ಆಶೀರ್ವಾದ ಪಡೆದ ನಂತರ ದೇವೇಗೌಡರು ಅವರನ್ನ ವೇದಿಕೆ ಮೇಲೆಯೇ ಕೂರಿಸಿದರು. ಅವರ ಪಕ್ಕದಲ್ಲೇ ಆಸನ ವ್ಯವಸ್ಥೆ ಮಾಡಿ […]

ಚಾಲಕನ ಮೇಲೆ ಹಲ್ಲೆ ನಡೆಸಿದರಾ ಟೋಲ್‍ ಸಿಬ್ಬಂದಿ..?

  ಫಾಸ್ಟ್ ಟ್ಯಾಗ್ ವಿಚಾರಕ್ಕೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನ ನೆಲ್ಲಿಗೆರೆಯ ಟೋಲ್‌ನಲ್ಲಿ ಗಲಾಟೆ ನಡೆದಿದೆ. ಟೋಲ್‍ ಸಿಬ್ಬಂದಿ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.   ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಟೋಲ್ ಬರುತ್ತದೆ. ಫಾಸ್ಟ್ ಟ್ಯಾಗ್ ಇದ್ದರೂ ಹಣ ಕಟ್ಟುವಂತೆ ಟೋಲ್ ಸಿಬ್ಬಂದಿ ಹೇಳಿದ್ದು ಈ ಗಲಾಟೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಟೋಲ್‍ ಬಳಿ ನಡೆದ ಗಲಾಟೆಯನ್ನು ಸ್ಥಳದಲ್ಲಿದ್ದವರೊಬ್ಬರು ಚಿತ್ರಿಸಿಕೊಂಡಿದ್ದು, ಅದು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.

ಹೆದ್ದಾರಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಧಾರುಣ ಸಾವು

(ಸಾಂದರ್ಭಿಕ ಚಿತ್ರ)  ಮದ್ದೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಧಾರುಣ ಘಟನೆ ಮದ್ದೂರು ಪಟ್ಟಣದ ಕೃಷಿ ಇಲಾಖೆ ಕಚೇರಿ ಮುಂಭಾಗ ಜರುಗಿದೆ.  ಜಾರ್ಖಂಡ್ ರಾಜ್ಯದ ಸೆಷಾಂಗ್  ಗ್ರಾಮದವರಾದ ಕಾಶಿನಾಥ್ (36) ಮತ್ತು ರಾಜು ಗಂಧ್ (36) ಮೃತ ದುರ್ದೈವಿಗಳು. ಕಾಮಗಾರಿಯ ಪಿಲ್ಲರ್ ತೆಗೆಯುವ ವೇಳೆಯಲ್ಲಿ ಇಬ್ಬರು ಕಾರ್ಮಿಕರ ಮೇಲೆ ಮಣ್ಣಿನ ದಿಬ್ಬ ಕುಸಿದು ಅದರ ಕೆಳಗೆ ಸಿಲುಕಿದ್ದಾರೆ. ತಕ್ಷಣವೇ ಇಬ್ಬರು ಕಾರ್ಮಿಕರನ್ನು ಹೊರತೆಗೆದು ಪಟ್ಟಣದ ಕೆ ಗುರುಶಾಂತಪ್ಪ […]

ಭೀಕರ ಅಪಘಾತ; ಮೂವರು ಯುವಕರು ದುರ್ಮರಣ

ಪ್ಯಾಸೆಂಜರ್ ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು- ಮದ್ದೂರು ಹೈವೆಯಲ್ಲಿನ ದುಂಡನಹಳ್ಳಿ ಕೆರೆ ಬಳಿ ನಡೆದಿದೆ. ಮಂಗಳವಾರ ರಾತ್ರಿ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಪ್ಯಾಸೆಂಜರ್ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಚೆನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಗಿರೀಶ್ ಎಂಬವರ ಪುತ್ರ ಪ್ರಶಾಂತ್, ಮಲ್ಲನಕುಪ್ಪೆ ಗ್ರಾಮದ ಕೃಷ್ಣ ಎಂಬವರ ಪುತ್ರ ಸೂರ್ಯ, ದುಂಡಳ್ಳಿ ಗ್ರಾಮದ ಅಭಿ ಮೃತಪಟ್ಟವರು. ಈ ಸಂಬಂಧ ಕೆಸ್ತೂರು […]

ಕೊರೊನಾ ಭೀತಿ; ಚೀನಾದಿಂದ ಮಂಡ್ಯಕ್ಕೆ ವಾಪಸ್ಸಾದ ವಿದ್ಯಾರ್ಥಿನಿ

(ಸಾಂದರ್ಬಿಕ ಚಿತ್ರ)  ಚೀನಾದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕೊರೊನಾ ವೈರಸ್‍ ಸೋಂಕು ಭಯದಿಂದ ಮಂಡ್ಯಕ್ಕೆ ಮರಳಿದ್ದಾರೆ. ವಿದ್ಯಾರ್ಥಿನಿ ಮಂಡ್ಯದ ವಿದ್ಯಾನಗರದ ನಿವಾಸಿಯಾಗಿದ್ದಾರೆ.  ‘ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ವಿದ್ಯಾರ್ಥಿನಿಯ ಮೇಲೆ ನಿಗಾ ವಹಿಸಲಾಗಿದೆ. ಅವರು ಬಂದು ಮೂರು ದಿನವಾಗಿದ್ದು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅಗತ್ಯ ಬಂದರೆ ಹೆಚ್ಚಿನ ತಪಾಸಣೆ ನಡೆಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದ್ದಾರೆ.  ಭಾನುವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸ್ಥಳದಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆಕೆಯ […]

ಮಂಡ್ಯ ವಿ.ವಿ.ಯಿಂದಲೇ ಪರೀಕ್ಷೆ ನಡೆಸಲು ಕ್ರಮ: ವಿಶೇಷಾಧಿಕಾರಿ ಭರವಸೆ, ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು

 ಮಂಡ್ಯ ವಿಶ್ವವಿದ್ಯಾಲಯದಡಿಯಲ್ಲೇ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಮಂಡ್ಯ ವಿ.ವಿ.ಯ ವಿಶೇಷಾಧಿಕಾರಿ ಪ್ರೊ.ಕೆ.ಎನ್.ನಿಂಗೇಗೌಡ ಭರವಸೆ ನೀಡಿದ್ದರಿಂದ, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಈ ಸಂಬಂಧ ಸುಮಾರು 2 ವಾರಗಳಿಂದ ವಿದ್ಯಾರ್ಥಿಗಳು ನಡೆಸಿಕೊಂಡು ಬಂದಿದ್ದ ಪ್ರತಿಭಟನೆ ಕೊನೆಗೂ ಅಂತ್ಯ ಕಂಡಿದೆ.  ವಿಶೇಷಾಧಿಕಾರಿ ಪ್ರೊ.ಕೆ.ಎನ್.ನಿಂಗೇಗೌಡ ಅವರು ಸೋಮವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸೂಕ್ತ ಕ್ರಮವಹಿಸಲಾಗುವುದು. ಈ ಸಂಬಂದ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರದ ಸೂಕ್ತ ನಿರ್ದೇಶನದೊಂದಿಗೆ ಕ್ರಮಕೈಗೊಳ್ಳುತ್ತೇವೆ. […]

ನಕಲಿ ನೋಟುಗಳು ಬಂದಿವೆ ಹುಷಾರ್!

 ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ನಕಲಿ ನೋಟುಗಳ ದಂಧೆಕೋರರಿಗೆ ವೃದ್ಧರೇ ಟಾರ್ಗೆಟ್‍ ಆಗಿದ್ದಾರೆ. ಕಲರ್ ಜೆರಾಕ್ಸ್ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದಾರೆ. ವೃದ್ಧರೊಬ್ಬರು ವಂಚನೆಗೆ ಒಳಗಾಗಿರುವ ಪ್ರಕರಣ ಮಂಡ್ಯದಲ್ಲಿ ಜರುಗಿದೆ. ಮಂಡ್ಯದ ನಿವಾಸಿ ಮಂಚಯ್ಯ ವಂಚನೆಗೆ ಒಳಗಾದ ವ್ಯಕ್ತಿ. ದಂಧೆಕೋರರು ಕುರಿ ವ್ಯಾಪಾರಿಗಳಂತೆ ಬಂದು ವೃದ್ಧ ಮಂಚಯ್ಯನಿಂದ ವ್ಯಾಪಾರ ಮಾಡಿದ್ದಾರೆ. ವೃದ್ಧರಿಗೆ ವಯಸ್ಸಾದಂತೆ ದೃಷ್ಟಿ ಸಾಮರ್ಥ್ಯ ಕ್ಷೀಣಿಸುತ್ತದೆ. ಹೀಗಾಗಿ, ದಂಧೆಕೋರರಿಗೆ ಅವರೇ ಟಾರ್ಗೆಟ್‍ ಆಗಿದ್ದಾರೆ. ಮಂಚಯ್ಯ ಅವರಿಗೆ ಅಸಲಿ ನೋಟುಗಳ ಮಧ್ಯೆ ನಕಲಿ ನೋಟುಗಳನ್ನು ಹಾಕಿ ಕೊಟ್ಟು ಕುರಿಗಳನ್ನು […]