You cannot copy content of this page.
. . .

  ಕೊಲ್ಕತ್ತಾದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅದೇ ವೇದಿಕೆ ಮೇಲೆ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ದೇಬಸ್ಮಿತಾ ಚೌಧರಿ ಅವರಿಗೆ ಇಂದು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು  ಪದಕ ಸ್ವೀಕರಿಸಿದ ವಿದ್ಯಾರ್ಥಿನಿ ವೇದಿಕೆಯಲ್ಲೇ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಪ್ರತಿಭಟಿಸಿದರು.

  ವೇದಿಕೆಯ ಮೇಲೆ ಪದವಿ ಸ್ವೀಕರಿಸಿ ನಗುತ್ತಲೇ ಕುಲಪತಿಗಳ ಅನುಮತಿ ಪಡೆದು, ವೇದಿಕೆ ಮುಂಭಾಗಕ್ಕೆ ಬಂದು ಸಿಎಎ ಪ್ರತಿ ಹರಿದು, ‘ಇನ್ಕ್ವಿಲಾಬ್ ಜಿಂದಾಬಾದ್’ ಘೋಷಣೆ ಕೂಗಿದರು. ‘ನಾನು ನನ್ನ ದಾಖಲೆಗಳನ್ನು ತೋರಿಸುವುದಿಲ್ಲ’ ಎಂದು ಜೋರಾಗಿ ಕೂಗಿ ಹೇಳಿ, ಸಭಿಕರಿಗೆ ನಮಿಸಿ ವೇದಿಕೆಯಿಂದ ಹೊರನಡೆದರು.

 

%d bloggers like this: