You cannot copy content of this page.
. . .

Category: ಜಿಲ್ಲಾ ಸುದ್ದಿ

ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ವಾಹನ ಪಲ್ಟಿ…

 ಚಾಮರಾಜನಗರ: ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಟೆಂಪೋ ಟ್ರಾವೆಲರ್​ವೊಂದು ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಪುರದ ಬಳಿ ನಡೆದಿದೆ. ಯಾತ್ರಾರ್ಥಿಗಳು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.  ಯಾತ್ರಾರ್ಥಿಗಳಿದ್ದ ಟೆಂಪೊ ಗುಂಡ್ಲುಪೇಟೆಯ ರಾಘವಾಪುರದ ಬಳಿ ತೆರಳುತ್ತಿತ್ತು. ಈ ವೇಳೆ ಮುಂದೆ ಸಾಗುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ಮಾಗಡಿಯಿಂದ ಶಬರಿಮಲೆಗೆ 11 ಮಂದಿ ಮಾಲಾಧಾರಿಗಳು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.  ಅದೃಷ್ಟವಶಾತ್ ಯಾತ್ರಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ವಾಹನ ಪಲ್ಟಿಯಾಗಿದ್ದರಿಂದ ಅಪಶಕುನವೆಂದು […]

ಮಗನಿಂದಲೇ ತಂದೆ ಹತ್ಯೆ

 ಮದ್ಯಸೇವನೆಗೆ ಹಣ ನೀಡದ್ದಕ್ಕೆ ಕೋಪಗೊಂಡು ತಂದೆಯನ್ನೇ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.  ಸೋಮವಾರಪೇಟೆಯ ಗೋಣಿಮರೂರಿನಲ್ಲಿ ಈ ಘಟನೆ ನಡೆದಿದೆ. ಜೇನುಕುರುಬರ ಕರಿಯಪ್ಪ (46) ಹತ್ಯೆಯಾದ ದುರ್ದೈವಿ. ಮಗ ಲೋಕೇಶ್ ಎಂಬಾತನಿಂದ ಕುಕೃತ್ಯ ಆಗಿದೆ. ಲೋಕೇಶ್‍ ಮದ್ಯ ಸೇವನೆಗೆ ತಂದೆ ಬಳಿ ಹಣ ಕೇಳಿದ್ದಾನೆ. ತಂದೆ ಹಣ ನೀಡದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾನೆ. ತಾಯಿ ಲೀಲಾ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ನಟಿ ರಶ್ಮಿಕಾ ಮಂದಣ್ಣ, ಕುಟುಂಬಸ್ಥರಿಗೆ ಐ.ಟಿ ನೋಟಿಸ್

 ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರಿಗೆ ಐ.ಟಿ ಸಮನ್ಸ್‍ ನೀಡಿದೆ. ಸೋಮವಾರ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಮತ್ತು ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.  ಐಟಿ ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಸತತ ಎರಡು ದಿನಗಳ ಕಾಲ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಜೊತೆಗೆ ದಾಖಲೆ ಇಲ್ಲದ 25 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆರಿಗೆ ವಂಚನೆ ಮಾಡಿರುವ ಕೋಟ್ಯಂತರ ಆಸ್ತಿಯ […]

ಪ್ರಜ್ವಲ್ ರೇವಣ್ಣಗೆ ರಿಲೀಫ್ ನೀಡಿದ ಹೈಕೋರ್ಟ್

  ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದ ಬಿಜೆಪಿಯ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‍, ಎ. ಮಂಜು ಅರ್ಜಿ ಸಲ್ಲಿಸುವಾಗ ಪ್ರಮಾಣ ಪತ್ರವನ್ನು ಸಲ್ಲಿಸಿರಲಿಲ್ಲ ಎಂದು ಹೇಳಿದೆ.   ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಏಕ ಸದಸ್ಯ ಪೀಠ ಎ. ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಾಂತ್ರಿಕ […]

ಮದ್ದೂರು ಬಳಿ ಭಾರೀ ಶಬ್ದ; ಭೂಕಂಪನದ ಅನುಭವ

ಮಂಡ್ಯ ಜಿಲ್ಲೆಯ ಕೆಲವೆಡೆ ಸಣ್ಣದಾಗಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದಂತೆ ಭಾಸವಾಗಿದೆ. ಇದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಮನೆಯಲ್ಲಿದ್ದ ಪಾತ್ರೆಗಳು ಮತ್ತಿತರ ವಸ್ತುಗಳು ಕೆಳಗೆ ಉರುಳಿವೆ. ಇದು ಭೂಕಂಪವೋ ಅಥವಾ ಯಾವುದಾದರೂ ಸ್ಫೋಟವೋ ಎಂಬುದು ಖಚಿತವಾಗಿಲ್ಲ.

