You cannot copy content of this page.
. . .

Category: ಚಾಲಾಕಿ ಕಳ್ಳರು

ದೇವರಿಗೆ ತೊಡಿಸಿದ್ದ 7 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

21 Viewsಮಡಿಕೇರಿಯ ಕರವಲೆ ಮಹಿಷ ಮರ್ದಿನಿ ದೇವಾಲಯದಲ್ಲಿ ದೇವರಿಗೆ ತೊಡಿಸಿದ್ದ ಚಿನ್ನ, ಬೆಳ್ಳಿ ಆಭರಣ ಕಳವಾಗಿದೆ. ಭಾನುವಾರ ತಡರಾತ್ರಿ ದೇವಾಲಯದ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ದೇವರಿಗೆ ತೊಡಿಸಿದ್ದ. ಆಭರಣಗಳಿಗೆ ಕನ್ನ ಹಾಕಿದ್ದಾರೆ. ಅಂದಾಜು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗದಂತೆ ಕಳ್ಳರು ಚಾಕಚಕ್ಯತೆಯಿಂದ ಕಳ್ಳತನ ಮಾಡಿದ್ದಾರೆ. ಶ್ವಾನ ದಳದೊಂದಿಗೆ ಮಡಿಕೇರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

19 Views ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸಿದೆ.  ಕೇರಳ ಮೂಲದ ಚಂಗಲ ಗ್ರಾಮ ನಿವಾಸಿಗಳಾದ ಶರೀಫ್‍ ಹಾಗೂ ಮೊಹಮ್ಮದ್‍ ಅಶ್ರಫ್‍ ಬಂಧಿತ ಆರೋಪಿಗಳು. ಇವರಿಂದ 10 ಚೀಲದಲ್ಲಿದ್ದ 175 ಕೆ.ಜಿ. ಶ್ರೀಗಂಧದ ತುಂಡುಗಳು, ಎರಡು ಚಿಕ್ಕ ಡಿಜಿಟಲ್ ಸ್ಕೇಲ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಮಾಲಿನ ಮೌಲ್ಯ ಸುಮಾರು 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.  ಇವರು ಭಾನುವಾರ ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು […]

ನಾಗಾಸಾಧು ವೇಷದಲ್ಲಿ ಮಂಕುಬೂದಿ; ಕೊನೆಗೂ ಸಿಕ್ಕಿಬಿದ್ದ ಖದೀಮರು

39 Views   ಕೆಂಪುಬಣ್ಣದ ಮಂಕುಬೂದಿ ಕೊಟ್ಟು ನಗದು, ದುಬಾರಿ ಮೊಬೈಲ್‍ ಗಳನ್ನು ದೋಚುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ನಾಗಾಸಾಧು ವೇಷಧಾರಿಗಳನ್ನುಕೊಡಗು ಜಿಲ್ಲೆ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.   ರಾಜಸ್ಥಾನ ಮೂಲದ ನಾಗನಾಥ್, ಮಜೂರ್‌ ನಾಥ್, ಸುರಬ್‌ ನಾಥ್ ಮತ್ತು ಉಮೇಶ್‌ ನಾಥ್ ಬಂಧಿತ ಆರೋಪಿಗಳು. ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಎಗರಿಸಿದ್ದರು. ನ.೨೪ರಂದು ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ಕೆಂಪು ಪುಡಿ […]

ಚಾಕೊಲೇಟ್ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ..!

50 Viewsಚಾಕೊಲೇಟ್‍ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ಅತೀಫ್ ಸಲೀಂ ಹಾಗೂ ರೋಹಿತ್‍ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ ರೂಪಾಯಿ ಮೌಲ್ಯದ ಹಶೀಶ್ ಹಾಗೂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.   ಕೆನಡಾದಿಂದ ಆನ್‍ ಲೈನ್‍ ಮೂಲಕ ಡ್ರಗ್ಸ್‍ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ಹಾಲಿನ ಪೌಡರ್‍ ಬಾಕ್ಸ್‍ ಗಳಲ್ಲಿ ಡ್ರಗ್ಸ್ ಡೆಲಿವರಿ ಮಾಡುತ್ತಿದ್ದರು. ಚಾಕ್‍ ಲೇಟ್‍ ರೂಪದಲ್ಲಿದ್ದದ್ದರಿಂದ ಪೊಲೀಸರಿಗೆ ಹಿಡಿಯಲಾಗಿರಲಿಲ್ಲ. ಡ್ರಗ್ಸ್ ಮಿಶ್ರಿತ ಒಂದು […]

ಹಾಡಹಗಲೇ ಎಟಿಎಂ ಯಂತ್ರ ಬ್ಲಾಸ್ಟ್ ಮಾಡಿದ ಕಳ್ಳರು..!

53 Views   ಹಣ ದೋಚುದಕ್ಕಾಗಿ ಕಳ್ಳರು ಎಟಿಎಂ ಯಂತ್ರವನ್ನೇ ಬ್ಲಾಸ್ಟ್ ಮಾಡಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬಾಕಾಲ್‍ ಗ್ರಾಮದಲ್ಲಿ ನಡೆದಿದೆ. ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರೀ ಸ್ಫೋಟದ ಶಬ್ದ ಕೇಳಿ ಸ್ಥಳೀಯರು ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.  ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ದುಷ್ಕರ್ಮಿಗಳು ಕಳ್ಳತನ ಮಾಡುವುದಕ್ಕಾಗಿ ಎಟಿಎಂ ಯಂತ್ರ ಸ್ಫೋಟಿಸಿರುವುದು ಗೊತ್ತಾಗಿದೆ. ಎಟಿಎಂನಲ್ಲಿ ಕೇವಲ 10 ಸಾವಿರ ರೂಪಾಯಿ ಇತ್ತು. ಅದನ್ನೇ ಎತ್ತಿಕೊಂಡು […]