You cannot copy content of this page.
. . .

ಛಪಾಕ್‍ ಬಾಯ್ಕಾಟ್ ಅಭಿಯಾನ : ಪೇಚಿಗೆ ಸಿಲುಕಿಸಿದ ‘420’ ಟಿಕೆಟ್..!

  ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಲು ಹೋಗಿ ಒಂದು ಗುಂಪು ಪೇಚಿಗೆ ಸಿಲುಕಿದೆ. ದೀಪಿಕಾ ಪಡುಕೋಣೆ ವಿರುದ್ಧ ಟ್ವಿಟರ್‍ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಛಪಾಕ್‍ ಸಿನಿಮಾ ನೋಡಲು ಬುಕಿಂಗ್‍ ಮಾಡಿದ್ದ ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿರುವುದಾಗಿ ಒಂದಷ್ಟು ಜನ ಟಿಕೆಟ್‍ ಸಮೇತ ಟ್ವೀಟ್‍ ಮಾಡಿದ್ದಾರೆ. ಆದರೆ ಎಲ್ಲರೂ ಟ್ವೀಟ್‍ ಮಾಡಿರುವ ಟಿಕೆಟ್‍ ನಲ್ಲಿದ ಸಂಖ್ಯೆ ಒಂದೇ ಆಗಿದೆ. ಒಂದೇ ಟಿಕೆಟ್‍ ಇಟ್ಟುಕೊಂಡು ಎಲ್ಲರೂ  ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಅಂತ ದೀಪಿಕಾ ಪರ ವಹಿಸಿದವರು ಗೇಲಿ ಮಾಡಲು ಶುರು ಮಾಡಿದ್ದಾರೆ.

   ಜವಹರ ಲಾಲ್‍ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದಾಳಿ ಖಂಡಿಸಿ ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಹೀಗಾಗಿ ಅವರ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಬೇಕೆಂಬ ಕೂಗೆದ್ದಿದೆ. ಒಂದು ಗುಂಪು #boycottchhapaak ಎಂಬ ಟ್ವಿಟರ್‍ ಅಭಿಯಾನ ಶುರು ಮಾಡಿದೆ.

  ಈ ವೇಳೆ ಹಲವಾರು ಮಂದಿ ಗುಜರಾತ್‍ ನ ವಡೋದರಾದ ಅಕೋಟಾದಲ್ಲಿರುವ ಸಿನೆಮಾರ್ಕ್‍ ನಲ್ಲಿ GOLD: A-10, A-09, A-08 ನಂಬರಿನ 3 ಟಿಕೆಟ್‍ ಗಳನ್ನು ಬುಕ್‍ ಮಾಡಿದ್ದು, ಅದನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹಾಕಿಕೊಂಡಿದ್ದಾರೆ. ಎಲ್ಲರೂ ಒಂದೇ ನಂಬರಿನ ಟಿಕೆಟ್‍ ಗಳನ್ನು ಹೇಗೆ ಬುಕ್‍ ಮಾಡುತ್ತೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕ್ಯಾನ್ಸಲ್‍ ಆಗಿರುವ ಟಿಕೆಟ್‍ ನಲ್ಲಿ ಒಟ್ಟು ಮೊತ್ತ 420 ರೂಪಾಯಿ ಇದೆ. ಹೀಗಾಗಿ ಇದು 420 ಗಳ ಕೆಲಸ ಎಂದು ಕೆಲವರು ಟ್ವೀಟ್‍ ಮೂಲಕ ಗೇಲಿ ಮಾಡುತ್ತಿದ್ದಾರೆ.

 

#boycottchhapaak ಟ್ವಿಟರ್‍ ನಲ್ಲಿ ಟ್ರೆಂಡಿಂಗ್‍ ನಲ್ಲಿದೆ. ದೀಪಿಕಾ ವಿರುದ್ಧ ನೂರಾರು ಜನರು ಆಂದೋಲನ ಶುರು ಮಾಡಿದ್ದಾರಾದರೂ, ಸಿನಿಮಾ ಬಾಯ್ಕಾಟ್‍ ಮಾಡಿದ್ದೇವೆಂದು ಸುಳ್ಳು ಟಿಕೆಟ್‍ ಅಪ್‍ ಲೋಡ್‍ ಮಾಡಿ ಕೆಲವರು ಪೇಚಿಗೆ ಸಿಲುಕಿದ್ದಾರೆ. ಇನ್ನೊಂದೆಡೆ ದೀಪಿಕಾ ಪಡುಕೋಣೆ ಪರ ವಹಿಸಿ, #IStandWithpadukone ಎಂಬ ಅಭಿಯಾನವೂ ಶುರು ಮಾಡಿದ್ದಾರೆ.

 

 

%d bloggers like this: