You cannot copy content of this page.
. . .

Category: ಚಿತ್ರ ಮಂಜರಿ

ಮೈಸೂರಲ್ಲಿ ಯಶ್-ದುಲ್ಕರ್ ಸನ್ಮಾನ್ ಭೇಟಿ

 ಮೈಸೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಇರುವ ಚಿತ್ರನಟ ಯಶ್ ಅವರನ್ನು ಮಲೆಯಾಳಂ ಚಿತ್ರನಟ ದುಲ್ಕರ್ ಸಲ್ಮಾನ್ ಭೇಟಿ ಮಾಡಿದ್ದಾರೆ.  ಮೈಸೂರಿನಲ್ಲೇ ರಾಕಿಂಗ್ ಸ್ಟಾರ್ ಯಶ್ ಮತ್ತು ಮಾಲಿವುಡ್ ಯೂತ್ ಐಕಾನ್ ದುಲ್ಕರ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇಬ್ಬರೂ ಮೈಸೂರಿನ ರಾಡಿಸನ್ ಬ್ಲೂ ಹೊಟೇಲ್‌ನಲ್ಲಿ ತಂಗಿದ್ದಾರೆ.  ಬುಧವಾರ ಬೆಳಿಗ್ಗೆ ಜಿಮ್ ಮಾಡುವ ವೇಳೆ ಇಬ್ಬರೂ ಮುಖಾಮುಖಿಯಾಗಿದ್ದು, ಇದೇ ಸಂದರ್ಭದಲ್ಲಿ ಸಿನಿಮಾಗಳ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಈ ಫೋಟೋಗಳನ್ನು ದುಲ್ಕರ್ ಹಾಗೂ ಯಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ […]

ಉಪಮೇಯರ್ ಶ್ರೀಧರ್ ಗೆ ಸರ್ಪ್ರೈಜ್ ‘ದರ್ಶನ’..

  ಎರಡು ದಿನದ ಹಿಂದೆ ನೂತನ ಮೈಸೂರು ಪಾಲಿಕೆ ಉಪಮೇಯರ್‍ ಶ್ರೀಧರ್‍ ಅವರಿಗೆ ಮೊಬೈಲ್‍ ಕರೆಯೊಂದು ಬಂದಿತ್ತು.. ಕರೆ ಆಧರಿಸಿ ಶ್ರೀಧರ್‍ ಅವರು ಖಾಸಗಿ ಹೋಟೆಲ್‍ ಗೆ ಹೋದಾಗ ಅಚ್ಚರಿ ಕಾದಿತ್ತು. ಅವರು ಅಲ್ಲಿಗೆ ಹೋಗುತ್ತಿದ್ದಂತೆ ಕೆಲವರು ಅವರನ್ನು ಕೇಕ್‍ ಮುಂದೆ ತಂದು ನಿಲ್ಲಿಸಲು ಏನಾಗುತ್ತಿದೆ ಅಂತ ಸುತ್ತಲೂ ನೋಡುವಷ್ಟರಲ್ಲಿ ಅಲ್ಲಿ ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಪ್ರತ್ಯಕ್ಷರಾಗಿದ್ದರು. ಶ್ರೀಧರ್‍ ಉಪಮೇಯರ್‍ ಆದ ಖುಷಿಗಾಗಿ ದರ್ಶನ್‍ ಅವರೇ ಸ್ವತಃ ಸರ್ಪ್ರೈಜ್ ದರ್ಶನ ಕೊಟ್ಟಿದ್ದರು.     ನಟ ದರ್ಶನ್‌ ಮತ್ತು […]

ರಜನಿಕಾಂತ್‍ ಇದ್ದ ವಿಮಾನ ತಡವಾಗಿ ಮೈಸೂರಿನಲ್ಲಿ ಲ್ಯಾಂಡಿಂಗ್..!

  ತಮಿಳುನಟ , ಸೂಪರ್​ ಸ್ಟಾರ್​ ರಜನಿಕಾಂತ್​​ ಇಂದು ಬೆಳಗ್ಗೆ ಚೆನ್ನೈ ಮೂಲಕ ಮೈಸೂರಿಗೆ ಪ್ರಯಾಣಿಸುತ್ತಿದ್ದ ವಿಮಾನ ದಟ್ಟ ಮಂಜಿನ ಕಾರಣದಿಂದ ಒಂದುವರೆ ಗಂಟೆ ವಿಳಂಬವಾಗಿ ಲ್ಯಾಂಡಿಂಗ್ ಆದ ಘಟನೆ ನಡೆದಿದೆ.   ನಟ ರಜನಿಕಾಂತ್ ಇಂದು ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ಆಗಮಿಸುತ್ತಿದ್ದರು. ಈ ವಿಮಾನ ಬೆಳಗ್ಗೆ 8.10ಕ್ಕೆ ಮೈಸೂರಿನಲ್ಲಿ ಲ್ಯಾಂಡ್‍ ಆಗಬೇಕಿತ್ತು. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ, ಮುಂಜಾಗ್ರತ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ […]

ದೀಪಿಕಾಗೆ ಮೈಸೂರ್ ಪಾಕ್ ಬೇಕಂತೆ; ಗಂಡನಿಗೆ ತರದೆ ಮನೆಗೆ ಬರಬೇಡ ಅಂದಳಾ..?

   ಶ್ರೀ ಕೃಷ್ಣದಿಂದ ಒಂದು ಕೆಜಿ ಮೈಸೂರು ಪಾಕ್‌ ಮತ್ತು ಹಾಟ್‍ ಚಿಪ್ಸ್‍ ಇಂದ ಒಂದೂವರೆ ಕೆಜಿ ರುಚಿಯಾದ ಪೊಟ್ಯಾಟೋ ಚಿಪ್ಸ್‌ ತರದೇ ಮನೆಗೆ ಬರಬೇಡ ಹೀಗಂತ ನಟಿ ದೀಪಿಕಾ ಪಡುಕೋಣೆ ತನ್ನ ಗಂಡನಿಗೆ ತಾಕೀತು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಗಂಡ ರಣವೀರ್‍ ಸಿಂಗ್‍ ಪೋಸ್ಟ್‍ ಗೆ ಕಮೆಂಟ್‍ ಮಾಡಿರುವ ದೀಪಿಕಾ, ನನ್ನಿಷ್ಟದ ಮೈಸೂರ್‍ ಪಾಕ್‍ ಹಾಗೂ ಚಿಪ್ಸ್‍ ತರಲೇ ಬೇಕು ಎಂದು ಹೇಳಿದ್ದಾರೆ. ಇದು ಜಾಲತಾಣಿಗರ ಗಮನ ಸೆಳೆದಿದೆ. ಇದಕ್ಕೆ ಹಲವಾರು ಜನ ಕಮೆಂಟ್‍ […]

SANDALWOODನಲ್ಲಿ ‘I Am ಕಲ್ಕಿ’ ಅಂತಿದ್ದಾನೆ ಬಾಂಬರ್ ಆದಿತ್ಯ ರಾವ್..!

   ನಿನ್ನೆಯಷ್ಟೇ ಪೊಲೀಸರಿಗೆ ಶರಣಾಗಿದ್ದ ಬಾಂಬರ್‍ ಆದಿತ್ಯರಾವ್‍ ಕೃತ್ಯ ಈಗ ಬೆಳ್ಳಿತೆರೆಯ ಮೇಲೆ ಹಣ ಮಾಡೋಕೆ ಹೊರಟಿದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಆದಿತ್ಯ ರಾವ್ ದುಷ್ಕತ್ಯವನ್ನು ತೆರೆಗೆ ತರುವ ಪ್ರಯತ್ನಗಳು ಆಗಲೇ ಆರಂಭವಾಗಿವೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಮಂಗಳೂರು ಬಾಂಬ್‍ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಜೋಗಿ ಪ್ರೇಮ್‌ ಈ ಸಿನಿಮಾದ ಹೀರೋ ಎಂಬ ಮಾತುಗಳು ಕೇಳಿಬರುತ್ತಿವೆ.          ಈ ಸಿನಿಮಾಕ್ಕೆ I Am ಕಲ್ಕಿ ಎಂದು ಹೆಸರಿಡಲಾಗಿದೆ. ಏಕಕಾಲದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ […]

‘ಭಜರಂಗಿ-2’ಗೆ ‘3’ ವಿಘ್ನ!

 ಹ್ಯಾಟ್ರಿಕ್‍ ಹೀರೊ ಶಿವರಾಜ್‍ ಕುಮಾರ್ ಅಭಿನಯದ, ಬಹುನಿರೀಕ್ಷಿತ ‘ಭಜರಂಗಿ-2’ ಸಿನಿಮಾ ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಇಂದು ಚಿತ್ರೀಕರಣದ ವೇಳೆ ಅಗ್ನಿ ಅವಘಡ ಉಂಟಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಒಂದಾದ ಮೇಲೊಂದು ವಿಘ್ನ ಎದುರಾಗುತ್ತಿದೆ.  ಎ.ಹರ್ಷ ನಿರ್ದೇಶನದ ಈ ಸಿನಿಮಾದ ಬಹುಪಾಲು ಚಿತ್ರೀಕರಣ ಸೆಟ್‍ನಲ್ಲೇ ನಡೆಯುತ್ತಿದೆ. ಜ.16ರಂದು ಸಿನಿಮಾ ಚಿತ್ರೀಕರಣಕ್ಕೆ ಬೆಂಗಳೂರಿನ ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ನಿರ್ಮಿಸಲಾಗಿದ್ದ ಗುಹೆಯ ಸೆಟ್‍ಗೆ ಶಾರ್ಟ್ ಸರ್ಕ್ಯೂಟ್‍ನಿಂದ ಅವಘಡ ಉಂಟಾಗಿತ್ತು. ಸಧ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ‘ಆಂಜನೇಯ ನಮ್ಮನ್ನು […]

2018 ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಘೋಷಿಸಿದ್ದಾರೆ. ಪ್ರಶಸ್ತಿಗಳ ವಿವರ ಇಲ್ಲಿದೆ:   ಜಿ.ಕೆ. ಶ್ರೀನಿವಾಸ್ ಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ.ಎಸ್. ಬಸವರಾಜು ಡಾ.ವಿಷ್ಣುವರ್ಧನ್ ಪ್ರಶಸ್ತಿ. ಅತ್ಯುತ್ತಮ ನಟ: ರಾಘವೇಂದ್ರ ರಾಜ್ ಕುಮಾರ್, ಅತ್ಯುತ್ತಮ ನಟಿ: ಮೇಘನಾ ರಾಜ್, ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್, ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್,  ಅತ್ಯುತ್ತಮ ಬಾಲನಟ; ಮಾಸ್ಟರ್ ಆರೆನ್ ಮೊದಲ ಅತ್ಯುತ್ತಮ […]

ನಿರ್ದೇಶಕನೊಂದಿಗೆ ಹೀರೋಯಿನ್ ಎಸ್ಕೇಪ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ತಾಯಿ, ಅಜ್ಜಿ!

 ಸಿನಿಮಾ ನಿರ್ದೇಶಕನೊಂದಿಗೆ ಹೀರೋಯಿನ್ ಆದ ಕಾರಣ, ಹೀರೊಯಿನ್ ತಾಯಿ ಮತ್ತು ಅಜ್ಜಿ ಮರ್ಯಾದೆಗೆ ಅಂಜಿ ವಿಷ ಸೇವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವನ್ನಪ್ಪಿದರೆ, ತಾಯಿ ಸ್ಥಿತಿ ಗಂಭೀರವಾಗಿದೆ.  ಚನ್ನಪಟ್ಟಣದಲ್ಲಿ ಹೀಗೊಂದು ಮನಮಿಡಿಯುವ ಸಿನೆಮಾ ಲವ್ ಸ್ಟೋರಿ ಆಗಿದೆ. ಸಾವನ್ನಪ್ಪಿದ ಅಜ್ಜಿ ಮುಖ ನೋಡಲು ಕೂಡ ಮೊಮ್ಮಗಳು ಬಂದಿಲ್ಲ. ನಟಿ ಹೆಸರು ವಿಜಯಲಕ್ಷ್ಮಿ (ಅಲಿಯಾಸ್ ಲಕ್ಷ್ಮಿ) ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಲ್ಲಹಳ್ಳಿಯವರು. ಈಕೆ ‘ತುಂಗಾಭದ್ರ’ ಸಿನಿಮಾ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದು ಈಗ ಎಸ್ಕೇಪ್‍ […]

ಛಪಾಕ್‍ ಬಾಯ್ಕಾಟ್ ಅಭಿಯಾನ : ಪೇಚಿಗೆ ಸಿಲುಕಿಸಿದ ‘420’ ಟಿಕೆಟ್..!

  ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಲು ಹೋಗಿ ಒಂದು ಗುಂಪು ಪೇಚಿಗೆ ಸಿಲುಕಿದೆ. ದೀಪಿಕಾ ಪಡುಕೋಣೆ ವಿರುದ್ಧ ಟ್ವಿಟರ್‍ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಛಪಾಕ್‍ ಸಿನಿಮಾ ನೋಡಲು ಬುಕಿಂಗ್‍ ಮಾಡಿದ್ದ ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿರುವುದಾಗಿ ಒಂದಷ್ಟು ಜನ ಟಿಕೆಟ್‍ ಸಮೇತ ಟ್ವೀಟ್‍ ಮಾಡಿದ್ದಾರೆ. ಆದರೆ ಎಲ್ಲರೂ ಟ್ವೀಟ್‍ ಮಾಡಿರುವ ಟಿಕೆಟ್‍ ನಲ್ಲಿದ ಸಂಖ್ಯೆ ಒಂದೇ ಆಗಿದೆ. ಒಂದೇ ಟಿಕೆಟ್‍ ಇಟ್ಟುಕೊಂಡು ಎಲ್ಲರೂ  ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಅಂತ […]

ನಾಳೆ ನಟ ಯಶ್‍ ಹುಟ್ಟುಹಬ್ಬ; 5012 ಕೆಜಿ ಕೇಕ್‍ ತಯಾರಿ..!

  ರಾಕಿಂಗ್‍ ಸ್ಟಾರ್‍ ಯಶ್‍ ಗೆ ನಾಳೆ ಹುಟ್ಟುಹ್ಬದ ಸಂಭ್ರಮ. 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್‍ ಗೆ ಅಭಿಮಾನಿಗಳು ಭಾರೀ ಉಡುಗೊಡೆ ನೀಡುತ್ತಿದ್ದಾರೆ. 5012 ಕೆಜಿ ತೂಕದ ಕೇಕ್‍ ತಯಾರಿ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಯಶ್‍ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.   ಈ ಕೇಕ್‍ ಬೃಹತ್‍ ಕೇಕ್‍ ತಯಾರಿಸಲು 2 ಸಾವಿರ ಮೊಟ್ಟೆ, 500 ಕೆಜಿ ಸಕ್ಕರೆ, 600 ಕೆಜಿ ಐಸಿಂಗ್‍ ಶುಗರ್, 500 ಕೆಜಿ ಮೈದಾ ಬಳಕೆ ಮಾಡಲಾಗಿದೆ. ಇದರ ಜೊತೆಗೆ 216 […]