You cannot copy content of this page.
. . .

Day: February 8, 2020

BSP ಸಹವಾಸವೇ ಬೇಡ: ಎನ್.ಮಹೇಶ್

  ನಾನು ವಾಪಸ್ ಬರುತ್ತೇನೆ ಎಂದರೂ ಬಾರದಂತೆ ತಡೆಯುವ ದೊಡ್ಡ ಷಡ್ಯಂತ್ರ ಬಿಎಸ್‌ಪಿ ಒಳಗೆ ನಡೆಯುತ್ತಿರುವುದರಿಂದ ಆ ಪಕ್ಷದ ಸಹವಾಸವೇ ಬೇಡ ಎಂದು ದೂರ ಉಳಿದಿರುವುದಾಗಿ ಬಿಎಸ್‌ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ತಿಳಿಸಿದರು. ಚಾಮರಾಜ ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಎಸ್‌ಪಿಯಿಂದ ನನ್ನನ್ನು ವಿನಾಕಾರಣ ಉಚ್ಚಾಟಿಸಲಾಗಿದ್ದು, ಆಚೆ ಬಂದ ಮಾತ್ರಕ್ಕೆ ನನ್ನ ತತ್ವ, ಸಿದ್ಧಾಂತಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರು.   ಯಡಿಯೂರಪ್ಪ ನೇತೃತ್ವದ ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಶಾಸಕರನ್ನು ಹೊಂದಿ ಸುಭದ್ರವಾಗಿದೆ. ಏನಾದರೂ ಸಂಕಷ್ಟ […]

ದೆಹಲಿ ಮತದಾನೋತ್ತರ ಸಮೀಕ್ಷೆ; ಯಾವ ಸಮೀಕ್ಷೆ ಏನೇಳುತ್ತೆ..?

ಸಿ – ವೋಟರ್‍ =============== ಎಎಪಿ            49-63 ಬಿಜೆಪಿ            05-19 ಕಾಂಗ್ರೆಸ್‍        00-04 ಒಟ್ಟು ಸ್ಥಾನ     70   ನ್ಯೂಸ್ ನೇಷನ್‍  ============ ಎಎಪಿ            67    ಬಿಜೆಪಿ            03 ಕಾಂಗ್ರಸ್‍        00  ಒಟ್ಟು ಸ್ಥಾನ     70   TIMES NOW ==========  ಎಎಪಿ            44   ಬಿಜೆಪಿ            26 ಕಾಂಗ್ರಸ್‍        00  ಒಟ್ಟು ಸ್ಥಾನ     70     ರಿಪಬ್ಲಿಕ್‍ ಟಿವಿ ======= ಎಎಪಿ            48-61  ಬಿಜೆಪಿ            09-21 ಕಾಂಗ್ರಸ್‍        00-01 ಒಟ್ಟು ಸ್ಥಾನ     70     […]

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

  ಬೀದರ್‌ನ ಶಾಹಿನ್ ಶಾಲೆಯಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ವಿಷಯಾಧಾರಿತ ನಾಟಕವೊಂದಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣ ಅಡಿಯಲ್ಲಿ ಬಂಧಿಸಿರುವ ಮಗುವಿನ ತಾಯಿ ಹಾಗೂ ಶಾಲೆಯ ಶಿಕ್ಷಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶನಿವಾರ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   ನಗರದ ಪುರಭವನ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರೊ. ಶಬ್ಬೀರ್ ಮುಸ್ತಫಾ ಮಾತನಾಡಿ, 2014 ರಿಂದೀಚೆಗೆ ದೇಶದಲ್ಲಿ 233 ಪ್ರಕರಣಗಳನ್ನು ದೇಶ ದ್ರೋಹದ […]

ಬಿಜೆಪಿಯಿಂದ ಅಪಹಾಸ್ಯದ ಟ್ವೀಟ್; ನೆಟ್ಟಿಗರ ಆಕ್ರೋಶ

  ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್‍ ವಿವಾದಕ್ಕೆ ಕಾರಣವಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮುಸ್ಲಿಂ ಮಹಿಳೆಯರು ಸಾಲುಗಟ್ಟಿ ನಿಂತಿರುವ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ತನ್ನ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಜೊತೆಗೆ “ದಾಖಲೆಗಳನ್ನು ತೋರ್ಸಲ್ಲ ಎಂದು ಹೇಳಿದವರೇ, ಇದೀಗ ನಿಮ್ಮ ದಾಖಲೆಗಳನ್ನು ಸುರಕ್ಷಿತವಾಗಿಡಿ. #NPR ದಾಖಲಾತಿ ಸಮಯದಲ್ಲಿ ನೀವು ಅವುಗಳನ್ನು ಮತ್ತೆ ತೋರಿಸಬೇಕಾಗುತ್ತದೆ” ಎಂದು ಕುಹಕವಾಡುವ ರೀತಿಯಲ್ಲಿ ಅಡಿ ಬರಹ ಬರೆಯಲಾಗಿದೆ.  ಇದನ್ನು […]

ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬೀದಿಗೆ ಬಿದ್ದಿವೆ: ಆರ್.ಅಶೋಕ್

 ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ಒಳಜಗಳದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಫುಟ್‌ಪಾತ್ ಸ್ಥಿತಿಗೆ ಬಂದಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದೇ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇಬ್ಬರ ಜಗಳದಲ್ಲಿ ಎರಡೂ ಪಕ್ಷಗಳು ಬೀದಿಗೆ ಬಿದ್ದಿವೆ ಎಂದು ವ್ಯಂಗ್ಯವಾಡಿದರು.ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಗಿದ […]

ಸೂಕ್ತ ಸ್ಥಾನಮಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಕತ್ತಿ ಬೆದರಿಕೆ

  ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿರುವುದಕ್ಕೆ ಕೆಂಡಮಂಡಲವಾಗಿರುವ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ, ನನಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆವೊಡ್ಡಿದ್ದಾರೆ.ಎಂಟು ಬಾರಿ ಗೆದ್ದಿರುವ ನನಗೆ ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ನೀಡಲೇಬೇಕು. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದೆ ಕಡ್ಡಿ ಮುರಿದಂತೆ ಹೇಳಿದ್ದಾರೆ.ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಒಂದು ಕ್ಷಣವೂ ಕೂಡ ಪಕ್ಷದಲ್ಲಿ ಮುಂದುವರೆಯುವುದಿಲ್ಲ. ಉಮೇಶ್ […]

ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ

  ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ 10 ಸಚಿವರಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡುವುದಾಗಿ  ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಘೋಷಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರಿಗೆ ಯಾವ ಖಾತೆಗಳನ್ನು ನೀಡಬೇಕೆಂಬ ಪಟ್ಟಿ ಸಿದ್ದವಾಗಿದೆ. ಸೋಮವಾರ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದರು.  ಇಂದು ಶನಿವಾರ ರಜಾದಿನವಾಗಿದ್ದರಿಂದ  ಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಸೋಮವಾರ ಖಾತೆಗಳ ಹಂಚಿಕೆಯಾಗಲಿದೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ. ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳುವುದಿಲ್ಲ […]

ಕರ್ನಾಟಕದಲ್ಲಿ ಮೋದಿ ಆಟ ನಡೆಯೋದಿಲ್ಲ; ವರ್ತೂರ್‍ ಪ್ರಕಾಶ್

  ಕರ್ನಾಟಕದಲ್ಲಿ ಮೋದಿ ಆಟ ನಡೆಯೋದಿಲ್ಲ. ಇಲ್ಲೇನಿದ್ದರೂ ಯಡಿಯೂರಪ್ಪ ಇದ್ದರೆ ಮಾತ್ರ ಬಿಜೆಪಿ ಎಂದು ಮೈಸೂರಿನಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ. ಎಚ್‍.ವಿಶ್ವನಾಥ್‍ ಅವರನ್ನು ಭೇಟಿ ಮಾಡಲು ಬಂದಿದ್ದ ವರ್ತೂರು ಪ್ರಕಾಶ್‍, ವಿಶ್ವನಾಥ್‍ ಪರವಾಗಿ ಬ್ಯಾಟ್‍ ಬೀಸಿದರು.    ವಿಶ್ವನಾಥ್‍, ಎಂಟಿಬಿ ನಾಗರಾಜ್‍ ರನ್ನು ಬಿಟ್ಟರೆ ಬಿಜೆಪಿ ಪ್ಲಾಪ್ ಆಗಲಿದೆ. ಜೂನ್ ಒಳಗೆ ಯಡಿಯೂರಪ್ಪನವರು ಈ ಇಬ್ಬರನ್ನೂ ಸಚಿವರನ್ನಾಗಿ ಮಾಡಬೇಕು‌. ಇಲ್ಲವಾದಲ್ಲಿ ಕುಮಾರ‌ಸ್ವಾಮಿ ಗತಿಯೇ ಯಡಿಯೂರಪ್ಪರಿಗೂ ಬರುತ್ತೆ. ವಚನ ಭ್ರಷ್ಟತೆ ಆರೋಪ ಮತ್ತೆ ಯಡಿಯೂರಪ್ಪ ಅವರ […]

ಭಾರತದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ 2.4 ಮಿಲಿಯನ್

   ವಿಶ್ವದಾದ್ಯಂತ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಭಾರತದಲ್ಲೇ 2.4 ಮಿಲಿಯನ್ ಅಷ್ಟು ಎಚ್‌ಐವಿ ಸೋಂಕಿತರು ಇದ್ದಾರೆ. ಪ್ರತಿವರ್ಷ ಇದರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಮೈಸೂರಿನ ಸಿಐಐ  ಅಧ್ಯಕ್ಷ ಭಾಸ್ಕರ್ ಕಳಲೆ ಆತಂಕಪಟ್ಟರು.  ಭಾರತೀಯ ಏಡ್ಸ್ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ ಸಹಯೋಗದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ ‘ಎಚ್‌ಐವಿ ಮೈಸೂರು-2020’ 2 ದಿನಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಮಯಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿರುವುದು ಹಾಗೂ ರೋಗ ಹರಡುವ […]

ಮುಂದೆ ವಿಚಿತ್ರ ಕಾನೂನುಗಳು ಬರುತ್ತವೆ: ಕೆ.ಸಿ.ರಘು

  ಇನ್ನು ಮುಂದೆ ವಿಚಿತ್ರ ಕಾನೂನುಗಳು ಜಾರಿಗೆ ಬರುತ್ತವೆ ಎಂದು ಆಹಾರತಜ್ಞ ಕೆ.ಸಿ.ರಘು ಭವಿಷ್ಯ ನುಡಿದರು.ಮೈಸೂರಿನ ಪುರಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಶೋಷಿತ ಜನಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.ಪ್ರತಿ ಮನೆಯಲ್ಲೂ ಗೋಡ್ಸೆ ಫೋಟೋ ಕಡ್ಡಾಯ. ಬೆಳಿಗ್ಗೆ ಎದ್ದ ತಕ್ಷಣ ೬೦ ಎಂ.ಎಲ್. ಗೋಮೂತ್ರ ಸೇವಿಸಬೇಕು. (ಅದು ಬಾಬಾ ರಾಮ್‌ದೇವ್ ಅವರ ‘ಪತಂಜಲಿ’ ಕಂಪನಿಯದ್ದಾಗಿರಬಹುದು. ಅಥವಾ ಜಗ್ಗಿ ವಾಸುದೇವ್ ಅವರ ಸಂಸ್ಥೆ ತಯಾರಿಸಿದ್ದಾಗಿರಬಹುದು.) ನಾನು ದೇಶವನ್ನು ಪ್ರೀತಿಸುತ್ತೇನೆ ಎಂದು ಮೈಮೇಲೆಲ್ಲ ಬರೆಸಿಕೊಂಡಿರಬಹುದು… ಇಂತಹ ಕಾನೂನುಗಳು ಬರಬಹುದು ಎಂದು ಗೇಲಿ ಮಾಡಿದರು.ಯಾವ […]