. . .

ಬಹಿರಂಗ ಪ್ರಚಾರ ಅಂತ್ಯ; ಇನ್ನು ಏನು ಮಾಡಬಹುದು, ಏನು ಮಾಡಬಾರದು..?

29 Views

    ಕಳೆದ 2 ವಾರಗಳಿಂದ ನಡೆಯುತ್ತಿದ್ದ ಉಪಸಮರ ಕೊನೆಯ ಹಂತಕ್ಕೆ ಬಂದಿದೆ. ಕೆ.ಆರ್‍.ಪೇಟೆ, ಹುಣಸೂರು ಸೇರಿ 15 ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮತಕ್ಷೇತ್ರಕ್ಕೆ ಸೇರದ ಪ್ರಮಖರು, ರಾಜಕಾರಣಿಗಳು, ಸೆಲೆಬ್ರಿಟಿಗಳನ್ನು ಹೊರಗೆ ಕಳುಹಿಸಲಾಗಿದೆ. ಇಂದು ಸಂಜೆ 6 ಗಂಟೆ ವೇಳೆಗೆ ಎಲ್ಲಾ ಕಡೆ ಧ್ವನಿವರ್ಧಕಗಳು, ರೋಡ್‍ ಶೋಗಳು ಬಂದ್‍ ಆಗಿವೆ. ಡಿಸೆಂಬರ್‍ 5 ರಂದು ಮತದಾನ ನಡೆಯಲಿದ್ದು, ಅಲ್ಲಿಯವರೆಗೆ ಮನೆ ಮನೆಗೂ ಹೋಗಿ ಪ್ರಚಾರ ಮಾಡಬಹುದು. ನಾಳೆ ಸಂಜೆ ವೇಳೆಗೆ ಚುನಾವಣಾ ಸಿಬ್ಬಂದಿ ಅವರಿಗೆ ನಿಯೋಜಿಸಿದ ಮತಗಟ್ಟೆಗೆ ಆಗಮಿಸಲಿದ್ದಾರೆ. ಕೊನೆಯ ಹಂತದಲ್ಲಿ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಈ ಎರಡು ದಿನ ಏನಿರುತ್ತೆ..? ಏನಿರುವುದಿಲ್ಲ..?

  • ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಲ್ಲಿ ಉಳಿಯುವಂತಿಲ್ಲ
  • ಹೋಟೆಲ್‍, ವಸತಿ ಗೃಹ, ಪಕ್ಷದ ಕಚೇರಿಗಳ ಮೇಲೆ ಪೊಲೀಸರ ನಿಗಾ
  • ಐವರಿಗಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ
  • ಮೆರವಣಿಗೆ, ಜಾಥಾಗಳಿಗೆ ಅವಕಾಶವಿರುವುದಿಲ್ಲ
  • ಮನೆಮನೆಗೂ ತೆರಳಿ ಮತಯಾಚನೆ ಮಾಡಬಹುದು
  • ಡಿ.4-5ರಂದು ಧಾರ್ಮಿಕ ಕಾರ್ಯಕ್ರಮ ಬಿಟ್ಟು ಯಾವುದಕ್ಕೂ ಧ್ವನಿವರ್ಧಕ ಬಳಸುವ ಹಾಗಿಲ್ಲ
  • ಡಿ.4-5ರಂದು ಕ್ಷೇತ್ರದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದ್‍ ಇರುತ್ತದೆ
  • ಮತಗಟ್ಟೆಯ 100 ಮೀಟರ್‍ ಅಂತರದೊಳಗೆ ಪ್ರಚಾರ ಮಾಡುವಂತಿಲ್ಲ
  • ಡಿ.5ರಂದು ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸರ್ಕಾರಿ ರಜೆ ಇರುತ್ತದೆ

Leave a Reply

 

%d bloggers like this: