You cannot copy content of this page.
. . .

SANDALWOODನಲ್ಲಿ ‘I Am ಕಲ್ಕಿ’ ಅಂತಿದ್ದಾನೆ ಬಾಂಬರ್ ಆದಿತ್ಯ ರಾವ್..!

   ನಿನ್ನೆಯಷ್ಟೇ ಪೊಲೀಸರಿಗೆ ಶರಣಾಗಿದ್ದ ಬಾಂಬರ್‍ ಆದಿತ್ಯರಾವ್‍ ಕೃತ್ಯ ಈಗ ಬೆಳ್ಳಿತೆರೆಯ ಮೇಲೆ ಹಣ ಮಾಡೋಕೆ ಹೊರಟಿದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಆದಿತ್ಯ ರಾವ್ ದುಷ್ಕತ್ಯವನ್ನು ತೆರೆಗೆ ತರುವ ಪ್ರಯತ್ನಗಳು ಆಗಲೇ ಆರಂಭವಾಗಿವೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಮಂಗಳೂರು ಬಾಂಬ್‍ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಜೋಗಿ ಪ್ರೇಮ್‌ ಈ ಸಿನಿಮಾದ ಹೀರೋ ಎಂಬ ಮಾತುಗಳು ಕೇಳಿಬರುತ್ತಿವೆ.      

   ಈ ಸಿನಿಮಾಕ್ಕೆ I Am ಕಲ್ಕಿ ಎಂದು ಹೆಸರಿಡಲಾಗಿದೆ. ಏಕಕಾಲದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತದಂತೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಹೊಣೆ ಚಕ್ರವರ್ತಿ ಚಂದ್ರಚೂಡ್ ಹೊತ್ತಿದ್ದಾರೆ. ಚಿತ್ರಕಥೆಯಲ್ಲಿ ಒಂದು ಕ್ರೈಂ ಪಾತ್ರ ಬರುತ್ತದೆ. ಅದಕ್ಕಾಗಿ ಸಾಕಷ್ಟು ಯೋಚನೆ ಮಾಡಿದ್ದೆವು. ಯಾವುದೂ ಸರಿ ಹೊಂದುತ್ತಿರಲಿಲ್ಲ. ಆ ಸಂದರ್ಭಕ್ಕೆ ಸರಿಯಾಗಿ ಆದಿತ್ಯ ರಾವ್ ಘಟನೆ ನಡೆಯಿತು. ಕಥೆಗೆ ಹೊಂದಿಕೆ ಆಗಲಿದೆ ಎಂಬ ಕಾರಣಕ್ಕೆ ಇದನ್ನೇ ಬಳಸಿದ್ದೇವೆ. ಮಂಗಳೂರು ಬಾಂಬ್ ಎಪಿಸೋಡ್ ಸಿನಿಮಾದಲ್ಲಿ ಇರಲಿದೆ ಎಂದು ಚಂದ್ರಚೂಡ್‍ ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

 

%d bloggers like this: