You cannot copy content of this page.
. . .

11 ತಿಂಗಳಲ್ಲಿ 90 ರೇಪ್‍..!; ಉನ್ನಾವೋ ಅತ್ಯಾಚಾರ ರಾಜಧಾನಿಯಾಗಿದೆಯಾ..?

    ಶಾಸಕನಿಂದ ಅತ್ಯಾಚಾರಕ್ಕೊಳಗಾಗಿ, ಹಲವಾರು ಬಾರಿ ದಾಳಿಗೊಳಗಾಗಿ ಕೊನೆಗೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾಳೆ. ಹಾಗಂತ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಇದೊಂದೇ ಕೃತ್ಯ ನಡೆದಿಲ್ಲ. ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಅದರ ಪ್ರಮಾಣ ನೋಡಿದರೆ ಉನ್ನಾವೋ ಜಿಲ್ಲೆ ಅತ್ಯಾಚಾರಗಳ ರಾಜಧಾನಿ ಎಂಬ ಹಣೆಪಟ್ಟಿಯನ್ನು ಕಟ್ಟಬಹುದು. ಯಾಕಂದ್ರೆ ಕಳೆದ 11 ತಿಂಗಳಲ್ಲಿ ಅಂದರೆ ಜನವರಿ 2019 ರಿಂದ ನವೆಂಬರ್‍ ಅಂತ್ಯದವರೆಗೆ ಉನ್ನಾವೋ ಜಿಲ್ಲೆಯಲ್ಲಿ ಬರೋಬ್ಬರಿ 90 ಅತ್ಯಾಚಾರಗಳು ನಡೆದಿವೆ. 185ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

  ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮೇಲೆ ಮೊದಲು ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವವರು ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್‍ ಸಿಂಗ್‍ ಸೆಂಗಾರ್‍.. ಇಲ್ಲಿ ಯಾವುದೇ ಅತ್ಯಾಚಾರ ಪ್ರಕರಣವಿರಲಿ ಅದರ ಹಿಂದೆ ರಾಜಕಾರಣಿಗಳು ಕಾಣಿಸುತ್ತಾರೆ. ಅತ್ಯಾಚಾರಿಗಳಿಗೆ ರಾಜಕಾರಣಿಗಳು, ಜನಪ್ರತಿನಿಧಿಗಳ ಕೃಪಾಕಟಾಕ್ಷವಿದೆ. ಈ ಕಾರಣಕ್ಕೆ ಆರೋಪಿಗಳ ಬಂಧನವಾದರೂ ಕೆಲವೇ ದಿನಗಳಲ್ಲಿ ಹೊರಬರುತ್ತಿದ್ದಾರೆ. ಕೇಸು ದಾಖಲಿಸಿದವರಿಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇನ್ನು ಕೆಲವರು ಅತ್ಯಾಚಾರ ಮಾಡಿದ ಮೇಲೆ ಪರಾರಿಯಾಗುತ್ತಿದ್ದಾರೆ. ಅವರನ್ನು ಹಿಡಿಯೋ ಪ್ರಯತ್ನಗಳೂ ಸರಿಯಾಗಿ ನಡೆಯುತ್ತಿಲ್ಲ.

 

%d bloggers like this: