You cannot copy content of this page.
. . .

   ಹೈದರಾಬಾದ್‍ ಪಶುವೈದ್ಯೆಯ ಅತ್ಯಾಚಾರಿಗಳ ಎನ್‍ ಕೌಂಟರ್‍ ಸಂಬಂಧ ಬಿಜೆಪಿ ನಾಯಕಿ ಮನೇಕಾಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‍ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ಮನೇಕಾ ಗಾಂಧಿ, ಏನೇ ಆಗಿರಲಿ ಇದು ಅಪಾಯಕಾರಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಪ್ಪಚ್ಚು ರಂಜನ್‍, ಮೇನಕಾ ಗಾಂಧಿ ಸಂಬಂಧಿಕರಿಗೆ ಈ ರೀತಿ ಅಗಿದ್ದರೆ ನೋವು ಗೊತ್ತಾಗುತ್ತಿತ್ತು. ಯಾರಿಗೋ ಆಗಿರುವುದಕ್ಕೆ ಅವರಿಗೆ ನೋವು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಿದೆ. ಅತ್ಯಾಚಾರ ಆರೋಪಿಗಳೆಲ್ಲರನ್ನೂ ಇದೇ ರೀತಿ ಕೊಲ್ಲುವುದು ಸೂಕ್ತ ಎಂದು ಅಪ್ಪಚ್ಚುರಂಜನ್‍ ಅಭಿಪ್ರಾಯಪಟ್ಟಿದ್ದಾರೆ.

 

%d bloggers like this: