You cannot copy content of this page.
. . .

Month: February 2020

ಎಡಬೆಟ್ಟ ಕುರುಚಲು ಅರಣ್ಯಕ್ಕೆ ಬೆಂಕಿ; 20 ಎಕರೆ ಭಸ್ಮ

 ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಎಡಬೆಟ್ಟದ ಕುರುಚಲು ಅರಣ್ಯಕ್ಕೆ ಬೆಂಕಿಬಿದ್ದು ಸುಮಾರು 15-20 ಎಕರೆಯಷ್ಟು ಸುಟ್ಟು ಭಸ್ಮವಾಗಿದೆ.  ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡು ಗಾಳಿ ಕಾರಣದಿಂದ ದಿಢೀರನೆ ಪಸರಿಸಿತು. ರಾತ್ರಿ ಹೊತ್ತಿಗೆ ಬೆಂಕಿ ವೇಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ತಹಬದಿಗೆ ತಂದರು. ಗಿಡಮರ, ಒಣಹುಲ್ಲು, ಗಿಡ-ಗಂಟಿಗಳು ಬೆಂದುಹೋಗಿವೆ. ಒಣಹುಲ್ಲು-ಕಡ್ಡಿಗಳೇ ಹೆಚ್ಚು ಇದ್ದುದರಿಂದ ಪಟಪಟನೆ ಹುರಿದು ಬೂದಿ ಆಗಿವೆ.  ಬೆಟ್ಟದಲ್ಲಿ ಸುತ್ತಮುತ್ತಲ ಗ್ರಾಮಗಳವರು ದನಕರುಗಳನ್ನು ಮೇಯಿಸುತ್ತಾರೆ. ಹೊಸಹುಲ್ಲು ಬೆಳೆದರೆ ಜಾನುವಾರುಗಳಿಗೆ ಅನುಕೂಲ ಆಗುತ್ತದೆ ಎಂದು ಬೆಂಕಿ ಇಟ್ಟಿರಬಹುದು. ಅಥವಾ ಬೀಡಿ, […]

ಕೆಜಿಎಫ್‌ ೨ನಲ್ಲಿ ಅನಂತ್‌ ನಾಗ್‌ ಇರಲ್ವಾ?

ಭಾರತ ಚಿತ್ರರಂಗದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಚಿತ್ರ ಕೆಜಿಎಫ್‌ ೨.. ಕೆಜಿಎಫ್‌ ನಿರೀಕ್ಷೆ ಮೀರಿ ಯಶಸ್ಸು ಗಳಿಸಿದ ನಂತರ ಕೆಜಿಎಫ್‌ ೨ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಆದ್ರೆ ಇದರ ಮಧ್ಯೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಕೆಜಿಎಫ್‌ ಭಾಗ ೧ ರಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಿರಿಯ ನಟ ಅನಂತ್‌ ನಾಗ್‌ ಕೆಜಿಎಫ್‌ ೨ನಲ್ಲಿ ಇರ್ತಾರೋ ಇರಲ್ವೋ ಅನ್ನೋದು. ಯಾಕಂದ್ರೆ ಅನಂತ್‌ ನಾಗ್‌ ಕೆಜಿಎಫ್‌ ಚಿತ್ರತಂಡದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಇದೇ ಕಾರಣಕ್ಕೆ ಅವರು ಚಿತ್ರದಿಂದ […]

ಹೊತ್ತಿ ಉರಿದ ದೆಹಲಿ: ಸಾವಿನ ಸಂಖ್ಯೆ ೧೦ಕ್ಕೆ ಏರಿಕೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದಲ್ಲಿ ದೆಹಲಿ ಹೊತ್ತಿ ಉರಿಯುತ್ತಿದೆ. ಇದುವರೆಗೂ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ೧೦ಕ್ಕೆ ಏರಿಕೆಯಾಗಿದ್ದು, ಘಟನೆಯಲ್ಲಿ ೧50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನೊಂದೆಡೆ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ, ದೆಹಲಿ ಸಿಎಂ ಕೇಜ್ರಿವಾಲ್‌ ಚರ್ಚೆ ನಡೆಸಿದ್ದು, ನಿಮ್ಮ ಜತೆಗೆ ನಾವಿದ್ದೇವೆ ಎನ್ನುವ ಅಭಯ ನೀಡಿದ್ದಾರೆ. ಘರ್ಷಣೆ ಹಿನ್ನೆಲೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಈಶಾನ್ಯ ದೆಹಲಿಯಲ್ಲಿ ಇನ್ನೂ ಒಂದು ವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ […]

ಜೆಡಿಎಸ್‌ ಜೊತೆ ಕೈ ಜೋಡಿಸಲಿದ್ದಾರೆ ಪ್ರಶಾಂತ್‌ ಕಿಶೋರ್!

೨೦೨೩ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ. ವಿಶೇಷ ಅಂದ್ರೆ ಈ ಬಾರಿ ಜೆಡಿಎಸ್‌ಗೆ ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ರಣತಂತ್ರ ರೂಪಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿಯವರೇ ಬಹಿರಂಗಪಡಿಸಿದ್ದಾರೆ. ಐ-ಪ್ಯಾಕ್ ಎಂಬ ಖಾಸಗಿ ಚುನಾವಣಾ ಪ್ರಚಾರ ಸಂಸ್ಥೆಯನ್ನು ನಡೆಸುತ್ತಿರುವ ಪ್ರಶಾಂತ್​ ಕಿಶೋರ್​ ಈ ಹಿಂದೆ 2014 ಮತ್ತು 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಪರಿಣಾಮ ಬಿಜೆಪಿ ಈ ಎರಡೂ ಚುನಾವಣೆಯಲ್ಲಿ ಅಖಂಡ ಗೆಲುವು ಸಾಧಿಸಿತ್ತು. ಇದಲ್ಲದೆ ಇತ್ತೀಚೆಗೆ […]

ಯುದ್ಧ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

 ಮೈಸೂರು: ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಸೈನಿಕರ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚಿಸಿದರು.  ಸೈನಿಕ ಸ್ಮಾರಕ ಭವನ ನಿರ್ಮಾಣ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು ೧.೪೧ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೊದಲ ಕಂತಿನಲ್ಲಿ ೫೦ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. […]

ಡಾಲಿ ಬಗ್ಗೆ ರಾಮ್‌ ಗೋಪಾಲ್‌ ವರ್ಮಾ ಹಾಗೆ ಹೇಳಿದ್ದೇಕೆ?

ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್‌ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜಬರ್ದಸ್ತ್‌ ನಟನೆ ಮೂಲಕ ಡಾಲಿ ಎಂದೇ ಫೇಮಸ್‌ ಆಗಿರೋ ಧನಂಜಯ್‌ ಈಗ ಪಾಪ್‌ ಕಾರ್ನ್‌ ಸಿನಿಮಾ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಅವರ ಫೇವರೇಟ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಮಾತುಗಳಿಗೆ ಫಿದಾ ಆಗಿದ್ದಾರೆ. ಭೈರವ ಗೀತಾ ತೆಲುಗು ಸಿನಿಮಾದಲ್ಲಿ ಕೆಲಸ ಮಾಡಿದ್ದ ಧನಂಜಯ್‌ ಬಗ್ಗೆ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾಗೆ ಎಲ್ಲಿಲ್ಲದ ಪ್ರೀತಿ. ಹೀಗಾಗೇ ಅವರು ಧನಂಜಯ್‌ ನಟನೆಯ ಪಾಪ್‌ಕಾರ್ನ್‌ ಚಿತ್ರವನ್ನು ಹಾಡಿ ಹೊಗಳಿದ್ದಾರೆ. […]

ಪಿಯುಸಿ ವಿದ್ಯಾರ್ಥಿಗಳೇ ಪರೀಕ್ಷೆ ವೇಳೆ ಹುಷಾರ್!

ಇನ್ನೇನು ಕೆಲವೇ ದಿನಗಳಲ್ಲಿ ಪಿಯುಸಿ ಪರೀಕ್ಷೆಗಳು ಬರ್ತಿವೆ. ಮಾರ್ಚ್‌ ೪ ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಇದರೊಟ್ಟಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕವೂ ಪ್ರತಿವರ್ಷದಂತೆ ಈ ವರ್ಷವೂ ಕಾಡ್ತಿದೆ. ಆದ್ರೆ ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಬಾರದು ಅಂತಾ ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ, ಇದಕ್ಕಾಗಿ ಪರೀಕ್ಷೆ ವೇಳೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇನ್ಮುಂದೆ ಪರೀಕ್ಷೆಗಳನ್ನು ಬರೆಯುವ ಮಧ್ಯೆ ಎದ್ದು ಕೊಠಡಿಯಿಂದ ಹೊರ ಬರುವಂತಿಲ್ಲ. ಹೊರ ಬರಲೇಬೇಕಾದರೆ ನೀವು ಹೊರಬರಬಹುದು, ಆದ್ರೆ […]

ಇವಾಂಕಾ ಟ್ರಂಪ್‌ ಶೇರ್ವಾನಿ ವಿಶೇಷ ಏನು ಗೊತ್ತಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಸ್ಟೈಲಿಶ್‌ ಅನ್ನೋದು ಎಲ್ಲರಿಗೂ ಗೊತ್ತಿರೋದೆ.. ಆದ್ರೆ ಭಾರತದ ೨ನೇ ದಿನದ ಪ್ರವಾಸದಲ್ಲಿ ಇವಾಂಕಾ ಟ್ರಂಪ್‌ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿದ್ರು. ಬಿಳಿ ಬಣ್ಣದ ಶೇರ್ವಾನಿ ಎಲ್ಲರ ಕಣ್ಣು ಕುಕ್ಕುತ್ತಿತ್ತು. ಅಂದಹಾಗೇ ಈ ಶೇರ್ವಾನಿ ಅಪ್ಪಟ ಭಾರತೀಯ ಸಂಸ್ಕೃತಿಯದ್ದು. ಭಾರತದ ಡ್ರೆಸ್‌ನಲ್ಲಿ ಮಿಂಚಿದ ಇವಾಂಕಾ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. ವಿಶೇಷ ಅಂದ್ರೆ ಇದು ೨೦ ವರ್ಷಗಳ ಹಿಂದಿನ ವಿನ್ಯಾಸದ ಡ್ರೆಸ್.‌ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಸಿಲ್ಕ್‌ನಿಂದ ತಯಾರಿಸಿರೋ ಈ […]

ಬ್ಯೂಟಿ ಪಾರ್ಲರ್‌ನಲ್ಲಿ ಕಳವು

 ಮೈಸೂರು: ಬ್ಯೂಟಿ ಪಾರ್ಲರ್ ಇಟ್ಟಿದ್ದ 2.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಅನ್ನು ಕಳವು ಮಾಡಿದ್ದಾರೆ.  ಸಿದ್ದಪ್ಪ  ವೃತ್ತದಲ್ಲಿ ಶ್ರಾವ್ಯ ಬ್ಯೂಟಿ ಪಾರ್ಲರ್ ನಡೆಸುವ ಸುಪ್ರಿಯಾ ಅವರೇ ಕಳದುಕೊಂಡವರು. ಇವರು ತಮ್ಮ ಶ್ರಾವ್ಯ ಬ್ಯೂಟಿ ಪಾರ್ಲರ್ ನ ಒಳಗೆ ಟೇಬಲ್ ಮೇಲೆ ತಮ್ಮ ಒಂದು ಮೊಬೈಲ್ ಫೋನ್ ಹಾಗೂ ಸುಮಾರು 75 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಇಟ್ಟು ಸ್ನಾನ ಮಾಡಲು ಹೋಗಿ, ಸ್ನಾನ ಮುಗಿಸಿ ಕೊಂಡು ವಾಪಾಸ್ ಸಂಜೆ ಬಂದು ನೋಡಿದಾಗ ತಾವು […]

ಕರ್ನಾಟಕ ವಿ.ವಿ. ಕಾಯ್ದೆಗೆ ತಿದ್ದುಪಡಿ; ಸರ್ಕಾರದ ನಿಲುವು ಖಂಡನೀಯ: ಎಚ್.ಎ.ವೆಂಕಟೇಶ್‌

 ಮೈಸೂರು: ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಬೇಕಾಗಿರುವ ವ್ಯಕ್ತಿಯನ್ನು ವಿ.ವಿ. ಕುಲಪತಿಯಾಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿರುವ ಬಿಜೆಪಿ ನೇತೃತ್ವದ ಸರ್ಕಾರ, ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಟಕೇಶ್ ದೂರಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಸ್ವಾಯತ್ತವಾಗಿರುವ ವಿ.ವಿ.ಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ತಾವೇ ಕುಲಪತಿ ನೇಮಕ ಮಾಡಲು ರಾಜ್ಯದ ಬಿಜೆಪಿ ಸರ್ಕಾರ ಹೊರಟಿರುವುದು ಅವೈಜ್ಞಾನಿಕ ಹಾಗೂ ಶಿಕ್ಷಣ ವ್ಯವಸ್ಥೆಗೆ […]