You cannot copy content of this page.
. . .

 ಹನಗೋಡು: ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ ಬಾಲಕನೊಬ್ಬ ಸ್ನೇಹಿತರೊಂದಿಗೆ ಕೆರೆಯಲ್ಲಿ ಆಟವಾಡಲು ತೆರಳಿದ್ದ ವೇಳೆ ಹಳ್ಳದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಹೆಮ್ಮಿಗೆ ಕಾಲೋನಿಯಲ್ಲಿ ನಡೆದಿದೆ.

 ಹನಗೋಡು ಹೋಬಳಿಯ ಪಂಚವಳ್ಳಿ ಗ್ರಾಮದ ಪರಮೇಶ್-ರೇಷ್ಮಾ ದಂಪತಿ ಪುತ್ರ, ಪಂಚವಳ್ಳಿ ಶಾಲೆಯ ೩ನೇ ತರಗತಿ ವಿದ್ಯಾರ್ಥಿ ಅಖಿಲ್(೯) ಸಾವನ್ನಪ್ಪಿದ ಬಾಲಕ.

 ಅಖಿಲ್ ಸಂಕ್ರಾಂತಿ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದ. ಶನಿವಾರ ಮದ್ಯಾಹ್ನ ಗ್ರಾಮದ ಹುಡುಗರೊಂದಿಗೆ ಪಕ್ಕದ ಕೆರೆಯಲ್ಲಿ ಆಟವಾಡಲು ತೆರಳಿದ್ದ. ಕೆರೆಯಲ್ಲಿ ನೀರು ತುಂಬಿದ್ದರಿಂದ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಈತನ ಜೊತೆಯಲ್ಲಿ ತೆರಳಿದ್ದ ಸ್ನೇಹಿತರು ಗ್ರಾಮಕ್ಕೆ ಬಂದು ವಿಷಯ ತಿಳಿಸಿದ ಮೇರೆಗೆ ತಕ್ಷಣವೇ ತೆರಳಿ ಕೆರೆಯಲ್ಲಿ ಶೋಧ ನಡೆಸಿ, ಶವವನ್ನು ಮೇಲೆತ್ತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

%d bloggers like this: