You cannot copy content of this page.
. . .

8 ವರ್ಷಗಳಿಂದ ಬಹಿಷ್ಕಾರ; ತಾಲ್ಲೂಕು ಕಚೇರಿ ಮುಂದೆ ಧರಣಿ

  ಗ್ರಾಮಸ್ಥರು ಹಾಕಿದ್ದ ಬಹಿಷ್ಕಾರ ವಿವಾದ  8 ವರ್ಷಗಳಾದರೂ ಬಗೆಹರಿಯದ ಕಾರಣ  ಕುಟುಂಬವೊಂದರ ಸದಸ್ಯರು ನಂಜನಗೂಡು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.
  ತಾಲ್ಲೂಕಿನ ಹೊಸಕೋಟೆ ಗ್ರಾಮದ ಉಪ್ಪಾರ ಸಮುದಾಯದ ತಮ್ಮ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ಧರಣಿ ನಿರತ ರೇವಮ್ಮ ಆರೋಪಿಸಿದ್ದಾರೆ. ತಮಗೆ ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದ ಹಕ್ಕುಪತ್ರಗಳನ್ನು ಗ್ರಾಮದ ಮುಖಂಡರೇ ಇಟ್ಟುಕೊಂಡ ವಿಚಾರವಾಗಿ ಗ್ರಾಮದಲ್ಲಿ ತಮಗೆ ಬಹಿಷ್ಕಾರ ಹಾಕಲಾಗಿದೆ. 8 ವರ್ಷಗಳಾದರೂ ನಿವೇಶನವೂ ಇಲ್ಲ, ಬಹಿಷ್ಕಾರವೂ ರದ್ದಾಗಿಲ್ಲ ಎಂದು ರೇವಮ್ಮ ಆರೋಪಿಸಿದ್ದಾರೆ.
 2013 ರಲ್ಲೇ ಅಂದಿನ ತಹಸಿಲ್ದಾರ್ ಅರುಣ ಕುಮಾರ್ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ಪಂಚಾಯಿತಿ ನಡೆಸಿದ್ದರು. ಈ ವೇಳೆ ಬಹಿಷ್ಕಾರ ರದ್ದಾಗಿದೆ, ನಿವೇಶನ ಹಿಂತಿರುಗಿಸಲಾಗುತ್ತದೆ ಎಂದು ಘೋಷಿಸಿದ್ದರು. ಆದರೆ ಇದುವರೆಗೂ  ಬೀದಿಯ ಜನ ತಮಗೆ ಹಾಕಿದ ಬಹಿಷ್ಕಾರ ವಾಪಸ್ ಪಡೆದಿಲ್ಲ. ಬಹಿಷ್ಕಾರ ಹಿಂಪಡೆದು ನಮಗೆ ಮಂಜೂರಾದ ನಿವೇಶನ ಹಿಂತಿರುಗಿಸಬೇಕು ಎಂದು ಆಗ್ರಹಿಸಲಾಯಿತು.

 

Leave a Reply

 

%d bloggers like this: