You cannot copy content of this page.
. . .

Category: ಅಪರಾಧ & ಕಾನೂನು

ಬೆಂಗಳೂರು; ʻಪಾಕಿಸ್ತಾನ ಜಿಂದಾಬಾದ್‌..ʼ ಘೋಷಣೆ ಕೂಗಿದ ಯುವತಿ

 ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರವಾಗಿ ಜೈಕಾರ ಕೂಗಿ ವಿವಾದ ಸೃಷ್ಟಿಯಾಗಿರುವ ಬೆನ್ನಲ್ಲೇ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಜರುಗಿದೆ.  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ ಲಿಯೋನೆ ಎಂಬ ಯುವತಿ ವೇದಿಕೆ ಮೇಲೆಯೇ ʼಪಾಕಿಸ್ತಾನ್‌ ಜಿಂದಾಬಾದ್‌ʼ ಘೋಷಣೆ ಕೂಗಿ ವಿವಾದ ಸೃಷ್ಟಿಸಿದ್ದಾರೆ.  ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗಿದ ತಕ್ಷಣ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯುವತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು? ವೇದಿಕೆಯಲ್ಲಿ ಮಾತನಾಡಲು ಆಕೆಗೆ ಅವಕಾಶ ನೀಡಿದ್ದು ಯಾರು ಎಂದು […]

ಬಸ್ ಕಂಡಕ್ಟರ್ ಬಳಿ ಇದ್ದ ಹಣ ದೋಚಲು ಯತ್ನ

(ಸಾಂದರ್ಭಿಕ ಚಿತ್ರ)  ರಾವಂದೂರು: ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕನ ಹಣ ಕದಿಯಲು ಹೋಗಿ ನಿರ್ವಾಹಕರ ಮೇಲೆ ಹಲ್ಲೆ ನಡೆದ ಘಟನೆ ಜರುಗಿದೆ.  ಪಿರಿಯಾಪಟ್ಟಣ ತಾಲ್ಲೂಕು ಕಿತ್ತೂರು ಬಸ್ ನಿಲ್ದಾಣದಲ್ಲಿ ಪಿರಿಯಾಪಟ್ಟಣ ಘಟಕಕ್ಕೆ ಸೇರಿದ ಮಾರ್ಗಸಂಖ್ಯೆ 27 ಎ.ಬಿ. ಮಾರ್ಗದ ಬಸ್ಸು ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಮಲಗಿದ್ದ ನಿರ್ವಾಹಕರ ಬಳಿ ಇದ್ದ ಹಣವನ್ನು ದೋಚಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ.  ತಕ್ಷಣ ನಿರ್ವಾಹಕ ಲೋಕೇಶ್ ಎಚ್ಚರಗೊಂಡು, ಚಾಲಕ ಚಂದನ್‌ಕುಮಾರ್ ಅವರನ್ನು ಏಳಿಸಲು ಪ್ರಯತ್ನಿಸಿದಾಗ ಅವರ ಮೇಲೆ […]

ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ; ಇಬ್ಬರ ಸ್ಥಿತಿ ಗಂಭೀರ

 ಮಡಿಕೇರಿ-ಕುಶಾಲನಗರ ಹೆದ್ದಾರಿಯ ಸಿಂಕೋನಾ ಬಳಿ ರಸ್ತೆ ಬದಿಯ ಬರೆಗೆ ಕಾರು ಢಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.  ಗುರುವಾರ ಮಧ್ಯಾಹ್ನ ಮಡಿಕೇರಿಯಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಕಾರು ಮಾರ್ಗ ಮಧ್ಯೆ ಸಿಂಕೋನಾ ಬಳಿಯ ಬರೆಗೆ ಗುದ್ದಿದೆ. ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಸಫ್ರೀನಾ, ರಫೀಕ್ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರಿಗೂ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ […]

ನಿರ್ಭಯಾ ಕೇಸ್‌; ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ..!

  ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಜೈಲಿನಲ್ಲಿ ಗೋಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ. ನೇಣು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ನಅಟಕ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.ತಿಹಾರ್ ಜೈಲಿನ ಅಧಿಕಾರಿಗಳು ಹೇಳುವ ಪ್ರಕಾರ ಕಳೆದ ಭಾನುವಾರ ಜೈಲಿನ ಗೋಡೆಗೆ ವಿನಯ್‌ ಶರ್ಮಾ ತಲೆಯನ್ನು ಚಚ್ಚಿಕೊಂಡಿದ್ದಾನೆ. ಇದನ್ನು ನೋಡಿದ ಜೈಲು ಸಿಬ್ಬಂದಿ ಈತನ ಕೃತ್ಯವನ್ನು ತಡೆದಿದ್ದಾರೆ. ಅಪರಾಧಿ ವಿನಯ್ ಶರ್ಮಾಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಡೆತ್ ವಾರಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆತ […]

ಕೆ.ಆರ್.ನಗರದಲ್ಲಿ ಬೆಂಕಿ ಅವಘಡಕ್ಕೆ ಇಡೀ ಕುಟುಂಬವೇ ಬಲಿ; ಪುತ್ರ, ಪತಿ ಅಗಲಿಕೆ ಬೆನ್ನಲ್ಲೇ ಮಹಿಳೆ ಸಾವು

 ನೀರಿನ ಒಲೆ ಹಚ್ಚುವಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.  ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಈಶ್ವರ ಬಡಾವಣೆಯಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡದಿಂದ ಗಂಭೀರ ಗಾಯಗೊಂಡು ಪೊಲೀಸ್ ಪೇದೆ ರೇಣುಕಾಸ್ವಾಮಿ, ಅವರ ಪತ್ನಿ ಪುಷ್ಪಲತಾ ಹಾಗೂ ಇವರ ಪುತ್ರ ತೇಜಸ್ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ನಡೆದ ದಿನದಂದೇ ತೇಜಸ್‍ ಮೃತಪಟ್ಟರು. ಅದರ ಮಾರನೇ ದಿನ ಪೇದೆ ರೇಣುಕಾಸ್ವಾಮಿ ಕೂಡ ಸಾವನ್ನಪ್ಪಿದರು.  ಪುಷ್ಪಲತಾ ಅವರಿಗೆ ಆಸ್ಪತ್ರೆಯ ತೀವ್ರ […]

ಪ್ರೇಯಸಿ ಜೊತೆ ಸುತ್ತಾಡಲು ಬೈಕ್ ಕಳ್ಳತನ ಮಾಡಿದ್ದ ಯುವಕ ಸೆರೆ

 ಪ್ರೇಯಸಿ ಜೊತೆ ಸುತ್ತಾಡಲು ಬೈಕ್‌ ಕಳ್ಳತನ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಈ ಘಟನೆ ನಡೆದಿದೆ. ಪ್ರಮೋದ್‌ ಬಂಧಿತ ಆರೋಪಿ. ಈತ ಫೆ.9ರಂದು ಟೆಸ್ಟ್‌ ಡ್ರೈವ್‌ಗೆಂದು ಬೈಕ್‌ ಪಡೆದು ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿ ವಿಚಾರಿಸಲಾಗಿ, ಪ್ರೇಯಸಿ ಜೊತೆ ಸುತ್ತಾಡಲು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.  

ಪತ್ನಿಯ ಅತಿಯಾದ ಮಡಿವಂತಿಕೆ ಮಕ್ಕಳನ್ನು ಅನಾಥ ಮಾಡಿತು..!

 ಪತ್ನಿ ಅತಿಯಾದ ಮಡಿವಂತಿಕೆಯ ವರ್ತನೆಯಿಂದ ಬೇಸತ್ತ ಗಂಡ ಪತ್ನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮಣಿ ಹಾಗೂ ಶಾಂತಮೂರ್ತಿ ಮೃತರು. ಶಾಂತಮೂರ್ತಿ ಸೌದೆ ತರಲೆಂದು ಪತ್ನಿ ಪುಟ್ಟಮಣಿಯನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಮಚ್ಚಿನಿಂದ ಕುತ್ತಿಗೆ ಕತ್ತರಿಸಿ ಪತ್ನಿಯನ್ನು ಸಾಯಿಸಿದ್ದಾನೆ. ನಂತರ ಮಂಗಳವಾರ ರಾತ್ರಿ ಮನೆಗೆ ತಂದು ನೇಣು ಹಾಕಿದ್ದಾನೆ. ಅನಂತರ ಆತನೂ ನೇಣಿಗೆ ಶರಣಾಗಿದ್ದಾನೆ.ಶಾಂತಮೂರ್ತಿ 15 ವರ್ಷಗಳ ಹಿಂದೆ ಪುಟ್ಟಮಣಿಯನ್ನು […]

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

 ಅಪಘಾತದಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಬೈಕ್‌ ಸವಾರ ಮೃತಪಟ್ಟಿರುವ ದುರ್ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.  ಬನ್ನೂರು-ಮಳವಳ್ಳಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬನ್ನೂರಿನ ಸಿದ್ದಪ್ಪ ಸಾವನ್ನಪ್ಪಿದ್ದಾರೆ. ಕೇರಳ ನೋಂದಣಿಯ ಲಾರಿ ಇದಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾರೆ. ಈ ಸಂಬಂಧ ಬನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿನಿ ಬಸ್‌, ಟಾಟಾ ಸುಮೋಗೆ ಬೆಂಕಿ

ಪಾರ್ಕ್‌ ಮಾಡಿದ್ದ ಮಿನಿ ಬಸ್‌ ಹಾಗೂ ಟಾಟಾ ಸುಮೋಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನ ನಾಚನಹಳ್ಳಿಯಲ್ಲಿ ನಡೆದಿದೆ. ನಾಚನಹಳ್ಳಿಯ ಅನ್ವರ್‌ ಎಂಬುವವರು ತಮ್ಮ ಮಿನಿ ಬಸ್‌ ಹಾಗೂ ಟಾಟಾ ಸುಮೋವನ್ನು ಪಾರ್ಕ್‌ ಮಾಡಿದ್ದರು. ರಾತ್ರಿ ವೇಳೆ ಬಂದಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಎರಡೂ ವಾಹನಗಳೂ ಸುಟ್ಟು ಕರಕಲಾಗಿವೆ. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗ್ನಲ್ ಜಂಪ್ ಮಾಡಲು ಮುಂದಾದ ವ್ಯಕ್ತಿ ಅಪಘಾತದಲ್ಲಿ ಸಾವು

 ಸಿಗ್ನಲ್‌ ಜಂಪ್‌ ಮಾಡಲು ಮುಂದಾದ ವೇಳೆ ಭೀಕರ ಅಪಘಾತ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  ನಗರದ ಆಕಾಶವಾಣಿ ಸಿಗ್ನಲ್‌ ಬಳಿ ಈ ಅಪಘಾತ ಸಂಭವಿಸಿದೆ. ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ನಿವಾಸಿ ನಾರಾಯಣಗೌಡ (50) ಮೃತ ದುರ್ದೈವಿ. ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಸಿಗ್ನಲ್‌ ಜಂಪ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎದುರಾದ ಖಾಸಗಿ ಬಸ್‌ ಡಿಕ್ಕಿಹೊಡೆದಿದೆ. ಕೆಳಗೆ ಬಿದ್ದ ಬೈಕ್‌ ಸವಾರ ಮೇಲೆ ಬಸ್‌ ಚಕ್ರ ಹರಿದ ಪರಿಣಾಮ ಸವಾರ ಸ್ಥಳದಲ್ಲೇ […]