ಬ್ರಹ್ಮ ರಥೋತ್ಸವ; ಜೆಡಿಎಸ್ ತಾಪಂ ಸದಸ್ಯ, ಬಿಜೆಪಿ ಶಾಸಕನ ಬೆಂಬಲಿಗರ ನಡುವೆ ಗಲಾಟೆ

 ಮಂಡ್ಯ ಜಿಲ್ಲೆಯ ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ಗವಿರಂಗಪ್ಪ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತಿದ್ದ ವೇಳೆ ತಾಲ್ಲೂಕು ಪಂಚಾಯಿತಿ ಜೆಡಿಎಸ್‍ ಸದಸ್ಯ ದಿನೇಶ್‍ ಹಾಗೂ ಕೆ.ಆರ್‍.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ಬೆಂಬಲಿಗರ ನಡುವೆ ಗಲಾಟೆಯಾಗಿದೆ.  ರಥೋತ್ಸವದ ವೇಳೆ ಮೊದಲು ಪೂಜೆ ಮಾಡುವುದಕ್ಕೆ ತಾಪಂ ಸದಸ್ಯ ದಿನೇಶ್‍ ಮುಂದಾದರು. ಅದಕ್ಕೆ ಶಾಸಕ ನಾರಾಯಣಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಪರಸ್ಪರರಲ್ಲಿ ಗಲಾಟೆಯಾಗಿ ಹೊಡೆದಾಟದ ಹಂತಕ್ಕೆ ತಲುಪಿತ್ತು. ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಪ್ರಿಯಕರನ ಕಿರುಕುಳ ತಾಳದೆ ಯುವತಿ ಆತ್ಮಹತ್ಯೆ

 ಪ್ರಿಯಕರನ ಕಾಟ ತಾಳದೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟ ಗ್ರಾಮದ ನಿವಾಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಯುವತಿ ಪೂಜಾ ಹಾಗೂ ಕೂಡ್ಲೂರು ಗ್ರಾಮದ ಯುವಕ ಪವನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಪೋಷಕರು, ಯುವತಿಯನ್ನು ಸುಳ್ಯದ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಆದರೆ, ಪವನ್‌ ಪದೇ ಪದೇ ಪೂಜಾಳಿಗೆ ಕರೆ ಮಾಡುತ್ತಿದ್ದ. ಈ ವಿಚಾರವನ್ನು ಯುವತಿ ತನ್ನ ಪೋಷಕರಿಗೆ ತಿಳಿಸಿದ್ದರು. ಹೀಗಾಗಿ ಪೋಷಕರು ಮಗಳನ್ನು ಕಾಲೇಜು ಬಿಡಿಸಿ ಮನೆಯಲ್ಲೇ ಇರಿಸಿದ್ದರು.   ಮಾನಸಿಕವಾಗಿ ನೊಂದಿದ್ದ […]

ಕಿಚ್ಚು ಹಾಯಿಸುವಾಗ ವ್ಯಕ್ತಿಗೆ ಬೆಂಕಿ ತಗುಲಿ ಗಂಭೀರ ಗಾಯ

 ರಾಸುಗಳನ್ನು ಕಿಚ್ಚು ಹಾಯಿಸುವಾಗ ರೈತನಿಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ನಡೆದಿದೆ. https://youtu.be/ZQCYdzEnowg  ಚಿಕ್ಕಬಳ್ಳಿ ಗ್ರಾಮದ ರೈತ ರವಿ ಗಾಯಗೊಂಡ ವ್ಯಕ್ತಿ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಾಸುಗಳನ್ನು ಬೆಂಕಿಯಲ್ಲಿ ಹಾರಿಸುವ ವೇಳೆ ಬೆಂಕಿ ತಗುಲಿ ದೇಹದಲ್ಲಿ ಸುಟ್ಟ ಗಾಯಗಳಾಗಿವೆ. ಗ್ರಾಮಸ್ಥರ ನೆರವಿನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. https://youtu.be/UBPLuhbdUao

ರಶ್ಮಿಕಾ ಮನೆ ಮೇಲೆ ಐಟಿ ದಾಳಿ

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವಿರಾಜಪೇಟೆ ಪಟ್ಟಣದಲ್ಲಿ ಸೆರೆನಿಟ್ ಹಾಲ್ ಹೊಂದಿದ್ದು, ಅದರ ಕಛೇರಿ ಹಾಗೂ ವಿರಾಜಪೇಟೆಯ ಮನೆಯ ಮೇಲೆ ಏಕಕಾಲಕ್ಕೆ ದಾಳಿ‌ ನಡೆಸಲಾಗಿದೆ.‌  10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆಯಲ್ಲಿ […]

ಸುತ್ತೂರು ಶ್ರೀಗಳನ್ನು ಭೇಟಿಯಾದ ನಿವೃತ್ತ ಸಿಜೆಐ ರಂಜನ್ ಗೊಗೊಯಿ

 ಚಾಮರಾಜನಗರ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಪತ್ನಿ ರೂಪಾಂಜಲಿ ಅವರೊಂದಿಗೆ ಸೋಮವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ಸುತ್ತೂರು ಶಾಖಾ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.