. . .

Author: Andolana

ಏನಿದು ಉನ್ನಾವೊ ಪ್ರಕರಣ..?; 2 ವರ್ಷದಲ್ಲಿ ನಡೆದ ದಾಳಿಗಳೆಷ್ಟು..?

15 Views   ಪಶುವೈದ್ಯೆ ಮೇಲೆ ನಡೆದ ಕ್ರೂರ ದೌರ್ಜನ್ಯದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ಮಹಿಳೆಯರು ಸಮಾಜದಲ್ಲಿ ನಿರ್ಭೀತಿಯಿಂದ ಓಡಾಡಲು ಹೆದರುತ್ತಿದ್ದಾರೆ. ಈ ಹಿಂದೆಯೇ ಅತ್ಯಾಚಾರಕ್ಕೆ ಒಳಗಾಗಿ ಕೊಲೆ ಸಂಚಿಗೂ ಗುರಿಯಾಗಿ, ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು.  2017ರ ಡಿಸೆಂಬರ್ ನಲ್ಲಿ ಈ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. ಬಿಜೆಪಿ ಉಚ್ಛಾಟಿತ […]

ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು; ಸಿಜೆಐ ಬೋಬಡೆ

17 Viewsನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಎನ್ಕೌಂಟರ್ ಕುರಿತು ಮಾತನಾಡಿರುವ ಅವರು, ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು. ಒಂದು ವೇಳೆ ಪ್ರತಿಕಾರದ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡಿದ್ದೇ ಅದರೆ, ಅದು ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕಾರು ಡಿಕ್ಕಿ; ಬೈಕ್ ಸವಾರ ಸಾವು

14 Viewsಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಮೀಪದ ಹೊನ್ನೇನಹಳ್ಳಿ ಬಳಿ ನಡೆದಿದೆ.ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಹುಣಸವಾಡಿಯ ಹನುಮಂತನಾಯಕ ಮತ್ತು ಚೆಲುವಮ್ಮ ದಂಪತಿ ಪುತ್ರ ಎಚ್.ಎಚ್.ರಘು (೩೦) ಮೃತಪಟ್ಟವರು.ಇವರು ಹುಣಸೂರಿನ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಂಪನಿಯ ಕೆಲಸದ ನಿಮಿತ್ತ ಶುಕ್ರವಾರ ಹನಗೋಡು ಬಳಿಯ ವಡ್ಡಂಬಾಳು ಗ್ರಾಮಕ್ಕೆ ತೆರಳಿದ್ದ ರಘು ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುವ ವೇಳೆ ಹಿಂಬದಿಯಿಂದ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.ದಾರಿ […]

ಹೈದರಾಬಾದ್ ಎನ್ ಕೌಂಟರ್; ಪೊಲೀಸರ ಟೀಕೆ ಸರಿಯಲ್ಲ-ಯದುವೀರ್

28 Viewsಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ ಕೌಂಟರ್‍ ಮಾಡಿರುವ ಪೊಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.    ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, ಇಂತಹ ಘಟನೆಗಳಿಂದ ಯಾರಿಗೂ ಸಂತೋಷವಾಗಿಲ್ಲ, ಸಮಾಧಾನ ಉಂಟಾಗಿದೆ. ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ ಎಂದರು.ಪ್ರಕರಣ ಮಹಜರು ವೇಳೆ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಅವರು ಎನ್‌ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ ಆಸೆ […]

ಸಂಕ್ರಾಂತಿಗೆ ವಿಷ್ಣು ಸ್ಮಾರಕಕ್ಕೆ ಚಾಲನೆ..

25 Views    ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಿಲ್ಪಗಳೊಂದಿಗೆ ಮಾತುಕತೆ ನಡೆದಿದ್ದು, ಸಂಕ್ರಾಂತಿ ಹಬ್ಬದಂದು ಚಾಲನೆ ನೀಡಲಾಗುವುದು ಎಂದು ನಟ ಅನಿರುದ್ಧ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವಿಷ್ಣು ಸ್ಮಾರಕದ ಜೊತೆಗೆ ವಿದ್ಯಾಸಂಸ್ಥೆಯೊಂದನ್ನು ತೆರೆದು ಯುವಜನತೆಗೆ ರಂಗಭೂಮಿ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.    ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು ಸಾಂಸ್ಕೃತಿಕ ನಗರಿಯಲ್ಲೇ ಚಿತ್ರನಗರಿ ನಿರ್ಮಾಣ ಮಾಡುವುದು ಉತ್ತಮ, ಯಾಕೆಂದರೆ ಮೈಸೂರಿಗೆ ತನ್ನದೇ ಆಗ ವಿಶೇಷತೆ ಇದೆ ಎಂದರು. https://youtu.be/Gb_9wBAVM9E

ಬಿಜೆಪಿ 9 ಸ್ಥಾನ ಗೆಲ್ಲುತ್ತೆ: ಎಸ್.ಎ.ರಾಮದಾಸ್ ವಿಶ್ವಾಸ

22 Views   ೧೫ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ೯ ಸ್ಥಾನಗಳನ್ನು ಗೆದ್ದು ಸುಭದ್ರ ಸರ್ಕಾರ ರಚಿಸಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ದಿನದವರೆಗೂ ಕಾಂಗ್ರೆಸ್-ಜಾ.ದಳ ನಾಯಕರು ಪ್ರಚಾರದಲ್ಲಿ ಅಬ್ಬರಿಸುತ್ತಿದ್ದರು. ಮತದಾನದ ನಂತರ ಧ್ವನಿ ಸ್ವಲ್ಪ ತಣ್ಣಗಾಗಿದೆ. ಈ ನಡುವೆ ಕಾಂಗ್ರೆಸ್-ಜಾ.ದಳ ಮತ್ತೆ ಮೈತ್ರಿ ಮಾಡಿಕೊಳ್ಳುವ ಧ್ವನಿ ಕೇಳಿಬರುತ್ತಿದೆ. ಆದರೆ, ಬಿಜೆಪಿ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ. ೯ ಸ್ಥಾನಗಳನ್ನು ಗೆದ್ದು, ಮುಂದಿನ […]

