You cannot copy content of this page.
. . .

Day: February 9, 2020

ಮಲಮಗಳ ಮೇಲೆ ಅತ್ಯಾಚಾರ; ಆರೋಪಿ ಬಂಧನ

 ಚಾಮರಾಜನಗರ: ಮಲಮಗಳ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಗರದ ಗಾಳೀಪುರದಲ್ಲಿ ನಡೆದಿದೆ.  ಗಾಳೀಪುರ ಬೀಡಿ ಕಾಲೋನಿ ನಿವಾಸಿ, ಚಾಲಕ ಮಹಮ್ಮದ್ ಮುಸ್ತಾಪ (30) ಅತ್ಯಾಚಾರ ಎಸೆಗಿರುವ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಭಾನುವಾರ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.  ಇನ್ನೂ ಋತುಮತಿ ಆಗದ ಹನ್ನೊಂದೂವರೆ ವರ್ಷದ ಮಲಮಗಳ ಮೇಲೆ ತಾವು ಊರಿನಲ್ಲಿ ಇಲ್ಲದಿರುವಾಗ ಆರೋಪಿ ಈ ಕೃತ್ಯ ನಡೆಸಿರುವುದಾಗಿ ಸಂತ್ರಸ್ಥೆಯ ತಾಯಿ ನಗರ ಠಾಣೆಗೆ ಶನಿವಾರ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ […]

ಮತದಾನ ಮಾಡಿ ಕೊನೆಯುಸಿರೆಳೆದ 106 ವರ್ಷದ ವೃದ್ಧೆ

 ಹುಣಸೂರು ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಕೆಲ ಸಮಯದಲ್ಲೇ ಶಾತಾಯುಷಿ ಸಿಂಗಮ್ಮ ನಿಧನರಾಗಿರುವ ಘಟನೆ ಹುಣಸೂರಿನಲ್ಲಿ ಇಂದು (ಭಾನುವಾರ) ನಡೆದಿದೆ.  106 ವರ್ಷ ವಯಸ್ಸಿನ ಸಿಂಗಮ್ಮ ಮೃತಪಟ್ಟ ವೃದ್ಧರು. ಕಲ್ಕುಣಿಕೆ ನಿವಾಸಿ ಮೂರನೇ ವಾರ್ಡ್‍ನ ಅಭ್ಯರ್ಥಿ ಗೀತಾ ಶ್ರೀನಿವಾಸ್ ಮೊಮ್ಮಗಳಿಗೆ ಮತದಾನ ಮಾಡಿ ಬಂದ ಸ್ವಲ್ಪ ಹೊತ್ತಿನಲ್ಲೇ ಕೊನೆ ಉಸಿರೆಳೆದರು. ತನ್ನ ಮೊಮ್ಮಗನ ಸಹಾಯದಿಂದ ಮತಗಟ್ಟೆಗೆ ತಲುಪಿ ತಮ್ಮ ಹಕ್ಕನ್ನು ಚಲಾಯಿಸಿದ್ದರು.

ಮೀನು ಹಿಡಿಯಲು ಹೋಗಿದ್ದ ಬಾಲಕ ನೀರುಪಾಲು

 ಕಲ್ಲು ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಬಳಿ ನಡೆದಿದೆ.  ಕುಶಾಲನಗರದ ದೀಕ್ಷಿತ್ (11) ನೀರುಪಾಲಾದ ಬಾಲಕ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಬಳಿಯ ಕೂಡಿಗೆ ರಸ್ತೆಯಲ್ಲಿರುವ ಕಲ್ಲು ಕ್ವಾರಿಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದಾಗ ಘಟನೆ ನಡೆದಿದೆ. ಈ ಸಂಬಂಧ ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೀಸಲಾತಿ ಮೂಲಭೂತ ಹಕ್ಕಲ್ಲ- ತೀರ್ಪಿನ ವಿರುದ್ಧ ಹೋರಾಡುತ್ತೇವೆ: ಖರ್ಗೆ

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು ಎಂದಿಲ್ಲ. ಅದು ಮೂಲಭೂತ ಹಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶೋಷಿತ ಸಮುದಾಯಗಳನ್ನು ಚಿಂತೆಗೀಡು ಮಾಡಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.  ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು (ಭಾನುವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‍ನ ತೀರ್ಪು ಶೋಷಿತ ಸಮುದಾಯಗಳನ್ನು ಚಿಂತೆಗೀಡು ಮಾಡಿದೆ. ಇದರ ವಿರುದ್ಧ ಸಂಸತ್ತಿನ ಒಳಗೆ ಹಾಗೂ ಹೊರಗೆ ಹೋರಾಡುತ್ತೇವೆ. […]

ಹಾನಿಗೊಳಗಾದ ಸ್ಥಿತಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಪತ್ತೆ

 ಜಾರ್ಖಂಡ್‍ನ ಹಜರಿಬಾಗ್‍ನಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ‘ಪ್ರತಿಮೆ ಸ್ವತಃ ಬಿದ್ದು ಹೋಗಿದೆಯೇ ಅಥವಾ ಕಿಡಿಗೇಡಿಗಳು ಹಾನಿಗೊಳಿಸುವ ದೃಷ್ಕೃತ್ಯ ಎಸಗಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ಫುಟೇಜ್‍ನ್ನು ಪರಿಶೀಲಿಸಲಿದ್ದೇವೆ. ಈ ಸಂಬಂಧ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತೇವೆ.’ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಜಿಪಂ ಅಧ್ಯಕ್ಷರ ಕಾರು ಚಾಲಕನ ಕೊಲೆ; ಆರೋಪಿ ಬಂಧನ

 ಅಂತರಸಂತೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕಾರು ಚಾಲಕನ ಮೇಲೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದ ರವಿ ಎಂಬವನನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಪಟ್ಟಣದ ಬೀಚನಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.  ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ದ್ವೇಷದಿಂದ ಶನಿವಾರ ರಾತ್ರಿ 8:30ರ ಸಮಯದಲ್ಲಿ ರವಿ ಎಂಬಾತ ಬೇಕರಿಯ ಮುಂದೆ ನಿಂತಿದ್ದ ಸುನೀಲ್ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸುನೀಲ್ ನನ್ನು ತಕ್ಷಣ ಮೈಸೂರಿನ […]

ಸಚಿವ ಸ್ಥಾನಕ್ಕಾಗಿ ಅನ್ಯ ಮಾರ್ಗ ಹಿಡಿಯಲ್ಲ: ಎಸ್‍.ಎ.ರಾಮದಾಸ್

 ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ. ಆದರೆ, ಸಚಿವ ಸ್ಥಾನಕ್ಕಾಗಿ ಅನ್ಯ ಮಾರ್ಗ ಹಿಡಿಯುವುದು, ಒತ್ತಡ ಹಾಕುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎಸ್‍.ಎ.ರಾಮದಾಸ್‍ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಕೊಡುತ್ತಾರೆಂಬ ಭರವಸೆ ಇದೆ. ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡಬೇಕಿದೆ. ಹಸಿದು ಬಂದವರಿಗೆ ಹೊಟ್ಟೆ ತುಂಬಿಸುವ ಕೆಲಸ ಆಗಿದೆ. ಈಗ ಹಿರಿಯರಿಗೆ ಸಚಿವ ಸ್ಥಾನ ನೀಡಬೇಕಿದೆ ಎಂದು ಹೇಳಿದ್ದಾರೆ.  

18ನೇ ವಾರ್ಡ್ ಉಪಚುನಾವಣೆ; ಮಧ್ಯಾಹ್ನದವರೆಗೆ ಶೇ. 21.57 ಮತದಾನ

 ಮೈಸೂರಿನ 18ನೇ ವಾರ್ಡ್‍ಗೆ ಉಪಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ. 21.57 ಮತದಾನ ನಡೆದಿದೆ.  11 ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪ್ರತಿ ಮತಗಟ್ಟೆಯ 100 ಮೀಟರ್ ದೂರದಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ. 5 ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ.

ಮೈಸೂರು ಭಾಗಕ್ಕೂ ಸಚಿವ ಸ್ಥಾನ: ಬಿ.ವೈ.ವಿಜಯೇಂದ್ರ

 ಸಚಿವ ಸಂಪುಟದಲ್ಲಿ ಇನ್ನೂ 6 ಸ್ಥಾನಗಳು ಬಾಕಿ ಉಳಿದಿವೆ. ಅದರಲ್ಲಿ ಮೈಸೂರು ಭಾಗಕ್ಕೂ ಸ್ಥಾನ ಸಿಗಲಿದೆ ಎಂದು ಬಿಜೆಪಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.  ಮೈಸೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವೇಳೆ ಹಲವು ಗೊಂದಲಗಳಿದ್ದವು. ಸಿಎಂ ಬಿ.ಎಸ್‍.ಯಡಿಯೂರಪ್ಪ ಅವರು ಸಮರ್ಪಕವಾಗಿ ನಿಭಾಯಿಸಿದರು. ಸಂಪುಟದಲ್ಲಿ ಇನ್ನೂ 6 ಸ್ಥಾನ ಉಳಿದಿದ್ದು, ಮೈಸೂರು ಭಾಗಕ್ಕೂ ಸ್ಥಾನ ಸಿಗಲಿದೆ ಎಂದು ಭರವಸೆಯ ನುಡಿಗಳನ್ನಾಡಿದರು. ಎಚ್.ವಿಶ್ವನಾಥ್‍, ಎಂಟಿಬಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ  ಸಿಎಂ ಬಿ.ಎಸ್.ಯಡಿಯೂರಪ್ಪ […]

ನಿಗಮ ಮಂಡಳಿಯಲ್ಲಿ ಸ್ಥಾನ ಬೇಡ: ಎಚ್‍.ವಿಶ್ವನಾಥ್

 ನಾವು ಮಂತ್ರಿಗಳಾಗಿ ಕೆಲಸ ಮಾಡಿದವರು. ನಮಗೆ ನಿಗಮ ಮಂಡಳಿಯಲ್ಲಿ ಸ್ಥಾನ ಬೇಡ ಎಂದು ಮಾಜಿ ಸಚಿವ ಎಚ್‍.ವಿಶ‍್ವನಾಥ್‍ ಪ್ರತಿಕ್ರಿಯಿಸಿದ್ದಾರೆ.  ಹುಣಸೂರಿನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸಂಪುಟ ದರ್ಜೆಯಲ್ಲಿ ಕೆಲಸ ಮಾಡಿದ್ದೇವೆ. ಹೀಗಾಗಿ, ನನಗೆ ಮತ್ತು ಎಂಟಿಬಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಅಗತ್ಯವಿಲ್ಲ. ಆ ಸ್ಥಾನಗಳನ್ನು ಪಕ್ಷದ ಹೊಸಬರಿಗೆ, ಕಾರ್ಯಕರ್ತರಿಗೆ ನೀಡಲಿ. ನಾವು ಈಗಲೂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನಂಬಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.   ಮೈತ್ರಿ ಸರ್ಕಾರಕ್ಕಿಂತ ಬಿಜೆಪಿ ಹೆಚ್ಚಿನ ಅವಧಿ […]