You cannot copy content of this page.
. . .

ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ವಾಹನ ಪಲ್ಟಿ…

 ಚಾಮರಾಜನಗರ: ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಟೆಂಪೋ ಟ್ರಾವೆಲರ್​ವೊಂದು ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಪುರದ ಬಳಿ ನಡೆದಿದೆ. ಯಾತ್ರಾರ್ಥಿಗಳು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.  ಯಾತ್ರಾರ್ಥಿಗಳಿದ್ದ ಟೆಂಪೊ ಗುಂಡ್ಲುಪೇಟೆಯ ರಾಘವಾಪುರದ ಬಳಿ ತೆರಳುತ್ತಿತ್ತು. ಈ ವೇಳೆ ಮುಂದೆ ಸಾಗುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ಮಾಗಡಿಯಿಂದ ಶಬರಿಮಲೆಗೆ 11 ಮಂದಿ ಮಾಲಾಧಾರಿಗಳು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.  ಅದೃಷ್ಟವಶಾತ್ ಯಾತ್ರಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ವಾಹನ ಪಲ್ಟಿಯಾಗಿದ್ದರಿಂದ ಅಪಶಕುನವೆಂದು […]

ಸುತ್ತೂರು ಶ್ರೀಗಳನ್ನು ಭೇಟಿಯಾದ ನಿವೃತ್ತ ಸಿಜೆಐ ರಂಜನ್ ಗೊಗೊಯಿ

 ಚಾಮರಾಜನಗರ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಪತ್ನಿ ರೂಪಾಂಜಲಿ ಅವರೊಂದಿಗೆ ಸೋಮವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ಸುತ್ತೂರು ಶಾಖಾ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

ಬಿಳಿಗಿರಿರಂಗನಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿರುವ ನಿವೃತ್ತ ಸಿಜೆಐ ರಂಜನ್ ಗೊಗೊಯಿ

 ಚಾಮರಾಜನಗರ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.  ನಗರದ ರಾಮಸಮುದ್ರದಲ್ಲಿನ ಹರಳುಕೋಟೆ ಆಂಜನೇಯ ದೇಗುಲಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಂಜನ್ ಗೊಗೊಯಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ರಂಜನ್ ಗೊಗೊಯಿ ಅವರು ಭಾನುವಾರ ಸಂಜೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಸುತ್ತೂರು ಶ್ರೀಗಳಿಂದ ಆಶೀರ್ವಚನ ಪಡೆಯಲಿರುವ ನಿವೃತ್ತ ಸಿಜೆಐ […]

ವಿದ್ಯುತ್ ತಂತಿ ತುಳಿದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

 ಚಾಮರಾಜನಗರ: ಜಮೀನಿನಲ್ಲಿ ಕಳಚಿ ಬಿದ್ದಿದ್ದ ವಿದ್ಯುತ್ ಸಂಚಾರವುಳ್ಳ ತಂತಿಯನ್ನು ತುಳಿದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.  ಗ್ರಾಮದ ಪುಟ್ಟಬುದ್ಧಿ ಅವರ ಪುತ್ರ ಮಹೇಂದ್ರ ಅ.ಮದನ್ (೨೧) ಮೃತಪಟ್ಟಿದ್ದು, ನಾಗಮಂಗಲದ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದರು. ಮಧ್ಯಾಹ್ನ ಜಮೀನಿನಿಂದ ತೋಟದಲ್ಲಿರುವ ತಮ್ಮ ಮನೆಗೆ ಊಟ ಮಾಡಲು ಹೋಗುತ್ತಿದ್ದಾಗ ಮಾರ್ಗ ಮಧ್ಯದ ಜಮೀನಿನಲ್ಲಿ ಅಗೋಚರವಾಗಿ ಕಳಚಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. […]

ಚಾಮರಾಜನಗರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

 ಕೇರಳ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಆಧಾರಿಸಿ ಚಾಮರಾಜನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.  ಚಾಮರಾಜನಗರ ಜಿಲ್ಲಾ ಪೊಲೀಸರು, ಆಂತರಿಕ ಭದ್ರತಾ ದಳ, ಭಯೋತ್ಪಾದಕ ನಿಗ್ರಹ ದಳದಿಂದ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಕೇರಳ ಉಗ್ರರೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಶಂಕಿತ ಉಗ್ರರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂದ ಗುಂಡ್ಲುಪೇಟೆ ಪೊಲೀಸ್‍ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.  ಇವರು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ […]

ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವು

 ಚಾಮರಾಜನಗರ ಜಿಲ್ಲೆಯ ಕುಳೂರ್ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವನ್ನಪ್ಪಿದೆ.  ಆನೆ ಸುಮಾರು 40 ರಿಂದ 45 ವರ್ಷವಯಸ್ಸಿನದ್ದಾಗಿರಬಹುದು ಎಂದು ಹೇಳಲಾಗಿದೆ. ಬೂದಿಪಡಗ ಅರಣ್ಯ ವಲಯದ ಕಾಡಾನೆ ಇದಾಗಿದ್ದು, ಕುಳೂರ್‍ ಗ್ರಾಮದ ಶಿವರುದ್ರ ಎಂಬವರ ಜಮೀನಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉಪಚುನಾವಣೆಯಲ್ಲಿ ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ; ವಿ.ಶ್ರೀನಿವಾಸ ಪ್ರಸಾದ್ ಹೊಸ ಬಾಂಬ್

ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ. ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಇಲ್ಲ. ಅಡಗೂರು ಎಚ್‍.ವಿಶ್ವನಾಥ್‍ ಸೋತಿದ್ದಾರೆ. ಹೀಗಾಗಿ, ಅವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‍ ಹೊಸ ಬಾಂಬ್‍ ಸಿಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತವರು ಮಂತ್ರಿ ಆಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್‍ ಉಲ್ಲೇಖಿಸಿದೆ. ಗೆದ್ದವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದರಂತೆ ಮಾಡುತ್ತಾರೆ. ಧನುರ್ಮಾಸದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು […]

ಹಳೆಯ ದ್ವೇಷಕ್ಕೆ ಅಣ್ಣನಿಗೆ ಚಾಕು ಇರಿದು ಕೊಲೆ

 ಕೊಳ್ಳೇಗಾಲ: ಹಳೆಯ ದ್ವೇಷ ಇಟ್ಟುಕೊಂಡು ಗಾಂಜಾ ಮತ್ತಿನಲ್ಲಿ ತನ್ನ ಅಣ್ಣನಿಗೆ ಚಾಕು ಇರಿದು ಕೊಲೆಗೈದ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜರುಗಿದೆ.  ಮಧುವನಹಳ್ಳಿ ಗ್ರಾಮದ ಹೊಂಗಶೆಟ್ಟಿ ಬೀದಿಯ ಗುರುಸ್ವಾಮಿ ಎಂಬವರ ಪುತ್ರ ಸಿದ್ದಪ್ಪಸ್ವಾಮಿ ಸಾವನ್ನಪ್ಪಿದ್ದ ವ್ಯಕ್ತಿ. ಮೃತನ ಚಿಕ್ಕಪ್ಪನ ಮಗನಾದ ಬಿಸಲರಾಜು ಎಂಬಾತನು ಚಾಕು ಇರಿದ ಆರೋಪಿ.  ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ನವೀನ್ ಕುಮಾರ್, ಪಿಎಸ್ಐ ಅಶೋಕ್ ಆಗಮಿಸಿ ವಿಚಾರಣೆ ನಡೆಸಿ ಪರಾರಿಯಾದ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮೃತ್ತನ ಪತ್ನಿ […]

ಸಿಂಗಾನಲ್ಲೂರಿನಲ್ಲಿ ವಿಚಿತ್ರ ಜ್ವರ; ಡೆಂಗ್ಯೂ ಭೀತಿ

  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸಿಂಗಾನಲ್ಲೂರು ಗ್ರಾಮದ ಜನರಲ್ಲಿ ವಿಚಿತ್ರ ಜ್ವರ ಕಾಣಿಸಿಕೊಂಡಿದೆ. ಹಲವು ದಿನಗಳಿಂದ ಗ್ರಾಮದ 20ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಿರುವಾಗಲೇ ಸಿಂಗಾನಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಧ್ಯಕ್ಷ ಮಲ್ಲಯ್ಯರ ಪುತ್ರ ಸಾಗರ್ (30) ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.   ಕಳೆದ 20 ದಿನಗಳಿಂದ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. 8 ರಿಂದ 10 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದರೂ ಇಷ್ಟು […]

ಚಾಮರಾಜನಗರ KSRTC ವಿಭಾಗಕ್ಕೆ 5 ಕೋಟಿ ರೂ. ಲಾಭ..

  ಚಾಮರಾಜನಗರ ಕೆಎಸ್ಆರ್​ಟಿಸಿ ಉಪವಿಭಾಗ 2019ರಲ್ಲಿ ಅತ್ಯಧಿಕ ಲಾಭ ಗಳಿಸಿದೆ. 2019ರ ಏಪ್ರಿಲ್‍ 1 ರಿಂದ ಡಿಸೆಂಬರ್‍ 31 ರವರೆಗೆ 5 ಕೋಟಿ ರೂಪಾಯಿ ಲಾಭ ಗಳಿಸಿದೆ. 2018ನೇ ವರ್ಷಕ್ಕೆ ಹೋಲಿಸಿದರೆ ಲಾಭ ದುಪ್ಪಟ್ಟಾಗಿದೆ.   ಚಾಮರಾಜನಗರ ಉಪವಿಭಾಗದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ನಂಜನಗೂಡು ಘಟಕಗಳಿಂದ ನಿತ್ಯ 540 ಬಸ್ಸುಗಳು ಓಡಾಡುತ್ತವೆ. ಪ್ರತಿದಿನ ಸರಾಸರಿ 50-52 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ.