You cannot copy content of this page.
. . .

Category: ಚಾಮರಾಜನಗರ

ಮಾದಪ್ಪನ ಬೆಟ್ಟದಲ್ಲಿ ಹೆಚ್ಚಿದ ‘ತೀರ್ಥ’ ಸಮಾರಾಧನೆ..!

13 Views   ಪ್ರಸಿದ್ಧ ಯಾತ್ರಾ ಕೇಂದ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಬೆಟ್ಟದಲ್ಲಿ ಅಧಿಕೃತವಾದ ಮದ್ಯದ ಅಂಗಡಿಗಳಿಲ್ಲ. ಹೀಗಿದ್ದರೂ ಬೆಟ್ಟದಲ್ಲೆಲ್ಲಾ ‘ತೀರ್ಥ’ ಸಮಾರಾಧನೆ ಜೋರಾಗಿ ನಡೆಯುತ್ತಿದೆ. ಅಕ್ರಮವಾಗಿ ಮದ್ಯದ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.   ಸರ್ಕಾರ ಮಹದೇಶ್ವರ ಬೆಟ್ಟದ 40 ಕಿಲೋ ಮೀಟರ್‍ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಹೀಗಿದ್ದರೂ ಇಲ್ಲಿ ಮದ್ಯ ಸಮಾರಾಧನೆ ನಡೆಯುತ್ತಿದೆ. ಜನ ಹೊರಗಡೆಯಿಂದ ತಂದು ಮದ್ಯ ಸೇವನೆ ಮಾಡುತ್ತಿದ್ದಾರೆ. ಬೆಟ್ಟದಲ್ಲೂ ಅಲ್ಲಲ್ಲಿ ಅಕ್ರಮವಾಗಿ […]

ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಆಲೆಮನೆ, ಕಾರು, ಟ್ರ್ಯಾಕ್ಟರ್

16 Views ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಆಲೆಮನೆ, ಟ್ರಾಕ್ಟರ್ ಹಾಗೂ ಕಾರೊಂದು ಸುಟ್ಟು ಭಸ್ಮವಾಗಿರುವ ಘಟನೆ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.  ಗ್ರಾಮದ ಶಿವಕುಮಾರಸ್ವಾಮಿ ಎಂಬವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಲೆಮನೆ ಹಾಗೂ ಅದರೊಳಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಕಾರು ಬೆಂಕಿಗಾಹುತಿಯಾಗಿದೆ. ಅಂದಾಜು ೫ ಲಕ್ಷ ರೂ. ನಷ್ಟವಾಗಿದೆ.

ಕರೆಂಟ್ ಕಣ್ಣಾಮುಚ್ಚಾಲೆ; ವೈದ್ಯರು, ರೋಗಿಗಳ ಪರದಾಟ

14 Views ಮನೆಗಳಿಗೆ ಸೀಮಿತವಾಗಿದ್ದ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಈಗ ಆಸ್ಪತ್ರೆಗೂ ವಿಸ್ತರಿಸಿದೆ. ಇದರಿಂದ ರೋಗಿಗಳು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದೆ.   ಹೌದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ತಲೆದೋರಿದೆ. ಪದೇ ಪದೇ ವಿದ್ಯುತ್ ಕೈಕೊಡುತ್ತಿರುವುದರಿಂದ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಮೊಬೈಲ್ ಟಾರ್ಚ್ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.  ಉಪವಿಭಾಗ ಆಸ್ಪತ್ರೆಯಾಗಿದ್ದರೂ ಕನಿಷ್ಟ ಜನರೇಟರ್ ಸೌಲಭ್ಯವೂ ಇಲ್ಲದಿರುವುದು ಆಸ್ಪತ್ರೆ ದುಸ್ಥಿತಿಗೆ ಸಾಕ್ಷಿಯಾಗಿದೆ. ವಿದ್ಯುತ್ ಕೈ ಕೊಟ್ಟಾಗಲೆಲ್ಲಾ ಇಲ್ಲಿನ ರೋಗಿಗಳ […]

ಸುಳ್ವಾಡಿ ಪ್ರಕರಣ: ಸುಪ್ರೀಂನಲ್ಲೂ ಸಿಗಲಿಲ್ಲ ಜಾಮೀನು

61 Viewsಚಾಮರಾಜನಗರದ ಸುಳ್ವಾಡಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ ವಜಾಗೊಳಿಸಿದೆ. ಚಾಮರಾಜನಗರ ಸ್ಥಳೀಯ, ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್‍ ಮೆಟ್ಟಿಲೇರಿದ್ದರು. ನವೆಂಬರ್‍ 21ರಂದು ಸುಪ್ರೀಂ ಕೋರ್ಟ್‍‍ಗೆ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ವಜಾ ಮಾಡಿದೆ. ಹೀಗಾಗಿ, ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜೈಲು ಖಾಯಂ ಆಗಿದೆ. […]

