You cannot copy content of this page.
. . .

Category: ಕ್ರೀಡೆ

ಟೀಂ ಇಂಡಿಯಾ ಅಭಿಮಾನಿ ಅಜ್ಜಿ ಇನ್ನಿಲ್ಲ

 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ವ್ಯಾಪಕ ಸುದ್ದಿ ಮಾಡಿದ್ದ ಟೀಂ ಇಂಡಿಯಾ ಅಭಿಮಾನಿ ಅಜ್ಜಿ ಚಾರುಲತಾ ಪಟೇಲ್ ವಿಧಿವಶರಾಗಿದ್ದಾರೆ.   87 ವರ್ಷದ ಚಾರುಲತಾ ಪಟೇಲ್ ಅವರು 2019ರ ವಿಶ್ವಕಪ್ ಪಂದ್ಯದ ವೇಳೆ ಉತ್ಸಾಹದಿಂದ ಪಾಲ್ಗೊಂಡು ಭಾರಿ ಜನಪ್ರಿಯತೆ ಪಡೆದಿದ್ದರು.  ಇವರು ಜನವರಿ 13ರಂದು ಮೃತರಾಗಿದ್ದಾರೆ ಎಂದು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.   ವಿಶ್ವಕಪ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿ […]

7.50 ಕೋಟಿ ರೂ. ಗೋಲ್‌ಮಾಲ್ ಸಂಶಯ; ಕ್ರೀಡಾಧಿಕಾರಿ ಅಮಾನತಿಗೆ ಸೂಚನೆ

 ಮೈಸೂರಿನಲ್ಲಿ ಶುಕ್ರವಾರ ನಡೆದ ಮಕ್ಕಳ  ಕ್ರೀಡಾಕೂಟದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡದ ಕ್ರೀಡಾಧಿಕಾರಿಯನ್ನು ಅಮಾನತು ಮಾಡುವಂತೆ ಸಮಾರಂಭದ ವೇದಿಕೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಕಿಡಿಕಾರಿದರು.  ಕ್ರೀಡಾ ಇಲಾಖೆಯಿಂದ ೭.೫ ಕೋಟಿ ರೂ. ಹಣದಲ್ಲಿ ಗೋಲ್ ಮಾಲ್ ನಡೆದಿರುವ ಸಂಶಯ ವ್ಯಕ್ತಪಡಿಸಿದ ವಿ.ಸೋಮಣ್ಣ ಅವರು ಕ್ರೀಡಾಧಿಕಾರಿ ಸುರೇಶ್ ರನ್ನು ಸಸ್ಪೆಂಡ್ ಮಾಡುವಂತೆ  ಸಭೆಯಲ್ಲೇ ಆಪ್ತ ಕಾರ್ಯದರ್ಶಿ ಕಲ್ಪನಾಗೆ ಸೂಚನೆ ನೀಡಿದರು.

ಪತ್ರಕರ್ತರೊಂದಿಗೆ ಡಿಕೆಶಿ ಆಲ್‍ ರೌಂಡ್ ಆಟ..

   ಬೆಂಗಳೂರಿನ ಪಿಇಎಸ್‍ ಕಾಲೇಜು ಮೈದಾನದಲ್ಲಿ ಇಂಟರ್‍ ಮೀಡಿಯಾ ಟಿ-10 ಕ್ರಿಕೆಟ್‍ ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿ ಉದ್ಘಾಟಿಸಿದ ಕಾಂಗ್ರೆಸ್‍ ನಾಯಕ ಡಿ.ಕೆ.ಶಿವಕುಮಾರ್‍, ಬ್ಯಾಟ್‍ ಹಿಡಿದು ಫೀಲ್ಡಿಗಿಳಿದರು. ಚೆಂಡು ಬೌಂಡರಿಗಟ್ಟಿ, ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಬೌಲಿಂಗ್‍ ಮಾಡಿಯೂ ಸೈ ಎನಿಸಿಕೊಂಡರು.

ಶೂ ಇಲ್ಲದೆ ಬ್ಯಾಂಡೇಜ್‍ ಸುತ್ತಿಕೊಂಡು ರನ್ನಿಂಗ್ ರೇಸ್‍; 3 ಚಿನ್ನದ ಪದಕ ಗೆದ್ದ ಬಾಲಕಿ

  ಶೂ ಇಲ್ಲದೆ ಓಡಿ ಚಿನ್ನದ ಪದಕ ಗೆಲ್ಲುವ ದೃಶ್ಯಗಳನ್ನು ಸಿನಿಮಾಗಳನ್ನು ನೋಡುತ್ತೇವೆ. ನಿಜ ಜೀವನದಲ್ಲೂ ಒಮ್ಮೊಮ್ಮೆ ಇವು ನಿಜವಾಗುತ್ತವೆ. ಅದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಶೂ ಇಲ್ಲದೆಯೂ ಶಾಲಾ ಕ್ರೀಡಾಕೂಟದಲ್ಲಿ ಪಾದಕ್ಕೆ, ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ರನ್ನಿಂಗ್‍ ರೇಸ್‍ ಮಾಡಿ 11 ಬಾಲಕಿ ಒಟ್ಟು ಮೂರು ಚಿನ್ನದ ಪದಕ ಗಳಿಸಿದ್ದಾಳೆ.  ಫಿಲಿಫ್ಫೀನ್ಸ್ ನ 11 ವರ್ಷದ ಬಾಲಕಿಯ ಈ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ರೇಯಾ ಬುಲ್ಲೋಸ್ ಇಲ್ಲೋಲಿಯೋ ಹೆಸರಿನ ಬಾಲಕಿ ಶಾಲಾ […]

ನಿರ್ಭಯಾ ಹಂತಕರಿಗೆ ನೇಣು ಹಾಕ್ತಾರಂತೆ ಅಂತಾರಾಷ್ಟ್ರೀಯ ಆಟಗಾರ್ತಿ..!

   ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನನಗೆ ಅವಕಾಶ ನೀಡಿ ಎಂದು ಅಂತಾರಾಷ್ಟ್ರೀಯ ಶೂಟರ್‌ ವರ್ತಿಕಾ ಸಿಂಗ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ  ಪತ್ರ ಬರೆದಿದ್ದಾರೆ. ತಮ್ಮ ಹೆಬ್ಬರಳನ್ನು ಕೊಯ್ದುಕೊಂಡು ರಕ್ತದಲ್ಲಿ ಈ ಪತ್ರವನ್ನು ಬರೆಯಲಾಗಿದೆ.   ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಪುರುಷರ ವಧೆಗೆ ಮಹಿಳೆಯೂ ಸಮರ್ಥಳಿದ್ದಾಳೆ ಎಂದು ತೋರಿಸಲು ಅಂತಾರಾಷ್ಟ್ರೀಯ ಶೂಟರ್‌ ವರ್ತಿಕಾ ಸಿಂಗ್‍ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಇವರ ಈ ನಿರ್ಧಾರಕ್ಕೆ ನಟಿಯರು, ಶಾಸಕಿಯರು, ಸಂಸದೆಯರು ಬೆಂಬಲ ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

ಭಾರತ-ವಿಂಡೀಸ್ ಪಂದ್ಯ; ಮೈದಾನಕ್ಕೆ ನುಗ್ಗಿದ ನಾಯಿ

 ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನಾಯಿಯೊಂದು ಮೈದಾನದೊಳಗೆ ನುಗ್ಗಿದ ಪರಿಣಾಮ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಯುಂಟಾಯಿತು.  ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಕೀಮೊ ಪಾಲ್ ಬೌಲಿಂಗ್ ಮಾಡಲು ಸಿದ್ಧತೆ ನಡೆಸಿದ್ದಾಗ ನಾಯಿ ಮೈದಾನದೊಳಗೆ ಪ್ರವೇಶಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು. ನಾಯಿ ಮೈದಾನದೊಳಗೆ ನುಗ್ಗುತ್ತಿದ್ದಂತೆ ಮೈದಾನದ ಸಿಬ್ಬಂದಿ ನಾಯಿ ಹಿಡಿಯಲು ಪ್ರಯತ್ನಿಸಿದರು. ಈ ನಡುವೆ ವೆಸ್ಟ್ ಇಂಡೀಸ್ ಆಟಗಾರ ಕೂಡ […]

ಐಪಿಎಲ್ ಹರಾಜು; ಕನ್ನಡಿಗ ಉತ್ತಪ್ಪಗೆ ಗರಿಷ್ಠ ಬೆಲೆ

 ಡಿಸೆಂಬರ್‍ ನಡೆಯಲಿರುವ ೧೩ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ ದೇಶೀಯ ಕ್ರಿಕೆಟಿಗರ ಪೈಕಿ ಅತೀ ಹೆಚ್ಚು ೧.೫ ಕೋಟಿ ರೂ. ಮೂಲಬೆಲೆ ಪಡೆದಿದ್ದಾರೆ.  ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೩೩೨ ಆಟಗಾರರ ಪಟ್ಟಿ ಇದ್ದು, ವಿದೇಶದ ೭ ಆಟಗಾರರ ಮೂಲ ಬೆಲೆ ಗರಿಷ್ಠ ೨ ಕೋಟಿ ರೂ. ಆಗಿದೆ. ಎಂಟು ಫ್ರಾಂಚೈಸಿಗಳು ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಈ ಬಾರಿಯ ಹರಾಜು ಪ್ರಕ್ರಿಯೆಗೆ ಒಟ್ಟು ೯೯೭ ಆಟಗಾರರ ಹಸರು ನೋಂದಣಿಯಾಗಿತ್ತು. […]

ಮಾಯಾಂಕ್‍ ದ್ವಿಶತಕ; ಕನ್ನಡಿಗನ ಅಬ್ಬರಕ್ಕೆ ಬೆದರಿದ ಬಾಂಗ್ಲಾ

ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಾಯಾಂಕ್‍ ಅಗರ್‍ ವಾಲ್‍ ದ್ವಿಶತಕ ಸಿಡಿಸಿದ್ದಾರೆ. ಇಂದೋರ್‍ ನಲ್ಲಿ ನಡೆಯುತ್ತಿರುವ ಟೆಸ್ಟ್ ನ ಮೊದಲ ಇನ್ನಿಂಗ್ಸ್‍ ನಲ್ಲಿ ಬಾಂಗ್ಲಾ ಬೌಲರ್ ಗಳನ್ನು ಕಾಡಿದ ಮಾಯಾಂಕ್‍, 330 ಎಸೆತಗಳಲ್ಲಿ 28 ಬೌಂಡರಿ, 4 ಸಿಕ್ಸರ್‍ ಬಾರಿಸಿ ವೈಯಕ್ತಿಕ 243 ರನ್‍ ಬಾರಿಸಿದರು. ಆರಂಭಿಕರಾದ ರೋಹಿತ್ ಶರ್ಮಾ (6) ಹಾಗೂ ವಿರಾಟ್‍ ಕೊಹ್ಲಿ (0) ವೈಫಲ್ಯದಿಂದ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಕ್ಕೆ ಮಯಾಂಕ್‍ ಆಟ ಬಲ ತುಂಬಿತು. ಟಾಸ್‍ ಗೆದ್ದು ಮೊದಲು ಬ್ಯಾಟಿಂಗ್‍ […]