You cannot copy content of this page.
. . .

83 ಪ್ರಯಾಣಿಕರಿದ್ದ ವಿಮಾನ ಪತನ

 83 ಪ್ರಯಾಣಿಕರಿದ್ದ ಅರಿಯಾನ ಏರ್‌ಲೈನ್ಸ್ ವಿಮಾನ ಅಫ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಇಂದು ಮಧ್ಯಾಹ್ನ ಪತನವಾಗಿದೆ. ಬೋಯಿಂಗ್​ ವಿಮಾನವು ಅರಿಯಾನ ಆಫ್ಘಾನ್​ ಏರ್​ಲೈನ್​ಗೆ ಸೇರಿದ್ದು ಎಂದು ತಿಳಿದುಬಂದಿದೆ. ಘಜನಿ ಪ್ರಾಂತ್ಯದ ದೇಹ್​ ಏಕ್​ ಜಿಲ್ಲೆಯ ಸಾಡೋ ಖೇಲ್​ ಏರಿಯಾದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತನವಾಗಿದೆ ಗೊತ್ತಾಗಿದೆ.

  ಈ ವಿಮಾನವು ಹೀರಟ್‌ನಿಂದ ಘಜನಿಗೆ ತೆರಳುತ್ತಿತ್ತು. ತಾಲಿಬಾನ್ ಆಡಳಿತವಿರುವ ಪ್ರದೇಶದಲ್ಲಿ ಪತನವಾಗಿದೆ. ಪತನದಿಂದ ಯಾವುದೇ ಹಾನಿಯಾಗಿಲ್ಲ, ಪ್ರಾಣಾಪಾಯವೂ ಆಗಿಲ್ಲ ಎಂದು ವೆಬ್‌ಸೈಟ್‌ ಒಂದರಲ್ಲಿ ಬರೆದುಕೊಂಡಿದ್ದಾರೆ.

  2005ರಲ್ಲಿ ಕಾಬೂಲ್‌ನಿಂದ ಹೀರಟ್‌ಗೆ ಆಗಮಿಸುತ್ತಿದ್ದ ವಿಮಾನ ಮಂಜು ಕವಿದ ವಾತಾವರಣದಿಂದಾಗಿ ಪರ್ವತವೊಂದಕ್ಕೆ ಅಪ್ಪಳಿಸಿತ್ತು. 2013ರಲ್ಲಿ ಅಮೆರಿಕದ ಬೋಯಿಂಗ್ 747 ಕಾರ್ಗೊ ಜೆಟ್ ಬಾಗ್ರಮ್ ಏರ್‌ಬೇಸ್ ಬಳಿ ಪತನವಾಗಿತ್ತು. ಅದು ಕಾಬೂಲ್‌ನಿಂದ ದುಬೈಗೆ ಹೊರಟಿದ್ದ ವಿಮಾನವಾಗಿತ್ತು. ಅದರಲ್ಲಿ 7 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಆದರೆ ಪ್ರಾಣಹಾನಿಯ ಬಗ್ಗೆ ಇನ್ನೂ ವರದಿಯಾಗಿಲ್ಲ.

 

%d bloggers like this: