You cannot copy content of this page.
. . .

ದೆಹಲಿ ಜನರಿಗೆ 10 ಭರವಸೆಯ ‘ಗ್ಯಾರಂಟಿ ಕಾರ್ಡ್’ ನೀಡಿದ ಸಿಎಂ ಕೇಜ್ರಿವಾಲ್

 ದಿನದ 24 ಗಂಟೆಯೂ ಉಚಿತ ಕರೆಂಟ್‍, ಉಚಿತ ಆರೋಗ್ಯ ಸೌಲಭ್ಯ, ಯಮುನಾ ನದಿ ಸ್ವಚ್ಛತೆ, ಮುಂದಿನ ಐದು ವರ್ಷದಲ್ಲಿ ದೆಹಲಿ ವಾಯು ಮಾಲಿನ್ಯ ಕಡಿಮೆಗೊಳಿಸುವುದು ಸೇರಿದಂತೆ 10 ಭರವಸೆಗಳುಳ್ಳ ‘ಗ್ಯಾರಂಟಿ ಕಾರ್ಡ್‍ನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ ಬಿಡುಗಡೆ ಮಾಡಿದ್ದಾರೆ.

 ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಭರವಸೆ ರೂಪದಲ್ಲಿ ವಿಶೇಷ ಎಂಬಂತೆ ಈ ಕಾರ್ಡ್‍ನ್ನು ನೀಡಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಗೂ ದಿನದ 24 ಗಂಟೆ ನೀರು ಸರಬರಾಜು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸವಾರಿ, ನಗರದ ಮಹಿಳೆಯರ ಸುರಕ್ಷತೆಗಾಗಿ ‘ಮೊಹಲ್ಲಾ ಮಾರ್ಷಲ್’ ಗಳನ್ನು ನಿಯೋಜಿಸುವುದು, ಎರಡು ಕೋಟಿ ಸಸಿಗಳನ್ನು ನೆಡುವುದು ಸೇರಿದಂತೆ ಅನೇಕ ಭರವಸೆಗಳನ್ನು ನೀಡಲಾಗಿದೆ.

 ಹೊಸದಿಲ್ಲಿಯಲ್ಲಿ ಭಾನುವಾರ ‘ಗ್ಯಾರಂಟಿ ಕಾರ್ಡ್’ ಬಿಡುಗಡೆ ಮಾಡಿ ಮಾತನಾಡಿರುವ ಅರವಿಂದ ಕೇಜ್ರಿವಾಲ್, ‘ನಾನು ದೆಹಲಿ ಜನರಿಗೆ 10 ಗ್ಯಾರಂಟಿ ನೀಡುತ್ತಿದ್ದೇನೆ. ಇದು ಪ್ರಣಾಳಿಕೆ ಅಲ್ಲ. ನಾವು ಇನ್ನೂ 7 ರಿಂದ 10 ದಿನಗಳಲ್ಲಿ ಸಮಗ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. ಈ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಇತರರಿಗೆ ಸಹಾಯಕಾರಿಯಾಗುವ ಅನೇಕ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, 11,000 ನೂತನ ಬಸ್ಸುಗಳನ್ನು ರಸ್ತೆಗಿಳಿಸಲಾಗುವುದು, ಮೆಟ್ರೋ ನೆಟ್​ವರ್ಕ್​ ಉದ್ದವನ್ನು 500 ಕಿಮೀ ಹೆಚ್ಚಿಸಲಾಗುವುದು’ ಎಂದು ತಿಳಿಸಿದ್ದಾರೆ.

 

%d bloggers like this: