You cannot copy content of this page.
. . .

Category: ಮಂಡ್ಯ

ಮದ್ದೂರು ಬಳಿ ಭಾರೀ ಶಬ್ದ; ಭೂಕಂಪನದ ಅನುಭವ

ಮಂಡ್ಯ ಜಿಲ್ಲೆಯ ಕೆಲವೆಡೆ ಸಣ್ಣದಾಗಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದಂತೆ ಭಾಸವಾಗಿದೆ. ಇದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಮನೆಯಲ್ಲಿದ್ದ ಪಾತ್ರೆಗಳು ಮತ್ತಿತರ ವಸ್ತುಗಳು ಕೆಳಗೆ ಉರುಳಿವೆ. ಇದು ಭೂಕಂಪವೋ ಅಥವಾ ಯಾವುದಾದರೂ ಸ್ಫೋಟವೋ ಎಂಬುದು ಖಚಿತವಾಗಿಲ್ಲ.

ಬ್ರಹ್ಮ ರಥೋತ್ಸವ; ಜೆಡಿಎಸ್ ತಾಪಂ ಸದಸ್ಯ, ಬಿಜೆಪಿ ಶಾಸಕನ ಬೆಂಬಲಿಗರ ನಡುವೆ ಗಲಾಟೆ

 ಮಂಡ್ಯ ಜಿಲ್ಲೆಯ ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ಗವಿರಂಗಪ್ಪ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತಿದ್ದ ವೇಳೆ ತಾಲ್ಲೂಕು ಪಂಚಾಯಿತಿ ಜೆಡಿಎಸ್‍ ಸದಸ್ಯ ದಿನೇಶ್‍ ಹಾಗೂ ಕೆ.ಆರ್‍.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ಬೆಂಬಲಿಗರ ನಡುವೆ ಗಲಾಟೆಯಾಗಿದೆ.  ರಥೋತ್ಸವದ ವೇಳೆ ಮೊದಲು ಪೂಜೆ ಮಾಡುವುದಕ್ಕೆ ತಾಪಂ ಸದಸ್ಯ ದಿನೇಶ್‍ ಮುಂದಾದರು. ಅದಕ್ಕೆ ಶಾಸಕ ನಾರಾಯಣಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಪರಸ್ಪರರಲ್ಲಿ ಗಲಾಟೆಯಾಗಿ ಹೊಡೆದಾಟದ ಹಂತಕ್ಕೆ ತಲುಪಿತ್ತು. ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಕಿಚ್ಚು ಹಾಯಿಸುವಾಗ ವ್ಯಕ್ತಿಗೆ ಬೆಂಕಿ ತಗುಲಿ ಗಂಭೀರ ಗಾಯ

 ರಾಸುಗಳನ್ನು ಕಿಚ್ಚು ಹಾಯಿಸುವಾಗ ರೈತನಿಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ನಡೆದಿದೆ. https://youtu.be/ZQCYdzEnowg  ಚಿಕ್ಕಬಳ್ಳಿ ಗ್ರಾಮದ ರೈತ ರವಿ ಗಾಯಗೊಂಡ ವ್ಯಕ್ತಿ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಾಸುಗಳನ್ನು ಬೆಂಕಿಯಲ್ಲಿ ಹಾರಿಸುವ ವೇಳೆ ಬೆಂಕಿ ತಗುಲಿ ದೇಹದಲ್ಲಿ ಸುಟ್ಟ ಗಾಯಗಳಾಗಿವೆ. ಗ್ರಾಮಸ್ಥರ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. https://youtu.be/UBPLuhbdUao

ಒಂದೇ ಕಡೆ ಎರಡು ಕಣ್ಣು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ; ಇದೇನು ವಿಚಿತ್ರ!

 ಒಂದೇ ಕಡೆ ಎರಡು ಕಣ್ಣುಗಳು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಇದ್ಯಾವುದೋ ವಿಚಿತ್ರ ಶಿಶು ಅಲ್ಲ. ಮೇಕೆ ಮರಿಯೊಂದರ ವಿಚಿತ್ರ ಆಕಾರವಾಗಿದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.  ಹೌದು, ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ. ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ.

