You cannot copy content of this page.
. . .

ಕೆಲಸಕ್ಕೆ ಹಾಜರಾಗಲ್ಲ; ಮನೆಯಿಂದಲೇ ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್

  ಸಂಬಳ ಹೆಚ್ಚಳ ಸೇರಿ 10 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಧರಣಿ ಮನೆಗಳಿಗೆ ಶಿಫ್ಟಾಗಿದೆ. ಅನಿರ್ಧಿಷ್ಟಾವಧಿ ಧರಣಿಗೆ ಪೊಲೀಸರು ಅನುಮತಿ ನೀಡದ ಕಾರಣ ನಾಳೆಯಿಂದ ಕೆಲಸಕ್ಕೆ ಹಾಜರಾಗದೇ ಮನೆಯಿಂದಲೇ ಪ್ರತಿಭಟನೆ ದಾಖಲಿಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ.

  ಫ್ರೀಡಂ ಪಾರ್ಕ್‍ ನಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ, ಪೊಲೀಸರು ಒಂದು ದಿನಕ್ಕಷ್ಟೇ ಅವಕಾಶ ನೀಡಿದ್ದರು. ಹೀಗಾಗಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕೂರಲು ತೀರ್ಮಾನಿಸಿದ್ದೇವೆ. ಬಾಕಿ ಇರುವ ವೇತನ ಪಾವತಿಯಾಗುವವರೆಗೂ ಯಾರೂ ಇನ್ನು ಮುಂದೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು. ಜೊತೆಗೆ ನಾಳೆ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದರು.

 

 

%d bloggers like this: