You cannot copy content of this page.
. . .

Author: Andolana

ರಾಜ್ಯದ ಇಬ್ಬರು ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಸಕ್ತ ಸಾಲಿನ ರಾಷ್ಟ್ರೀಯ ಶೌರ್ಯ ಪುರಸ್ಕಾರ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಶಸ್ತಿ ಘೋಷಣೆಯಾಗಿದೆ.  ಕಳೆದ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ ಗೆ ದಾರಿಸಿ, ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ್ ಗೆ ಶೌರ್ಯ ಪ್ರಶಸ್ತಿ ಸಿಕ್ಕಿದೆ. ವೆಂಕಟೇಶ, ದೇವದುರ್ಗ ತಾಲ್ಲೂಕಿನ ಸಂಕನೂರು ಗ್ರಾಮದವರು. ಇನ್ನು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ ಆರತಿ ಕೂಡಾ ಈ ಪುರಸ್ಕಾರಕ್ಕೆ […]

ಫೆ.೮ರಂದು ರಾಷ್ಟ್ರೀಯ ಲೋಕ ಅದಾಲತ್

 ಮೈಸೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಫೆ.೮ರಂದು ನಗರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಹೇಳಿದರು.  ಪ್ರಸ್ತುತ ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಕ್ರಿಮಿನಲ್, ಸಿವಿಲ್, ಮೋಟಾರು ವಾಹನ ಅಪಘಾತ, ಕೌಟುಂಬಿಕ, ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ರಾಜೀ ಸಂಧಾನದ […]

ಸಂಪುಟ ವಿಸ್ತರಿಸಿದರೆ ಯಾವ ಸ್ಫೋಟವೂ ಆಗಲ್ಲ; ಸಿದ್ದು ಹೇಳಿಕೆಗೆ ಕಾರಜೊಳ ತಿರುಗೇಟು

  ಸಚಿವ ಸಂಪುಟ ವಿಸ್ತರಣೆಯಾದರೆ ಜಗತ್ತು ಪ್ರಳಯ ಆಗಿಬಿಡುವುದಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಡಿಸಿಎಂ ಗೋವಿಂದ ಎಂ.ಕಾರಜೋಳ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಆದರೆ ಸಿದ್ದರಾಮಯ್ಯ ಹೇಳುವಂತೆ ಸ್ಪೋಟವೂ ಆಗುವುದಿಲ್ಲ, ಏನು ಆಗುವುದಿಲ್ಲ ಎಂದರು.   ಸಿದ್ದರಾಮಯ್ಯ ಅವರು ಭ್ರಮೆಯಲ್ಲಿ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನ ನಮ್ಮ‌ ನಾಯಕರು ನಿರ್ಧಾರ ಮಾಡುತ್ತಾರೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು […]

ಇಂದಿನಿಂದ ಸುತ್ತೂರು ಜಾತ್ರೆ; ಹರಿದು ಬಂದ ಭಕ್ತಸಾಗರ

ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಜನವರಿ 26ರವರೆಗೆ ಜಾತ್ರೆ ನಡೆಯಲಿದ್ದು, ಈಗಾಗಲೇ ಕ್ಷೇತ್ರ ಜಾತ್ರೆಗೆ ಅದ್ಭುತವಾಗಿ ಸಿದ್ಧಗೊಂಡಿದೆ. ಇಂದು ವೀರಭದ್ರೇಶ್ವರ ಕೊಂಡೋತ್ಸವ, 23ರಂದು ರಥೋತ್ಸವ, 24ರಂದು ಮಹದೇಶ್ವರ ಕೊಂಡೋತ್ಸವ, 25 ರಂದು ತೆಪ್ಪೋತ್ಸವ ಹಾಗೂ ಲಕ್ಷದೀಪೋತ್ಸವ, ಹಾಲ್ಹರವಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.   ಬೆಳಗಿನಿಂದಲೇ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಭಕ್ತಾದಿಗಳಿಗಾಗಿ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. […]

ಸಿಎಎ ವಿರೋಧಿಸಿ ನಗರದಲ್ಲಿ ಎರಡು ಕಡೆ ಪ್ರತ್ಯೇಕ ಪ್ರತಿಭಟನೆ

 ಸಿಎಎ, ಎನ್‍.ಆರ್.ಸಿ ವಿರೋಧಿಸಿ ಮೈಸೂರು ನಗರದಲ್ಲಿ ಇಂದು (ಮಂಗಳವಾರ) ಎರಡು ಕಡೆ ಪ್ರತ್ಯೇಕ ಪ್ರತಿಭಟನೆಗಳು ನಡೆಯಿತು.  ಬೆಳಿಗ್ಗೆ ಪುರಭವನದ ಎದುರಿನ ದೊಡ್ಡ ಗಡಿಯಾರದ ಬಳಿ ಜಮಾವಣೆಗೊಂಡ ವೀ ದಿ ಸ್ಟುಡೆಂಟ್‍ ಆಫ್,‍ ಮೈಸೂರು ಪ್ರತಿಭಟನಾಕಾರರು ಆಜಾದಿ ಘೋಷಣೆ ಕೂಗಿದರು. ಮತ್ತೊಂದು ಸಂಘಟನೆಯಾದ ಸಂವಿಧಾನ ರಕ್ಷಣಾ ಸಮಿತಿಯು ಮಿಲಾದ್ ಪಾರ್ಕ್‍ ಬಳಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದರು. ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಇಬ್ಬರು ಶಂಕಿತರು ಪೊಲೀಸರ ವಶಕ್ಕೆ

 ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬಸ್‍ ನಿಲ್ದಾಣದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ಇಬ್ಬರು ವ್ಯಕ್ತಿಗಳು ಬ್ಯಾಗ್‍ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿರುವ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಶಂಕಿತರನ್ನು ಪೊಲೀಸರು ವಿಚಾರಣೆ ಮಾಡಿದಾಗ ಬ್ಯಾಗ್‍ನಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ. ಹಾಸನದ ಎಸ್‍ಪಿ ರಾಮ್‍ ನಿವಾಸ್‍ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಈ ಹಿಂದೆ ಜೈಲು ಅನುಭವಿಸಿದವನೇ ಬಾಂಬ್‍ ಇಟ್ಟನಾ..?

  ಕೆಲ ವರ್ಷಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‍ ಇಡಲಾಗಿದೆ ಎಂದು ಹುಸಿ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಆತ 1 ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಇದೀಗ ಮಂಗಳೂರಿನಲ್ಲಿ ಬಾಂಬ್‍ ಇಟ್ಟ ಶಂಕಿತನ ರೇಖಾಚಿತ್ರಕ್ಕೂ ಬೆಂಗಳೂರು ಬಾಂಬ್‍ ಪ್ರಕರಣದ ಆರೋಪಿಗೂ ಹೋಲಿಕೆಯಾಗುತ್ತಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‍ ಪತ್ತೆಯಾದ ಬಳಿಕ 12 ಸಿಸಿಟಿವಿ ಕ್ಯಾಮರಾಗಳನ್ನು […]

ವಿಚಾರಣೆಗೆ ಮೈಸೂರು ಐ.ಟಿ ಕಚೇರಿಗೆ ಆಗಮಿಸಿದ ನಟಿ ರಶ್ಮಿಕಾ ಕುಟುಂಬ

 ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರು ಇಂದು ಮೈಸೂರಿನ ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.  ಐ.ಟಿ ನಿರ್ದೇಶನದಂತೆಯೇ ಇಂದು ಬೆಳಿಗ್ಗೆ ನಜರಾಬಾದ್‍ನಲ್ಲಿರುವ ಆದಾಯ ತೆರಿಗೆ ಆಯುಕ್ತರ  ಕಚೇರಿಗೆ ವಿಚಾರಣೆಗೆ ರಶ್ಮಿಕಾ ಮತ್ತು ಕುಟುಂಸ್ಥರು ಹಾಜರಾಗಿದ್ದಾರೆ. ಪ್ರಾದೇಶಿಕ ಆಯುಕ್ತ ಸಂಜಯ್‍ ಗಾಂಧಿ ನೇತೃತ್ವದಲ್ಲಿ ರಶ್ಮಿಕಾ ವಿಚಾರಣೆ ನಡೆಯಲಿದೆ. ರಶ್ಮಿಕಾ ಜೊತೆಯಲ್ಲಿ 9 ಮಂದಿ ಆಗಮಿಸಿದ್ದಾರೆ. ಎರಡು ಬ್ಯಾಗ್‍, ಒಂದು ಕಿಟ್‍ ಜೊತೆಯಲ್ಲಿ ಸಂಗಡಿಗರು ಬಂದಿದ್ದಾರೆ.  ಇತ್ತೀಚೆಗೆ ಮಡಿಕೇರಿಯ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಅವರ […]

ಮಂಡ್ಯದಲ್ಲಿ ಕತ್ತು ಸೀಳಿ ಮಾರ್ವಾಡಿ ಕೊಲೆ

  ರಾಜಸ್ತಾನ ಮೂಲದ ಬುಂಡಾರಾಮ್  (27) ಎಂಬಾತನನ್ನು ಕತ್ತುಸೀಳಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇಲ್ಲಿನ ವಿದ್ಯಾನಗರ 2ನೇ ಕ್ರಾಸ್ ನ ಮೂರನೇ ಮಹಡಿಯ ಮನೆಯಲ್ಲಿ ಹೆಂಡತಿ, ಮಕ್ಕಳನ್ನು ಕಟ್ಟಿ ಹಾಕಿ ಈ ದುಷ್ಕತ್ಯ ಎಸಗಲಾಗಿದೆ.    ಮಂಡ್ಯದ ಗುತ್ತಲು ರಸ್ತೆಯಲ್ಲಿ ಹಾರ್ಡ್ ವೇರ್ ಅಂಗಡಿ ಇಟ್ಟಿದ್ದ ಬುಂಡಾರಾಮ್ ವಿದ್ಯಾನಗರದಲ್ಲಿ ವಾಸವಿದ್ದರು. ಪರಿಚಿತರೇ ಈ ದೃಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಐರಾವತ ಬಸ್‍ ಭಸ್ಮ: ಪ್ರಯಾಣಿಕರೆಲ್ಲಾ ಸೇಫ್

  ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಗಿಡ್ಡೋಬನಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಐರಾವತ ವೋಲ್ವೋ ಬಸ್ ಇಂದು ಬೆಳಿಗ್ಗೆ ಬೆಂಕಿಗೆ ಅಹುತಿಯಾಗಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‍ ನಲ್ಲಿದ್ದ 30 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ.  ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ನಡೆದಿದೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ. ಕ್ಷಣಾರ್ಧದಲ್ಲಿ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಇದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.