You cannot copy content of this page.
. . .

ಎಬಿವಿಪಿಯದ್ದು ರಕ್ತ ಹರಿಸುವ ಸಂಸ್ಕೃತಿಯಲ್ಲ; ಡಾ.ಬಿ.ವಿ.ವಸಂತಕುಮಾರ್

 ಮೈಸೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ (ಎಬಿವಿಪಿ) ರಕ್ತ ಹರಿಸುವ ಸಂಸ್ಕೃತಿ ಇಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.

 ಎಬಿವಿಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಚಾಲನೆ ನೀಡಲಾದ ‘ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಂಸ್ಕೃತಿ ಚಳವಳಿ-೨’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಜೆಎನ್‍ಯುನಲ್ಲಿ ಇರುವವರಿಗೆ ಹೇಳುತ್ತೇವೆ: ರಕ್ತ ಹರಿಸುವ ಸಂಸ್ಕೃತಿ ವಿದ್ಯಾರ್ಥಿ ಪರಿಷತ್‌ದ್ದಲ್ಲ. ಅಗತ್ಯ ಇರುವವರಿಗೆ, ರೋಗಿಗಳಿಗೆ ರಕ್ತ ನೀಡಿ ಜೀವವನ್ನು ಉಳಿಸುವ ಸಂಸ್ಕೃತಿ ನಮ್ಮದು ಎಂದರು.

 ಕ್ರೌಂಚಪಕ್ಷಿಯ ವೇದನೆಯನ್ನು ಕಂಡು ‘ಮಾ ನಿಷಾದ…’ ಎಂದು ಉದ್ಘರಿಸಿದ ವಾಲ್ಮೀಕಿಯ ಸಂಸ್ಕೃತಿ ನಮ್ಮದು. ರಕ್ತ ಒಳಗಡೆ ಹರಿದರೆ ಜೀವ, ಹೊರಗಡೆ ಹರಿದರೆ ಸಾವು. ಎಬಿವಿಪಿ ಕಟ್ಟುವುದರಲ್ಲಿ ನಂಬಿಕೆ ಇಟ್ಟಿದೆಯೇ ಹೊರತು ಕೆಡುವುದರಲ್ಲಿ ಅಲ್ಲ. ಸಾಮರಸ್ಯದಲ್ಲಿ ನಂಬಿಕೆ ಇಟ್ಟಿದೆ ಹೊರತು, ಸಂಘರ್ಷದಲ್ಲಲ್ಲ. ಎಬಿವಿಪಿ ವಿಕಾಸದಲ್ಲಿ ನಂಬಿಕೆ ಇಟ್ಟಿದೆ ಹೊರತು ವಿನಾಶದಲ್ಲಲ್ಲ. ನೀವು ನಮ್ಮ ಮೇಲೆ ಕಲ್ಲುಗಳನ್ನು ಎಸೆದರೆ, ಅದೇ ಕಲ್ಲುಗಳನ್ನು ಮೂರ್ತಿಗಳನ್ನಾಗಿ ಮಾಡಿ ಈ ದೇಶಕ್ಕೆ ಕೊಡುತ್ತಿರುತ್ತೇವೆ ಎಂದು ಹೇಳಿದರು. ವಯಲಿನ್ ವಾದಕ ವಿದ್ವಾನ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಇತರರು ಹಾಜರಿದ್ದರು.

 

%d bloggers like this: