You cannot copy content of this page.
. . .

Day: February 3, 2020

ಬಾಲಮಂದಿರದ ಮೂವರು ಬಾಲಕರು ಪರಾರಿ

 ಮೈಸೂರು: ಹೊರಗಿನಿಂದ ಬಂದ ನಾಲ್ವರ ಸಹಾಯದೊಂದಿಗೆ ಬಾಲಮಂದಿರದಲ್ಲಿದ್ದ ಮೂವರು ಬಾಲಕರು ಪರಾರಿಯಾಗಿದ್ದಾರೆ.  ನಗರದ ವಿವೇಕಾನಂದನಗರ 1ನೇ ಮುಖ್ಯರಸ್ತೆಯಲ್ಲಿರುವ ಬಾಲಮಂದಿರದಲ್ಲಿ ಕಾನೂನು ಬದ್ದ ರಕ್ಷಣೆಯಲ್ಲಿದ್ದ ಕಾನೂನು ಸಂಘರ್ಷಕ್ಕೊಳಗಾದ 17 ವರ್ಷದ ಮೂವರು ಬಾಲಕರು ಭಾನುವಾರ ಬೆಳಗಿನ ಜಾವ ಹೊರಗಿನಿಂದ ಬಂದ ನಾಲ್ವರು ಸಹಚರರೊಂದಿಗೆ ಪರಾಕಿಯಾಗಿದ್ದಾರೆ.  ಭಾನುವಾರ ಹೊರಗಿನಿಂದ ನಾಲ್ವರು ವೀಕ್ಷಣಾಲಯಕ್ಕೆ ಖಾರದ ಪುಡಿ, ಕಬ್ಬಿಣದ ರಾಡ್, ಚಾಕು ಇತ್ಯಾದಿ ಕಬ್ಬಿಣದ ವಸ್ತುಗಳನ್ನು ಬಳಸಿ, ವೀಕ್ಷಣಾಲಯದ ಕೆಳ ಅಂತಸ್ತಿನಲ್ಲಿರುವ ಕಬ್ಬಿಣದ ಡೋರ್ ಗ್ರಿಲ್ ಬೀಗ ಒಡೆದು, ಒಳ ಹೊಕ್ಕಿದ್ದಾರೆ. ಬಳಿಕ […]

ಎಂಸಿಡಿಸಿಸಿ: ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭ

 ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ವತಿಯಿಂದ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಸೋಮವಾರ ಮೈಸೂರು ಕೇಂದ್ರ ಶಾಖೆಯಲ್ಲಿ ಚಾಲನೆ ನೀಡಲಾಯಿತು.  ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ನಂತರ ಮಾತನಾಡಿ ಬ್ಯಾಂಕ್ ಗ್ರಾಹಕರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭುಸಿದ್ದು ಪ್ರತಿದಿನ 2 ಲಕ್ಷ ರೂ.ವರೆಗೆ ಆನ್‌ಲೈನ್‌ನಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು […]

ಹಾಡಹಗಲೇ ಮಹಿಳೆ ಕೊಲೆ

 ಮಹಿಳೆಯೊಬ್ಬರು ಹಾಡಹಗಲೇ ಕೊಲೆಯಾಗಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬ್ರಾಹ್ಮಣರ ಬೀದಿಯ ಇಂದ್ರೇಶ್‍ ಎಂಬವರ ಪತ್ನಿ ಕಲಾವತಿ (40) ಕೊಲೆಯಾದ ಮಹಿಳೆ.  ಇಂದು (ಸೋಮವಾರ) ಬೆಳಿಗ್ಗೆ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ಇರುವುದನ್ನು ಗಮನಿಸಿರುವ ದುಷ್ಕರ್ಮಿಗಳು, ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಹಾಡಹಗಲೇ ದುಷ್ಕರ್ಮಿಗಳಿಂದ ಆದ ಕೊಲೆಯಿಂದ ಭಯಭೀತರಾಗಿರುವ ಮೃತ ಮಹಿಳೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ […]

ಡಿಸಿಎಂ ಸ್ಥಾನ ಕೇಳಿ ಪಕ್ಷ, ಸಿಎಂಗೆ ಮುಜುಗರ ಉಂಟುಮಾಡಲ್ಲ: ಶ್ರೀರಾಮುಲು

 ಡಿಸಿಎಂ ಸ್ಥಾನ ಕೇಳಿ ಪಕ್ಷಕ್ಕೆ ಹಾಗೂ ಸಿಎಂಗೆ ಮುಜುಗರ ಉಂಟುಮಾಡಲ್ಲ. ಆ ಸ್ಥಾನದ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ ಎಂದು ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದರು.  ಮೈಸೂರಿನಲ್ಲಿ ಸೋಮವಾರ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‍ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಯಾರ್‍ಯಾರು ಸಚಿವರಾಗ್ತಾರೆ ಅಂತ ಎಲ್ಲರಿಗೂ ಈಗಾಗಲೇ ಗೊತ್ತಾಗಿದೆ. ಡಿಸಿಎಂ ಸ್ಥಾನದ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ನಾನು ಒಂದು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು […]

ಪ್ರಮೋದಾದೇವಿ ಒಡೆಯರ್ ಭೇಟಿಯಾದ ಸಚಿವ ಶ್ರೀರಾಮುಲು

 ಆರೋಗ್ಯ ಸಚಿವ ಬಿ.‌ಶ್ರೀರಾಮುಲು ಸೋಮವಾರ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿದರು. ತಮ್ಮ ಪುತ್ರಿ ರಕ್ಷಿತಾ ಹಾಗೂ ಲಲಿತ್ ಕುಮಾರ್ ಅವರ ವಿವಾಹಕ್ಕೆ ಲಗ್ನ ಪತ್ರಿಕೆ ನೀಡಿ ಆಹ್ವಾನ ನೀಡಿದರು.  ಮಾ.4, 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಕ್ಷಿತಾ ಹಾಗೂ ಲಲಿತ್ ಕುಮಾರ್ ಅವರ ವಿವಾಹ ನಡೆಯಲಿದೆ.

ಕೌಟುಂಬಿಕ ಕಲಹ; ನೀರಿಗೆ ಬಿದ್ದು ಆತ್ಮಹತ್ಯೆ

 ಎಚ್.ಡಿ.ಕೋಟೆ: ಕೌಟುಂಬಿಕ ಕೆಲಹದಿಂದ ಬೇಸತ್ತ ವ್ಯಕ್ತಿಯೊಬ್ಬರು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ತಾಲ್ಲೂಕಿನ ತಾರಕ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.   ತಾಲ್ಲೂಕಿನ ಹೀರೆಹಳ್ಳಿ ‘ಬಿ’ ಕಾಲೋನಿಯ ಸೋಮೇಶ್ (35) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕೌಟುಂಬಿಕ ಕಲಹದಿಂದ ಮನನೊಂದಿದ್ದ ಸೋಮೇಶ್ ತಾರಕ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದರು. ನಂತರ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸಾಹಿತ್ಯ ಸಮ್ಮೇಳನ; ಫೆ.5, 6, 7ರಂದು ಕಲಬುರ್ಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

 ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಫೆ. 5, 6, 7ರಂದು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು ಹಾಗೂ ವಿ.ವಿ.ಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.  ಈ ಬಾರಿ ಕಲಬುರ್ಗಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ವಹಿಸಲಿದ್ದಾರೆ.  

ಮುಸಲ್ಮಾನರನ್ನು ಭಯೋತ್ಪಾದಕರಂತೆ ಬಿಂಬಿಸುವುದು ಕೊರೊನಾ ವೈರಸ್‌ಗಿಂತ ಅಪಾಯಕಾರಿ

 ಮೈಸೂರು: ದೇಶದ ಮುಸಲ್ಮಾನರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುತ್ತಿರುವ ಧರ್ಮ ಕೇಂದ್ರಿತ ವೈರಸ್‍ ಕೊರೊನಾ ವೈರಸ್‍ಗಿಂತ ಅತ್ಯಂತ ಅಪಾಯಕಾರಿ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.  ನಗರದ ಬಹುಜನ್ ವಾಲೆಂಟಿಯರ್ ಫೋರ್ಸ್ ವತಿಯಿಂದ ಸೋಮವಾರ ನಡೆದ ‘ಪೌರತ್ವ ಪರೀಕ್ಷೆ! ಏನಿದರ ಮರ್ಮ?’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಶೇ.99ರಷ್ಟು ಮುಸಲ್ಮಾನರು ಈ ದೇಶದ ಮೂಲನಿವಾಸಿಗಳೇ. ಸ್ವಾತಂತ್ರ್ಯ ಬಂದ ನಂತರ ಸಮಗ್ರ ಭಾರತವನ್ನು ಉಳಿಸಿಕೊಂಡಿದ್ದರೆ, ದೇಶದ ಆಡಳಿತ ಎಸ್.ಸಿ., ಎಸ್.ಟಿ., ಓಬಿಸಿ ಹಾಗೂ ಮುಸಲ್ಮಾನರ ಕೈಯಲ್ಲಿ […]

ಮೈಸೂರು: ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

 ಮೈಸೂರಿನಲ್ಲಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಬನ್ನೂರಿನ ನೀರಾವರಿ ನಿಗಮದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರೈತರು ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ರೈತ ಮುಖಂಡ ಬನ್ನೂರು ನಾರಾಯಣ್‍ ಮಾತನಾಡಿ, ಕೆಆರ್‍ಎಸ್‍ ಅಣೆಕಟ್ಟೆಯಲ್ಲಿ 120 ಅಡಿಗಳಷ್ಟು ನೀರು ಇದೆ. ಬೇಸಿಗೆ ಬೆಳೆಗೆ ನಾಲೆಗಳಿಗೆ ನೀರು ಹರಿಸಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಆದರೆ, ಜನಪ್ರತಿನಿಧಿಗಳು ಮೋಜು ಮಸ್ತಿ ಮಾಡಿಕೊಂಡಿದ್ದಾರೆ ಕಿಡಿಕಾರಿದರು.  ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ. ಕೂಡಲೇ ಅಧಿಕಾರಿಗಳ ಸಭೆ ನಡೆಸಿ […]

ಮಂಡ್ಯ ವಿ.ವಿ.ಯಿಂದಲೇ ಪರೀಕ್ಷೆ ನಡೆಸಲು ಕ್ರಮ: ವಿಶೇಷಾಧಿಕಾರಿ ಭರವಸೆ, ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು

 ಮಂಡ್ಯ ವಿಶ್ವವಿದ್ಯಾಲಯದಡಿಯಲ್ಲೇ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಮಂಡ್ಯ ವಿ.ವಿ.ಯ ವಿಶೇಷಾಧಿಕಾರಿ ಪ್ರೊ.ಕೆ.ಎನ್.ನಿಂಗೇಗೌಡ ಭರವಸೆ ನೀಡಿದ್ದರಿಂದ, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಈ ಸಂಬಂಧ ಸುಮಾರು 2 ವಾರಗಳಿಂದ ವಿದ್ಯಾರ್ಥಿಗಳು ನಡೆಸಿಕೊಂಡು ಬಂದಿದ್ದ ಪ್ರತಿಭಟನೆ ಕೊನೆಗೂ ಅಂತ್ಯ ಕಂಡಿದೆ.  ವಿಶೇಷಾಧಿಕಾರಿ ಪ್ರೊ.ಕೆ.ಎನ್.ನಿಂಗೇಗೌಡ ಅವರು ಸೋಮವಾರ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸೂಕ್ತ ಕ್ರಮವಹಿಸಲಾಗುವುದು. ಈ ಸಂಬಂದ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರದ ಸೂಕ್ತ ನಿರ್ದೇಶನದೊಂದಿಗೆ ಕ್ರಮಕೈಗೊಳ್ಳುತ್ತೇವೆ. […]