ನಿರ್ದೇಶಕನೊಂದಿಗೆ ಹೀರೋಯಿನ್ ಎಸ್ಕೇಪ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ತಾಯಿ, ಅಜ್ಜಿ!

 ಸಿನಿಮಾ ನಿರ್ದೇಶಕನೊಂದಿಗೆ ಹೀರೋಯಿನ್ ಆದ ಕಾರಣ, ಹೀರೊಯಿನ್ ತಾಯಿ ಮತ್ತು ಅಜ್ಜಿ ಮರ್ಯಾದೆಗೆ ಅಂಜಿ ವಿಷ ಸೇವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವನ್ನಪ್ಪಿದರೆ, ತಾಯಿ ಸ್ಥಿತಿ ಗಂಭೀರವಾಗಿದೆ.  ಚನ್ನಪಟ್ಟಣದಲ್ಲಿ ಹೀಗೊಂದು ಮನಮಿಡಿಯುವ ಸಿನೆಮಾ ಲವ್ ಸ್ಟೋರಿ ಆಗಿದೆ. ಸಾವನ್ನಪ್ಪಿದ ಅಜ್ಜಿ ಮುಖ ನೋಡಲು ಕೂಡ ಮೊಮ್ಮಗಳು ಬಂದಿಲ್ಲ. ನಟಿ ಹೆಸರು ವಿಜಯಲಕ್ಷ್ಮಿ (ಅಲಿಯಾಸ್ ಲಕ್ಷ್ಮಿ) ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಲ್ಲಹಳ್ಳಿಯವರು. ಈಕೆ ‘ತುಂಗಾಭದ್ರ’ ಸಿನಿಮಾ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದು ಈಗ ಎಸ್ಕೇಪ್‍ […]

ಮಂಡ್ಯದಲ್ಲಿ ಕನಸಿನ ಮನೆ ಲಿಫ್ಟ್ ಮಾಡಿ ಸ್ಥಳಾಂತರಕ್ಕೆ ಸಜ್ಜು..

 ಕನಸಿನ ಮನೆಯನ್ನು ಉಳಿಸಿಕೊಳ್ಳಲು ಮಂಡ್ಯದ ವ್ಯಕ್ತಿಯೊಬ್ಬರು ಮನೆಯನ್ನು ಲಿಫ್ಟ್‍ ಮಾಡಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 20 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ.    ಕೋಣನಹಳ್ಳಿಯ ಮಲ್ಲಿಕಾರ್ಜುನ್ 5 ವರ್ಷದ ಹಿಂದೆ ವಿ.ಸಿ.ಫಾರಂ ಮಾರ್ಗದಲ್ಲಿ 36 ಚದರ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಇತ್ತೀಚೆಗೆ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿಯಿಂದಾಗಿ ಮನೆಯ ಅರ್ಧ ಭಾಗವನ್ನೇ ಒಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇಷ್ಟಪಟ್ಟು ಕಟ್ಟಿದ ಮನೆ ಒಡೆಯಲು ಮನಸ್ಸಿಲ್ಲದೆ ಮಾಲೀಕ ಮಲ್ಲಿಕಾರ್ಜುನ್, ಲಿಫ್ಟಿಂಗ್ ವಿಧಾನದ ಮೂಲಕ ಮನೆಯನ್ನು ಸ‍್ಥಳಾಂತರಿಸಲು […]

ಮಂಡ್ಯದಲ್ಲಿ ‘ಸಕ್ಕರೆ’ ಸಚಿವರಿಗೆ ‘ಕಹಿ’ ಅನುಭವ..!

