You cannot copy content of this page.
. . .

  ಹಲವು ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತದಾದ್ಯಂತದ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್‍ ಸಂಚಾರ, ಶಾಲಾ-ಕಾಲೇಜುಗಳು ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

  ಮೈಸೂರಿನಲ್ಲಿ ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ. ಇನ್ನು ಮಡಿಕೇರಿಯಲ್ಲೂ ಜನಜೀವನ ಸಹಜ ಸ್ಥಿತಿಯಲ್ಲಿದೆಯಾದರೂ ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವೇಳೆ ಮಡಿಕೇರಿಯ ಚೈನ್‌ ಗೇಟ್ ಬಳಿ ಕಿಡಿಗೇಡಿಗಳು ಕೆಎಸ್ ಆರ್‌ ಟಿಸಿ ಬಸ್ ಮೇಲೆ ಕಲ್ಲು ತೂರಿದ್ದಾರೆ. ಬಸ್‌ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಈ ಬಸ್ ಅನ್ನು ಸುದರ್ಶನ ವೃತ್ತದ ಬಳಿಯ ಡಿಪೊಕ್ಕೆ ತಂದು ನಿಲುಗಡೆ ಮಾಡಲಾಗಿದೆ.

 

%d bloggers like this: