You cannot copy content of this page.
. . .

Day: February 7, 2020

ಕಳ್ಳತನವಾಗಿದ್ದ 13.21 ಲಕ್ಷ ರೂ. ಮೌಲ್ಯದ ಡೆಕ್‍ ಟೈಲ್ಸ್ ಕಬ್ಬಿಣದ ಪೈಪ್ ವಶ

 ಕುಡಿಯುವ ನೀರು ಯೋಜನೆ ಕಾಮಗಾರಿಗೆ ಸಂಗ್ರಹಿಸಲಾಗಿದ್ದ ಡೆಕ್‍ ಟೈಲ್ಸ್ ಕಬ್ಬಿಣದ ಪೈಪ್‍ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 13.21 ಲಕ್ಷ ರೂ. ಮೌಲ್ಯದ ಪೈಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಶಿವನಂಜು, ಗಿರಿಧರ್, ಚೆಲುವರಾಜು, ಪ್ರಮೋದ್ ಬಂಧಿತ ಆರೋಪಿಗಳು. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಬಹುಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿಗೆ ತಾಲ್ಲೂಕಿನ ಹನಗನಹಳ್ಳಿ ಗ್ರಾಮದ ಗೇಟ್ ಸಮೀಪ ಸ್ಟಾಕ್‍ ಇಡಲಾಗಿದ್ದ ಡೆಕ್ ಟೈಲ್ಸ್ ಕಬ್ಬಿಣದ ಪೈಪುಗಳ ಕಳ್ಳತನವಾಗಿತ್ತು. ಈ ಸಂಬಂಧ ಯೋಜನೆಯ ಎಂಜಿನಿಯರ್‍ಗಳು ಪೊಲೀಸ್‍ ಠಾಣೆಯಲ್ಲಿ […]

ಶಾಲಾ ವಾರ್ಷಿಕೋತ್ಸವಕ್ಕೆ ತೆರಳುತ್ತಿದ್ದ ಬಾಲಕಿ ಅಪಘಾತದಲ್ಲಿ ಸಾವು

 ಮಲ್ಕುಂಡಿ: ಶಾಲಾ ವಾರ್ಷಿಕೋತ್ಸವಕ್ಕೆಂದು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಶಾಲಾ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಸಮೀಪದ ಎಂಕೊಂಗಳ್ಳಿ ಬಳಿ ಶುಕ್ರವಾರ ನಡೆದಿದೆ.  ಯಡಹಳ್ಳಿ ಗ್ರಾಮದ ಗಿರೀಶ್ ಎಂಬವರ ಪುತ್ರಿ ಗಾನವಿ (6) ಮೃತಪಟ್ಟ ಬಾಲಕಿ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕಿಯ ತಾಯಿ ಪುಟ್ಟಿ, ಮಾವ ಮಲ್ಲಹಳ್ಳಿ ಗ್ರಾಮದ ಮಹೇಂದ್ರ, ತಂಗಿ ಪಾವನಿ (4) ಗಾಯಗೊಂಡವರು.  ಬಾಲಕಿ ಗಾನವಿ, ಹುಲ್ಲಹಳ್ಳಿಯ ಜ್ಞಾನ ಸಂಜೀವಿನಿ ಖಾಸಗಿ ಶಾಲೆಯಲ್ಲಿ […]

ಸರಣಿ ಅಪಘಾತ; ಓರ್ವ ಸಾವು

 ಮೈಸೂರು: ಕಾರು, ಲಾರಿ, ಎರಡು ಬೈಕುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಇಂದು (ಶುಕ್ರವಾರ) ನಗರದಲ್ಲಿ ನಡೆದಿದೆ.  ನಗರದ ಮೇಟಗಳ್ಳಿಯ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಒಂದು ಬೈಕಿನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಲವತ್ತ ಗ್ರಾಮದ ಪ್ರಜ್ವಲ್ (22) ಮೃತ ದುರ್ದೈವಿ.  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಕಾರು, ಲಾರಿಯನ್ನು ವಶವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪುಟದಲ್ಲಿ ಹಿರಿತನಕ್ಕೆ ಗೌರವ ಸಿಕ್ಕಿಲ್ಲ: ಅಪ್ಪಚ್ಚು ರಂಜನ್

  ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಯ ಶಾಸಕರನ್ನು ಕಡೆಗಣಿಸಲಾಗಿದೆ. ನಾನು ಐದು ಬಾರಿ ಗೆದ್ದಿದ್ದರೂ ಹಿರಿತನಕ್ಕೆ ಗೌರವ ನೀಡಿಲ್ಲ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಪುಟದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನ್ಯ ಪಕ್ಷದಿಂದ ಹತ್ತು ಮಂದಿ ಬಂದಿರುವುದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ಮರು ಮಾತಿಲ್ಲ. ಆದರೆ, ಸಂಪುಟ ವಿಸ್ತರಣೆಯಲ್ಲಿ ಪಕ್ಷದ […]

ಬಂದಿದೆ ಎಕೆ-47ಗೆ ಎದೆಯೊಡ್ಡುವ ಹೆಲ್ಮೆಟ್!

 ಉಗ್ರರ ವಿರುದ್ಧ ಹೋರಾಟದ ಸಂದರ್ಭದಲ್ಲಿ ದೇಶದ ಸೈನಿಕರ ಆತ್ಮರಕ್ಷಣೆಗೆ ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.  ಕಾಲೇಜು ರೂಪಿಸಿರುವ ಹೊಸ ತಂತ್ರಜ್ಞಾನವು, ಶತ್ರುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಹಾಗೂ ಆತ್ಮರಕ್ಷಣೆ ಮಾಡಿಕೊಳ್ಳಲು ಭಾರತೀಯ ಸೈನಿಕರಿಗೆ ಸಹಕಾರಿಯಾಗಲಿದೆ. ಏನಿದು ಹೊಸ ತಂತ್ರಜ್ಞಾನ, ಅದರ ಪ್ರಯೋಜನಗಳೇನು?  ಭಾರತದ ಸೈನಿಕರ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ವಿಶ್ವದಲ್ಲೇ ಮೊದಲ ಬಾರಿಗೆ ಸೈನಿಕರಿಗಾಗಿ ಹೆಲ್ಮೆಟ್‍ನ್ನು ಅಭಿವೃದ್ಧಿಪಡಿಸಿದೆ. ಇದು 10 ಮೀಟರ್‍ ದೂರದಿಂದ ಹೊಮ್ಮುವ ಎಕೆ-47 ಬುಲೆಟ್‍ನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಎದುರಾಳಿಯ […]

ಕಷ್ಟಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಜೊತೆ ನಿಲ್ಲುತ್ತೇನೆ: ಶಾಸಕ ಎನ್.ಮಹೇಶ್

 ‘ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಿ. ಕಷ್ಟಕಾಲದಲ್ಲಿ ನಿಮ್ಮ ಜೊತೆ ನಿಲ್ಲುತ್ತೇನೆ ಎಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಕೇಳಿದ್ದೇನೆ’ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.  ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ. ಈಗಲಾದರೂ ಹೆಚ್ಚಿನ ಅನುದಾನ ನೀಡಿದರೆ ಅದನ್ನು ಬಳಸಿಕೊಂಡು ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಅನರ್ಹ ಶಾಸಕರು ಹೇಗೆ ಗೆದ್ದು ಬಂದಿದ್ದಾರೆ ಎನ್ನುವುದು ಗೊತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ […]

ಸಮ್ಮೇಳನದ ಗೋಷ್ಠಿಗಾಗಿ ನೀಡಿದ ಗೌರವಧನ ಹಿಂದಿರುಗಿಸಿದ ನಿರ್ದೇಶಕ ಬಿ.ಸುರೇಶ್

 ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯೊಂದರಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ನಿರ್ದೇಶಕ ಬಿ.ಸುರೇಶ್‍ ಅವರು ಸಮ್ಮೇಳನದ ಗೋಷ್ಠಿಗಾಗಿ ತಮಗೆ ನೀಡಿದ ಗೌರವಧನ ಹಿಂದಿರುಗಿಸಿದ ಘಟನೆ ನಡೆಯಿತು.  ‘ಕಿರುತೆರೆ: ಸಾಮಾಜಿಕ ಜವಾಬ್ದಾರಿಗಳು’ ಕುರಿತು ಮಾತನಾಡಲು ಆರಂಭಿಸುವ‌ ಮುನ್ನ ವಿಷಯ ಪ್ರಸ್ತಾಪಿಸಿದ ಅವರು, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ‌ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಎಲ್ಲ ರೀತಿಯ ಸಹಕಾರ ನೀಡಬೇಕಿತ್ತು. ಅಗತ್ಯವಿರುವ ‌ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿದರು.  ಸಮ್ಮೇಳನದ ವೇದಿಕೆ […]

ಹೆದ್ದಾರಿಯಲ್ಲಿ ದರೋಡೆ ಪ್ರಕರಣ; 9 ಮಂದಿ ಅರೆಸ್ಟ್

  ಹೆದ್ದಾರಿಯಲ್ಲಿ ರಾತ್ರಿ ವೇಳೆ ದರೋಡೆ ಮಾಡುತ್ತಿದ್ದ 9 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2,54,570 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.   ಬಂಧಿತರೆಲ್ಲರೂ ಮೈಸೂರಿನವರಾಗಿದ್ದಾರೆ. ಉಪೇಂದ್ರ ಅಲಿಯಾಸ್ ಉಪ್ಪಿ, ಕಿರಣ ಅಲಿಯಾಸ್‍ ಇಸ್ಕಿ, ಪ್ರತಾಪ ಅಲಿಯಾಸ್ ಆಪು, ಮಾದಪ್ಪ ಅಲಿಯಾಸ್‍ ಶಿವು, ಶೇಖರ, ಅನೂಜ್ ಅಲಿಯಾಸ್‍ ಇಡ್ಲಿ, ಕಿರಣ ಅಲಿಯಾಸ್‍ ಆನೆ, ರವಿಕುಮಾರ ಅಲಿಯಾಸ್‍ ಅಬ್ಬು, ಶಿವಕುಮಾರ ಅಲಿಯಾಸ್‍ ಶಿವು ಬಂಧಿತರು. ಬಂಧಿತರಿಂದ 11 ಮೊಬೈಲ್, 1400 ರೂ. […]

ವೃದ್ಧೆಯ ಕಾಲಿಗೆ ಬಿದ್ದ ದೇವೇಗೌಡರು..!: ವೀಡಿಯೊ ಇದೆ

  ಪಾಂಡವಪುರದ ಹಳ್ಳಿಯೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು 92 ವರ್ಷದ ವೃದ್ದೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಇಲ್ಲಿನ ಮಾಣಿಕ್ಯನಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆಗೆ ದೇವೇಗೌಡರು ಆಗಮಿಸಿದ್ದರು. ಈ ವೇಳೆ ಗ್ರಾಮದ 92 ವರ್ಷದ ವೃದ್ದೆ ಕೆಂಪಮ್ಮ ಅವರು ದೇವೇಗೌಡರನ್ನು ನೋಡಲು ಬಂದಿದ್ದರು. ವೃದ್ಧೆಯನ್ನು ಕಂಡ ದೇವೇಗೌಡರು ವೇದಿಕೆಗೆ ಕರೆಸಿ, ಯೋಗ ಕ್ಷೇಮ ವಿಚಾರಿಸಿ ಕಾಲಿಗೆ ಬಿದ್ದರು.  ಕೆಂಪಮ್ಮರಿಂದ ಆಶೀರ್ವಾದ ಪಡೆದ ನಂತರ ದೇವೇಗೌಡರು ಅವರನ್ನ ವೇದಿಕೆ ಮೇಲೆಯೇ ಕೂರಿಸಿದರು. ಅವರ ಪಕ್ಕದಲ್ಲೇ ಆಸನ ವ್ಯವಸ್ಥೆ ಮಾಡಿ […]

ಹೋರಾಟವನ್ನು ಮಾರಾಟ ಎನ್ನುವುದು ಸಂವಿಧಾನಕ್ಕೆ ತೋರುವ ಅಗೌರವ: ಎಚ್.ವಿಶ್ವನಾಥ್

 ಮೈಸೂರು: ರಾಜ್ಯ ರಾಜಕೀಯದಲ್ಲಿ ನಾವು ಮಾಡಿದ ಹೋರಾಟವನ್ನು ಮಾರಾಟ ಎಂಬುದಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೆಲವರು ನಾಯಕರು ನಕರಾತ್ಮಕವಾಗಿ ಬಿಂಬಿಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯೇ ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಕಿಡಿಕಾರಿದರು.  ನಗರದ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದಲ್ಲಿ ನಿರ್ಮಿಸಿರುವ ‘ವಿಶ್ವಜ್ಞಾನಿ’ ಸಭಾಂಗಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಾವು ಸಕ್ರಿಯ ಪಾತ್ರವಹಿಸಿದ್ದೇವೆ. ಆದರೆ, ರಾಜ್ಯದ ರಾಜಕೀಯವನ್ನು ಮೂರು ರಾಜಕೀಯ ಪಕ್ಷಗಳು ತಿಳಿದುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು. […]