You cannot copy content of this page.
. . .

Day: February 10, 2020

‘ಪೊಳ್ಳು ಭರವಸೆ ಬಿಡಿ, ನ್ಯಾಯ ಕೊಡಿ’: ಪ್ರವಾಹ ಸಂತ್ರಸ್ತರ ಅಹೋರಾತ್ರಿ ಧರಣಿ

 ಸಿದ್ದಾಪುರ: ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಐದು ತಿಂಗಳು ಕಳೆದರೂ ಸಂತ್ರಸ್ತರಿಗೆ ಸೂರು ಕಲ್ಪಿಸಿಲ್ಲ. ಜಿಲ್ಲಾಡಳಿತ ಶಾಶ್ವತ ನಿವೇಶನ ಕಲ್ಪಿಸಬೇಕು ಎಂದು ಆಗ್ರಹಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಂತ್ರಸ್ತರು ಅಹೋರಾತ್ರಿ ಧರಣಿ ಆರಂಭಿಸಿದರು.  ಸಂತ್ರಸ್ತರ ನಿವೇಶನ ಹೋರಾಟ ಸಮಿತಿಯ ನಾಯಕಿ ಯಮುನಾ ಮಾತನಾಡಿ, ಕಳೆದ ವರ್ಷದ ಪ್ರವಾಹದಲ್ಲಿ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಗುಹ್ಯ, ಕರಡಿಗೋಡು ಭಾಗದ ನೂರಾರು ಮನೆಗಳು ನೆಲಸಮ ವಾಗಿವೆ. ನೂರಾರು ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಸಂತ್ರಸ್ತರಿಗೆ ಶೀಘ್ರದಲ್ಲಿ ಶಾಶ್ವತ ಸೂರು ಒದಗಿಸುವ ಬಗ್ಗೆ ಮುಖ್ಯಮಂತ್ರಿ, […]

ಅಕ್ರಮ ಆರೋಪ; ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

 ಮೈಸೂರಿನ ತಗಡೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.  ಸೋಮವಾರ ಗ್ರಾಪಂ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 14ನೇ ಹಣಕಾಸು ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ. ಅಧಿಕಾರಿಗಳ‌ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಆರ್.ಟಿ.ಐ ಕಾರ್ಯಕರ್ತರು ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಸಿಇಓಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಾಯಿತು.

ಸುಪ್ರೀಂ ಕೋರ್ಟ್ ತೀರ್ಪು ಆಘಾತ ತಂದಿದೆ; ಸಿದ್ದರಾಮಯ್ಯ

 ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನೀಡುವುದು ಮೂಲಭೂತ ಹಕ್ಕಲ್ಲ. ಅದು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದ್ದು’ ಎಂಬ ಸುಪ್ರೀಂ ಕೋರ್ಟ್ ತೀರ್ಪು ಆಘಾತ ತಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಸೋಮವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಡ್ತಿ ವಿಚಾರದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೂಲಭೂತ ಹಕ್ಕಲ್ಲ ಎಂದಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.  ಶೇ.15, […]

ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

 ಹಾಸನ ಮೂಲದ ವ್ಯಕ್ತಿಯೊಬ್ಬರು ಚಾಮರಾಜನಗರದ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹಾಸನದ ಜಾತೇನಹಳ್ಳಿ ಗ್ರಾಮದ ನಿವಾಸಿ ಸಂಜಯ್‍ (37) ಆತ್ಮಹತ್ಯೆ ಮಾಡಿಕೊಂಡವರು. ಇವರು ಚಾಮರಾಜನಗರದ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ  ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗೆ ಸಿಎಂ ಸ್ಥಾನ ಬೇಕು, ಅದಕ್ಕಾಗಿ ನನ್ನ ಪ್ರಯತ್ನ: ಉಮೇಶ್‍ ಕತ್ತಿ

  ನನಗೆ ಸಿಎಂ ಸ್ಥಾನ ಸಿಗಬೇಕು. ಆ ದಿಸೆಯಲ್ಲಿ ನನ್ನ ಪ್ರಯತ್ನವಿದೆ ಎಂದು ಹೇಳುವ ಮೂಲಕ ಸಚಿವ ಸ್ಥಾನ ವಂಚಿತ ಬಿಜೆಪಿಯ ಹಿರಿಯ ನಾಯಕ ಉಮೇಶ್‍ ಕತ್ತಿ ಕುತೂಹಲ ಮೂಡಿಸಿದ್ದಾರೆ.   ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು 13 ವರ್ಷ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ನನಗೆ ಸಚಿವ ಸಿಗದಿದ್ದಕ್ಕೆ ಬೇಸರವಿಲ್ಲ. ಸಚಿವ ಸ್ಥಾನ ಸಿಗಲು ನನಗೆ ನಸೀಬಿಲ್ಲ. ಯಾಕಂದ್ರೆ ನನಗೆ ಸಿಎಂ ಸ್ಥಾನಬೇಕು. ಆ ದಿಸೆಯಲ್ಲಿ ನಾನು ಪ್ರತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಮಾಘ ಹುಣ್ಣಿಮೆ ಸ್ನಾನಕ್ಕೆ ಆಗಮಿಸಿದ್ದ ಭಕ್ತ ಸಾವು

ಮಂಡ್ಯ: ಮಾಘ ಹುಣ್ಣಿಮೆ ಪ್ರಯುಕ್ತ ವೈದ್ಯನಾಥಪುರದ ಇತಿಹಾಸ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಸ್ನಾನ ಮಾಡಲು ಶಿಂಷಾ ನದಿಗೆ ತೆರೆಳಿದ್ದಾಗ ಆಕಸ್ಮಿಕ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ಜರುಗಿದೆ. ಶಂಕರಪ್ಪ (67) ಸಾವಿಗೀಡಾದ ದುರ್ದೈವಿ. ಬೆಂಗಳೂರಿನ ಮುನೇಶ್ವರ ಬ್ಲಾಕ್ ಹನುಮಂತನಗರ ನಿವಾಸಿ ಎಂದು ತಿಳಿದು ಬಂದಿದೆ. ನೀರಿಗೆ ಬಿದ್ದ ತಕ್ಷಣ ಅವರ ಜೊತೆಗೆ ಬಂದಿದ್ದ ಸ್ನೇಹಿತ ನಾಗರಾಜು ಸಹಾಯಕ್ಕಾಗಿ ಕೋಗಿಕೊಂಡಗ ಗ್ರಾಮಸ್ಥರು ಬಂದಿದ್ದಾರೆ, ಶಂಕರಪ್ಪ ಅವರನ್ನು ಎಳೆದು ದಡಕ್ಕೆ […]

ಎಸ್ಸಿ/ಎಸ್ಟಿ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದ ಸುಪ್ರೀಂ

 ಎಸ್ಸಿ/ಎಸ್ಟಿ (ಪರಿಶಿಷ್ಟ ಜಾತಿ, ಪಂಗಡ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಅಂಶಗಳನ್ನು ತಡೆಯಲು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2018ರ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.  ‘ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಅರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪ್ರಾಥಮಿಕ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಯ ಅನುಮತಿಯೂ ಬೇಕಿಲ್ಲ. ಈ ಕಾಯ್ದೆಯ ಅನ್ವಯ ನಿರೀಕ್ಷಣಾ ಜಮೀನಿಗೂ ಅವಕಾಶವಿಲ್ಲ. ಆದರೆ, ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಎಫ್‌ಐಆರ್‌ ಅನ್ನು ವಿಶೇಷ ಸಂದರ್ಭಗಳಲ್ಲಿ ರದ್ದು ಮಾಡುವ […]

ಮುಂದುವರಿದ ಕಾಡಾನೆ ದಾಳಿ; ಕಾರ್ಮಿಕನ ಸ್ಥಿತಿ ಗಂಭೀರ

 ಸಿದ್ದಾಪುರ (ಕೊಡಗು): ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದಲ್ಲಿ ಗುಹ್ಯ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.  ಚೆನ್ನಯ್ಯನಕೋಟೆ ನಿವಾಸಿ ಕಾರ್ಮಿಕ ಸುನಿಲ್ ಎಂಬಾತ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರು. ಸೋಮವಾರ ಬೆಳಿಗ್ಗೆ ತನ್ನ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಗುಹ್ಯ ಗ್ರಾಮದ ಶಾಲೆಯ ಪಕ್ಕದಲ್ಲಿದ್ದ ಮೂರು ಕಾಡಾನೆಗಳನ್ನು ಕಂಡು ಬೈಕ್ ಬಿಟ್ಟು ಓಡಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಕಾಡಾನೆಯು ಸುನಿಲ್ ಮೇಲೆ ದಾಳಿ ನಡೆಸಿದ ಪರಿಣಾಮ ಕಾಲು ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ […]

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ; ಯಾರಿಗೆ ಯಾವ್ಯಾವ ಖಾತೆ?

 ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದ ಸಚಿವರಿಗೆ ಇಂದು (ಸೋಮವಾರ) ಖಾತೆ ಹಂಚಿಕೆ ಮಾಡಿದರು. ರಮೇಶ್‍ ಜಾರಕಿಹೊಳಿ ಅವರಿಗೆ ಸಿಎಂ ಭರ್ಜರಿ ಗಿಫ್ಟ್‍ ನೀಡಿದ್ದಾರೆ. ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಸೇರಿದಂತೆ ಉಳಿದ ಸಚಿವರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅದು ಈ ಕೆಳಕಂಡಂತಿದೆ. ಸಚಿವರು                                  ಖಾತೆ ರಮೇಶ್‍ ಜಾರಕಿಹೊಳಿ-                        ಜಲಸಂಪನ್ಮೂಲ ಡಾ.ಕೆ.ಸುಧಾಕರ್-                    ವೈದ್ಯಕೀಯ ಶಿಕ್ಷಣ ಬಿ.ಸಿ.ಪಾಟೀಲ್-                        ಅರಣ್ಯ ಶ್ರೀಮಂತ ಪಾಟೀಲ್-               ಜವಳಿ ಶಿವರಾಮ್ ಹೆಬ್ಬಾರ್-              ಕಾರ್ಮಿಕ ಕೆ.ಸಿ.ನಾರಾಯಣಗೌಡ-             ಪೌರಾಡಳಿತ, ತೋಟಗಾರಿಕೆ ಎಸ್‍.ಟಿ.ಸೋಮಶೇಖರ್-          ಸಹಕಾರ […]

ಶಾಲೆಗಳಿಗೆ 10,500 ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ: ಸುರೇಶ್ ಕುಮಾರ್

 ಮೈಸೂರು: ಶಾಲೆಗಳಿಗೆ 10,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ ಕುಮಾರ್ ಹೇಳಿದರು. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಒಂದು ಪಟ್ಟಿ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಮತ್ತೊಂದು ಪಟ್ಟಿ ಹಾಕಲು ಆಗಿಲ್ಲ. ಶೀಘ್ರವೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.  ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಅದಕ್ಕೆ ವ್ಯವಸ್ಥೆ ಕೂಡ ಮಾಡುತ್ತಿದ್ದೇವೆ ಎಂದರು.  ಹಿಂದಿನಿಂದಲೂ ಪಠ್ಯ ಪುಸ್ತಕ […]