You cannot copy content of this page.
. . .

  ಆಕ್ಸಿಡೆಂಟ್‍ ಆದರೂ ಏನೂ ಆಗಲ್ಲ.. ಗುಂಡಿನ ಮಳೆ ಸುರಿಸಿದರೂ ಪ್ರಾಣ ಹೋಗಲ್ಲ.. ಒಂದು ಹನಿ ರಕ್ತ ಕೂಡ ಹೊರಬರಲ್ಲ, ಚಿಕ್ಕದೊಂದು ಗಾಯವೂ ಆಗೋದಿಲ್ಲ.. ಈ ಸಾಲುಗಳನ್ನು ಓದಿ ನಿಮಗೆ ನಟ ರಜನಿಕಾಂತ್‍ ನೆನಪಿಗೆ ಬಂದಿರಬಹುದು.. ಆದರೆ ನಾವು ಹೇಳ್ತಾ ಇರೋದು ಆಕ್ಷನ್‍ ಸಿನಿಮಾವೊಂದರ ದೃಶ್ಯ ವಿವರಣೆ ಅಲ್ಲವೇ ಅಲ್ಲ.. ನಿಜವಾಗಿಯೂ ನಾವು ನೀವು ಕೂಡಾ ಸಿನಿಮಾಗಳಲ್ಲಿನ ಹೀರೋಗಳಂತಾಗಬಹುದು.. ಅಂದಹಾಗೆ ಮನುಷ್ಯ ಕಾಯಿಲೆ ಬಂದೋ ಅಥವಾ ವಯಸ್ಸಾಗೋ ಸಾಯಬಹುದು. ಇದನ್ನು ಯಾರೂ ತಡೆಯೋದಕ್ಕೆ ಆಗೋದಿಲ್ಲ.. ಆದರೆ ಯಾರಾದರೂ ಮಚ್ಚು ಬೀಸಿದರೆ, ಗುಂಡು ಹೊಡೆದರೆ ಅಥವಾ ಭೀಕರ ಅಪಘಾತವಾದರೂ ಮನುಷ್ಯನಿಗೆ ಏನೇನೂ ಆಗದಂತಹ ತಂತ್ರಜ್ಞಾನ ಬರುತ್ತಿದೆ.. ಹೌದು, ಮುಂದೆ ಬರೋದು ಬುಲೆಟ್‍ ಪ್ರೂಫ್‍ ಜಾಕೆಟ್‍ ಧರಿಸುವ ಕಾಲ ಅಲ್ಲ.. ಮನುಷ್ಯನೇ ಬುಲೆಟ್‍ ಪ್ರೂಫ್‍ ಆಗುವ ಕಾಲ.

   ಡಚ್‍ ಮೂಲದ ಜಲೀಲಾ ಎಸ್ಸಾಡಿ ಎಂಬಾಕೆ ಅಂಗೈಯಷ್ಟು ಅಗಲದ ತೆಲುವಾದ ಚರ್ಮವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಚರ್ಮಕ್ಕೆ ತುಂಬಾ ಹತ್ತಿರದಿಂದ 22 ಕ್ಯಾಲಿಬರ್‍ ಸಾಮರ್ಥ್ಯದ ಗುಂಡು ಹೊಡೆದಿದ್ದಾರೆ. ಆಗ ಆ ಗುಂಡು ಚರ್ಮಕ್ಕೆ ತಗುಲಿ ವಾಪಸ್‍ ಬಂದಿದೆ. ಇದೇ ರೀತಿಯ ಚರ್ಮದಂತೆ ತೆಲುವಾದ ಬುಲಟ್‍ ಪ್ರೂಫ್‍ ಜಾಕೆಟ್‍ ತಯಾರಿಸಬೇಕು ಅನ್ನೋದು ಇದರ ಹಿಂದೆ ಉದ್ದೇಶ. ಆದರೆ ಪ್ರಯೋಗಿಕವಾಗಿ ಯಶಸ್ವಿಯಾದ ಮೇಲೆ ಸಂಶೋಧಕಿ ಜಲೀಲಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತೆಲುವಾದ ಜಾಕೆಟ್‍ ಬದಲಾಗಿ ಮನುಷ್ಯನನ್ನೇ ಬುಲೆಟ್‍ ಪ್ರೂಫ್‍ ಮಾಡೋಕೆ ಹೊರಟಿದ್ದಾರೆ.

  ಸೇನಾಧಿಕಾರಿಗಳು, ವಿವಿಐಪಿಗಳು ಬುಲೆಟ್‍ ಪ್ರೂಫ್‍ ಜಾಕೆಟ್‍ ಧರಿಸೋದನ್ನು ನೋಡಿದ್ದೇವೆ. ಈ ಬುಲೆಟ್‍ಪ್ರೂಫ್‍ ಜಾಕೆಟ್‍ ತಯಾರಿಕೆ ಉಕ್ಕು ಬಳಕೆ ಮಾಡ್ತಾರೆ. ಆದರೆ ಇದನ್ನು ಧರಿಸಿದರೆ ಬಗ್ಗುವುದಕ್ಕೆ ತೊಂದರೆಯಾಗುತ್ತೆ.. ಆರಾಮಾಗಿ ಓಡಾಡುವುದಕ್ಕೂ ಆಗುವುದಿಲ್ಲ.. ಭಾರವೂ ಎನಿಸುತ್ತೆ.. ಹೀಗಾಗಿ ತಂತ್ರಜ್ಞರು ಇನ್ನೂ ಹಗುರವಾದ ಹಾಗೂ ಹೇಗೆ ಬೇಕಾದರೂ ಬಗ್ಗಿಸಬಹುದಾದ ಜಾಕೆಟ್‍ ತಯಾರಿಸೋಕೆ ಸಾಧ್ಯವೇ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು.. ಆಗ ಸಿಕ್ಕಿದ್ದೇ ಮೇಕೆ (ಆಡು) ಹಾಲು ಹಾಗೂ ಜೇಡರ ಬಲೆ..!

ಮೇಕೆ ಹಾಗೂ ಜೇಡದಲ್ಲಿ ಅಂತಾದ್ದೇನಿದೆ..?
 
ಪುಟ್ಟದೊಂದು ಜೇಡ, ನಾವು ನೀವು ಸಾಕೋ ಮೇಕೆ.. ಇದರಲ್ಲಿ ಬುಲೆಟ್‍ ಪ್ರೂಫ್‍ ಜಾಕೆಟ್‍ ಮಾಡಬಹುದಾ..? ನೀವು ನಗಾಡಬಹುದು. ಆದರೆ ಇದು ನಿಜ.. ಜೇಡದ ಬಲೆ ಇದೆಯಲ್ಲ, ಇದು ಪ್ರಕೃತಿಯಲ್ಲಿ ಸಿಗೋ ಅತ್ಯಂತ ಬಲಿಷ್ಠವಾದ ವಸ್ತುಗಳಲ್ಲಿ ಒಂದು. ಜೇಡದ ನೂಲು ಸ್ಟೀಲ್‍ಗಿಂತ 5 ಪಟ್ಟು ಗಟ್ಟಿ..! ಒಂದು ಪೆನ್ಸಿಲ್‍ ಗಾತ್ರದ ಜೇಡದ ನೂಲಿನಿಂದ ಬೋಯಿಂಗ್‍ 747 ವಿಮಾನವನ್ನು ನಿಲ್ಲಿಸಬಹುದು ಅಂದರೆ ಇದರ ತಾಕತ್ತು ಎಷ್ಟಿರಬಹುದು ನೀವೇ ಊಹೆ ಮಾಡಿ..   

  ಜೇಡದ ನೂಲು ಎಲಾಸ್ಟಿಕ್‍ ಮಾದರಿ ಇರುತ್ತೆ.. ಅದನ್ನು ಎಳೆದರೆ ಮೂಲ ಗಾತ್ರಕ್ಕಿಂತ 3-4 ಪಟ್ಟು ಹಿಗ್ಗುತ್ತದೆ. ಇದರ ಜೊತೆಗೆ ಈ ನೂಲಿನಲ್ಲಿ ಒಂದು ರೀತಿಯ ಅಂಟು ಇರುತ್ತದೆ.. ಹೀಗಾಗಿ ಇದು ಅತ್ಯಂತ ಗಟ್ಟಿ ಹಾಗೂ ಬಲಿಷ್ಠವಾದುದು. ಈ ಕಾರಣಕ್ಕೋ ಏನೋ ಶತಮಾನಗಳ ಹಿಂದೆಯೇ ರೋಮ್‍ನಲ್ಲಿ ಗಾಯಗೊಂಡ ಸೈನಿಕರಿಗೆ ಬ್ಯಾಂಡೇಜ್‍ ರೀತಿ ಕಟ್ಟಲು ಈ ಜೇಡದ ನೂಲನ್ನೇ ಬಳಸುತ್ತಿದ್ದರು.

