You cannot copy content of this page.
. . .

Day: February 1, 2020

ಕಾವೇರಿ ನದಿ ನೀರೂ ಕುಡಿಯಲು ಯೋಗ್ಯವಲ್ಲ..!; ಶುದ್ಧೀಕರಿಸಲೇಬೇಕು..!

    ಕಾವೇರಿ ನದಿ ನೀರು ಸೇರಿ ರಾಜ್ಯದ ಯಾವುದೇ ನದಿ ನೀರು ಕುಡಿಯುವುದಕ್ಕೆ ಯೋಗ್ಯವಲ್ಲವಂತೆ. ಈ ವರದಿ ನೀಡಿರೋದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ಈ ಬಗ್ಗೆ ಖಾಸಗಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.   ನದಿಗಳ ನೀರಿನ ಗುಣಮಟ್ಟದ ಕುರಿತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ವಿಚಾರಣೆ ಮಾಡುತ್ತದೆ. ಈ ಮೇಲ್ವಿಚಾರಣೆ ಮಾಹಿತಿ ಪ್ರಕಾರ ರಾಜ್ಯದ ಯಾವ ನದಿಯ ನೀರೂ ಕುಡಿಯವುದಕ್ಕೆ ಯೋಗ್ಯವಲ್ಲವಂತೆ..!. ಕಾವೇರಿ ನದಿ ನೀರಿಗೆ ‘ಸಿ’ ಗ್ರೇಡ್‍ ನೀಡಲಾಗಿದೆ. ಹೀಗಾಗಿ ಕಾವೇರಿ […]

ಉಡಾನ್ ನಲ್ಲಿ ಯಾವ್ ಬೋರೇಗೌಡನ್ನ ತಗೊಂಡೋಗ್ತಾರೆ..?: ಸಿದ್ದರಾಮಯ್ಯ

  ಕೃಷಿ ಉಡಾನ್‍ ಯೋಜನೆಯಲ್ಲಿ ಯಾವ ಬೋರೇಗೌಡನ್ನ ತಗೊಂಡೋಗ್ತಾರೆ..? . ಕೇವಲ ಅಂಬಾನಿ, ಅದಾನಿಯನ್ನು ಮಾತ್ರ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.   ಮೈಸೂರಿನಲ್ಲಿ ಮಾತನಾಡಿದ ಅವರು, ಕೃಷಿ ಉಡಾನ್ ಯಾರಿಗೆ ಅನುಕೂಲವಾಗಲಿದೆ. ಕಾರ್ಪೋರೇಟ್ ಕುಳಗಳಿಗೆ ಅನುಕೂಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆಯನ್ನು ಕಳೆದ ವರ್ಷವೂ ಘೋಷಿಸಿದ್ದರು. ಈ ವರ್ಷವೂ ಅದನ್ನೇ ಹೇಳುತ್ತಿದ್ದಾರೆ. ಇದು ನಗೆಪಾಟಲಿನ ವಿಷಯ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.

ಬಜೆಟ್‍ ನಿಂದ ರೈತರಿಗೆ ವರದಾನ : ಸಿಎಂ ಯಡಿಯೂರಪ್ಪ

ಕೇಂದ್ರ ಬಜೆಟ್ ಜನಪರ ಬಜೆಟ್ ಆಗಿದ್ದು, ರೈತರಿಗೆ ವರದಾನವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರಿಗೆ, ಬಡವರಿಗೆ, ಗ್ರಾಮೀಣ ಜನರಿಗೆ ಸಾಕಷ್ಟು ಒತ್ತು ನೀಡಲಾಗಿದೆ. ರೈತರಿಗೆ ಈ ಬಜೆಟ್ ವರದಾನವಾಗಿದೆ ಎಂದು ತಿಳಿಸಿದರು.   ದೇಶದ ಜಿಡಿಪಿ ಪ್ರಗತಿಗೆ ಈ ಬಜೆಟ್ ನೆರವಾಗಲಿದೆ. ರೈತರ ಉತ್ಪನ್ನ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಫ್‌ಡಿಐಯಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ […]

ರೈತರನ್ನು ಆಕಾಶದ ಮೇಲೆ ಓಡಿಸ್ತಾರಾ..? : HDK ವ್ಯಂಗ್ಯ

  ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸ್ತಾರಾ? ಎಂದು ಹೆಚ್​ಡಿಕೆ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಅತ್ಯಂತ ನಿರಾಶಾದಾಯಕವಾಗಿದ್ದು, ದೇಶಕ್ಕೆ ಮಾರಕವಾಗುತ್ತದೆಯೇ ಹೊರತು ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲವೆಂದು ಹೇಳಿದರು.   ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಘೋಷಣೆ ಮಾಡಿರುವ ಎಷ್ಟು ಯೋಜನೆಗಳು ಜಾರಿಯಾಗಿವೆ ಎಂಬುದನ್ನು ಹೇಳಿಲ್ಲ. ಹಣ ಹಂಚಿಕೆಯಲ್ಲೂ ಭಾರಿ ಕಡಿತವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಜಲ ಮಿಷನ್‌ಗೆ ಮೀಸಲಿಟ್ಟಿರುವ ಹಣದಲ್ಲಿ ಯಾವುದೇ ಜನರಿಗೆ ಅನುಕೂಲ ಆಗಲ್ಲ. […]

ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ ಪಕ್ಷಾಂತರ ಹಕ್ಕಿ: ಆರ್.ಧ್ರುವನಾರಾಯಣ ವ್ಯಂಗ್ಯ

 ಎಚ್‍.ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಎಂದು ವ್ಯಂಗ್ಯವಾಡಿದ್ದಾರೆ.‘ಆಪರೇಷನ್ ಕಮಲ’ ಕುರಿತು ಪುಸ್ತಕ ಬರೆಯುವೆ ಎಂಬ ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಸಿರುವ ಅವರು, ವಿಶ್ವನಾಥ್ ಅವರಿಗೆ ಯಾವುದೇ ನೈತಿಕತೆಯಿಲ್ಲ. ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರ. ಕಾಂಗ್ರೆಸ್ ಪಕ್ಷ ಅವರಿಗೆ ನೀಡಿದಷ್ಟು ಅವಕಾಶವನ್ನು ಯಾವ ಪಕ್ಷವೂ ನೀಡಿರಲಿಲ್ಲ. ಅವರನ್ನು ಸಚಿವ ಸ್ಥಾನವನ್ನೂ ನೀಡಿತ್ತು ಎಂದರು.  ಕಾಂಗ್ರೆಸ್‌ಗೆ ದ್ರೋಹ ಮಾಡಿ ಜಾ.ದಳ ಸೇರಿದರು. ಜಾ.ದಳ ಕೂಡ […]

ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಕಾರ್ಯಕ್ರಮ

 ಈ ಬಾರಿ ಕೇಂದ್ರ ಬಜೆಟ್‍ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಯೋಜನೆ ಪ್ರಕಟಿಸಲಾಗಿದೆ. ಆ ಕಾರ್ಯಕ್ರಮಗಳ ವಿವರ ಹೀಗಿದೆ.  1) ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ 2) ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ 3) ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ […]

ಪರಿಶಿಷ್ಟ ಜಾತಿ, ವರ್ಗಕ್ಕೆ 1.38 ಲಕ್ಷ ಕೋಟಿ ರೂಪಾಯಿ

  ಕೇಂದ್ರ ಬಜೆಟ್​ 2020ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಬಲೀಕರಣಕ್ಕಾಗಿ 1.38 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.  ನಿರ್ಮಲಾ ಸೀತಾರಾಮನ್‍ ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ​ಮೇಲಿನ ಭಾಷಣದ ವೇಳೆ ಎಸ್​ಸಿ​-ಎಸ್​ಟಿ ಸಮಾಜದ ಅಭಿವೃದ್ಧಿಯ ಕುರಿತು ಸಮಗ್ರ ವಿವರಣೆ ನೀಡಿದರು. “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಸಬ್​ ಕಾ ಸಾಥ್ ಸಬ್ ಕಾ ವಿಕಾಸ್ ಸಬ್​ ಕಾ ವಿಶ್ವಾಸ್​’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸಮಾಜದ ಎಲ್ಲಾ ವರ್ಗದ […]

ಮಹಿಳಾ ಕಲ್ಯಾಣಕ್ಕಾಗಿ 28,600 ಕೋಟಿ ರೂಪಾಯಿ

 ಬಜೆಟ್​ ಮಂಡನೆಯ ಆರಂಭದಲ್ಲೇ ಯುವಜನರ ಉದ್ಯೋಗ, ಮಹಿಳೆಯರ ಸಬಲೀಕರಣ, ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಿರುವುದಾಗಿ ಘೋಷಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಕಲ್ಯಾಣಕ್ಕಾಗಿ 28,600 ಕೋಟಿ ರೂ. ಮೀಸಲಿಟ್ಟಿದ್ದಾರೆ.  ಈ ಬಾರಿಯ ಕೇಂದ್ರದ ಬಜೆಟ್‍ ​ನಲ್ಲಿ ಮಹಿಳಾ ಕಲ್ಯಾಣ ಇಲಾಖೆಗೆ 28,600 ಕೋಟಿ ರೂ. ಮೀಸಲಿಡಲಾಗಿದೆ. ಗರ್ಭಿಣಿಯರ ಸಾವನ್ನು ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಹೊಸ ಟಾಸ್ಕ್​ಫೋರ್ಸ್​ ರಚಿಸಲಾಗುವುದು. ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಬಜೆಟ್​ನಲ್ಲಿ ಹಣಕಾಸು ಸಚಿವೆ ಸೀತಾರಾಮನ್‍ […]

ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ

ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 99,300 ಕೋಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ 3,000 ಕೋಟಿ ಅನುದಾನ ನೀಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ನಿರ್ಮಲಾ ಸೀತಾರಾಮನ್ ಬಜೆಟ್‍ ನಲ್ಲಿ ಘೋಷಣೆ ಮಾಡಿದ್ದಾರೆ.  ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ಮೇಲಿನ ಭಾಷಣದ ವೇಳೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು. “ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ. […]

ಮೂಲ ಸೌಕರ್ಯಕ್ಕೆ 103 ಲಕ್ಷ ಕೋಟಿ ರೂಪಾಯಿ ಅನುದಾನ

ಮೂಲ ಸೌಕರ್ಯ ಅಭಿವೃದ್ಧಿ; 103 ಲಕ್ಷ ಕೋಟಿ ರೂಪಾಯಿ ಆರೋಗ್ಯ ಕ್ಷೇತ್ರ – 69000 ಕೋಟಿ ರೂಪಾಯಿ ಮಹಿಳೆಯರ ಕಲ್ಯಾಣ – 28,600 ಕೋಟಿ ರೂಪಾಯಿ ಶಿಕ್ಷಣ ಕ್ಷೇತ್ರ ; 99,30 ಕೋಟಿ ರೂಪಾಯಿ ಹಿರಿಯ ನಾಗರಿಕರು, ದಿವ್ಯಾಂಗರು; 9500 ಕೋಟಿ ರೂಪಾಯಿ ಅಂತರ್ಜಲ ಮಟ್ಟ ಹೆಚ್ಚಳ; 11,500 ಕೋಟಿ ರೂಪಾಯಿ 2021ರಲ್ಲಿ ಶೇಕಡ 10ರ ದರದಲ್ಲಿ ಜಿಡಿಪಿ ಏರಿಕೆಯಾಗುವ ವಿಶ್ವಾಸ ಮಕ್ಕಳ ಪೌಷ್ಠಿಕತೆ : 35,500 ಕೋಟಿ ರೂಪಾಯಿ ಸಾರಿಗೆ ವಲಯ; 1.7 ಲಕ್ಷ ಕೋಟಿ […]