You cannot copy content of this page.
. . .

ಸಚಿವ ಸ್ಥಾನಕ್ಕಾಗಿ ಕಾದು ನೋಡುತ್ತೇನೆ: ಎಚ್‍.ವಿಶ್ವನಾಥ್

  ಮುಖ್ಯಮಂತ್ರಿಗಳು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ. ರಾಜೀನಾಮೆ ನೀಡಿದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.

  ದೇವದುರ್ಗ ತಾಲೂಕು ತಿಂಥಿಣಿಯ ಕನಕಗುರುಪೀಠದಲ್ಲಿ ಮಾತನಾಡಿದ ಅವರು, ಒಂದು ಸರ್ಕಾರ ಪತನವಾಗುವುದಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆ ಆಗುವುದರ ಹಿಂದೆ 17 ಶಾಸಕರ ತ್ಯಾಗ ಇದೆ. ಅದಕ್ಕಾಗಿಯೇ ಆಗ್ರಹಪೂರ್ವಕ ವಿನಂತಿ ಮಾಡುತ್ತಿದ್ದೇವೆ. ಒಂದು ವೇಳೆ ಕೊಡದೇ ಇದ್ದರೆ ಮುಂದೆ ಕಾದು ನೋಡುತ್ತೇವೆ ಎಂದರು.

  ಇದೇ ವೇಳೆ ತಂಗಡಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್‍, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ತಂಗಡಗಿಯವರು ಸಚಿವ ಸ್ಥಾನದ ಬಗ್ಗೆ ಮಾತನಾಡಲು ಯಾರು..? ಅವರೇನು ಮುಖ್ಯಮಂತ್ರಿಯೇ..? ಮಾಜಿ ಸಚಿವರ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

Leave a Reply

 

%d bloggers like this: