You cannot copy content of this page.
. . .

Day: February 2, 2020

ನಿರ್ಭಯಾ ಪ್ರಕರಣ: ಗಲ್ಲುಶಿಕ್ಷೆ ತಡೆ- ತೀರ್ಪು ಕಾಯ್ದಿರಿಸಿದ ಕೋರ್ಟ್

 ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ತಡೆ ಕುರಿತ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.  ಗಲ್ಲುಶಿಕ್ಷೆ ತಡೆ ನೀಡಿರುವುದರ ಕುರಿತು ಕೇಂದ್ರ ಸರ್ಕಾರ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆಯನ್ನು ರಜಾ ದಿನವಾದ ಭಾನುವಾರವೂ ತುರ್ತಾಗಿ ವಿಚಾರಣೆ ನಡೆಸಲಾಯಿತು. ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೇತ್ ಈ ಸಂಬಂಧ ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದಾರೆ.  ಶುಕ್ರವಾರ ದೆಹಲಿ ನ್ಯಾಯಾಲಯ ಫೆ.1ರಂದು ನಾಲ್ಕು ಮಂದಿಗೆ ವಿಧಿಸಬೇಕಾಗಿತ್ತು.

ಆಸ್ಪತ್ರೆಗೆ ದಾಖಲಾದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

 ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ದೆಹಲಿಯ ಶ್ರೀಗಂಗಾರಾಮ್‍ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಎಂದಿನಂತೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕುಟುಂಬದ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಕಳ್ಳತನ; ವ್ಯಕ್ತಿ ಬಂಧನ

 ಈ ಹಿಂದೆ ಅಡುಗೆ ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ನಂಜನಗೂಡು ತಾಲೂಕು ಕಸುವಿನಹಳ್ಳಿ ನಿವಾಸಿ ಮಾದಪ್ಪ ಎಂಬವರ ಪುತ್ರ ಮಂಜು ಅಲಿಯಾಸ್ ಕೆಂಪ (28) ಬಂಧಿತ ಆರೋಪಿ. ಈತನು ಈ ಹಿಂದೆ ದೇವಾನಂದ್ ಎಂಬವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ನಂತರ ಕೆಲಸ ಬಿಟ್ಟಿದ್ದನು. ಶನಿವಾರ ಬೆಳಗಿನ ಜಾವ ದೇವಾನಂದ್ ಅವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದಾಗ ಅವರ ಕೈಗೆ ಸಿಕ್ಕಿಬಿದ್ದಿದ್ದು, ಸರಸ್ವತಿಪುರಂ ಠಾಣೆಯ ಪೊಲೀಸರಿಗೆ […]

ಬಜೆಟ್: ಮೋದಿ ಭದ್ರತೆಗೆ 600 ಕೋಟಿ ರೂ. ಮೀಸಲು

 ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ 600 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ (540 ಕೋಟಿ ರೂ.) ಹೋಲಿಸಿದರೆ ಈ ಬಾರಿ 60 ಕೋಟಿ ರೂ. ಹೆಚ್ಚಳವಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಪ್ರಸ್ತುತ 3000 ಮಂದಿಯ ಬಲಿಷ್ಠ ತಂಡ ಹೊಂದಿರುವ ಎಸ್‌ಪಿಜಿ (ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ರಕ್ಷಣೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡಮಟ್ಟದಲ್ಲಿ ಜೀವ ಬೆದರಿಕೆ ಇರುವುದನ್ನು ಒಪ್ಪಿಕೊಂಡಿದ್ದ ಕೇಂದ್ರ ಸರ್ಕಾರವು ಈ ಹಿಂದೆ ಭದ್ರತಾ […]

ಸಂಸದರಿಗೆ ಸಂವಿಧಾನ ಪ್ರಬಂಧ ಸ್ಪರ್ಧೆ ಏರ್ಪಡಿಸಿದರೆ, ಭಿಕ್ಷೆ ಎತ್ತಿ 1 ಕೋಟಿ ಬಹುಮಾನ ನೀಡುತ್ತೇನೆ: ಸಿ.ಎಸ್.ದ್ವಾರಕನಾಥ್

 ಮೈಸೂರು: ಸಂವಿಧಾನ ಪ್ರಬಂಧ ಸ್ಪರ್ಧೆಯನ್ನು ಸಂಸತ್ತಿನ 554 ಸಂಸದರಿಗೂ ಆಯೋಜಿಸಿದರೆ, ನಾನು ಭಿಕ್ಷೆ ಎತ್ತಿ 1 ಕೋಟಿ ರೂ. ಬಹುಮಾನ ಕೊಡುತ್ತೇನೆ. ವಿದ್ಯಾರ್ಥಿಗಳಿಗಿಂತ ಸಂಸದರಿಗೆ ಸಂವಿಧಾನ ತಿಳಿಸಬೇಕು. ಅದಕ್ಕಾಗಿ ಸಂಸದರಿಗೆ ಈ ರೀತಿಯ ಸ್ಪರ್ಧೆ ಆಯೋಜಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್‍ ಲೇವಡಿ ಮಾಡಿದರು.  ಬಹುಜನ ವಿದ್ಯಾರ್ಥಿ ಸಂಘವು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ […]

ಭಾರತಕ್ಕೆ 7 ರನ್ ಜಯ; ನ್ಯೂಜಿಲೆಂಡ್‌ಗೆ ವೈಟ್‌ವಾಷ್ ಮುಖಭಂಗ

 ಮೌಂಟ್ ಮೌಂಗುನಿ: ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯವನ್ನು 7 ರನ್ ಗಳಿಂದ ಗೆದ್ದ ಭಾರತ, ನ್ಯೂಜಿಲೆಂಡ್ ನೆಲದಲ್ಲಿ 5-0 ಅಂತರದಿಂದ ಸರಣಿ ಗೆದ್ದು ವೈಟ್‌ವಾಷ್ ಸಾಧನೆ ಮಾಡಿದೆ.  ಭಾನುವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್ ಗೆ 163 ರನ್ ಕಲೆ ಹಾಕಿತು. ಸಾಧಾರಣ ಮೊತ್ತ ಬೆಂಬತ್ತಿದ ನ್ಯೂಜಿಲೆಂಡ್ ಇಬ್ಬರು ಬ್ಯಾಟ್ಸ್‍ಮನ್‍ಗಳು ಬಾರಿಸಿದ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 9 ವಿಕೆಟ್ ಗೆ 156 […]

ದೇಶಕ್ಕಾಗಿ ಆರ್‌ಎಸ್‌ಎಸ್, ಬಿಜೆಪಿ ಮೂರು ಕಾಸಿನ ತ್ಯಾಗ ಮಾಡಿಲ್ಲ: ಸಿದ್ದರಾಮಯ್ಯ ಟೀಕೆ

 ದೇಶಕ್ಕಾಗಿ ಆರ್‍ಎಸ್‍ಎಸ್‍, ಬಿಜೆಪಿ ಮೂರು ಕಾಸಿನ ತ್ಯಾಗ ಮಾಡಿಲ್ಲ. ಇವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಪ್ರತಿಪಾದಿಸುವ ದೇಶಭಕ್ತಿಯನ್ನು ಪರೋಕ್ಷವಾಗಿ ಟೀಕಿಸಿದರು.  ಮೈಸೂರು ನಗರ ಮತ್ತು ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ‘ಅಸಾಂವಿಧಾನಿಕ ಹಾಗೂ ತಾರತಮ್ಯದ ಎನ್.ಪಿ.ಆರ್, ಎನ್.ಆರ್.ಸಿ, ಸಿಎಎ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಮಾತನಾಡಿದರು.  ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಅವರ ಸ್ನೇಹಿತನಿಗೆ ಗಲ್ಲು ಶಿಕ್ಷೆಯಾದಾಗ, […]

ಮಂಗಳೂರು ಬಾಂಬ್ ಪ್ರಕರಣ; ಆದಿತ್ಯ ರಾವ್‌ಗೆ 14 ದಿನ ನ್ಯಾಯಾಂಗ ಬಂಧನ

 ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಬಂಧಿತ ಆರೋಪಿ ಆದಿತ್ಯ ರಾವ್‍ನನ್ನು ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯ 10 ದಿನಗಳ ಪೊಲೀಸ್‍ ಕಸ್ಟಡಿ ನಿನ್ನೆಗೆ (ಶನಿವಾರ) ಮುಕ್ತಾಯವಾಯಿತು.  10 ದಿನಗಳು ಪೊಲೀಸ್‍ ಕಸ್ಟಡಿಯಲ್ಲಿದ್ದಾಗ ಆರೋಪಿಯನ್ನು ಮಂಗಳೂರಿನ ವಿವಿಧ ಕಡೆ ಹಾಗೂ ಉಡುಪಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು. ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಉಳಿದುಕೊಂಡಿದ್ದ ಕೊಠಡಿಗೂ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸೋತವರಿಗೆ ಸಚಿವ ಸ್ಥಾನ ಇಲ್ಲ: ಸಿಎಂ ಹೇಳಿಕೆ ವಿರುದ್ಧ ಎಚ್.ವಿಶ್ವನಾಥ್ ಕಿಡಿ

 ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಬಿಜೆಪಿ ಪರಾಜಿತ ಅಭ್ಯರ್ಥಿ ಅಡಗೂರು ಎಚ್‍.ವಿಶ್ವನಾಥ್‍ ವಿರೋಧಿಸಿದ್ದಾರೆ. ‘ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂಗೆ ಬಿಟ್ಟ ವಿಚಾರ. ಅವರು ಕಾನೂನಿನ ಸಬೂಬು ಹೇಳಿದರೆ ನಾನು ಒಪ್ಪುವುದಿಲ್ಲ’ ಎಂದು ಎಚ್‍.ವಿಶ್ವನಾಥ್‍ ಕಿಡಿಕಾರಿದ್ದಾರೆ.  ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‍, ಸೋತು ಸುಣ್ಣವಾಗಿರುವ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೀರಿ. ಸೋತ ಚನ್ನಪಟ್ಟಣದವರಿಗೂ ಸಚಿವ ಸ್ಥಾನ ಕೊಡುತ್ತಿದ್ದೀರಿ. ಬಿಎಸ್‍ವೈರನ್ನು ಸಿಎಂ ಮಾಡಲು ಬಾವುಟ ಹಿಡಿದು ನಿಂತಿವು. ಅವರಿಗಾಗಿ ನಿಂತವರಿಗೆ ಹೀಗೆ […]

ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಫೆ.6ರಂದು ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಫೆ.6ರಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಫೆ.6ರಂದು ನೂತನ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ. ಅಂದು ರಾಜಭವನದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.  ಹಾಲಿ ಸಚಿವರಲ್ಲಿ ಕೆಲವರನ್ನು ಕೈಬಿಟ್ಟು ಸಂಪುಟ ಪುನರ್‍ರಚನೆ ಮಾಡುವ ಚಿಂತನೆ ಇತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ, ಸಂಪುಟ ವಿಸ್ತರಣೆಯೋ ಅಥವಾ ಪುನರ್‍ರಚನೆಯೋ ಎಂಬ ವಿಚಾರ […]