You cannot copy content of this page.
. . .

Day: February 4, 2020

ರೈತರ ಮೇಲಿನ ಕೇಸ್‍ ವಾಪಸ್‍ ಗೆ ನಿರ್ಧಾರ

  ರಾಜ್ಯದಲ್ಲಿ ದಾಖಲಾಗಿರುವ ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್‍ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.  ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಮಾದುಸ್ವಾಮಿ ಈ ವಿಷಯ ತಿಳಿಸಿದರು. ಕಳಸಾ ಬಂಡೂರಿ ಹೋರಾಟ ಸಮಿತಿ, ಕಾವೇರಿ ಹಿತರಕ್ಷಣಾ ಸಮಿತಿ ಹಾಗೂ ಜಿ.ಮಾದೇಗೌಡರ ಮೇಲಿನ ಕೇಸ್‍ ಗಳು ಸೇರಿ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಕೇಸ್‍ ಗಳನ್ನು ವಾಪಸ್‍ ಪಡೆಯುವುದಾಗಿ ಮಾದುಸ್ವಾಮಿ ತಿಳಿಸಿದರು.

ನಾಲೆಯಲ್ಲಿ ಪತ್ತೆಯಾದ ಮೊಸಳೆ ರಕ್ಷಣೆ

 ಸಾಲಿಗ್ರಾಮ: ಕಾವೇರಿ ನದಿಯ ಬಳ್ಳೂರು ಅಣೆಕಟ್ಟೆ ಬಳಿ ಚಾಮರಾಜ ಎಡದಂಡೆ ನಾಲೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಿಸಲಾಯಿತು.  ಬಳ್ಳೂರು ಅಣೆಕಟ್ಟೆಯ ಬಳಿ ನಾಲೆಯ ಹತ್ತಿರ ಭಾನುವಾರ ರಾತ್ರಿ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಜಮೀನಿಗೆ ತೆರಳಿದ್ದ ಗ್ರಾಮದ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಮೊಸಳೆಯನ್ನು ರಕ್ಷಣೆ ಮಾಡಿದರು.  ಅಂದಾಜು 150 ಕೆ.ಜಿ. ತೂಕವಿರುವ ಈ ಮೊಸಳೆಯನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ಬಿಡುವುದಾಗಿ ವಲಯ ಅರಣ್ಯಾಧಿಕಾರಿ ಜಗದೀಶಗೌಡ […]

ಮೈಸೂರಿನಲ್ಲಿ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ: ಸಚಿವ ಸಿ.ಟಿ.ರವಿ

ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.    ಮೈಸೂರಿನ ವಿಜಯಶ್ರೀ ಬಡಾವಣೆಯಲ್ಲಿ 3 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಮಂಗಳವಾರ ವಿಧಾನಸೌಧದಲ್ಲಿ ಬಜೆಟ್‌ ಪೂರ್ವಭಾವಿ ಸಭೆಯ ನಂತರ ಸಿ.ಟಿ.ರವಿ ತಿಳಿಸಿದ್ದಾರೆ. ಈಗಾಗಲೇ ಇದಕ್ಕೆ ಡಿಪಿಆರ್‌ ಕರಡು ಸಿದ್ಧವಾಗಿದೆ. ಶಾಸ್ತ್ರೀಯ ಕೇಂದ್ರಕ್ಕೆ ಬೇಕಿರುವ ಅಗತ್ಯ ದಾಖಲಾತಿಗಳನ್ನು ಕೇಂದ್ರ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿ, 10 ದಿನದೊಳಗೆ […]

ಕೊರೊನಾ ಭೀತಿ; ಚೀನಾದಿಂದ ಮಂಡ್ಯಕ್ಕೆ ವಾಪಸ್ಸಾದ ವಿದ್ಯಾರ್ಥಿನಿ

(ಸಾಂದರ್ಬಿಕ ಚಿತ್ರ)  ಚೀನಾದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕೊರೊನಾ ವೈರಸ್‍ ಸೋಂಕು ಭಯದಿಂದ ಮಂಡ್ಯಕ್ಕೆ ಮರಳಿದ್ದಾರೆ. ವಿದ್ಯಾರ್ಥಿನಿ ಮಂಡ್ಯದ ವಿದ್ಯಾನಗರದ ನಿವಾಸಿಯಾಗಿದ್ದಾರೆ.  ‘ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ವಿದ್ಯಾರ್ಥಿನಿಯ ಮೇಲೆ ನಿಗಾ ವಹಿಸಲಾಗಿದೆ. ಅವರು ಬಂದು ಮೂರು ದಿನವಾಗಿದ್ದು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅಗತ್ಯ ಬಂದರೆ ಹೆಚ್ಚಿನ ತಪಾಸಣೆ ನಡೆಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದ್ದಾರೆ.  ಭಾನುವಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸ್ಥಳದಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆಕೆಯ […]

ಸಂಪುಟ ಪುನಾರಚನೆ ಇಲ್ಲ, ವಿಸ್ತರಣೆ ಮಾತ್ರ: ಸಿಎಂ ಬಿಎಸ್‌ವೈ ಸ್ಪಷ್ಟನೆ

 ಸಚಿವ ಸಂಪುಟ ಪುನಾರಚನೆ ಇಲ್ಲ. ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.  ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಸಚಿವರು ಗೊಂದಲಕ್ಕೆ ಒಳಗಾಗಬೇಡಿ. ಹೈಕಮಾಂಡ್‍ ಬಳಿ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಪ್ರಸ್ತಾಪ ಮಾಡಲಾಗಿದೆ. ಇನ್ನು 6 ತಿಂಗಳವರೆಗೆ ಸಂಪುಟ ಪುನಾರಚನೆ ನಿರ್ಧಾರ ಇಲ್ಲ. 6 ತಿಂಗಳ ನಂತರ ಸಂಪುಟ ಪುನಾರಚನೆಯನ್ನು ಹೈಕಮಾಂಡ್‍ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಸುತ್ತೂರು ಮಠಕ್ಕೂ ಸಿಗ್ತಿಲ್ಲವಂತೆ ದಾಸೋಹದ ಅಕ್ಕಿ..?

  ದಾಸೋಹ ಯೋಜನೆಯಲ್ಲಿ ಮಠಗಳಿಗೆ ನೀಡುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ರಾಜ್ಯ ಸರ್ಕಾರ ಹಲವು ಮಠಗಳಿಗೆ ಕಳೆದ 3 ತಿಂಗಳಿಂದ ಪೂರೈಕೆ ಮಾಡಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸರ್ಕಾರ 3 ಬಾರಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 281 ಸಂಸ್ಥೆಗಳನ್ನು ದಾಸೋಹ ಯೋಜನೆಯಿಂದ ಕೈಬಿಟ್ಟಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.   ಸಿದ್ದಗಂಗಾ ಮಠ, ಸುತ್ತೂರು ಮಠ, ಆದಿಚುಂಚನಗಿರಿ ಮಠ ಸೇರಿದಂತೆ ಹಲವು ಪ್ರಮುಖ ಮಠಗಳಿಗೂ ಅಕ್ಕಿ, ಗೋಧಿ ಪೂರೈಕೆ ನಿಲ್ಲಿಸಲಾಗಿದೆಯಂತೆ. ಆಹಾರ ಮತ್ತು […]

ಪ್ಯಾಸೆಂಜರ್ ಆಟೋ ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಾಯ

 ಆಟೋ ಪಲ್ಟಿಯಾಗಿ ಪರಿಣಾಮ ಅಟೋದಲ್ಲಿದ್ದ ರಾಜಚಾರಿ (65) ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.  ತಾಲ್ಲೂಕಿನ ಬನ್ನಿತಾಳಪುರ ಗ್ರಾಮದಿಂದ ಪಟ್ಟಣಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಆಟೋ ಮಾರ್ಗಮಧ್ಯೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಇದರಿಂದ ಗಾಯಗೊಂಡ ರಾಜಚಾರಿಯನ್ನು ಆಸ್ಪತ್ರೆಗೆ ಸಾಗುವಷ್ಟರಲ್ಲೇ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.  ನಾಲ್ವರು ಮಹಿಳೆಯರಿಗೆ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ಧಗಂಗಾ ಮಠಕ್ಕೂ ದಾಸೋಹದ ಅಕ್ಕಿ ಬಂದ್

  ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಬಿಜೆಪಿ ಸರ್ಕಾರ ಬ್ರೇಕ್‍ ಹಾಕಿದೆ. ದಾಸೋಹ ಯೋಜನೆಯಡಿ ಸಿದ್ಧಗಂಗಾ ಮಠಕ್ಕೆ ನೀಡುತ್ತಿದ್ದ ಅಕ್ಕಿ, ಗೋದಿ ಪೂರೈಕೆಯನ್ನು ಕಳೆದ 3 ತಿಂಗಳಿಂದ ನಿಂತಿದೆ ಎಂದು ಕಾಂಗ್ರೆಸ್‍ ಶಾಸಕ ಯು.ಟಿ.ಖಾದರ್‍ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.   ದಾಸೋಹ ಯೋಜನೆ ಅಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಸಿ‍ದ್ಧಗಂಗಾ ಮಠದ 7,359 ವಿದ್ಯಾರ್ಥಿಗಳ ಊಟಕ್ಕೆ 73,590 ಕೆಜಿ ಅಕ್ಕಿ, 36,795 ಕೆಜಿ ಗೋಧಿ ಪೂರೈಕೆಯಾಗುತ್ತಿತ್ತು. ಆದರೆ ಕಲೆದ 3 ತಿಂಗಳಿಂದ ಆಹಾರ […]

ಐಎಂಎ ಬಹುಕೋಟಿ ಹಗರಣ; ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ FIR

  ಐಎಂಎ ಜ್ಯುವೆಲರ್ಸ್‍ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐವರು ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.   ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಅಂದಿನ ಕಮರ್ಷಿಯಲ್ ಠಾಣೆ ಇನ್ಸ್‌ಪೆಕ್ಟರ್ ಎಂ.ರಮೇಶ್, ಸಬ್ ಇನ್ಸ್‌ಪೆಕ್ಟರ್ ಗೌರಿಶಂಕರ್, ಸಿಐಡಿ ಡಿವೈಎಸ್ಪಿ ಶ್ರೀಧರ್ ವಿರುದ್ಧ ಸೆಕ್ಷನ್ 120 ಬಿ ಅಡಿ ಬೆಂಗಳೂರು ಸಿಬಿಐ ಕಚೇರಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಐಎಂಎ ಪ್ರಕರಣ ಸಂಬಂಧ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಕಳೆದ ವಾರವಷ್ಟೇ ರಾಜ್ಯ […]

ಎಲ್ಐಸಿ ಖಾಸಗೀಕರಣ ಬೇಡ: ನೌಕರರ ಪ್ರತಿಭಟನೆ

 ಮೈಸೂರು: ಜೀವ ವಿಮಾ ನಿಗಮದ ಸರ್ಕಾರದ ಪಾಲನ್ನು ಮಾರಾಟ ಮಾಡಲು ಈ ಬಾರಿಯ ಬಜೆಟ್‌ನಲ್ಲಿ ತೀರ್ಮಾನ ತೆಗೆದುಕೊಂಡಿರುವುದನ್ನು ವಿರೋಧಿಸಿ ಎಲ್‌ಐಸಿ ನೌಕರರು ಪ್ರತಿಭಟನೆ ನಡೆಸಿದರು.  ಮಂಗಳವಾರ ಮಧ್ಯಾಹ್ನ ನಗರದ ಬನ್ನಿಮಂಟಪದ ಬಳಿಯ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಎಲ್‌ಐಸಿ ಕೇಂದ್ರ ಕಚೇರಿ ಮುಂಭಾಗ ಜಮಾವಣೆಗೊಂಡ ನೌಕರರು ಕೇಂದ್ರ ಸರ್ಕಾರದ ನೀತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಆತಂಕಕಾರಿಯಾಗಿದೆ. ಇಲ್ಲಿಯವರೆಗೆ ಎಲ್‌ಐಸಿಯು ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿತ್ತು. ಖಾಸಗಿ […]