    ಮೈಶುಗರ್‍ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ನಡೆದ ಸಭೆ ವೇಳೆ ರೈತರು ಗದ್ದಲ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮೈಶುಗರ್‍ ಸರ್ಕಾರಿ ಸಕ್ಕರೆ ಕಾರ್ಖಾನೆ ಪುನಾರಂಭದ ಸಂಬಂಧ ನಿನ್ನೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಕ್ಕರೆ ಸಚಿವ ಸಿ.ಟಿ.ರವಿಯವರು ಕಾರ್ಖಾನೆಗೆ ಭೇಟಿ ನಿಡಿದ್ದರು. ಈ ವೇಳೆ ಕೆಲ ರೈತರು ಒಳಗಡೆ ಬಿಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈ ವೇಳೆ ಸಚಿವರು ಹಾಗೂ ಪೊಲೀಸರು ರೈತರನ್ನು ಸಮಾಧಾನಪಡಿಸಿದ್ದಾರೆ.   ಮಂಡ್ಯದ […]

ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್

  2020 ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಆರ್‍ಎಸ್‍ ಪೊಲೀಸ್‌ ಠಾಣೆ ವ್ಯಾಪ್ತಿಯ ಬಲಮುರಿ, ಎಡಮುರಿ ಹಾಗೂ ಕಾವೇರಿ ನದಿ ತೀರದ ಪ್ರದೇಶ ಸುತ್ತಮುತ್ತ ಡಿ.31 ಬೆಳಗ್ಗೆ 6 ರಿಂದ ಜ.1 ಸಂಜೆ 6 ರ ವರೆಗೆ ಜನರ ಪ್ರವೇಶ, ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ.   ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಂಗಪಟ್ಟಣ ತಹಸೀಲ್ದಾರ್‍ ಎಂ.ವಿ. ರೂಪಾ, ಮೋಜು ಮಸ್ತಿ ನೆಪದಲ್ಲಿ ಪ್ರಾಣಹಾನಿ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತವೆ. ಇವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು […]

ವಿದ್ಯುತ್ ಸ್ಪರ್ಶಕ್ಕೆ ಮತ್ತೊಂದು ಕಾಡಾನೆ ಸಾವು

   ವಿದ್ಯುತ್ ಸ್ಪರ್ಶದಿಂದ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕಾಡಾನೆ ಸಾವನ್ನಪ್ಪಿದೆ. ಮಳವಳ್ಳಿ ತಾಲೂಕು ಹಲಗೂರು ಸಮೀಪದ ಎಚ್.ಬಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಸವನಬೆಟ್ಟದ ತಾಳುಬೆಟ್ಟದ ಬಳಿ ಈ ಘಟನೆ ನಡೆದಿದೆ.  ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ ಅವರು, ಹಲಗೂರು ವನ್ಯ ಜೀವಿ ವಲಯ ಬ್ಯಾಡರಹಳ್ಳಿ ಬೀಟ್ , ಬಸವನಹಳ್ಳಿಯ ತಾಳು ಬೆಟ್ಟದ ಹತ್ತಿರ ಇರುವ ಜಮೀನಿನಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗಿದೆ. ಐದಾರು […]

ಮದುವೆಗೆ ಚಿನ್ನಾಭರಣ ಮಾಡಿಸಲು ಕಳ್ಳತನಕ್ಕಿಳಿದ ಆಸಾಮಿ..!

 ಮಂಡ್ಯ ಜಿಲ್ಲೆಯಲ್ಲಿ ಎರಡು ಕ್ರಷರ್‍ ಹಾಗೂ ವಿವಿಧೆಡೆ ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 2.10 ಲಕ್ಷ ರೂಪಾಯಿ ನಗದು ಸೇರಿ 9 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿ ಮದುವೆಗೆ ಚಿನ್ನ ಖರೀದಿಸಲು, ಇನ್ನೊಬ್ಬ ಆರೋಪಿ ಇಎಂಐ ಕಟ್ಟಲು ಹಣವಿಲ್ಲದಿದ್ದಕ್ಕೆ ಕಳ್ಳತನಕ್ಕಿಳಿದಿದ್ದಾರೆಂದು ತಿಳಿದುಬಂದಿದೆ.   ಪಾಂಡವಪುರ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್.ಗುರುಕಿರಣ್, ಮೈಸೂರಿನ ನವಾಜ್, ಹಬೀಬ್‍, ರೋಹನ್ ಮತ್ತು […]