You cannot copy content of this page.
. . .

Category: ಕೊಡಗು

ಶಾಲಾ ಬಸ್ ಗೆ ಕಾರು ಡಿಕ್ಕಿ; ಕಾರು ನಜ್ಜುಗುಜ್ಜು

  ಕೊಡಗು ಜಿಲ್ಲೆ ಐಗೂರು ಬಳಿ ಶಾಲಾ‌ ಬಸ್ ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ಪವಾಡ ಸದೃಷ ರೀತಿಯಲ್ಲಿ ಪಾರಾಗಿದ್ದಾರೆ.   ಅಪಘಾತಕ್ಕೀಡಾದ ಕಾರು ಸುಮನ್ ಮುದ್ದಯ್ಯ ಎಂಬವರಿಗೆ ಸೇರಿದ್ದಾಗಿದ್ದು, ಕಾರಿನ ಚಾಲಕ ಮದ್ಯಪಾನ ಮಾಡಿದ್ದ ಎಮದು ತಿಳಿದುಬಂದಿದೆ. ಕಾರಿನ ಏರ್‍ ಬ್ಯಾಗ್‍ ಓಪನ್‍ ಆಗಿದ್ದರಿಂದಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬಚಾವಾಗಿದ್ದಾರೆ.

ಮಗನಿಂದಲೇ ತಂದೆ ಹತ್ಯೆ

 ಮದ್ಯಸೇವನೆಗೆ ಹಣ ನೀಡದ್ದಕ್ಕೆ ಕೋಪಗೊಂಡು ತಂದೆಯನ್ನೇ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.  ಸೋಮವಾರಪೇಟೆಯ ಗೋಣಿಮರೂರಿನಲ್ಲಿ ಈ ಘಟನೆ ನಡೆದಿದೆ. ಜೇನುಕುರುಬರ ಕರಿಯಪ್ಪ (46) ಹತ್ಯೆಯಾದ ದುರ್ದೈವಿ. ಮಗ ಲೋಕೇಶ್ ಎಂಬಾತನಿಂದ ಕುಕೃತ್ಯ ಆಗಿದೆ. ಲೋಕೇಶ್‍ ಮದ್ಯ ಸೇವನೆಗೆ ತಂದೆ ಬಳಿ ಹಣ ಕೇಳಿದ್ದಾನೆ. ತಂದೆ ಹಣ ನೀಡದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನೆ. ತಾಯಿ ಲೀಲಾ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ನಟಿ ರಶ್ಮಿಕಾ ಮಂದಣ್ಣ, ಕುಟುಂಬಸ್ಥರಿಗೆ ಐ.ಟಿ ನೋಟಿಸ್

 ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರಿಗೆ ಐ.ಟಿ ಸಮನ್ಸ್‍ ನೀಡಿದೆ. ಸೋಮವಾರ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಮತ್ತು ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಐಟಿ ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಸತತ ಎರಡು ದಿನಗಳ ಕಾಲ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಜೊತೆಗೆ ದಾಖಲೆ ಇಲ್ಲದ 25 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆರಿಗೆ ವಂಚನೆ ಮಾಡಿರುವ ಕೋಟ್ಯಂತರ ಆಸ್ತಿಯ […]

ಪ್ರಿಯಕರನ ಕಿರುಕುಳ ತಾಳದೆ ಯುವತಿ ಆತ್ಮಹತ್ಯೆ

 ಪ್ರಿಯಕರನ ಕಾಟ ತಾಳದೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟ ಗ್ರಾಮದ ನಿವಾಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಯುವತಿ ಪೂಜಾ ಹಾಗೂ ಕೂಡ್ಲೂರು ಗ್ರಾಮದ ಯುವಕ ಪವನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಪೋಷಕರು, ಯುವತಿಯನ್ನು ಸುಳ್ಯದ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಆದರೆ, ಪವನ್‌ ಪದೇ ಪದೇ ಪೂಜಾಳಿಗೆ ಕರೆ ಮಾಡುತ್ತಿದ್ದ. ಈ ವಿಚಾರವನ್ನು ಯುವತಿ ತನ್ನ ಪೋಷಕರಿಗೆ ತಿಳಿಸಿದ್ದರು. ಹೀಗಾಗಿ ಪೋಷಕರು ಮಗಳನ್ನು ಕಾಲೇಜು ಬಿಡಿಸಿ ಮನೆಯಲ್ಲೇ ಇರಿಸಿದ್ದರು.   ಮಾನಸಿಕವಾಗಿ ನೊಂದಿದ್ದ […]

ರಶ್ಮಿಕಾ ಮನೆ ಮೇಲೆ ಐಟಿ ದಾಳಿ

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವಿರಾಜಪೇಟೆ ಪಟ್ಟಣದಲ್ಲಿ ಸೆರೆನಿಟ್ ಹಾಲ್ ಹೊಂದಿದ್ದು, ಅದರ ಕಛೇರಿ ಹಾಗೂ ವಿರಾಜಪೇಟೆಯ ಮನೆಯ ಮೇಲೆ ಏಕಕಾಲಕ್ಕೆ ದಾಳಿ‌ ನಡೆಸಲಾಗಿದೆ.‌  10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆಯಲ್ಲಿ […]