ಕರೆಂಟ್‍ ಶಾಕ್: ಮೂವರು ಮಹಿಳೆಯರು ಅಸ್ವಸ್ಥ

51 Viewsಬಟ್ಟೆ ಒಣಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಚಾಮರಾಜನಗರದ ಯಳಂದೂರು ತಾಲ್ಲೂಕಿನ ಕಂದಹಳ್ಳಿಯಲ್ಲಿ ಇಂದು (ಸೋಮವಾರ) ಈ ದಾರುಣ ಘಟನೆ ನಡೆದಿದೆ. ಕುಮಾರಿ, ಸುಮಾ, ನಾಗರತ್ನ ಅಸ್ವಸ್ಥಗೊಂಡ ಮಹಿಳೆಯರು. ತಾಯಿ ಕುಮಾರಿ ಹಾಗೂ ಮಗಳಾದ ಸುಮಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಮಹಿಳೆಯರು ಬಟ್ಟೆ ಒಗೆದ ನಂತರ ಮನೆಯ ಹಿಂದಿನ ಕೊಟ್ಟಿಗೆಯ ಮುಳ್ಳುತಂತಿಗೆ ಬಟ್ಟೆ ಒಣ ಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿದೆ ಎನ್ನಲಾಗಿದೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ […]

ಗುಂಡ್ಲುಪೇಟೆ ಬಳಿ ಭೀಕರ ಅಪಘಾತ; ಲಾರಿಗೆ ಮೂವರು ಬಲಿ

66 Viewsಪ್ಲೈವುಡ್‍ ಶೀಟ್‍ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬೈಕ್‍ ಮೇಲೆ ಉರುಳಿಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಬಂಡೀಪುರದ ಮೇಲುಕಾಮನಹಳ್ಳಿ ಚೆಕ್‍ಪೋಸ್ಟ್‍ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.    ಲಾರಿ ಬಂಡೀಪುರದ ಕಡೆಯಿಂದ ಗುಂಡ್ಲುಪೇಟೆಯತ್ತ ಬರುತ್ತಿತ್ತು. ಈ ವೇಳೆ ಚೆಕ್‍ಪೋಸ್ಟ್ ನ ಇಳಿಜಾರು ರಸ್ತೆಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ದ್ವಿಚಕ್ರ ವಾಹನ ಸವಾರರಾದ ಶಿವಪುರ ಗ್ರಾಮದ ಶಿವಪ್ಪ, ಕಾಳಪ್ಪ ಹಾಗೂ ಲಾರಿ ಚಾಲಕ ಈಶ್ವರಪ್ಪ ಮೃತ ದುರ್ದೈವಿಗಳು. […]

ಅರ್ಚಕನ ವಿರುದ್ಧ ರೇಪ್ ಅಸ್ತ್ರ; 20 ಲಕ್ಷ ರೂಪಾಯಿ ವಸೂಲಿ..!

90 Viewsಕೊಳ್ಳೇಗಾಲ: ಅರ್ಚಕರೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ಬ್ಲ್ಯಾಕ್‍ಮೇಲ್‍ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಮೂವರನ್ನು ಬಂಧಿಸಿರುವ ಕೊಳ್ಳೇಗಾಲ ಪೊಲೀಸರು, ಆರೋಪಿಗಳಿಂದ 13.77 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.   ಬೆಂಗಳೂರಿನ ಸರೋಜಮ್ಮ, ನಾಗರತ್ನಮ್ಮ, ಬಸವರಾಜು ಬಂಧಿತ ಆರೋಪಿಗಳು. ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಾಘವನ್ ಬ್ಲ್ಯಾಕ್‍ಮೇಲ್‍ ಜಾಲಕ್ಕೆ ಸಿಲುಕಿದ್ದವರು. ಏನಿದು ಪ್ರಕರಣ..?    ರಾಘವನ್‍ ಅವರು ಜನರ ಅಪೇಕ್ಷೆ ಮೇರೆಗೆ ಮನೆಮನೆಗೆ ತೆರಳಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಅದೇ ರೀತಿ ಹೆಸರಘಟ್ಟದ ಸರೋಜಮ್ಮ […]