You cannot copy content of this page.
. . .

 ಹ್ಯಾಟ್ರಿಕ್‍ ಹೀರೊ ಶಿವರಾಜ್‍ ಕುಮಾರ್ ಅಭಿನಯದ, ಬಹುನಿರೀಕ್ಷಿತ ‘ಭಜರಂಗಿ-2’ ಸಿನಿಮಾ ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಇಂದು ಚಿತ್ರೀಕರಣದ ವೇಳೆ ಅಗ್ನಿ ಅವಘಡ ಉಂಟಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಒಂದಾದ ಮೇಲೊಂದು ವಿಘ್ನ ಎದುರಾಗುತ್ತಿದೆ.

 ಎ.ಹರ್ಷ ನಿರ್ದೇಶನದ ಈ ಸಿನಿಮಾದ ಬಹುಪಾಲು ಚಿತ್ರೀಕರಣ ಸೆಟ್‍ನಲ್ಲೇ ನಡೆಯುತ್ತಿದೆ. ಜ.16ರಂದು ಸಿನಿಮಾ ಚಿತ್ರೀಕರಣಕ್ಕೆ ಬೆಂಗಳೂರಿನ ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ನಿರ್ಮಿಸಲಾಗಿದ್ದ ಗುಹೆಯ ಸೆಟ್‍ಗೆ ಶಾರ್ಟ್ ಸರ್ಕ್ಯೂಟ್‍ನಿಂದ ಅವಘಡ ಉಂಟಾಗಿತ್ತು. ಸಧ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ‘ಆಂಜನೇಯ ನಮ್ಮನ್ನು ಕಾಪಾಡಿದ್ದಾನೆ’ ಎಂದು ನಟ ಶಿವರಾಜ್‍ ಕುಮಾರ್‍ ಪ್ರತಿಕ್ರಿಯಿಸಿದ್ದರು.

 ನಂತರ ಜ.18ರಂದು ಸಿನಿಮಾ ಚಿತ್ರೀಕರಣಕ್ಕೆ ತೆರಳುತ್ತಿದ್ದ ಕಲಾವಿದರಿದ್ದ ಬಸ್‍ ನೆಲಮಂಗಲ ತಾಲ್ಲೂಕು ಶ್ರೀನಿವಾಸಪುರ ಬಳಿ ಅಪಘಾತಕ್ಕೆ ಒಳಗಾಗಿತ್ತು. 60 ಮಂದಿ ಕಲಾವಿದರು ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್ ಹೈ ಓಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್‍ ಯಾರಿಗೂ ತೊಂದರೆ ಆಗಲಿಲ್ಲ.

 ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ಈಗ ಮತ್ತೊಮ್ಮೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ಸುಮಾರು 200 ಮಂದಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯಕ್ಕೆ ಚಿತ್ರತಂಡ ಶೂಟಿಂಗ್‍ ಸ್ಥಗಿತಗೊಳಿಸಿದೆ.

 

%d bloggers like this: