You cannot copy content of this page.
. . .

Day: February 5, 2020

ಕನ್ಹಯ್ಯ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; ಗಾಯಗೊಂಡ ಕನ್ಹಯ್ಯ

 ಜೆಎನ್‍ಯು ಮಾಜಿ ವಿದ್ಯಾರ್ಥಿ ಹಾಗೂ ಸಿಪಿಐ ನಾಯಕ ಕನ್ಹಯ್ಯಾ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಬುಧವಾರ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕನ್ಹಯ್ಯ ಕುಮಾರ್ ಅವರಿಗೆ ಗಾಯಗಳಾಗಿವೆ.   ಬಿಹಾರದ ಸುಪಾಲ್‌ ಜಿಲ್ಲೆಯಲ್ಲಿ ನಡೆದ ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು, ಸಹಾರ್ಸ ಕಡೆಗೆ ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಸ್ಥಳೀಯ ಮಾರುಕಟ್ಟೆಯ ಮಾರ್ಗವಾಗಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಅವರ ವಾಹನ […]

ನಂಬರ್ ಪ್ಲೇಟ್ ಇಲ್ಲದ ಕಾರು ತಂದು ಕುರಿ ಕಳವು

(ಸಾಂದರ್ಭಿಕ ಚಿತ್ರ)  ಎಚ್.ಡಿ.ಕೋಟೆ: ನಂಬರ್ ಪ್ಲೇಟ್ ಇಲ್ಲದೆ ಮಾರುತಿ-800 ಕಾರೊಂದರಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ತಡರಾತ್ರಿ ಮನೆಯಲ್ಲಿದ್ದ 2 ಮೇಕೆ ಹಾಗೂ 5 ಕುರಿಗಳನ್ನು ಕಳವು ಮಾಡಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ನಿವಾಸಿ ದೇವೇಗೌಡ ಎಂಬವರ ಮನೆಯಲ್ಲಿ ಕುರಿಗಳು ಕಳವು ಆಗಿದೆ. ಸೋಮವಾರ ರಾತ್ರಿ 2.30ರ ಸಮಯದಲ್ಲಿ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ಕುರಿಗಳನ್ನು ಹೊತ್ತೊಯ್ಯುತ್ತಿರುವ ವೇಳೆ ದೇವೇಗೌಡ ಆಚೆಗೆ ಬಂದು ನೋಡಲಾಗಿ ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಕುರಿಗಳನ್ನು […]

ಸಂಪುಟ ವಿಸ್ತರಣೆ; 10 ಜನರ ಪಟ್ಟಿ ರಾಜ್ಯಪಾಲರಿಗೆ ರವಾನೆ

  ನಾಳೆ (ಗುರುವಾರ) ಬೆಳಗ್ಗೆ 10.30ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ರಾಜಭವನದಲ್ಲಿ ಈಗಾಗಲೇ ಸಿದ್ಧತೆ ನಡೆದಿದೆ. ಈ ನಡುವೆ ಬಿಜೆಪಿಯಲ್ಲಿ ಇನ್ನೂ ಗೊಂದಲ ಮುಂದುವರೆದಿದೆ. ಈ ನಡುವೆ 10 ಜನರ ಪಟ್ಟಿಯನ್ನು ಸಿಎಂ ಬಿಎಸ್‍ ವೈ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದವರಲ್ಲಿ 10 ಮಂದಿಯ ಪಟ್ಟಿ ಮಾತ್ರ ರಾಜ್ಯಪಾಲರ ಕೈಗೆ ಸೇರಿದೆ. ಆದರೆ ಮೂಲ ಬಿಜೆಪಿಗರ ಹೆಸರು ಇನ್ನೂ ಅಂತಿಮವಾಗಿಲ್ಲ. ಹೈಕಮಾಂಡ್ ಸೂಚನೆ ಬಂದ ನಂತರ ಮೂಲ ಬಿಜೆಪಿಗರನ್ನು ನಾಳೆ (ಗುರುವಾರ) ಸಂಪುಟ ಸೇರಿಸಿಕೊಳ್ಳುತ್ತಾರೋ […]

ಸಾಲ ಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ

 ಹುಣಸೂರು:  ಸಾಲ ಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಮೈಲಾಂಬೂರು ಗ್ರಾಮದಲ್ಲಿ ನಡೆದಿದೆ.  ಗ್ರಾಮದ ಸೂರೇಗೌಡ (55) ಆತ್ಮಹತ್ಯೆ ಮಾಡಿಕೊಂಡ ರೈತ. ಇವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಸೂರೇಗೌಡ ಅವರು ವ್ಯವಸಾಯಕ್ಕಾಗಿ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 3 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಪಡೆದಿದ್ದರು. ಬೆಳೆ ಕೈಕೊಟ್ಟ ಕಾರಣ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ […]

ಕಾರಿನ ಗ್ಲಾಸ್ ಒಡೆದು ಲಕ್ಷ ರೂ. ದೋಚಿದ ದುಷ್ಕರ್ಮಿಗಳು

(ಸಾಂದರ್ಭಿಕ ಚಿತ್ರ)  ಪಿರಿಯಾಪಟ್ಟಣ: ಪಟ್ಟಣದ ಬಿ.ಎಂ.ರಸ್ತೆಯ ಗ್ರಾಂಡ್ ಕಲೆಕ್ಷನ್ ಮಳಿಗೆ ಬಳಿ ನಿಂತಿದ್ದ ಕಾರಿನ ಗ್ಲಾಸ್ ಒಡೆದು  ಕಾರ್‌ನಲ್ಲಿದ್ದ 1 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.  ತಾಲ್ಲೂಕಿನ ಬೈಲಕುಪ್ಪೆಯ ಉದ್ಯಮಿ ಅಣ್ಣಪ್ಪ ಎಂಬವರೇ ಹಣ ಕಳೆದುಕೊಂಡವರು. ಇವರು ಬುಧವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಗ್ರಾಂಡ್ ಕಲೆಕ್ಷನ್ ಶೋ ರೂಂ ಬಳಿ ಕಾರು ನಿಲ್ಲಿಸಿ ಪಕ್ಕದ ಹೊಟೇಲ್‌ಗೆ ಹೋಗಿ ಕೈ […]

ಮೊಬೈಲ್ ಕಸಿದು ಖದೀಮರು ಪರಾರಿ

 ಮೈಸೂರು : ಬೈಕಿನಲ್ಲಿ ಬಂದ ಇಬ್ಬರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ 30 ಸಾವಿರ ರೂ. ಮೌಲ್ಯದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.  ಬೆಂಗಳೂರಿನ ಇಮಾನುಷ್ ಮಲಿಕ್ ಅವರೇ ಮೊಬೈಲ್ ಕಳೆದುಕೊಂಡವರು. ಇವರು ಸೋಮವಾರ ರಾತ್ರಿ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು ತಮ್ಮ ಒನ್ ಪ್ಲಸ್-6 ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಾ ಮೈಸೂರು ಮೆಡಿಕಲ್ ಕಾಲೇಜ್ ಗೇಟ್ ಬಳಿ ನಡೆದುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ನಗರದ ಮಂಡಿಠಾಣೆಯಲ್ಲಿ ಪ್ರಕರಣ […]

ರಾತ್ರಿ ಆಹಾರ ಸೇವನೆ; ಓರ್ವ ಸಾವು, ನಾಲ್ವರು ಅಸ್ವಸ್ಥ

  ರಾತ್ರಿಯ ಆಹಾರ ಸೇವನೆ ಮಾಡಿದ ಕಾರಣದಿಂದಾಗಿ ಒಬ್ಬ ಯುವಕ ಮೃತಪಟ್ಟಿದ್ದು, ಒಂದೇ ಕುಟುಂಬದ 5 ಮಂದಿ ಅಸ್ವಸ್ಥರಾಗಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕಂಡಕರೆ ಎಂಬಲ್ಲಿ ನಡೆದಿದೆ.    ಸಂತೋಷ್(30) ಮೃತ ಯುವಕ. ಸಾವಿತ್ರಿ ಎಂಬವರ ಮನೆಯಲ್ಲಿ ಭಾನುವಾರ ರಾತ್ರಿ ಕಡುಬು ಹಾಗೂ ಕೋಳಿ ಮಾಂಸ ಸಾರು ಮಾಡಿ ಎಲ್ಲರೂ ಸೇವಿಸಿದ್ದಾರೆ. ಊಟವಾದ ಕೆಲ ಹೊತ್ತಲ್ಲೇ ಸಾವಿತ್ರಿ, ಮಕ್ಕಳಾದ ಸಂತೋಷ್, ವಿನೋದ್, ಸಹೋದರರಾದ ಶಶಿಧರ್, ಮಣಿ ಎಂಬವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಸ್ಥಳೀಯ ಆರೋಗ್ಯ […]

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಹೆಚ್ಚಾಗಲಿ: ಎಚ್‌ಎಸ್‌ವಿ

 ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಹೆಚ್ಚಾಗಬೇಕು ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.  ಕಲಬುರ್ಗಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಬುಧವಾರ ಅವರು ಮಾತನಾಡಿದರು.  ರಾಜ್ಯದಲ್ಲಿ ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ನಿತ್ಯ ಸೇವಾ ಜನರು ಇಂಗ್ಲಿಷ್ ಭಾಷೆಯ ಹಂಗಿಲ್ಲದೇ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕನ್ನಡ ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರುವುದು ಅಗತ್ಯ. ಅನ್ನ ಸಂಪಾದನೆಯು ಕೈಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ […]

ಬುರ್ಖಾ ಧರಿಸಿ ಬಂದಿದ್ದ ಯೂಟ್ಯೂಬರ್‍ ಅರೆಸ್ಟ್

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್‍ ಬಾಗ್‍ ನಲ್ಲಿ ನಡೆಯುತ್ತಿರುವ ಪ್ರತಿಬಟನಾ ಸ್ಥಳಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದ ಬಲಪಂಥೀಯ ಯೂಟ್ಯೂಬರ್‍ ಗುಂಜಾ ಕಪೂರ್‍ ಅವರನ್ನು ಪೊಲೀಸರು ಬಂಧಿಸಿದ್ದಾರೆ.   ಗುಂಜಾ ಕಪೂರ್‍ ಬುರ್ಖಾ ಧರಿಸಿ ಬಮದು ಪ್ರತಿಭಟನೆಯಲ್ಲಿ ನಿರತಳಾಗಿದ್ದರು. ಈ ವೇಳೆ ಈಕೆ ಪ್ರತಿಭಟನಾಕಾರರ ಬಳಿ ಅತಿಯಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರಿಂದ ಶಂಕೆ ಬಂದು ಪ್ರತಿಭಟನಾಕಾರರು ಆಕೆಯನ್ನು ಪ್ರಶ್ನಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಂಧಿತ ಮಹಿಳೆಯಿಂದ ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ. ರೈಟ್‍ ನರೇಟಿವ್‍ ಎಂಬ […]

ಬೆಂಗಳೂರಿನಲ್ಲಿ ವಾಲಿದ ಕಟ್ಟಡ; 35 ಕಟ್ಟಡಗಳ ಜನರ ಸ್ಥಳಾಂತರ

  ಬೆಂಗಳೂರಿನಲ್ಲಿ ನಾಲ್ಕಂತಸ್ತಿನ ಕಟ್ಟಡವೊಂದು ವಾಲಿದ್ದು, ಅಪಾಯಕ್ಕೆ ಕಾರಣವಾಗಿದೆ. ಇದರಿಂದಾಗಿ 35ಕ್ಕೂ ಹೆಚ್ಚು ಕಟ್ಟಡಗಳಲ್ಲಿ ವಾಸವಿದ್ದ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.    ಬೆಂಗಳೂರಿನ ಕೆಂಪಾಪುರದ ವಾಯುನಂದನ ಲೇಔಟ್‌ನಲ್ಲಿನ ನಾಲ್ಕಂತಸ್ತಿ ಮನೆ ಪಕ್ಕಕ್ಕೆ ವಾಲಿದೆ. ಹೀಗಾಗಿ ಅಕ್ಕಪಕ್ಕದ 35 ಕಟ್ಟಡಗಳಲ್ಲಿ ನೆಲೆಸಿದ್ದ ಜನರನ್ನು ತೆರವು ಮಾಡಲಾಗಿದೆ.   ಬೆಂಗಳೂರು ನಗರ ಈಶಾನ್ಯ ವಲಯ ಡಿಸಿಪಿ ಡಾ. ಭೀಮಾಶಂಕರ್ ಎಸ್. ಗುಳೇದ್ ಅವರು ಟ್ವೀಟ್‌ ಮಾಡಿ ಮಾಧ್ಯಮಗಳಿಗೆ ಈ ಸಂದೇಶ ರವಾನೆ ಮಾಡಿದ್ದಾರೆ. ಜೊತೆಯಲ್ಲೇ ವಾಲುತ್ತಿರುವ ಕಟ್ಟಡ, ಜನರ ತೆರವು […]