You cannot copy content of this page.
. . .

Day: February 12, 2020

ವೃದ್ಧೆ ಮೇಲೆ ಹಲ್ಲೆ ಮಾಡಿದವನಿಗೆ 7 ವರ್ಷ ಜೈಲು ಶಿಕ್ಷೆ

 ಮೈಸೂರು: ವೃದ್ದೆಯ ಮೇಲೆ ಹಲ್ಲೆ ಮಾಡಿ, ಚಿನ್ನದ ಸರವನ್ನು ದೋಚಿದ್ದವನಿಗೆ ಮೈಸೂರಿನ 2ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 5 ಸಾವಿರ ದಂಡದೊಂದಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ನಂಜನಗೂಡು ತಾಲ್ಲೂಕಿನ ತುಂಬುನೇರಳೆ ಗ್ರಾಮದ ಟಿ.ಎಂ.ನಾಗೇಂದ್ರ ಶಿಕ್ಷೆಗೆ ಗುರಿಯಾದ ಆರೋಪಿ. ಮೈಸೂರು ತಾಲ್ಲೂಕಿನ ಬಂಡಿಪಾಳ್ಯದ ನಿವಾಸಿ ನಂಜಮ್ಮ ಅವರ ಮೇಲೆ ಈತ ಹಲ್ಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.  ಕಳೆದ 2018 ಜ.28ರಂದು ಬೆಳಗ್ಗೆ ನಂಜಮ್ಮ ಅವರು ಹಾಲಿನ ಬೂತ್‌ನ […]

ತಂತಿ ಬೇಲಿಗೆ ಸಿಲುಕಿದ್ದ ಕಡವೆ ರಕ್ಷಣೆ

 ಮಡಿಕೇರಿ: ಆಹಾರ ಅರಸಿ ಕಾಡಿನಿಂದ ನಗರಕ್ಕೆ ಬಂದು ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ ಘಟನೆ ಮಂಜಿನನಗರಿ ಮಡಿಕೇರಿಯಲ್ಲಿ ನಡೆದಿದೆ.  ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಬೆಳಗಿನ ಜಾವ ತಂತಿ ಬೇಲಿಗೆ ಸಿಲುಕಿಕೊಂಡು ಕಡವೆ ನರಳುತ್ತಿತ್ತು. ಇದನ್ನು ಕಂಡ ಸಾರ್ವಜನಿಕರು ಕಡವೆಯನ್ನು ರಕ್ಷಣೆ ಮಾಡಲು ಮುಂದಾದರು. ಆದರೆ ಕಡವೆ ಹತ್ತಿರ ಹೋಗುವುದಕ್ಕೆ ಭಯ ಪಡುತ್ತಿದ್ದ ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.  ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿ ಕಡವೆಯನ್ನು ತಂತಿ ಬೇಲಿಯಿಂದ […]

ಆಯತಪ್ಪಿ ಬಿದ್ದ ವಿದ್ಯಾರ್ಥಿ ಕಾಲಿಗೆ ಬಸ್ ಚಕ್ರ ಹರಿದು ಗಾಯ

 ಬಸ್‍ ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿಯ ಕಾಲಿನ ಮೇಲೆ ಬಸ್‍ ಚಕ್ರ ಹರಿದು ಗಾಯಗೊಂಡಿರುವ ಘಟನೆ ಮೈಸೂರಿನ ಗದ್ದಿಗೆ ಮುಖ್ಯ ರಸ್ತೆಯಲ್ಲಿ ನಡೆದಿದೆ.  ಮಹಾರಾಜ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ಕಿರಣ್ ಗಾಯಗೊಂಡಿದ್ದಾರೆ. ಇವರು ಬೆಳಿಗ್ಗೆ ಕಾಲೇಜಿಗೆ ಹೋಗುವುದಕ್ಕಾಗಿ ಬಸ್‍ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಬಸ್‍ ಮುಂದಕ್ಕೆ ಚಲಿಸಿದ್ದು ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆಗ ಬಸ್‍ನ ಹಿಂಬದಿಯ ಚಕ್ರ ವಿದ್ಯಾರ್ಥಿ ಕಾಲಿನ ಮೇಲೆ ಹರಿದಿದೆ.  ಘಟನೆ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗೆ […]

