You cannot copy content of this page.
. . .

Category: ಚಿತ್ರ ಮಂಜರಿ

ಛಪಾಕ್‍ ಬಾಯ್ಕಾಟ್ ಅಭಿಯಾನ : ಪೇಚಿಗೆ ಸಿಲುಕಿಸಿದ ‘420’ ಟಿಕೆಟ್..!

  ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಲು ಹೋಗಿ ಒಂದು ಗುಂಪು ಪೇಚಿಗೆ ಸಿಲುಕಿದೆ. ದೀಪಿಕಾ ಪಡುಕೋಣೆ ವಿರುದ್ಧ ಟ್ವಿಟರ್‍ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಛಪಾಕ್‍ ಸಿನಿಮಾ ನೋಡಲು ಬುಕಿಂಗ್‍ ಮಾಡಿದ್ದ ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿರುವುದಾಗಿ ಒಂದಷ್ಟು ಜನ ಟಿಕೆಟ್‍ ಸಮೇತ ಟ್ವೀಟ್‍ ಮಾಡಿದ್ದಾರೆ. ಆದರೆ ಎಲ್ಲರೂ ಟ್ವೀಟ್‍ ಮಾಡಿರುವ ಟಿಕೆಟ್‍ ನಲ್ಲಿದ ಸಂಖ್ಯೆ ಒಂದೇ ಆಗಿದೆ. ಒಂದೇ ಟಿಕೆಟ್‍ ಇಟ್ಟುಕೊಂಡು ಎಲ್ಲರೂ  ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಅಂತ […]

ನಾಳೆ ನಟ ಯಶ್‍ ಹುಟ್ಟುಹಬ್ಬ; 5012 ಕೆಜಿ ಕೇಕ್‍ ತಯಾರಿ..!

  ರಾಕಿಂಗ್‍ ಸ್ಟಾರ್‍ ಯಶ್‍ ಗೆ ನಾಳೆ ಹುಟ್ಟುಹ್ಬದ ಸಂಭ್ರಮ. 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್‍ ಗೆ ಅಭಿಮಾನಿಗಳು ಭಾರೀ ಉಡುಗೊಡೆ ನೀಡುತ್ತಿದ್ದಾರೆ. 5012 ಕೆಜಿ ತೂಕದ ಕೇಕ್‍ ತಯಾರಿ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಯಶ್‍ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.   ಈ ಕೇಕ್‍ ಬೃಹತ್‍ ಕೇಕ್‍ ತಯಾರಿಸಲು 2 ಸಾವಿರ ಮೊಟ್ಟೆ, 500 ಕೆಜಿ ಸಕ್ಕರೆ, 600 ಕೆಜಿ ಐಸಿಂಗ್‍ ಶುಗರ್, 500 ಕೆಜಿ ಮೈದಾ ಬಳಕೆ ಮಾಡಲಾಗಿದೆ. ಇದರ ಜೊತೆಗೆ 216 […]

ಅಮಿತಾಬ್‍ ಬಚ್ಚನ್‍ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

 ಭಾರತದ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರದಿಂದ ನೀಡುವ ದಾದಾಸಾಹೇಬ್‍ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿಂದಿ ಖ್ಯಾತ ಚಲನಚಿತ್ರ ನಟ ಅಮಿತಾಬ್‍ ಬಚ್ಚನ್ ಅವರಿಗೆ ಇಂದು (ಭಾನುವಾರ) ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು.  ಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರ 1969ರಿಂದ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಸ್ಯಾಂಡಲ್‌ವುಡ್ ನಟಿ, ಬಾಲಿವುಡ್ ನಿರ್ಮಾಪಕಿ ನಡುವೆ ಜಗಳ

 ಕ್ಷುಲ್ಲಕ ಕಾರಣಕ್ಕೆ ಸ್ಟಾರ್ ಹೋಟೆಲೊಂದರಲ್ಲಿ ಜಗಳವಾಡಿಕೊಂಡಿದ್ದ ಸ್ಯಾಂಡಲ್‍ವುಡ್‍ನ ನಟಿ ಹಾಗೂ ಬಾಲಿವುಡ್‍ ನಿರ್ಮಾಪಕಿಯಿಬ್ಬರ ವೈಷಮ್ಯ ಈಗ ಗಂಭೀರ ಆರೋಪಕ್ಕೆ ಬಂದು ನಿಂತಿದೆ.  ಹೌದು, ನಟಿ ಸಂಜನಾ ಅವರು ನಿರ್ಮಾಪಕಿ ವಂದನಾ ಜೈನ್ ವಿರುದ್ಧ 200 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಇವರಿಬ್ಬರ ನಡುವಿನ ವೈಷಮ್ಯ ದೊಡ್ಡದಾಗಲು ಕಾರಣವಾದರು ಏನು?  ಕಳೆದ ಭಾನುವಾರ ಬೆಂಗಳೂರಿನ ಸ್ಟಾರ್ ಹೋಟೆಲೊಂದರಲ್ಲಿ […]

66ನೇ ಫಿಲ್ಮ್ ಫೇರ್ ಅವಾರ್ಡ್; ಪ್ರಶಸ್ತಿ ಪಡೆದ ಸ್ಯಾಂಡಲ್‍ವುಡ್

 ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿನಿಮಾ ಕಲಾವಿದರಿಗೆ ಪ್ರತಿ ವರ್ಷ ಫಿಲ್ಮ್ ಫೇರ್‍ ಅವಾರ್ಡ್‍ ನೀಡಲಾಗುತ್ತದೆ. ಅಂತೆಯೇ ಈ ವರ್ಷ ಚೆನ್ನೈನಲ್ಲಿ ಶನಿವಾರ ನಡೆದ 66ನೇ ಫಿಲ್ಮ್ ಫೇರ್‍ ಅವಾರ್ಡ್‍ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ (ಕನ್ನಡ, ತೆಲುಗು, ತಮಿಳು, ಮಲೆಯಾಳಂ) ಪ್ರಶಸ್ತಿ ನೀಡಲಾಯಿತು. 66ನೇ ಫಿಲ್ಮ್‍ ಫೇರ್‍ ಪ್ರಶಸ್ತಿ ಸಮಾರಂಭದಲ್ಲಿ ಸ್ಯಂಡಲ್‍ವುಡ್‍ನ ಈ ಕೆಳಕಂಡ ಸಿನಿಮಾಗಳು, ನಿರ್ದೇಶಕರು, ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.  ನಾತಿಚರಾಮಿ ಸಿನಿಮಾ    ಅತ್ಯುತ್ತಮ ನಿರ್ದೇಶಕ: ಮಂಸೋರೆ ಅತ್ಯುತ್ತಮ ಪೋಷಕ […]

ಮೂರ‍್ನಾಲ್ಕು ದಿನಗಳಲ್ಲಿ ವಿಷ್ಣು ಸ್ಮಾರಕಕ್ಕೆ ಅಡಿಗಲ್ಲು; ಬಿಎಸ್‌ವೈ ಭರವಸೆ

 ಡಿಸೆಂಬರ್ ೩೦ರಂದು ನಟ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.  ಮುಖ್ಯಮಂತ್ರಿ ಅವರನ್ನು ಭೇಟಿಯಾದ ನಟಿ ಭಾರತಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಕುರಿತು ಚರ್ಚಿಸಿದರು. ಸ್ಮಾರಕ ನಿರ್ಮಾಣ ಎಲ್ಲಿ ಮಾಡಬೇಕು ಎಂಬ ವಿಚಾರವಾಗಿ ಅನೇಕ ವರ್ಷಗಳವರೆಗೆ ವಿವಾದ ಉಂಟಾಗಿತ್ತು. ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಪಟ್ಟಿ ಹಿಡಿದಿದ್ದರು. ಆಗ ಸರ್ಕಾರ ಮೈಸೂರಿನ ಕಸಬಾ ಹೋಬಳಿಯ […]

ತಿಮ್ಮಪ್ಪನಿಗೆ ಮುಡಿ ಕೊಟ್ಟ ಹ್ಯಾಟ್ರಿಕ್ ಹೀರೊ ಪತ್ನಿ

ಹ್ಯಾಟ್ರಿಕ್‍ ಹೀರೊ, ಸ್ಯಾಂಡಲ್‍ವುಡ್‍ನ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್‍ ಇಂದು (ಶುಕ್ರವಾರ) ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ಬ್ಯಾಕ್‍ ಟು ಬ್ಯಾಕ್‍ ಸಿನಿಮಾ ಕೆಲಸಗಳಿಂದ ಬಿಡುವು ಪಡೆದ ಶಿವರಾಜ್‍ಕುಮಾರ್‍ ತಮ್ಮ ಪತ್ನಿ ಗೀತಾ ಅವರೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಗೀತಾ ಅವರು ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ.  ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ನಾವು ಯಾವಾಗಲೂ ತಿರುಪತಿಗೆ ಬರುತ್ತಿರುತ್ತೇವೆ. ಈ ದೇವಸ್ಥಾನಕ್ಕೆ ಬಂದು ಏಳು ವರ್ಷವಾಗಿತ್ತು. ದೇವರ ದರ್ಶನ […]

ಮೈಸೂರಿನಲ್ಲಿ ‘ಒಡೆಯ’ನ ಭರ್ಜರಿ ಮೆರವಣಿಗೆ –ವಿಡಿಯೋ ಇದೆ

ನಾಳೆ ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಅಭಿನಯದ ಒಡೆಯ ಚಿತ್ರ ನಾಳೆ ರಿಲೀಸ್‍ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇವತ್ತೇ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್‍ ಅಭಿಮಾನಿಗಳು ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.  ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಚಿತ್ರ ಬಿಡುಗಡೆಯಾಗುವ ಶಾಂತಲಾ ಚಿತ್ರ ಮಂದಿರದವರೆಗೂ ನೂರಾರು ಆಟೋ, ಜಟಕಾ ಬಂಡಿ ಮತ್ತು ಅಲಂಕರಿಸಿದ ರಥದಲ್ಲಿ ಪೋಸ್ಟರ್ ಗಳ ಮೆರವಣಿಗೆ ನಡೆಯಿತು. ನೂರಾರು ಅಭಿಮಾನಿಗಳು ಜೈಕಾರ ಹಾಕುತ್ತಾ, ತಮಟೆ ಬೀಟ್ ಗೆ ಹೆಜ್ಜೆ ಹಾಕಿ ಸಿನಿಮಾಗೆ […]

ಸಂಕ್ರಾಂತಿಗೆ ವಿಷ್ಣು ಸ್ಮಾರಕಕ್ಕೆ ಚಾಲನೆ..

    ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಿಲ್ಪಗಳೊಂದಿಗೆ ಮಾತುಕತೆ ನಡೆದಿದ್ದು, ಸಂಕ್ರಾಂತಿ ಹಬ್ಬದಂದು ಚಾಲನೆ ನೀಡಲಾಗುವುದು ಎಂದು ನಟ ಅನಿರುದ್ಧ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವಿಷ್ಣು ಸ್ಮಾರಕದ ಜೊತೆಗೆ ವಿದ್ಯಾಸಂಸ್ಥೆಯೊಂದನ್ನು ತೆರೆದು ಯುವಜನತೆಗೆ ರಂಗಭೂಮಿ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.    ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು ಸಾಂಸ್ಕೃತಿಕ ನಗರಿಯಲ್ಲೇ ಚಿತ್ರನಗರಿ ನಿರ್ಮಾಣ ಮಾಡುವುದು ಉತ್ತಮ, ಯಾಕೆಂದರೆ ಮೈಸೂರಿಗೆ ತನ್ನದೇ ಆಗ ವಿಶೇಷತೆ ಇದೆ ಎಂದರು. https://youtu.be/Gb_9wBAVM9E

ರಜನಿಕಾಂತ್‍ ರಿಂದ ಅಭಿಮಾನಿಯ ಪಾದ ಸ್ಪರ್ಶ..

   ಸೂಪರ್‍ ಸ್ಟಾರ್‍ ರಜನಿಕಾಂತ್‍ ಅವರು ಕೇರಳದ ವಿಶಿಷ್ಟ ಅಭಿಮಾನಿಯನ್ನು ಮನೆಗೆ ಕರೆಸಿಕೊಂಡು ಪಾದಸ್ಪರ್ಶ ಮಾಡಿದ್ದಾರೆ. ಕೇರಳದ ಪಾಲ್ಘಾಟ್‍ ನಿವಾಸಿ 21 ವರ್ಷದ ಪ್ರಣವ್‍ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್‍ ಅವರು ರಜನಿಕಾಂತ್‍ ಅವರ ದೊಡ್ಡ ಅಭಿಮಾನಿಯಂತೆ. ಈ ವಿಷಯ ತಿಳಿದ ರಜನಿಕಾಂತ್‍ ಅವರು ಪ್ರಣವ್‍ ಹಾಗೂ ಅವರ ಕುಟುಂಬಕ್ಕೆ ಟಿಕೆಟ್‍ ಬುಕ್‍ ಮಾಡಿಸಿ ಚೆನ್ನೈಗೆ ಕರೆಸಿಕೊಂಡಿದ್ದರು. ಪೋಯಿಸ್‍ ಗಾರ್ಡನ್‍ ನಲ್ಲಿರುವ ನಿವಾಸದಲ್ಲಿ ಭೇಟಿಯಾದ ಪ್ರಣವ್‍, ರಜನಿಕಾಂತ್‍ […]