You cannot copy content of this page.
. . .

Day: February 13, 2020

ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ; ಹೈಕೋರ್ಟ್

 ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಬೆಂಗಳೂರು ನಗರದಲ್ಲಿ ಡಿಸೆಂಬರ್‌ 18ರಿಂದ ಮೂರು ದಿನ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ ಎಂದು ಹೈಕೋರ್ಟ್‌ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.  ಕಾಂಗ್ರೆಸ್‌ ಸಂಸದ ರಾಜೀವ್‌ಗೌಡ ಮತ್ತು ಶಾಸಕಿ ಸೌಮ್ಯಾರೆಡ್ಡಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ವಾದ – ಪ್ರತಿವಾದ ಆಲಿಸಿದ ಬಳಿಕ ಸಿಜೆ ಎ.ಎಸ್‌.ಓಕಾ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು. […]

ಕ್ರಿಮಿನಲ್ ಗಳಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಕಾರಣ ಕೊಡಿ..

  ಅಪರಾಧ ಪ್ರಕರಣಗಳಿರುವ ಅಭ್ಯರ್ಥಿಗಳನ್ನು ಯಾಕೆ ಆಯ್ಕೆ ಮಾಡಿದ್ದೀರಿ ಎಂಬುದಕ್ಕೆ ಕಾರಣ ನೀಡಿ ಎಂದು ಸುಪ್ರೀಂಕೋರ್ಟ್ ರಾಜಕೀಯ ಪಕ್ಷಗಳಿಗೆ ತಾಕೀತು ಮಾಡಿದೆ. ಕ್ರಿಮಿನಲ್‍ ಕೇಸ್‍ ಹೊಂದಿರುವ ವ್ಯಕ್ತಿಯನ್ನು ನಿಮ್ಮ ಪಕ್ಷದ  ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಗೆಲ್ಲುವ ಅಭ್ಯರ್ಥಿ ಎಂಬುದನ್ನು ಬಿಟ್ಟು ಬೇರೆ ಯಾವ ಅಂಶ ಕಾರಣವಾಗಿದೆ ಎಂಬುದಕ್ಕೆ ವಿವರಣೆ ಕೊಡಿ ಎಂದು ಕೋರ್ಟ್‍ ಕೇಳಿದೆ.   ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಪರಾಧ  ದಾಖಲೆಗಳನ್ನು 48 ಗಂಟೆಯೊಳಗೆ ಪಕ್ಷದ ವೆಬ್‌ಸೈಟ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎಂದು […]

ಮೈಸೂರಿನಲ್ಲಿ ಇಬ್ಬರು ನಕಲಿ ವೈದ್ಯರು ಪೊಲೀಸರ ವಶಕ್ಕೆ

ಮೈಸೂರು: ವೈದ್ಯರೆಂದು ಹೇಳಿಕೊಂಡು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್, ಆರೋಪಿಗಳನ್ನು ಪೊಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಹುಬ್ಬಳಿ ಮೂಲದ ವಿಜಯ್ ಕುಮಾರ್ ಹಾಗೂ ಧಾರವಾಡದ ದೇವೇಂದ್ರ ಎಂಬವರೇ ಬಂಧಿತ ನಕಲಿ ವೈದ್ಯರು. ಇವರು ಕಳೆದ ಕೆಲ ದಿನಗಳಿಂದ ನಕಲಿ ದಾಖಲಾತಿಗಳ ಮೂಲಕ ಇಲವಾಲದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಇಲವಾಲದಲ್ಲಿ ದೇವೇಂದ್ರ ಎಂಬಾತ ಚಾಮುಂಡೇಶ್ವರಿ ಕ್ಲಿನಿಕ್ ನಡೆಸುತ್ತಿದ್ದನು. ಸಮೀಪದಲ್ಲಿಯೇ ದೇವೇಂದ್ರ ದಿವ್ಯಾಶ್ರೀ ಹೆಲ್ತ್ ಕೇರ್ ಎಂಬ ಕ್ಲಿನಿಕ್ […]

ಇನ್ಫಿ ಮೂರ್ತಿ ಅಳಿಯ ಈಗ ಇಂಗ್ಲೆಂಡ್‍ ಹಣಕಾಸು ಸಚಿವ

   ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (39) ಅವರನ್ನು ಇಂಗ್ಲೆಂಡ್ ಹಣಕಾಸು ಸಚಿವರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಸಜ್ಜಿದ್‍ ಜಾವೆದ್‍ ಎಂಬುವವರು ಇಂಗ್ಲೆಂಡ್‍ ಹಣಕಾಸು ಸಚಿವರಾಗಿದ್ದರು. ಅವರು ರಾಜೀನಾಮೆ ನೀಡಿದ್ದರಿಂದಾಗಿ ಆ ಸ್ಥಾನಕ್ಕೆ ನಾರಾಯಣ ಮೂರ್ತಿಯವರ ಅಲಿಯನನ್ನು ನೇಮಕ ಮಾಡಲಾಗಿದೆ.   ಇಂಗ್ಲೆಂಡ್‍ ನಲ್ಲಿ ಮಿನಿಸ್ಟರ್‍ ಬದಲಾಗಿ ಚಾನ್ಸಲರ್‍ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಪಡೆದ ಬಳಿಕ ಪ್ರಧಾನಿ ಬೋರಿಸ್ ಜಾನ್ಸನ್​ ಅವರು […]

ಸರ್ದಾರ್ ಪಟೇಲ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನೆಹರೂ ಬಯಸಿರಲಿಲ್ಲವೇ? ಗುಹಾ, ಸಚಿವ ಜೈಶಂಕರ್ ಟ್ವಿಟ್ ಸಮರ

 ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ 1947ರಲ್ಲಿ ತನ್ನ ಮೊದಲ ಸಂಪುಟದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರೆ ಅಥವಾ ಇಲ್ಲವೇ ಎಂಬ ವಿಚಾರ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಇತಿಹಾರಕಾರ ರಾಮಚಂದ್ರ ಗುಹಾ ಅವರ ನಡುವಿನ ಟ್ವಿಟರ್‍ ಸಮರಕ್ಕೆ ಕಾರಣವಾಗಿದೆ.  ವಿದೇಶಾಂಗ ಸಚಿವ ಜೈಶಂಕರ್ ಅವರು ಇತ್ತೀಚೆಗೆ ಮಾಜಿ ಸಚಿವ ವಿ.ಪಿ.ಮೆನನ್ ಅವರ ಪುಸ್ತಕವೊಂದನ್ನು ಉಲ್ಲೇಖಿಸಿ, ‘ಭಾರತದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್‍ ನೆಹರೂ 1947ರಲ್ಲಿ ತನ್ನ ಮೊದಲ ಸಂಪುಟದಲ್ಲಿ ಸರ್ದಾರ್ ವಲ್ಲಭಬಾಯಿ […]

ಎರಡು ತಲೆ ಹಾವು ಮಾರಾಟಕ್ಕೆ ಯತ್ನ; ಐವರ ಬಂಧನ

 ಗೋಣಿಕೊಪ್ಪ: ಕಪ್ಪು ಬಣ್ಣದ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವಿರಾಜಪೇಟೆ ತಾಲ್ಲೂಕು ಸಿಐಡಿ ಅರಣ್ಯ ಸಂಚಾರಿ ಪೊಲೀಸ್ ದಳ ಬಂದಿಸಿದ್ದಾರೆ.  ಆಂಧ್ರ ಮೂಲದ ನಿವಾಸಿಗಳಾದ ಮುಲ್ಲಾಮೆಹಬೂಬ್‌ವಲೀ (57), ಶೇಖ್‌ಮುಲ್ಲಾಚಾಂದ್‌ಪಾಶ (45), ಎಸ್.ಫಯಾಜ್ (27), ಬೋಯಿರಂಗಸ್ವಾಮಿ (45), ಶೇಕ್‌ಪೆದ್ದ ಮೆಹಬೂಬುಪಾಷ (29) ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.  ಆಂದ್ರಪ್ರದೇಶದಿಂದ ಕೇರಳಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ಆರೋಪಿಗಳನ್ನು ತಿತಿಮತಿ ಮುಖ್ಯ […]

ಅಗತ್ಯ ಸೇವೆಗಳ ವ್ಯಾಪ್ತಿಗೆ ಮಿನರಲ್‍ ವಾಟರ್‍; ಬಾಟಲ್‍ ಗೆ 13 ರೂಪಾಯಿ

  ಕೇರಳ ಸರ್ಕಾರ ಕುಡಿಯುವ ನೀರಿನ ಬಾಟಲ್‌ಗಳನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ಸೇರಿಸಿದೆ.  ಜೊತೆಗೆ ಮಿನರಲ್ ವಾಟರ್ ಬಾಟಲ್‍ ಗಳ ದರದಲ್ಲಿ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇನ್ನ ಮೇಲೆ ಕೇರಳದಲ್ಲಿ ಲೀಟರ್ ನೀರಿನ ಬಾಟೆಲ್‍ 13 ರೂಪಾಯಿಗೆ ಸಿಗಲಿದೆ.    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಂಕಿತ ಹಾಕಿದ್ದಾರೆ. ನೀರಿನ ಬಾಟಲ್ ಮೇಲೆ ದರವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಸೂಚನೆ ನೀಡಲಾಗಿದೆ.   ಕೇರಳ ರಾಜ್ಯದಲ್ಲಿ […]

ಬೆಂಕಿ ಅವಘಡ; ಒಂದು ಸಾವು, ಇಬ್ಬರ ಸ್ಥಿತಿ ಗಂಭೀರ

 ಮೈಸೂರು ಜಿಲ್ಲೆಯ ಕೆ.ಆರ್.ನಗರದ ಈಶ್ವರನಗರ ಬಡಾವಣೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.  ಘಟನೆಯಲ್ಲಿ ರೇಣುಕಾಸ್ವಾಮಿ (46), ಪತ್ನಿ ಪುಷ್ಪಲತಾ (35) ಸ್ಥಿತಿ ಗಂಭೀರವಾಗಿದೆ. ಇವರ ಪುತ್ರ ತೇಜಸ್ (14) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ಮೈಸೂರಿನ ಸಿ.ಎ.ಆರ್.‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾಸ್ವಾಮಿ ಮನೆಯಲ್ಲಿ ದುರಂತ ನಡೆದಿದೆ. ಗುರುವಾರ ಬೆಳಿಗ್ಗೆ ನೀರು ಒಲೆ ಹಚ್ಚುವ ವೇಳೆ ಈ ಅವಘಡ ಸಂಭವಿಸಿದೆ.  ಅವಘಡದಲ್ಲಿ ಮೂವರಿಗೂ ಸುಟ್ಟ ಗಾಯಗಳಾಗಿದ್ದವು. ಮೈಸೂರಿನ […]

ಮೀಸಲು ಮೂಲಭೂತ ಹಕ್ಕಲ್ಲ- ತೀರ್ಪು ಮರುಪರಿಶೀಲನೆಗೆ ಕೇಂದ್ರ ಒತ್ತಾಯಿಸಲಿ: ಆರ್.ಧ್ರುವನಾರಾಯಣ್

 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವ್ಯಾಖ್ಯಾನದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಮಾಜಿ ಸಂಸದ ಆರ್.ಧ್ರುವನಾರಾಯಣ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.  ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡ ರಾಜ್ಯವು ಪ.ಜಾತಿ, ಪ.ಪಂಗಡದವರಿಗೆ ಬಡ್ತಿಯಲ್ಲಿ ಒದಗಿಸಿಕೊಡಬೇಕಿದ್ದ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರಾಖಂಡದ ಹೈಕೋರ್ಟ್ ತೀರ್ಪು ನೀಡಿತ್ತು. ಅದೇ ವಿಷಯವಾಗಿ ಸಿವಿಲ್ ಅಪೀಲ್ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಾಗೆ ತೀರ್ಪು ನೀಡುವಾಗ ಪ.ಜಾತಿ, ಪ.ಪಂಗಡದವರಿಗೆ […]

ಮೈಸೂರಿನಲ್ಲಿ ‘ತೆಂಗಿನಕಾಯಿ ಚಿಪ್ಪು ಚಳವಳಿ’ ಪ್ರತಿಭಟನೆ

 ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಕರ್ನಾಟಕ ಬಂದ್‍ ಬೆಂಬಲಿಸಿ ಮೈಸೂರು ನಗರದಲ್ಲಿ ‘ತೆಂಗಿನಕಾಯಿ ಚಿಪ್ಪು ಚಳವಳಿ’ ಪ್ರತಿಭಟನೆ ನಡೆಸಲಾಯಿತು.  ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಮೈಸೂರು ಹೋಟೆಲ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘದ ಧರ್ಮ ದತ್ತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಸಹಯೋಗದಲ್ಲಿ ಕರ್ನಾಟಕ ಬಂದ್‍ಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು. ವರದಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸೇರಿದಂತೆ ಹಲವರು […]