ಉಗ್ರ ಹಫೀಜ್‍ ಸಯೀದ್‍ ಗೆ 5 ವರ್ಷ ಜೈಲು

 2008 ರ ಮುಂಬೈ ದಾಳಿಯ ರೂವಾರಿ ಹಫೀಜ್‍ ಸಯೀದ್‍ ಗೆ ಕೊನೆಗೂ ಪಾಕಿಸ್ತಾನ ಕೋರ್ಟ್‍ ಶಿಕ್ಷೆ ವಿಧಿಸಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತಿದ್ದನೆಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಫೀಜ್‍ ಸಯೀದ್‍ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.   ಹಫೀಜ್‍ ಸಯೀದ್‍ ಜಮಾತ್‍ ಉದ್‍ ದುವಾ ಉಗ್ರ ಸಂಘಟನೆಯ ಮುಖ್ಯಸ್ಥ. 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರ ದಾಳಿಗೆ ಈತನೇ ಮಾಸ್ಟರ್‍ ಮೈಂಡ್‍ ಆಗಿದ್ದ. ಭಾರತದ ಬಳಿ ಇದಕ್ಕೆ ಸಾಕ್ಷಿಗಳೂ ಇದ್ದವು. ಆದರೆ ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. […]

ಮೈಸೂರಿನಲ್ಲೂ ಸಬ್ಸಿಡಿ ರಹಿತ LPG ದರ 146 ರೂ.ಏರಿಕೆ

   ಸತತ ಆರನೇ ಬಾರಿ ಎಲ್‍ಪಿಜಿ ದರ ಏರಿಕೆ ಮಾಡಲಾಗಿದ್ದು, ಈ ಬಾರಿ ಸಬ್ಸಿಡಿ ರಹಿತ ಅನಿಲದ ದರ ಬರೋಬ್ಬರಿ 146 ರೂಪಾಯಿ ಏರಿಕೆ ಮಾಡಲಾಗಿದೆ. ಮೈಸೂರಿನ ಗ್ರಾಹಕರಿಗೂ ಇದು ಅನ್ವಯವಾಗಲಿದೆ. ಇವತ್ತಿನಿಂದಲೇ ಹೊಸ ದರ ಜಾರಿಗೆ ಬಂದಿದೆ.     ಮೈಸೂರಿನಲ್ಲಿ ಕಳೆದ ತಿಂಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ ದರ 720 ರೂಪಾಯಿ ಇತ್ತು. ಆದರೆ ಈಗ ಅದು 866 ರೂಪಾಯಿ ಆಗಿದೆ. ಸಬ್ಸಿಡಿಯಲ್ಲಿ ಅಡುಗೆ ಅನಿಲ ಪಡೆಯುವವರಿಗೆ ದರ ಏರಿಕೆ ಅನ್ವಯವಾಗುವುದಿಲ್ಲ. ಆದರೆ […]

ಮೆಟ್ರೋ ಸಿಟಿಗಳಲ್ಲಿ ಎಲ್‍ಪಿಜಿ ದರ 140 ರೂಪಾಯಿ ಏರಿಕೆ

  ಕಳೆದ ಐದು ತಿಂಗಳಿಂದ ಅಡುಗೆ ಅನಿಲದ ದರ ಏರಿಕೆಯಾಗುತ್ತಲೇ ಬರುತ್ತಿದೆ. ಆದರೆ ಈ ಬಾರಿ ಮೆಟ್ರೋ ಸಿಟಿಗಳ ಜನರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್‍ ನೀಡಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ ಬೆಲೆಯಲ್ಲಿ ಸರಾಸರಿ ಶೇ.20ರಷ್ಟು ಏರಿಕೆ ಮಾಡಲಾಗಿದೆ.     ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದ ಸಬ್ಸಿಡಿರಹಿತ ಎಲ್‍ ಪಿಜಿ ಸಿಲಿಂಡರ್‍ ಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ 858.50 ರೂ. […]

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ; ನಾಳೆ ಕರ್ನಾಟಕ ಬಂದ್

 ರಾಜ್ಯದಲ್ಲಿ ಖಾಸಗಿ ಸಂಸ್ಥೆ ಮತ್ತು ಐಟಿ-ಬಿಟಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಶೇ. 80 ಉದ್ಯೋಗಾವಕಾಶ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಾಳೆ (ಗುರುವಾರ) ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಇದಕ್ಕೆ ಹಲವಾರು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಯಾರಿಂದ ಬೆಂಬಲ  ಕರ್ನಾಟಕ ಬಂದ್‍ಗೆ ಓಲಾ, ಉಬರ್ ಟ್ಯಾಕ್ಸಿ ಸಂಘಟನೆ, ರೈತ ಸಂಘಟನೆ, ಹಸಿರು ಸೇನೆ, ಜಯ ಕರ್ನಾಟಕ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ. 6 ಲಕ್ಷ ವಾಹನಗಳು ಸಂಚಾರ ಸ್ಥಗಿತಗೊಳಿಸಲಿವೆ. […]

ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ನ.16ಕ್ಕೆ ಕೇಜ್ರಿವಾಲ್ ಪ್ರಮಾಣ ವಚನ

ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಫೆ.16ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಅಂದು ಬೆಳಿಗ್ಗೆ 10 ಗಂಟೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎಎಪಿ ನಾಯಕ ಮನಿಷ್ ಸಿಸೊಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  

ಬಾರ್ ಒಂದರಲ್ಲಿ ಆರಂಭವಾದ ಗಲಾಟೆ ಸಾವಿನಲ್ಲಿ ಅಂತ್ಯ

(ಚಿತ್ರ: ರಾಜು ಬಂಧಿತ ಆರೋಪಿ)  ಪಿರಿಯಾಪಟ್ಟಣ:  ಬಾರ್ ಒಂದರಲ್ಲಿ ಆರಂಭಗೊಂಡ ಗಲಾಟೆ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಕಂಪಲಾಪುರದಲ್ಲಿ ನಡೆದಿದೆ.  ಸಹೋದರರಿಗೆ ರಾಡ್‌ನಿಂದ ಹಲ್ಲೆ ನಡೆಸಿ ಓರ್ವನನ್ನು ಕೊಲೆ ಮಾಡಿ ಮತ್ತೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಂಪಲಾಪುರದಲ್ಲಿ ಫೆ.10ರ ಸೋಮವಾರ ರಾತ್ರಿ ನಡೆದಿದ್ದು ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮತ್ತೊಬ್ಬ ಆರೋಪಿಯನ್ನು ಬಂಧಿಸಲು ತನಿಖೆ ನಡೆಸುತ್ತಿದ್ದಾರೆ.  ಕಂಪಲಾಪುರ ಗ್ರಾಮದ ರಾಜು ಎಂಬಾತ ಬಂಧಿತ ಆರೋಪಿ. ಅದೇ ಗ್ರಾಮದ ಕಾಂತರಾಜ್(44) ಕೊಲೆಯಾದ ವ್ಯಕ್ತಿ. ಮೃತನ […]

ಶಾಸಕ ಎಸ್.ಎ.ರಾಮದಾಸ್ ಆರೋಗ್ಯ ಸ್ಥಿರ; ಸಿಸಿಯುನಲ್ಲಿ ಚಿಕಿತ್ಸೆ

 ಲಘು ಹೃದಯಾಘಾತಕ್ಕೆ ಒಳಗಾಗಿ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಎಸ್‍.ಎ.ರಾಮದಾಸ್‍ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.  ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಸ್ಪತ್ರೆ ವ್ಯವಸ್ಥಾಪಕ ಸಿ.ಬಿ.ದಕ್ಷ, ‘ರಾಮದಾಸ್ ಅವರು ಲಘು ಹೃದಯಾಘಾತದಿಂದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಆಂಜಿಗ್ರಾಮ್‍ ಪರೀಕ್ಷೆ, ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಿ ಸ್ಟಂಟ್‍ ಅಳವಡಿಸಲಾಗಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ತುರ್ತು ನಿಗಾ ಘಟಕ (ಸಿಸಿಯು)ಕ್ಕೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.