You cannot copy content of this page.
. . .

Category: ಕೋರ್ಟ್ ತೀರ್ಪುಗಳು

ನಿರ್ಭಯಾ ಪ್ರಕರಣ: ಫೆಬ್ರವರಿ 1ಕ್ಕೆ ಗಲ್ಲು ಫಿಕ್ಸ್

  ರಾಷ್ಟ್ರಪತಿ ರಾಮನಾಥ್‍ ಕೋವಿಂದ್‍ ಅವರು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಫಿಕ್ಸ್‍ ಆಗಿದೆ. ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ದೆಹಲಿ ಪಟಿಯಾಲ ಕೋರ್ಟ್‍ ಹೊಸ ಡೆತ್‍ ವಾರಂಟ್‍ ಹೊರಡಿಸಿದೆ.   ಈ ಹಿಂದೆ ತೀರ್ಪು ನೀಡಿದ್ದ ಕೋರ್ಟ್‍ ಜನವರಿ 22 ರಂದು ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಡೆತ್‍ ವಾರಂಟ್‍ ಜಾರಿ ಮಾಡಿತ್ತು. ಆದರೆ ನಾಲ್ವರು ಅಪರಾಧಿಗಳಲ್ಲೊಬ್ಬ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ […]

ಪ್ರಜ್ವಲ್ ರೇವಣ್ಣಗೆ ರಿಲೀಫ್ ನೀಡಿದ ಹೈಕೋರ್ಟ್

  ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದ ಬಿಜೆಪಿಯ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‍, ಎ. ಮಂಜು ಅರ್ಜಿ ಸಲ್ಲಿಸುವಾಗ ಪ್ರಮಾಣ ಪತ್ರವನ್ನು ಸಲ್ಲಿಸಿರಲಿಲ್ಲ ಎಂದು ಹೇಳಿದೆ.   ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಏಕ ಸದಸ್ಯ ಪೀಠ ಎ. ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಾಂತ್ರಿಕ […]

ಮುಷರಫ್ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಕೋರ್ಟ್

   ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷಾರಫ್ ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕ್ ನ್ಯಾಯಾಲಯ ರದ್ದುಗೊಳಿಸಿದೆ. ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾ. ಸಯದ್ ಮಜಹರ್ ಅಲಿ ಅಕ್ಬರ್ ನಖ್ವಿ, ನ್ಯಾ. ಮೊಹಮ್ಮದ್ ಅಮೀರ್ ಭಟ್ಟಿ ಮತ್ತು ನ್ಯಾ. ಚೌಧರಿ ಮಸೂದ್ ಜಹಾಂಗೀರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.   ಪಾಕಿಸ್ತಾನದಿಂದ […]

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ; ಜ.17ಕ್ಕೆ ವಕೀಲರ ಸಭೆ

 ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಎಲ್ಲಾ ವಕೀಲರು ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಸುಪ್ರೀಂ ಕೋರ್ಟ್‍ ಹೇಳಿದೆ. ಅಲ್ಲದೆ ಹಿಂದಿನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಎತ್ತಿರುವ 7 ಪ್ರಶ್ನೆಗಳನ್ನು ಪರಿಗಣಿಸಲಾಗುವುದು ಎಂದು ಕೂಡ ಹೇಳಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಉಲ್ಲೇಖ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ  9 ನ್ಯಾಯಾಧೀಶರ ವಿಸ್ತ್ರೃತ ಪೀಠ ಇಂದು ವಿಚಾರಣೆ ನಡೆಸಿತು.   ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ 9 ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು, […]

ವಿದ್ಯುತ್ ಕಳ್ಳತನ; ಅಪರಾಧಕ್ಕೆ 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

 ವಿದ್ಯುತ್‍ ಲೈನ್‍ನಿಂದ ಅನಧಿಕೃತವಾಗಿ ವೈರ್ ನ್ನು ಎಳೆದುಕೊಂಡು ತಮ್ಮ ಜಮೀನಿನ ಪಂಪ್‍ಸೆಟ್‍ಗೆ ಸಂಪರ್ಕ ಕಲ್ಪಿಸಿಕೊಂಡು ವಿದ್ಯುತ್‍ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗೆ ಹುಣಸೂರಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ಲಕ್ಷ ರೂ. ದಂಡ ವಿಧಿಸಿದೆ.  ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ ಮತ್ತು ಅವರ ಮಗ ಬಸವರಾಜು (ಇಬ್ಬರಿಗೂ) ಅವರಿಗೆ ದಂಡ ವಿಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಇಟ್ಟಿಗೆ ತಯಾರಿಸುವ ಘಟಕ ಸ್ಥಾಪಿಸಿಕೊಂಡಿದ್ದರು. ಅದಕ್ಕೆ ಬೇಕಾದ ನೀರಿಗಾಗಿ ಬೋರ್‍ವೆಲ್‍ನಿಂದ ನೀರು […]

ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ ಗೊತ್ತಾ..?

   2012ರಲ್ಲಿ ನಡೆದ ದೆಹಲಿ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ದಿನಾಂಕ FIX ಆಗಿದೆ. ಇದೇ ಜನವರಿ 22 ರಂದು ಬೆಳಗ್ಗೆ ನಾಲ್ವರು ಅಪರಾಧಿಗಳು ಗಲ್ಲಿಗೇರುತ್ತಿದ್ದಾರೆ. ಆದರೆ ಪ್ರಕರಣದ ಬಾಲಾಪರಾಧಿ 3 ವರ್ಷ ಅನುಭವಿಸಿ, 2015ರ ನವೆಂಬರ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾದರೆ ಆ ಬಾಲಾಪರಾಧಿ ಈಗ ಎಲ್ಲಿದ್ದಾನೆ..? ಏನು ಮಾಡುತ್ತಿದ್ದಾನೆ..? ಇದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲ ತಣಿಸುವ ಪ್ರಯತ್ನವೇ ಈ ವರದಿ.  ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಮಂದಿ […]

ಜೈಪುರ ಸ್ಫೋಟ ಪ್ರಕರಣ; ನಾಲ್ವರು ದೋಷಿಗಳಿಗೆ ಗಲ್ಲು

   2008ರಲ್ಲಿ ನಡೆದಿದ್ದ ಜೈಪುರ ಸರಣಿ ಬಾಂಬ್‍ ಸ್ಫೋಟ ಪ್ರಕರಣದ ನಾಲ್ವರು ದೋಷಿಗಳಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೊಹಮ್ಮದ್‍ ಸೈಫ್‍, ಸರ್ವಾರ್‍ ಅಜ್ಮಿ, ಸಲ್ಮಾನ್‍ ಮತ್ತು ಸೈಫ್‍ ಉರ್‍ ರೆಹಮಾನ್‍ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು.   2008ರಲ್ಲಿ ನಡೆದಿದ್ದ ಈ ದರ್ಘಟನೆಯಲ್ಲಿ 80 ಮಂದಿ ಸಾವಿಗಿಡಾಗೀದ್ದರು. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶದ ಮೊಹಮದ್‍ 2008ರಲ್ಲಿ ಬಾಟ್ಲಾ ಹೌಸ್‍ ಎನ್‍ ಕೌಂಟರ್‍ ನಲ್ಲಿ ಪೊಲೀಸರ […]

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ ಎಂದು ಆರೋಪಿಸಿ, ಅದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹೈಕೋರ್ಟ್‍ ವಿಚಾರಣೆ ನಡೆಸಿದೆ. ಈ ವೇಳೆ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. ಹೈಕೋರ್ಟ್‍ನ ಪ್ರಶ್ನೆಗಳು ಇಂತಿವೆ..  ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳಿಗೆ ಅವಕಾಶ ನೀಡುವ ಸರ್ಕಾರ ರಾತ್ರೋರಾತ್ರಿ ಅವಕಾಶ ನಿರಾಕರಿಸಿರುವುದು ಏಕೆ  ಪ್ರತಿಭಟನೆಗೆ ನೀಡಿರುವ ಅವಕಾಶವನ್ನು ಸೆಕ್ಷನ್‌ 144 ಜಾರಿಯಾಗುತ್ತಲೇ ರದ್ದು ಮಾಡಲು ಸಾಧ್ಯವೇ?  ಶಾಲೆಯ ವಿದ್ಯಾರ್ಥಿಗಳನ್ನೂ ಪೊಲೀಸರು ಠಾಣೆಗಳಿಗೆ ಕರೆದೊಯ್ಯುತ್ತಾರೆಯೇ? […]

ಉನ್ನಾವ್‍ ಅತ್ಯಾಚಾರ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ

  ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್ ಗೆ ಜೀವಾವಧಿ ಶಿಕ್ಷೆಯಾಗಿದೆ. ದೆಹಲಿಯ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 16ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸುವುದಾಗಿ ಹೇಳಿತ್ತು.   ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಅಪ್ರಾಪ್ತ ಬಾಲಕಿ ಮೇಲೆ ಜೂನ್ 4 2017ರಂದು ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ […]

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ೪ ವರ್ಷ ಜೈಲು

 ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯವು ೪ ವರ್ಷ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.  ಮೂಲತಃ ವಾರಣಾಸಿ ವಾಸಿಯಾದ ಬೆಂಗಳೂರು ನಗರದ ನಿವಾಸಿ ಎಂ.ಮೋಹನ್ (೨೩) ಶಿಕ್ಷೆಗೆ ಗುರಿಯಾದ ವ್ಯಕ್ತಿ.  ಈತ ಮೈಸೂರಿನ ಬಾಲಕಿಯನ್ನು ಫೇಸ್‌ಬುಕ್ ಮುಖಾಂತರ ಪರಿಚಯ ಮಾಡಿಕೊಂಡು ಪ್ರೀತಿಸುವಂತೆ ಒತ್ತಾಯ ಮಾಡಿ ಒಪ್ಪಿಸಿ, ಮಾಲ್ ಒಂದರಲ್ಲಿ ಆಕೆಯನ್ನು ಭೇಟಿ ಮಾಡುತ್ತಾನೆ. ನಂತರ ಬಾಲಕಿಯ ಮನೆಗೆ ಆಕೆಯ […]