700ಕ್ಕೆ ಸಾವಿರ, 700ಕ್ಕೆ ಸಾವಿರ..!; KR ಪೇಟೇಲಿ ಕುರಿ-ಕೋಳಿನೂ ಕಟ್ತಾರೆ ಬಾಜಿ..!

46 Views   ಉಪಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹಾರಿದಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಂತ ಮತದಾನ ಮುಗಿದ ಮೇಲೆ ಎಲ್ಲಾ ತಣ್ಣಗಾಗಿದೆ ಎಂದುಕೊಂಡರೆ ಅದು ತಪ್ಪಾಗುತ್ತೆ. ಯಾಕಂದ್ರೆ, ಈಗಲೂ ಮತ ಕ್ಷೇತ್ರಗಳಲ್ಲಿ ಝಣಝಣ ಕಾಂಚಾಣದ್ದೇ ಸದ್ದು. ಸೋಮವಾರ ಬರುವ ಫಲಿತಾಂಶದ ಮೇಲೆ ಬೆಟ್ಟಿಂಗ್‍ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ಅರಳಿಕಟ್ಟೆ, ಟೀ ಸ್ಟಾಲ್‍, ಹೋಟೆಲ್‍ ಹೀಗೆ ಎಲ್ಲಿ ನೋಡಿದರೂ ಬೆಟ್ಟಿಂಗ್‍ ದೇ ಮಾತು..    ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಬಿಜೆಪಿಗೆ ಗೆಲ್ಲುವ ವಿಶ್ವಾಸವೇ ಇರಲಿಲ್ಲ. […]

ಕೊಡಗಿನಲ್ಲಿ ನಕಲಿ ಅಂಗವಿಕಲನ ಸೆರೆ

18 Viewsಭಿಕ್ಷೆ ಬೇಡುತ್ತಿದ್ದ ನಕಲಿ ಅಂಗವಿಕಲನನ್ನು ಕೊಡಗಿನ ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.ಅಂಕೋಲ ಮೂಲಕ ವಿನಯ್ ಎಂಬಾತನೇ ಸೆರೆಯಾದ ನಕಲಿ ಅಂಗವಿಕಲ. ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಈತ ಕಾಲು ಊನಗೊಂಡಿದೆ ಎಂದು ಸುಳ್ಳು ಹೇಳಿಕೊಂಡು ಜನರಲ್ಲಿ ಕರುಣೆ ಭಾವನೆ ಮೂಡಿಸಿ ಭಿಕ್ಷೆ ಬೇಡುತ್ತಿದ್ದ. ಈತನ ನಟನೆಯನ್ನು ಅರಿತ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

11 ತಿಂಗಳಲ್ಲಿ 90 ರೇಪ್‍..!; ಉನ್ನಾವೋ ಅತ್ಯಾಚಾರ ರಾಜಧಾನಿಯಾಗಿದೆಯಾ..?

18 Views    ಶಾಸಕನಿಂದ ಅತ್ಯಾಚಾರಕ್ಕೊಳಗಾಗಿ, ಹಲವಾರು ಬಾರಿ ದಾಳಿಗೊಳಗಾಗಿ ಕೊನೆಗೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾಳೆ. ಹಾಗಂತ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಇದೊಂದೇ ಕೃತ್ಯ ನಡೆದಿಲ್ಲ. ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಅದರ ಪ್ರಮಾಣ ನೋಡಿದರೆ ಉನ್ನಾವೋ ಜಿಲ್ಲೆ ಅತ್ಯಾಚಾರಗಳ ರಾಜಧಾನಿ ಎಂಬ ಹಣೆಪಟ್ಟಿಯನ್ನು ಕಟ್ಟಬಹುದು. ಯಾಕಂದ್ರೆ ಕಳೆದ 11 ತಿಂಗಳಲ್ಲಿ ಅಂದರೆ ಜನವರಿ 2019 ರಿಂದ ನವೆಂಬರ್‍ ಅಂತ್ಯದವರೆಗೆ ಉನ್ನಾವೋ ಜಿಲ್ಲೆಯಲ್ಲಿ ಬರೋಬ್ಬರಿ 90 ಅತ್ಯಾಚಾರಗಳು ನಡೆದಿವೆ. 185ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು […]

ತಿಂಗಳೊಳಗೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ; ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

19 Viewsದೇಹ ಪೂರ್ತಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ  ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ಕಾಮುಕರು ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದರು. ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು.    ಶೇ.90ರಷ್ಟು ಸುಟ್ಟಗಾಯಗಳಾಗಿದ್ದ 23 ವರ್ಷದ ಸಂತ್ರಸ್ತೆಯನ್ನು ಉತ್ತರಪ್ರದೇಶದ ಲಖನೌನಿಂದ ದೆಹಲಿಗೆ ಕರೆತಂದು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ 11.40 ಸಮಯದಲ್ಲಿ ಹೃದಯ […]