  ಇನ್ನು ರೈತರು ಮನೆಗಳಲ್ಲಿ ಸಾಕುವ ಮೇಕೆಯ ಹಾಲಿನಲ್ಲೂ ಜೇಡದ ನೂಲಿನಲ್ಲಿರುವ ತಾಕತ್ತೇ ಇದೆ. ಇದರ ಹಾಲಿನಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇದೆ. ಮೆಗ್ನಿಷಿಯಂ ಹಾಗೂ ವಿಟಮಿನ್‍ ಡಿ ಕೂಡಾ ಇದೆ. ಹೀಗಾಗಿ ಮೇಕೆ ಹಾಗೂ ಜೇಡದ ನೂಲನ್ನು ಸೇರಿಸಿದರೆ ಸ್ಟೀಲ್‍ಗಿಂತ ಹತ್ತು ಪಟ್ಟು ಸ್ಟ್ರಾಂಗ್‍ ಆಗುತ್ತಂತೆ.

  ಉತಾಹ್ ಸ್ಟೇಟ್ ಯೂನಿವರ್ಸಿಟಿ ಪ್ರೊಫೆಸರ್‍ ರಾಂಡೋಫ್ ಎಂಬುವವರು ಮೇಕೆ ಹಾಲಿನಿಂದ ಸಿಂಥೆಟಿಕ್ (ಸಂಶ್ಲೇಷಿತ) ಜೇಡದ ನೂಲನ್ನು ತಯಾರು ಮಾಡಬಹುದು ಎಂಬುದನ್ನು ಸಂಶೋಧಿಸಿದ್ದರು. ಇದರಿಂದ ಆಕರ್ಷಿತರಾದ ಸಂಶೋಧಕಿ ಜಲೀಲಾ ಎಸ್ಸಾಡಿ, ಜೇಡದ ವಂಶವಾಹಿಗಳನ್ನು ಮೇಕೆಯ ಕೆಚ್ಚಲಿಗೆ ಕಸಿ ಮಾಡಿದ್ದಾರೆ. ಆ ಮೇಕೆಯಿಂದ ಬಂದಂತಹ ಹಾಲಿನಿಂದ ನೂಲು ತೆಗೆದು ಮನುಷ್ಯನ ಚರ್ಮಕ್ಕೆ ಹೋಲುವ ಕೃತಕ ಚರ್ಮವನ್ನು ತಯಾರಿಸಿದ್ದಾರೆ. ಆ ಚರ್ಮಕ್ಕೆ ಬುಲೆಟ್‍ ಹೊಡೆದರೂ ಏನೂ ಆಗುತ್ತಿಲ್ಲ.

  ಇದರಿಂದ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಜಲೀಲಾ ಎಸ್ಸಾಡಿ, ಮನುಷ್ಯನನ್ನೇ ಬುಲೆಟ್‍ಪ್ರೂಫ್‍ ಮಾಡಿದರೆ ಹೇಗೆ ಅಂತ ಯೋಚನೆ ಮಾಡಿದ್ದಾರೆ. ಈಗ ಜೇಡದ ವಂಶವಾಹಿಗಳಿಂದ ಮೇಕೆಗೆ ಕಸಿ ಮಾಡಿದ್ದಾರೆ. ಹೀಗೆ ಕಸಿ ಮಾಡಿದ ಮೇಕೆಯ ವಂಶವಾಹಿಗಳನ್ನು ತೆಗೆದು ಮನುಷ್ಯನಿಗೆ ಕಸಿ ಮಾಡಿದರೆ ಮನುಷ್ಯನ ದೇಹವೇ ಬುಲೆಟ್‍ಪ್ರೂಫ್‍ ಆಗುತ್ತೆ ಅನ್ನೋ ನಂಬಿಕೆ ಆಕೆಯದ್ದು. ಈ ನಿಟ್ಟಿನಲ್ಲಿ ಸಂಶೋಧನೆ ಯಶಸ್ವಿಯಾಗಿ ಮುಂದುವರೆದಿದೆ. ಇದು ಸಕ್ಸಸ್‍ ಆಗುವ ಸಾಧ್ಯತೆಯೂ ಹೆಚ್ಚಿದೆ.

  ಆದರೆ ಈ ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡರೆ ಓಕೆ. ಆದರೆ ಎಲ್ಲರಿಗೂ ಇದು ಸಿಗುವಂತಾದರೆ ಜನಸಂಖ್ಯೆ ಮತ್ತಷ್ಟು ಮಿತಿಮೀರುತ್ತೆ. ಜೊತೆಗೆ ಇದರಿಂದ ಬೇರೆ ಬೇರೆಯಾದ ಸಮಸ್ಯೆಗಳೂ ಸೃಷ್ಟಿಯಾಗಬಹುದು. ಆದರೆ ಈ ಸಂಶೋಧನೆಯಿಂದ ನಾವೂ ಬುಲೆಟ್‍ಪ್ರೂಫ್‍ ಆಹಬಹುದು ಅನ್ನೋ ಆಸೆ ಮನುಷ್ಯರಲ್ಲಿ ಚಿಗುರಿರೋದಂತೂ ಸತ್ಯ.

  

 

%d bloggers like this: