You cannot copy content of this page.
. . .

Day: February 11, 2020

ದೆಹಲಿ ಚುನಾವಣೆ ಫಲಿತಾಂಶ; ಕೇಜ್ರಿವಾಲ್ ಅಭಿನಂದಿಸಿದ ಮೋದಿ

 ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಆಮ್‍ ಆದ್ಮಿ ಪಾರ್ಟಿ (ಎಎಪಿ) ಬಹುಮತ ಸಾಧಿಸಿ ಮುನ್ನಡೆಯುತ್ತಿದೆ. ದೆಹಲಿಯಲ್ಲಿ ಎಎಪಿ ಭರ್ಜರಿ ಸಾಧಿಸುವುದು ಖಚಿತವಾಗಿದ್ದು, ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್‍ ಅವರ ಗೆಲುವಿಗೆ ಅಭಿನಂದಿಸಿದ್ದಾರೆ.  ‘ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್‍ ಅವರಿಗೆ ಅಭಿನಂದನೆಗಳು. ದೆಹಲಿ ಜನತೆಯ ಆಶೋತ್ತರಗಳನ್ನು ಈಡೇರಿಸಲೆಂದು ಆಶಿಸುತ್ತೇನೆ’ ಎಂದು ಟ್ವೀಟ್‍ ಮಾಡಿದ್ದಾರೆ.

ಶಾಲೆಯಲ್ಲಿ ಕಳ್ಳತನ

 ಮೈಸೂರು: ಶಾಲೆಯ ಕಿಟಕಿಯ ಸರಳುಗಳನ್ನು ಮುರಿದಿರುವ ಖದೀಮರು, ನಗದು ಸೇರಿದಂತೆ 22 ಸಾವಿರ ಮೌಲ್ಯದ ಎನ್.ವಿ.ಆರ್ ಮತ್ತು ಸ್ವಿಚ್‌ಗಳನ್ನು ಕಳುವು ಮಾಡಿದ್ದಾರೆ ಎಂದು ಎಸ್‌ವಿಇಐ ಶಾಲೆಯ ಮುಖ್ಯ ಆಡಾಳಿತಾಧಿಕಾರಿ ಪುಟ್ಟಸ್ವಾಮಿಗೌಡ ದೂರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಫೆ.8ರಂದು ಸಂಜೆ ವೇಳೆ ಶಾಲೆಯ ಎಲ್ಲ ತರಗತಿಗಳ ಬಾಗಿಲು ಮುಚ್ಚಿ, ಕಛೇರಿ ಬೀಗ ಹಾಕಲಾಗಿತ್ತು. ಫೆ.10 ರಂದು ಬೆಳಿಗ್ಗೆ ವೇಳೆ ಶಾಲೆಗೆ ಬಂದು ನೋಡಿದಾಗ ಶಾಲಾ ಕಚೇರಿ ಹಿಂಬದಿಯ ಕಿಟಕಿಯ ಮೂರು ಸರಳುಗಳನ್ನು ಮುರಿದು, ಸ್ವಲ್ಪ ಹಣ, ಎನ್.ವಿ.ಆರ್ […]

ಕೇಜ್ರಿವಾಲ್‍ ಗೆದ್ದಿದ್ದೆಲ್ಲಿ..? ಬಿಜೆಪಿ ಎಡವಿದ್ದೆಲ್ಲಿ..?

  ದೆಹಲಿಯಲ್ಲಿ ಕೇಜ್ರಿವಾಲ್‍ ನೇತೃತ್ವದ ಆಮ್‍ ಆದ್ಮಿ ಪಾರ್ಟಿ ಈ ಬಾರಿಯೂ ಪ್ರಚಂಡ ಗೆಲುವು ಸಾಧಿಸಿದೆ. ಎಎಪಿಯ ಹತ್ತಾರು ಜನಪರ ಕಾರ್ಯಕ್ರಮಗಳು ಕೇಜ್ರಿವಾಲ್‍ ರನ್ನು ಮತ್ತೆ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿವೆ.. ಆದರೆ ಈ ಬಾರಿ ಬಿಜೆಪಿ ಪಕ್ಷಕ್ಕೆ ಎರಡಂಕಿಯಷ್ಟು ಸ್ಥಾನಗಳನ್ನು ಗೆದ್ದುಕೊಳ್ಳುವ ಅವಕಾಶಗಳಿದ್ದವು. ಹಲವು ಸಮೀಕ್ಷೆಗಳೂ ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನ ಬರುತ್ತೆ ಅಂತ ಹೇಳಿದ್ದವು. ಆದರೂ ಕಮಲ ಪಕ್ಷ ಮಕಾಡೆ ಮಲಗಿತು.. ಹಾಗಾದರೆ ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲ್‍ ಗೆದ್ದಿದ್ದೆಲ್ಲಿ..? ಬಿಜೆಪಿ ಎಡವಿದ್ದೆಲ್ಲಿ..? ನೋಡೋಣ ಬನ್ನಿ.. […]

ದೆಹಲಿ ಜನತೆ ಮನೆ ಮಗನನ್ನು ಗೆಲ್ಲಿಸಿದ್ದಾರೆ: ಕೇಜ್ರಿವಾಲ್

 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ 63 ಹಾಗೂ ಬಿಜೆಪಿ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.  ಎಎಪಿ ಮುನ್ನಡೆ ಸಾಧಿಸಿದ್ದು, ಬಹುಮತದೊಂದಿಗೆ ದೆಹಲಿ ಗದ್ದುಗೆ ಏರುವುದನ್ನು ಖಚಿತಪಡಿಸಿಕೊಂಡಿರುವ ಎಎಪಿ ಮುಖ್ಯಸ್ಥ ಅರವಿಂದ್‍ ಕೇಜ್ರಿವಾಲ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸುದ್ದಿಗೋಷ್ಠಿ ನಡೆಸಿದರು. ‘ದೆಹಲಿಯ ಜನತೆ ಎಎಪಿ ಮೇಲಿನ ನಂಬಿಕೆಯನ್ನು ಮೂರನೇ ಬಾರಿಗೆ ಸಾಬೀತುಪಡಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ತಮ್ಮ ಮನೆ ಮಗನಿಗೆ ವೋಟು ಮಾಡಿದ್ದಾರೆ. ಇದು ಸಮಸ್ತ ದೆಹಲಿ ಜನತೆಯ […]

ಕೇಜ್ರಿವಾಲ್‍ ಗೆ ಮೌನವೇ ಗೆಲುವಿನ ಆಭರಣವಾಯಿತು..!

  ದೆಹಲಿಯಲ್ಲಿ ಪೊರಕೆ ಆದಷ್ಟು ಮತಗಳನ್ನು ಗುಡಿಸಿಕೊಂಡು ತನ್ನ ಬುಟ್ಟಿಗೆ ಹಾಕಿಕೊಂಡಿದೆ.. ಇನ್ನೂ ಐದು ವರ್ಷ ದೆಹಲಿಯಲ್ಲಿ ಕೇಜ್ರಿ ಕಮಾಲ್‍ ನಡೆಯುತ್ತೆ.. ಬಡ ಹಾಗೂ ಮಧ್ಯಮವರ್ಗದ ಜನರಿಗೆ ಹಲವು ಉಚಿತ ಯೋಜನೆಗಳು ಮಾಡಿದ್ದರಿಂದಾಗಿ ಕೇಜ್ರಿ ಮತ್ತೆ ಗೆದ್ದುಬೀಗಿದ್ದಾರೆ. ಹಾಗಂತ ಕೇಜ್ರಿವಾಲ್‍ ನೇತೃತ್ವದ ಎಎಪಿ ಪಕ್ಷದ ಪ್ರಚಂಡ ಗೆಲುವಿಗೆ ಯೋಜನೆಗಳೊಂದೇ ಕಾರಣವಲ್ಲ. ಕಳೆದ ಮೂರು ವರ್ಷಗಳಿಂದ ಕೇಜ್ರಿವಾಲ್‍ ಮೌನ ವಹಿಸಿದ್ದು ಕೂಡಾ ಪ್ರಮುಖ ಕಾರಣ.. ಮೌನ ಕೇಜ್ರಿವಾಲ್‍ ವಿಜಯದ ಆಭರಣವಾಗಿ ಮಾರ್ಪಟ್ಟಿದೆ. ಹೌದು, 2015ರಲ್ಲಿ ಎಎಪಿ ಪಕ್ಷ 70ರಲ್ಲಿ […]

ಏಕರೂಪಿ ಮನಸ್ಥಿತಿಯವರಿಂದ ಬಹುರೂಪಿ ನಡೆಸಲು ಸಾಧ್ಯವಿಲ್ಲ: ಅಡ್ಡಂಡ ಕಾರ್ಯಪ್ಪ ವಜಾಕ್ಕೆ ಜನ್ನಿ ಆಗ್ರಹ

 ಮೈಸೂರು: ಏಕರೂಪಿ ಮನಸ್ಥಿತಿ ಹೊಂದಿರುವ ವ್ಯಕ್ತಿಯಿಂದ ಬಹುರೂಪಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಆಗ್ರಹಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಹಾಗೂ ಹಲವು ವಿಚಾರವಾಗಿ ಸಮಾಜಘಾತುಕ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಇದು ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಚ್ಯುತಿ ಬಂದಿದೆ. ಅಸಭ್ಯವಾಗಿ ಏಕಮುಖಿಯಾಗಿ ಮಾತನಾಡಿರುವುದು ಖಂಡನೀಯ. ಆ ಸ್ಥಾನಕ್ಕೆ ಅರ್ಹರಲ್ಲದ ಅಡ್ಡಂಡ ಕಾರ್ಯಪ್ಪ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. […]

ಸಚಿವರಿಗೆ ಖಾತೆಗಳ ಮರು ಹಂಚಿಕೆ; ರಾಜ್ಯಪಾಲರಿಗೆ ಪಟ್ಟಿ ರವಾನೆ

 ರಾಜ್ಯದ ಸರ್ಕಾರದ ಸಂಪುಟದ ಸಚಿವರಿಗೆ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಪರಿಷ್ಕೃತಪಟ್ಟಿಯನ್ನು ಸಿಎಂ ಯಡಿಯೂರಪ್ಪ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ. ರಾಜ್ಯಪಾಲರು ಅಂಕಿತ ಹಾಕಿದ ನಂತರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.   ನಿನ್ನೆ ಬಿ.ಸಿ.ಪಾಟೀಲರಿಗೆ ಅರಣ್ಯ ಖಾತೆ ನೀಡಲಾಗಿತ್ತು. ಈಗ ಕೃಷಿಗೆ ಬದಲಾಯಿಸಲಾಗಿದೆ. ಇನ್ನು ಆನಂದ್‍ ಸಿಂಗ್‍ ಗೆ ಅರಣ್ಯ ಇಲಾಖೆ ಜೊತೆಗೆ ಜೈವಿಕ ಪರಿಸರ ಇಲಾಖೆ ಖಾತೆ, ಗೋಪಾಲಯ್ಯಗೆ ಅವರಿಗೆ ಆಹಾರ, ನಾಗರಿಕ ಪೂರೈಕೆ ಖಾತೆ, ಶಿವರಾಮ್ ‍ಹೆಬ್ಬಾರ್ ಗೆ ಕಾರ್ಮಿಕ ಇಲಾಖೆ ಜೊತೆಗೆ ಸಕ್ಕರೆ ಖಾತೆ, […]

ಅಳಿಯನಿಂದಲೇ ಕೊಲೆಯಾದ ಮಾವ

 ವೈಯಕ್ತಿಕ ವಿಚಾರದ ದ್ವೇಷಕ್ಕಾಗಿ ಮಾವನನ್ನೇ ಅಳಿಯ ಕೊಲೆ ಮಾಡಿರುವ ಘಟನೆ ಗೌಸಿಯಾನಗರದಲ್ಲಿ ನಡೆದಿದೆ.  ಸಲೀಂ (40) ಕೊಲೆಯಾದ ವ್ಯಕ್ತಿ. ಈತನ ನಿವಾಸಕ್ಕೆ ಬಂದ ಅಳಿಯ ನದೀಂ ತನ್ನ ಮಾವ ಸಲೀಂ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆ ರವಾನಿಸಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬೇಡ್ಕರ್ ನಾಮಫಲಕಕ್ಕೆ ಹಾನಿ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ

 ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳು ಹಾನಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ದಲಿತ ಸಂಘಟನೆಗಳು ಇಂದು (ಮಂಗಳವಾರ) ಪ್ರತಿಭಟನೆ ನಡೆಸಿದರು.  ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಕಿಡಿಗೇಡಿಗಳ ದುಷ್ಕತ್ಯ ಮೆರೆದಿದ್ದಾರೆ. ಗ್ರಾಮದ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ನಾಮಫಲಕಕ್ಕೆ ತಡರಾತ್ರಿ ಕಿಡಿಗೇಡಿಗಳು ಹಾನಿ ಮಾಡಿ ಪರಾರಿಯಾಗಿದ್ದಾರೆ.  ಫಲಕ ಧ್ವಂಸ ಖಂಡಿಸಿ ದಲಿತ ಸಮುದಾಯಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿ ಮುಂಗಟ್ಟುಗಳು […]

ಎಸ್.ಎ.ರಾಮದಾಸ್ ಗೆ ಲಘು ಹೃದಯಾಘಾತ

   ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್‌ಗೆ ಲಘು ಹೃದಯಾಘಾತವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸೋಮವಾರ ಮಧ್ಯರಾತ್ರಿ ರಾಮದಾಸ್‍ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ತನಾಳ ಹೆಪ್ಪುಗಟ್ಟಿದ್ದರಿಂದ ಎದೆನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಮಧ್ಯರಾತ್ರಿಯಲ್ಲೇ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.