You cannot copy content of this page.
. . .

Day: February 14, 2020

ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು

 ಹನೂರು: ತಾಲ್ಲೂಕಿನ ಶಿರಗೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಬಗ್ಗೆ ಸಂಶಯ ವ್ಯಕ್ತವಾಗಿದೆ.  ಶಿರಗೋಡು ಗ್ರಾಮದ ಬಾಲಾಜಿ ಹಾಗೂ ಮಂಜುಳಾ ದಂಪತಿಯ ಪುತ್ರಿಯರಾದ ಲಕ್ಷ್ಮೀ (6) ಹಾಗೂ ಕೀರ್ತನಾ (11) ಮೃತ ದುರ್ದೈವಿಗಳು. ದಂಪತಿಗೆ ನಾಲ್ವರು ಪುತ್ರಿಯರು, ಒರ್ವ ಪುತ್ರ ಇದ್ದನು. ಇವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದೆ ಇವರೆಲ್ಲರೂ ಗ್ರಾಮಕ್ಕೆ ಆಗಮಿಸಿ ಇಲ್ಲಿಯೇ ನೆಲೆಸಿದ್ದರು.  ಗುರುವಾರ ರಾತ್ರಿ ಬಾಲಾಜಿಯ ಅಣ್ಣನ ಮನೆಯಲ್ಲಿ ಕೋಳಿ ಸಾಂಬಾರ್ ಮಾಡಲಾಗಿತ್ತು. […]

ಪೊಲೀಸರ ಮೇಲೆ ಹಲ್ಲೆ; ವ್ಯಕ್ತಿ ಅರೆಸ್ಟ್

  ಬಾರ್‌ನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದಾಗ ಬುದ್ಧಿ ಹೇಳಲು ಬಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.   ಹುಣಸೂರು ನಗರದ ನಿವಾಸಿ ಮಹದೇವ್ ಕುಡಿದು ಹಲ್ಲೆ ಮಾಡಿ ಬಂಧನಕ್ಕೊಳಗಾದ ವ್ಯಕ್ತಿ. ಈತ ಹುಣಸೂರಿನ ಮಲ್ಲಿಕಾರ್ಜುನ ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ಕ್ಯಾಶಿಯರ್‌ನೊಂದಿಗೆ ಜಗಳವಾಡಿ, ಹಲ್ಲೆ ಮಾಡಿದ್ದ. ಬಾರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್‌ಐ ತಮ್ಮೇಗೌಡ ಬಾರ್ ಬಳಿ ತೆರಳಿ ಆರೋಪಿ ಮಹದೇವ್‍ ಗೆ ಬುದ್ಧಿ […]

ಟಿಪ್ಪು ಅತ್ಯಾಚಾರ ಮಾಡಿರುವುದು ಸತ್ಯ: ಸಿ.ಟಿ.ರವಿ

  ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿರುವುದು ಎಷ್ಟು ಸತ್ಯವೋ, ಟಿಪ್ಪು ಮತ್ತು ಆತನ ಸೈನಿಕರು ಮಲಬಾರಿಗಳ ಮೇಲೆ ಅತ್ಯಾಚಾರ ಮಾಡಿರುವುದು ಕೂಡಾ ಅಷ್ಟೇ ಸತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವ ಉದ್ಘಾಟನೆಗೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಎರಡೂ ಸತ್ಯಗಳನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಒಂದನ್ನು ಹೇಳಿ ಮತ್ತೊಂದನ್ನು ಮರೆಮಾಚುವುದು ಸರಿಯಲ್ಲ ಎಂದರು.   ಟಿಪ್ಪು ಒಬ್ಬ ಮತಾಂಧ, ಕೊಡವರ […]

8 ವರ್ಷಗಳಿಂದ ಬಹಿಷ್ಕಾರ; ತಾಲ್ಲೂಕು ಕಚೇರಿ ಮುಂದೆ ಧರಣಿ

  ಗ್ರಾಮಸ್ಥರು ಹಾಕಿದ್ದ ಬಹಿಷ್ಕಾರ ವಿವಾದ  8 ವರ್ಷಗಳಾದರೂ ಬಗೆಹರಿಯದ ಕಾರಣ  ಕುಟುಂಬವೊಂದರ ಸದಸ್ಯರು ನಂಜನಗೂಡು ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.  ತಾಲ್ಲೂಕಿನ ಹೊಸಕೋಟೆ ಗ್ರಾಮದ ಉಪ್ಪಾರ ಸಮುದಾಯದ ತಮ್ಮ ಕುಟುಂಬಕ್ಕೆ ಗ್ರಾಮದಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ಧರಣಿ ನಿರತ ರೇವಮ್ಮ ಆರೋಪಿಸಿದ್ದಾರೆ. ತಮಗೆ ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದ ಹಕ್ಕುಪತ್ರಗಳನ್ನು ಗ್ರಾಮದ ಮುಖಂಡರೇ ಇಟ್ಟುಕೊಂಡ ವಿಚಾರವಾಗಿ ಗ್ರಾಮದಲ್ಲಿ ತಮಗೆ ಬಹಿಷ್ಕಾರ ಹಾಕಲಾಗಿದೆ. 8 ವರ್ಷಗಳಾದರೂ ನಿವೇಶನವೂ ಇಲ್ಲ, ಬಹಿಷ್ಕಾರವೂ ರದ್ದಾಗಿಲ್ಲ ಎಂದು ರೇವಮ್ಮ ಆರೋಪಿಸಿದ್ದಾರೆ. 2013 ರಲ್ಲೇ […]

ಬೈಲಕುಪ್ಪೆಯಲ್ಲಿ ಕರುವಿನ ಮೇಲೆ ಬೀದಿ ನಾಯಿಗಳ ದಾಳಿ

  ಬೀದಿನಾಯಿಗಳು ಕರುವಿನ ಮೇಲೆ ದಾಳಿ ನಡೆಸಿದ ಪರಿಣಾಮ ಕರುವಿಗೆ ತೀವ್ರ ಗಾಯಗಳಾಗಿರುವ ಘಟನೆ ಮೈಸೂರು ತಾಲ್ಲೂಕು ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆ ಬದಿಯಲ್ಲಿ ನಡೆದಿದೆ.ಗಾಯಗೊಂಡಿರುವ ಕರು 1ನೇ ಕ್ಯಾಂಪ್ ರಸ್ತೆಯ ತಮ್ಮೇಗೌಡ ಅವರ ಮಗ ಕೃಷ್ಣ ಎಂಬವರಿಗೆ ಸೇರಿದ್ದಾಗಿದೆ. ಕೃಷ್ಣ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಬೀದಿನಾಯಿಗಳು ಕರುವಿನ ಮೇಲೆ ದಾಳಿ ಮಾಡಿವೆ.   ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಸಂಚರಿಸುತ್ತಿದ್ದು, ನಾಯಿಗಳ ಹಾವಳಿಯಿಂದ ಹೆದರುವಂತಾಗಿದೆ. ಬೈಲಕುಪ್ಪೆ ಗ್ರಾಪಂನವರು ಕೂಡಲೇ […]

ಪ್ರೇಮಿಗಳ ದಿನವೇ ಪ್ರೇಮಿಗಳ ಆತ್ಮಹತ್ಯೆ

 ಮಡಿಕೇರಿ: ಪ್ರೇಮಿಗಳ ದಿನವೇ (ಶುಕ್ರವಾರ) ಹಾರಂಗಿ ಜಲಾಶಯ ಬಳಿ ಹಿನ್ನೀರುಗೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಹುಣಸೂರಿನ ಸಚಿನ್, ಸಿಂಧು ಆತ್ಮಹತ್ಯೆಗೆ ಶರಣಾದ ದುದೈರ್ವಿ ಪ್ರೇಮಿಗಳು. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಪ್ರೇಮಿಗಳ ದಿನವಾದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಸಿಂಧುಗೆ ಭಾನುವಾರ ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಾರಂಗಿಗೆ ಬೆಳಿಗ್ಗೆ ಬೈಕ್‌ನಲ್ಲಿ ಆಗಮಿಸಿದ ಜೋಡಿ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ನಿರ್ಭಯಾ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಅಸ್ವಸ್ಥ

 ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅರ್ಜಿಯ ವಿಚಾರಣೆ ವೇಳೆ ಮಹಿಳಾ ನ್ಯಾಯಮೂರ್ತಿ ಕುಸಿದುಬಿದ್ದ ಘಟನೆ ನಡೆದಿದೆ. ಸುಪ್ರೀಂಕೋರ್ಟ್ ಮಹಿಳಾ ನ್ಯಾಯಮೂರ್ತಿ ಆರ್.ಭಾನುಮತಿ ಅವರಿಗೆ ವಿಚಾರಣೆ ವೇಳೆ ಸ್ವಲ್ಪ ಹೊತ್ತು ಪ್ರಜ್ಞೆ ತಪ್ಪಿದಂತಾಗಿತ್ತು. ಬಳಿಕ ತಕ್ಷಣವೇ ಸಾವರಿಸಿಕೊಂಡ ಅವರನ್ನು ಗಾಲಿ ಕುರ್ಚಿಯ ಮೂಲಕ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಯಿತು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.   ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ನೀಡಬೇಕೆಂದು ಕೆಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ನಾಲ್ವರು ಅಪರಾಧಿಗಳಲ್ಲಿ […]

ಬಹುರೂಪಿ ಗೋಷ್ಠಿ ಅಧ್ಯಕ್ಷತೆ ವಹಿಸಲ್ಲ: ಪ.ಮಲ್ಲೇಶ್

 ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ಬಹುರೂಪಿ ನಾಟಕೋತ್ಸವದಲ್ಲಿ ಫೆ.16ರಿಂದ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸದಿರಲು ಸಮಾಜವಾದಿ ಪ.ಮಲ್ಲೇಶ್‍ ತೀರ್ಮಾನಿಸಿದ್ದಾರೆ.  ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆಯುವ ‘ಗಾಂಧಿ ಪಥ’ದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಲು ಪ.ಮಲ್ಲೇಶ್‍ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅಧ್ಯಕ್ಷತೆ ವಹಿಸಲು ಪ.ಮಲ್ಲೇಶ್‍ ನಿರಾಕರಿಸಿದ್ದಾರೆ. ಈ ಸಂಬಂಧ ರಂಗಾಯಣ ನಿರ್ದೇಶಕರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ. ತಮ್ಮ ನಿಲುವಿಗೆ ಕಾರಣವನ್ನೂ ನೀಡಿದ್ದಾರೆ. ಅದು ಹೀಗಿದೆ.. ಮೈಸೂರು ರಂಗಾಯಣ ನಿರ್ದೇಶಕರಿಗೆ..  ಗಾಂಧಿ ಪಥದ ಮೊದಲ ಗೋಷ್ಠಿಯ ಅಧ್ಯಕ್ಷ ಸ್ಥಾನ ವಹಿಸಲು […]

ಅಡುಗೆ ಅನಿಲ ದರ ಹೆಚ್ಚಳ ಹಿನ್ನೆಲೆ; ಮಹಿಳಾ ಕಾಂಗ್ರೆಸ್ ಪ್ರತಿಭಟನೆ

 ಪದೇ, ಪದೇ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟದಲ್ಲಿ ದೂಡುತ್ತಿದೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.  ಶುಕ್ರವಾರ ಬೆಳಿಗ್ಗೆ ನಗರದ ಗಾಂಧಿ ವೃತ್ತದ ಮುಂಭಾಗ ಜಮಾವಣೆಗೊಂಡ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಅಡುಗೆ ಅನಿಲ ಬೆಲೆ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ, ಕೇಂದ್ರ ಸರ್ಕಾರ ಜನರಿಗೆ […]

ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ದುಷ್ಕರ್ಮಿಗಳು ಪರಾರಿ

 ಕಾಲೇಜು ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿರುವ ಅಮಾನವೀಯ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.  ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಕಾಲೇಜು ಮುಗಿಸಿ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿಯನ್ನು ಗ್ರಾಮಕ್ಕೆ ಬಿಡುವುದಾಗಿ ಹೇಳಿ ದುಷ್ಕರ್ಮಿಗಳು ಕಾರು ಹತ್ತಿಸಿಕೊಂಡಿದ್ದಾರೆ. ಮರ್ಮಾಂಗ ಕತ್ತರಿಸಿ ಮಧ್ಯೆದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.