You cannot copy content of this page.
. . .

Day: February 6, 2020

ಹುಡುಗನಿಂದ ತನ್ನ ಕಾಲಿನಿಂದ ಚಪ್ಪಲಿ ತೆಗೆಸಿದ ಸಚಿವ; ವ್ಯಾಪಕ ಟೀಕೆ

 ತಮಿಳುನಾಡಿನ ಸಚಿವ ದಿಂಡಿಗಲ್ ಸಿ.ಶ್ರೀನಿವಾಸನ್ ಅವರು ಹುಡುಗನೊಬ್ಬನಿಂದ ತಮ್ಮ ಕಾಲಿನ ಚಪ್ಪಲಿಯನ್ನು ತೆಗೆಸಿದ ಘಟನೆ ನಡೆದಿದೆ. ಸಚಿವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.  ಮುದ್ದುಮಲೈ ರಾಷ್ಟ್ರೀಯ ಉದ್ಯಾನಕ್ಕೆ ಸಚಿವ ದಿಂಡಿಗಲ್ ಆಗಮಿಸಿದ್ದರು. ಈ ವೇಳೆ ಹತ್ತಿರದಲ್ಲಿದ್ದ ಹುಡುಗನನ್ನು ಕರೆದು ತನ್ನ ಕಾಲಿನಲ್ಲಿರುವ ಚಪ್ಪಲಿಯನ್ನು ತೆಗೆಯುವಂತೆ ಸೂಚಿಸಿದ್ದಾರೆ. ಹುಡುಗ ಸಚಿವರ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆಯುತ್ತಿರುವ ದೃಶ್ಯವನ್ನು ಎಎನ್‍ಐ ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ.  ಸಚಿವರ ನಡೆಗೆ ಸಾರ್ವಜನಿಕರು ‘ಇದು ಖಂಡನೀಯ.. ಹೀಗೆ ಮಾಡುವುದಕ್ಕೆ ಸಚಿವರಿಗೆ ನಾಚಿಕೆಯಾಗಬೇಕು.. […]

ಪುರಭವನ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪಾಲಿಕೆ ಸದಸ್ಯರ ನಿರಾಸಕ್ತಿ; ಸಭೆ ಮುಂದೂಡಿಕೆ

 ಪುರಭವನ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಾಲ್ಗೊಳ್ಳಲು ನಗರಪಾಲಿಕೆ ಸದಸ್ಯರು ನಿರಾಸಕ್ತಿ ವಹಿಸಿದ್ದಾರೆ. ಹೀಗಾಗಿ, ಮೇಯರ್ ಸಭೆಯನ್ನು ಮುಂದೂಡಿದ್ದಾರೆ.  ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್‍ ಅಧ್ಯಕ್ಷತೆ ಇಂದು (ಗುರುವಾರ) ರಂಗಚಾರ್ಲು ಸ್ಮಾರಕ ಭವನ (ಪುರಭವನ) ಸಮಿತಿಯ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇವಲ ಇಬ್ಬರು ಸದಸ್ಯರು ಪಾಲ್ಗೊಂಡಿದ್ದರು. ಆದರೆ, ನಾಮನಿರ್ದೇಶನವಾಗಿದ್ದು 7 ಸದಸ್ಯರು. ಸದಸ್ಯರ ನಿರಾಸಕ್ತಿ ಹಾಗೂ ಕೋರಂ ಅಭಾವದಿಂದ ಸಭೆಯನ್ನು ಮುಂದೂಡಲಾಯಿತು. ತೆರಿಗೆ ಏರಿಕೆಯಿಂದ ಸಾರ್ವಜನಿಕರಿಗೆ ಅನಾನುಕೂಲ ಆಗಬಾರದು […]

ಭಗತ್‍ ಸಿಂಗ್ ವಿಡಿಯೋ ನೋಡಿ ನೇಣಿಗೇರಿದ ಬಾಲಕ..!

  ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ವಿಡಿಯೋವನ್ನು ಅನುಕರಿಸಿದ 12 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಮಧ್ಯಪ್ರದೇಶದ ಮಂದ್ಸೌರ್ ನಲ್ಲಿ ನಡೆದಿದೆ.   ಭೋಲಿಯಾ ಗ್ರಾಮದ ಶ್ರೇಯಾಂಶ್ ಎಂಬ ಬಾಲಕನೇ ಸಾವನ್ನಪ್ಪಿರುವ ದುರ್ದೈವಿ. ಭಗತ್ ಸಿಂಗ್ ಜೀವನದ ಕಥೆಯುಳ್ಳ ನಾಟಕದ ವಿಡಿಯೋವೊಂದನ್ನು ಬಾಲಕ ಮೊಬೈಲ್ ನಲ್ಲಿ ನೋಡುತ್ತಿದ್ದ. ಭಗತ್ ಸಿಂಗ್ ರನ್ನು ನೇಣುಗಂಬಕ್ಕೇರಿಸುವ ದೃಶ್ಯ ಆತನ ಮನಸ್ಸಿಗೆ ನಾಟಿತ್ತು. ವಿಡಿಯೋ ಬೇಜಾರಾಗಿದ್ದ ಬಾಲಕ ಭಗತ್‍ ಸಿಂಗ್‍ ನೇಣುಗಂಬಗೇರುವುದನ್ನು ಅನುಕರಿಸಿದ್ದಾನೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.  ಮಂದ್ಸೌರ್ ಜಿಲ್ಲಾಸ್ಪತ್ರೆಯಲ್ಲಿ […]

ಮನೆಹಾಳು ಮಾಡುವ ವಿಚಾರದಲ್ಲಿ ನನಗೆ ಸೀರಿಯಸ್‌ನೆಸ್ ಇಲ್ಲ: ಶ್ರೀರಾಮುಲುಗೆ ತಿರುಗೇಟು ನೀಡಿದ ಎಚ್‍ಡಿಕೆ

 ಮೈಸೂರು: ಮನೆಹಾಳು ಮಾಡುವ ವಿಚಾರದಲ್ಲಿ ನನಗೆ ಸೀರಿಯಸ್‍ನೆಸ್‍ ಇಲ್ಲ ಎನ್ನುವ ಮೂಲಕ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಅವರು ಸಚಿವ ಶ್ರೀರಾಮುಲು ಅವರಿಗೆ ತಿರುಗೇಟು ನೀಡಿದ್ದಾರೆ.  ಈಚೆಗೆ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಮೈಸೂರಿಗೆ ಬಂದಿದ್ದ ಶ್ರೀರಾಮುಲು, ‘ಕುಮಾರಸ್ವಾಮಿ ಸೀರಿಯಸ್‌ನೆಸ್ ಇಲ್ಲದ ಮನುಷ್ಯ’ ಎಂದು ಟೀಕಿಸಿದ್ದರು.  ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿದ ಎಚ್‍.ಡಿ.ಕುಮಾರಸ್ವಾಮಿ ತಮ್ಮ ಬಗ್ಗೆ ಶ್ರೀರಾಮುಲು ನೀಡಿದ್ದ ಹೇಳಿಕೆ ಪ್ರತಿಕ್ರಿಯೆ ನಿಡಿ, ಅವರಂತೆ ಮನೆಹಾಳು ಮಾಡುವ ವಿಚಾರದಲ್ಲಿ ನನಗೆ ಸೀರಿಯಸ್‌ನೆಸ್ ಇಲ್ಲ ಎನ್ನುವುದು […]

ಅಪ್ರಾಪ್ತೆ ಮೇಲೆ ಅತ್ಯಾಚಾರ; ಯೋಧನಿಗೆ 40 ವರ್ಷ ಜೈಲು ಶಿಕ್ಷೆ

 ವಿರಾಜಪೇಟೆ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಿದ ಯೋಧನೋರ್ವನಿಗೆ 40 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.  ಕೇರಳದ ಮಾನಂದವಾಡಿಯ ವೈನಾಡ್‌ನ ಮುದುಕರದ ನಿವಾಸಿ ಹಾಗೂ ಸಿಆರ್‌ಪಿಎಫ್ ಯೋಧ ಸಿ.ಡಿ.ನಿತಿನ್ (29) ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಜೈಲು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಹಾಗೂ ಫೋಕ್ಸೊ ಅಪರಾಧಗಳಿಗಾಗಿ ತಲಾ 20 ವರ್ಷ ಸಜೆ ಹಾಗೂ ಒಟ್ಟು 95,000 ರೂ.ದಂಡ ವಿಧಿಸಿದ್ದಾರೆ.  2019ರ ಮಾ.12ರಂದು ನಿತಿನ್ ಇಂಜಿಲಗೆರೆಯ […]

ಪಕ್ಷದ್ರೋಹಿಗಳು ಸಚಿವರಾಗಿದ್ದಕ್ಕೆ ಖುಷಿ ಇಲ್ಲ: ಸಿದ್ದರಾಮಯ್ಯ

  ಪಕ್ಷ ದ್ರೋಹಿಗಳು ಸಚಿವರಾಗಿರುವುದಕ್ಕೆ ನನಗೆ ಖುಷಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲೆ ಎಚ್‍.ಡಿ.ಕೋಟೆಯಲ್ಲಿ ಮಾತನಾಡಿದ ಅವರು, ಪಕ್ಷಾಂತರಿಗಳು ಗೆದ್ದು ಸಚಿವರಾಗಿದ್ದರೂ ಕಾನೂನಿನ ಪ್ರಕಾರ ಅನರ್ಹರೇ ಎಂದು ಹೇಳಿದರು.   ಪಕ್ಷದ್ರೋಹ ಮಾಡಿರುವುದರಿಂದ ಅವರ ಬಗ್ಗೆ ಬೇಸರವಿದೆ. ಆದರೂ ಶುಭ ಕೋರುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎಂದು ಸಿದ್ದರಾಮಯ್ಯ ಇದೇ ಹೇಳಿದ್ದಾರೆ.

ಯುವಜನರಿಂದ ಮೋದಿಗೆ ಬಡಿಗೆ ಏಟು: ರಾಹುಲ್‍ ಗಾಂಧಿ

  ಯುವಜನರು ಪ್ರಧಾನಿಗೆ ಬಡಿಗೆ ತೆಗೆದುಕೊಂಡು ಬಡಿಯಲಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‍ ನಾಯಕ ರಾಹುಲ್‍ ಗಾಂಧಿ ವಿವಾದಕ್ಕೆ ಕಾರಣರಾಗಿದ್ದಾರೆ.     ದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಈಗ ಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಆರು ತಿಂಗಳ ನಂತರ, ಅವರಿಗೆ ತಮ್ಮ ಮನೆ ಬಿಟ್ಟು ಹೊರಬರುವುದಕ್ಕೂ ಸಾಧ್ಯವಾಗುವುದಿಲ್ಲ. ದೇಶದ ಯುವಜನರು ಬಡಿಗೆ ತೆಗೆದುಕೊಂಡು ಪ್ರಧಾನಿಗೆ ಬಡಿಯುತ್ತಾರೆ. ಉದ್ಯೋಗ ಒದಗಿಸದಿದ್ದರೆ ಈ ದೇಶದ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಅರ್ಥೈಸುತ್ತಾರೆ ಎಂದು […]

ಪಾಕಿಸ್ತಾನದಲ್ಲಿದ್ದ ಅಲ್ಪಸಂಖ್ಯಾತರ ರಕ್ಷಣೆ ಬಯಸಿದ್ದ ನೆಹರೂ ಕೋಮುವಾದಿಯೇ: ಮೋದಿ ಪ್ರಶ್ನೆ

 ಪಾಕಿಸ್ತಾನದಲ್ಲಿದ್ದ ಅಲ್ಪಸಂಖ್ಯಾತರ ರಕ್ಷಣೆ, ಹಿತ ಬಯಸುತ್ತಿದ್ದ ನೆಹರೂ ಅವರು ಕೋಮುವಾದಿಯೇ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದರು.  ಸಂಸತ್‍ ಅಧಿವೇಶದಲ್ಲಿ ಗುರುವಾರ ನರೇಂದ್ರ ಮೋದಿ ಅವರು, ಅಧಿವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್‍ ಕೋವಿಂದ್‍ ಅವರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಮಾತನಾಡಿ, ನಮ್ಮ ಸರ್ಕಾರ ಕಾಂಗ್ರೆಸ್‍ ಹಾದಿಯಲ್ಲಿ ನಡೆದಿದ್ದರೆ, ಆರ್ಟಿಕಲ್‍-370, ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಹಾಗೂ ತ್ರಿವಳಿ ತಲಾಖ್‍ ನಿಷೇಧ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕಾಂಗ್ರೆಸ್‍ ವಿರುದ್ಧ ಕಿಡಿಕಾರಿದರು.  ಸಿಎಎ ಬಗ್ಗೆ ಮುಸಲ್ಮಾನರ […]

10 ಜನ ಸಚಿವರಾದರೆ, ಬಿಜೆಪಿಯ 105 ಶಾಸಕರೇನು ಕಡುಬು ತಿಂತಾರಾ: ಎಚ್‌ಡಿಕೆ ಪ್ರಶ್ನೆ

 ಉಪಚುನಾವಣೆಯಲ್ಲಿ ಗೆದ್ದ 10 ಜನ ಸಚಿವರಾಗಿ ಮಜಾ ಮಾಡ್ತಿದ್ರೆ. ಬಿಜೆಪಿಯ 105 ಶಾಸಕರು ಕಡುಬು ತಿಂತಾರಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.  ಮೈಸೂರಿನಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಧ್ಯಾಹ್ನಕ್ಕೊಂದು, ಸಂಜೆಗೊಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮುಂದೇ ಏನಾಗುತ್ತೊ ಕಾದು ನೋಡೋಣ ಎಂದು ಬಿಜೆಪಿ ಪಕ್ಷದೊಳಗೆ ಸೃಷ್ಟಿಯಾಗಿರುವ ಅಸಮಾಧಾನ ಕುರಿತು ಬೆಳಕು ಚೆಲ್ಲಿದರು.  ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬುದರಲ್ಲಿ ಸಿಎಂ ಬಿಎಸ್‍ವೈ ಪರಿಣತರು. ಸರ್ಕಾರ ಬೀಳಿಸೋದು, ರಚಿಸುವುದು ಅವರಿಗೆ ಕರಗತವಾಗಿದೆ. ಈ ಸರ್ಕಾರವನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ […]

8 ಮಂದಿ ಮೊದಲ ಬಾರಿ ಸಚಿವರು; 9 ಮಂದಿ ಸಿಎಂ ಕಾಲಿಗೆರಗಿದರು..!

  ಇಂದು (ಗುರುವಾರ) 10 ಅರ್ಹರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‍, ಜೆಡಿಎಸ್‍ ನಿಂದ ವಲಸೆ ಬಂದ ಕಾರಣಕ್ಕಾಗಿ ಈ ಹತ್ತು ಮಂದಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇದರಲ್ಲಿ 8 ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ವಿಜಯನಗರ ಶಾಸಕ ಆನಂದ್ ಸಿಂಗ್ ಮಾತ್ರ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಉಳಿದೆಲ್ಲರೂ ಹೊಸಬರೇ.   ಇನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಟ್ಟು ಉಳಿದೆಲ್ಲರೂ ಸಿಎಂ ಯಡಿಯೂರಪ್ಪ ಅವರ ಕಾಲಿಗೆ […]