ಪ್ರಧಾನಿಯಿಂದ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ: ದೇಮ

  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನಕ್ಕೆ ನಮಸ್ಕರಿಸಿದ್ದ ಪ್ರಧಾನಿಯವರು ಈಗ ಅದೇ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಪ್ರಗತಿಪರ ಜನಾಂದೋಲನಾ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಕಾಲಿಗೆ ನಮಸ್ಕರಿಸಿದ್ದ ಗೋಡ್ಸೆ, ನಂತರ ಅವರ ಎದೆಗೇ ಗುಂಡು ಹಾರಿಸಿದ್ದ. ಅದೇ ರೀತಿ ಪ್ರಧಾನಿಯೂ ಅತ್ತ ನಮಸ್ಕರಿಸಿ ಇತ್ತ ಗುಂಡು ಹಾರಿಸುತ್ತಿದ್ದಾರೆ ಎಂದು ಹೇಳಿದರು.   ಸ್ವಾತಂತ್ರ್ಯನಂತರದ […]

ಬೈಕ್ ಹಾಗೂ ಬಸ್ ಡಿಕ್ಕಿ: ಇಬ್ಬರ ದುರ್ಮರಣ

  ಬೈಕ್ ಹಾಗೂ ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಡಿಕೇರಿ ಹೊರವಲಯದ ಕೊಯನಾಡು ದೇವರಕೊಲ್ಲಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಇಂದು ಬೆಳಿಗ್ಗೆ 8.30 ಗಂಟೆಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ನಲ್ಲಿದ್ದ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.   ಮೃತರ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಕೊಡಗು ಎಸ್ಪಿ, ಸುಮನ್‌ ಪನ್ನೇಕರ್ ಭೇಟಿ ನೀಡಿದ್ದರು. ಮಡಿಕೇರಿ‌ ಗ್ರಾಮಾಂತರ ಪೊಲೀಸರು […]

ಆನೆ ದಂತ ಸಾಗಣೆ; ಇಬ್ಬರ ಬಂಧನ

 ಮಡಿಕೇರಿ: ಲಕ್ಷಾಂತರ ರೂ. ಮೌಲ್ಯದ ಆನೆ ದಂತಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ. ದಂತ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.  ಅಪ್ಪಂಗಳ ಹೆರವನಾಡು ನಿವಾಸಿ ಪಿ.ಕೆ.ದಿನೇಶ್. ಈತ ಸಕಲೇಶಪುರದ ಕುಮಾರ ಎಂಬಾತನಿಂದ ಅಂದಾಜು ೩೦ ಲಕ್ಷ ರೂ. ಮೌಲ್ಯದ ಎರಡು ಆನೆ ದಂತಗಳನ್ನು ಪಡೆದು, ಆತನೊಂದಿಗೆ ಧರ್ಮಸ್ಥಳದ ಕಡೆಗೆ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂದಿಸಿದ್ದಾರೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ […]

ಗದ್ದೆಗೆ ಉರುಳಿದ ಐರಾವತ ಬಸ್

 ಮೈಸೂರಿನಿಂದ ಕೇರಳದ ಕೋಯಿಕೋಡುವಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಐರಾವತ ಬಸ್‍ವೊಂದು ಗದ್ದೆಗೆ ಉರುಳಿದ ಘಟನೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಮಾಪಿಳ್ಳೆತೋಡಿನಲ್ಲಿ ನಡೆದಿದೆ.  ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿಯಲ್ಲಿ 100 ರೂ.ಗೆ 500 ರೂ. ಕೊಡುವ ಎಟಿಎಂ..!

ಮಡಿಕೇರಿಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರವೊಂದರಲ್ಲಿ ಹಣ ತುಂಬುವವರು ಮಾಡಿದ ಎಡವಟ್ಟಿನಿಂದ ಗ್ರಾಹಕರು ಭರಪೂರ ಲಾಭ ಪಡೆದಿದ್ದಾರೆ. ಎಟಿಎಂ ಯಂತ್ರದಲ್ಲಿ 500 ರೂ. ನಮೂದು ಮಾಡಿದರೆ 2500 ರೂಪಾಯಿ ಬಂದಿದ್ದು ಗ್ರಾಹಕರನ್ನು ಅಚ್ಚರಿಗೊಳಿಸಿತ್ತು. ಈ ಎಡವಟ್ಟು ಬ್ಯಾಂಕ್‌ ಸಿಬಂದಿಗೆ ತಿಳಿಯುವಷ್ಟರಲ್ಲಿ 1.50 ಲಕ್ಷ ರೂ. ಸೋರಿಕೆ ಆಗಿತ್ತು.   ಹಣ ತುಂಬುವ ಸಿಬ್ಬಂದಿ 100 ರೂಪಾಯಿ ನೋಟುಗಳನ್ನು ತುಂಬುವ ಟ್ರೇನಲ್ಲಿ 500 ರೂಪಾಯಿ ನೋಟುಗಳನ್ನು ತುಂಬಿದ್ದರಿಂದ ಈ ಅವಾಂತರವಾಗಿತ್ತು. 2019ರ ಡಿಸೆಂಬರ್‍ 30 ರಂದು ಈ ಘಟನೆ ನಡೆದಿದ್ದು, […]