You cannot copy content of this page.
. . .

ಕೇಂದ್ರ ಬಜೆಟ್‍ ಗೆ ಸಾರ್ವಜನಿಕರ ಸಲಹೆ ಕೇಳಿದ ಮೋದಿ

  ಇಷ್ಟು ವರ್ಷ ತಜ್ಞರ ಜೊತೆ ಚರ್ಚೆ ಮಾಡಿ ಸರ್ಕಾರಗಳು ಬಜೆಟ್‍ ಮಂಡನೆ ಮಾಡುತ್ತಿದ್ದವು. ಆದರೆ ಈಗ ಮೋದಿ ಸರ್ಕಾರ 130 ಕೋಟಿ ಭಾರತೀಯರ ಮೊರೆ ಹೋಗಿದೆ. ಈ ವರ್ಷದ ಬಜೆಟ್‍ ರೂಪಿಸಲು ಸಾರ್ವಜನಿಕರು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

 ದೇಶದ ಜಿಡಿಪಿ ಪಾತಾಳಕ್ಕಿಳಿದಿದೆ. ಈ ಸಂದರ್ಭದಲ್ಲಿ ಮೋದಿ ನೇತೃತ್ವದ NDA-2 ಸರ್ಕಾರ 2ನೇ ಬಜೆಟ್‍ ಮಂಡನೆಗೆ ಸಿದ್ಧತೆ ನಡೆಸುತ್ತಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಕೇಂದ್ರ ಬಜೆಟ್‍ ಮಮಡನೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮೋದಿ ಸಾರ್ವಜನಿಕರ ಸಲಹೆ ಕೇಳಿದ್ದಾರೆ.

  ಟ್ವೀಟ್‍ ಮೂಲಕ ದೇಶದ ಜನರಿಗೆ ಮನವಿ ಮಾಡಿರುವ ಪ್ರಧಾನಿ ಮೋದಿ, ಬಜೆಟ್ ದೇಶದ 130 ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ನಿಮ್ಮ ಬಳಿ ಇರುವ ಸಲಹೆಗಳು, ಸೂಚನೆಗಳನ್ನು ನೀಡಿ ಎಂದಿದ್ದಾರೆ.

   ಜನರು ತಮ್ಮ ಸಲಹೆಗಳನ್ನು ಮೈ ಗೌರ್ನಮೆಂಟ್‍ ಆ್ಯಪ್ ನಲ್ಲಿ ನೀಡಬಹುದು. ಇಲ್ಲದೆ ಹೋದರೆ ಸೂಕ್ತ ಹ್ಯಾಷ್‌ಟ್ಯಾಗ್ ಅಥವಾ ಹಣಕಾಸು ಇಲಾಖೆಯ ಟ್ವಿಟ್ಟರ್ ಹ್ಯಾಂಡಲ್ ಹಾಕಿ ಟ್ವಿಟ್ಟರ್‌ನಲ್ಲೂ ಸಲಹೆ ನೀಡಬಹುದು. ಇ-ಮೇಲ್ ಅಥವಾ ಪತ್ರದ ಮೂಲಕ ಸಲಹೆಗಳನ್ನು ನೀಡಬಹುದು.

 

%d bloggers like this: