You cannot copy content of this page.
. . .

Day: January 25, 2020

ನಾನು ಡಿಸಿಎಂ ಸ್ಥಾನ ಕೇಳಿದ್ದೇನಾ..?; ವಿಶ್ವನಾಥ್‍ ಪ್ರಶ್ನೆ

 ಬಿಜೆಪಿಗಾಗಿ ನಾನು ಕಳಂಕ ಹೊತ್ತಿದ್ದೇನೆ, ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ಯಶವಂತಪುರ ಶಾಸಕರಾದ ಎಸ್.ಟಿ ಸೋಮಶೇಖರ್ ಅವರು, ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಸ್ಥಾನ ಒತ್ತಡ ಹಾಕಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಸೋತಿರುವ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಿಲ್ವಾ? ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ? ಕೇಳ್ತಿರೋದು ಮಂತ್ರಿ ಸ್ಥಾನ ಮಾತ್ರ ಎಂದು ತಿರುಗೇಟು ನೀಡಿದರು. ಸೋತ ಮೇಲೂ ಅರುಣ್ ಜೆಟ್ಲಿ […]

ಬೆವರಿನಿಂದ ಮುಖ ಮಸಾಜ್‍; ತಮ್ಮ ತ್ವಚೆಯ ಕಾಂತಿಯ ರಹಸ್ಯ ಬಿಚ್ಚಿಟ್ಟ ಮೋದಿ

  ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮುಖದ ತ್ವಚೆಯ ಕಾಂತಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ದಿನದಲ್ಲಿ ಸಾಕಷ್ಟು ಬಾರಿ ಬೆವರುತ್ತೇನೆ. ಅದರಿಂದ ನಾನು ಮುಖವನ್ನು ಮಸಾಜ್‍ ಮಾಡಿಕೊಳ್ಳುತ್ತೇನೆ. ಬೆವರು ನನ್ನ ಮುಖಕ್ಕೆ ಹೊಳಪು ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.   ಪ್ರಧಾನಮಂತ್ರಿ ಬಾಲ ಪುರಸ್ಕಾರಕ್ಕೆ ಭಾಜನರಾದ 49 ಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ತಮ್ಮ […]

ಎಸ್‍.ಎಲ್‍.ಭೈರಪ್ಪಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ

ವರಕವಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ 2019-20ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಟ್ರಸ್ಟ್ ವತಿಯಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಬೇಂದ್ರೆ ಪ್ರಶಸ್ತಿಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪರನ್ನು ಆಯ್ಕೆ ಮಾಡಲಾಗಿದೆ.   ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟ್  ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ,  ಈ ಪ್ರಶಸ್ತಿಯನ್ನು ಜ.31ರಂದು ಸಂಜೆ ಐದು ಗಂಟೆಗೆ ಧಾರವಾಡದ ಬೇಂದ್ರೆ ಭವನದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಸಾಹಿತಿ ಡಾ.ಗುರುಲಿಂಗ ಕಾಪಸೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿ […]

ನಾವು ಗುಂಪಾಗಿರಲ್ಲ, ಎಲ್ಲರಿಗೂ ಮಂತ್ರಿಗಿರಿ ಕೇಳಲ್ಲ; ಎಸ್‍.ಟಿ.ಸೋಮಶೇಖರ್

 ನಾವು ಈಗ ಬಿಜೆಪಿ ಶಾಸಕರು. ನಾವು ಮುಂದೆ ಇದ್ದ ರೀತಿ ಇನ್ಮುಂದೆ ಗುಂಪಾಗಿ ಇರುವುದಿಲ್ಲ ಎಂದು ಯಶವಂತಪುರದ ಶಾಸಕ ಎಸ್‍.ಟಿ.ಸೋಮಶೇಖರ್‍ ಹೇಳಿದ್ದಾರೆ. ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲಿದ್ದ ಪರಿಸ್ಥಿತಿ ಈಗಿಲ್ಲ. ಹೀಗಾಗಿ ನಾವು ಮೊದಲಿನಂತೆ ಒಟ್ಟಿಗೆ ಸಭೆ ನಡೆಸಿ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.   ಉಪಚುನಾವಣೆ ಸಂದರ್ಭದಲ್ಲಿ ಕೆಲವರಿಗೆ ಸ್ಪರ್ಧಿಸದಂತೆ ಯಡಿಯೂರಪ್ಪ ಸೂಚಿಸಿದ್ದರು. ಅದಕ್ಕೆ ಆರ್‍.ಶಂಕರ್‍ ಮಾತ್ರ ಒಪ್ಪಿದರು. ಆದರೆ ಎಂಟಿಬಿ ನಾಗರಾಜ್‍ ಹಾಗೂ ಎಚ್‍.ವಿಶ್ವನಾಥ್‍ ಒಪ್ಪಲಿಲ್ಲ ಎಂದು ಇದೇ […]

ಸುತ್ತೂರು ಜಾತ್ರೆಯಲ್ಲಿ ಹ್ಯಾಟ್ರಿಕ್‍ ಹೀರೋ

 ಸುತ್ತೂರು ಜಾತ್ರಾ ಕಾರ್ಯಕ್ರಮಕ್ಕೆ ಇವತ್ತು ಸ್ಟಾರ್‍ ಮೆರುಗು ಬಂದಿತ್ತು. ಹ್ಯಾಟ್ರಿಕ್‍ ಹೀರೊ ಶಿವರಾಜ್ ‍ಕುಮಾರ್‍ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಮಾತನಾಡಿದ ಶಿವರಾಜ್‍ ಕುಮಾರ್‍, ಸುತ್ತೂರಿಗೆ ಎರಡನೇ ಬಾರಿ ನಾನು ಬರುತ್ತಿದ್ದು, ಬಹಳ ಸಂತೋಷ ಆಗುತ್ತದೆ. ಜಾತ್ರೆ ನೋಡಿದರೆ ನಮ್ಮ ಬಾಲ್ಯದ ನೆನಪಾಗುತ್ತದೆ. ಜಾತ್ರೆ ಎಂಬುದೇ ಒಂದು ಸಡಗರ, ಅದನ್ನು ಅನುಭವಿಸಬೇಕು. ಎಲ್ಲರಿಗೂ ಶಿಕ್ಷಣ ಕೊಡುವ ಜತೆಗೆ ಇಂತಹದೊಂದು ಹಬ್ಬವನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸುತ್ತಿರುವುದು ಸಂತೋಷದ ಸಂಗತಿ ಎಂದರು. ಈ ವೇಳೆ ಹಾಡುಗಳನ್ನು […]

ಭಾರತ ಮಹಾಭಾರತವಾಗದಿರಲಿ: ರಂಜನ್ ದರ್ಗಾ

   ಭಾರತ ಮಹಾಭಾರತವಾಗದಂತೆ ತಡೆಯುವುದು ನಮ್ಮ ಕರ್ತವ್ಯವಾಗಿದೆ. ಇಂದಿನ ಯುವ ಸಮುದಾಯ ಭಾರತವನ್ನು ಉಳಿಸಬೇಕಿದೆ ಎಂದು ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.   ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ‘೭೦ ವರ್ಷಗಳ ಗಣರಾಜ್ಯ ನಡಿಗೆಯಲ್ಲಿ ಅಂಬೇಡ್ಕರ್ ಚಿಂತನೆಗಳ ಒಳಗೊಳ್ಳುವಿಕೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತವನ್ನು ಮಹಾಭಾರತ ಮಾಡಲು ಕೋಮುವಾದಿಗಳು, ಉಗ್ರಗಾಮಿಗಳು ಹೊರಟಿದ್ದಾರೆ. ಮಹಾಭಾರತದ ಯುದ್ಧ ಸಂಭವಿಸಿ ಲಕ್ಷಾಂತರ ಹೆಣ್ಣುಮಕ್ಕಳು ವಿಧವೆಯರಾದರು. ಇಂತಹ ಪರಿಸ್ಥಿತಿಯನ್ನು ಮತ್ತೆ ನಿರ್ಮಿಸಲು ಹೊರಟಿದ್ದಾರೆ. ಇದನ್ನು ಬೇಗ ಅರ್ಥ […]

ದೇಶ ಸುತ್ತುವ ಪ್ರವಾಸಿಗರಿಗೆ ಕೇಂದ್ರದಿಂದ ಪ್ರಯಾಣ ವೆಚ್ಚ

  ವರ್ಷದಲ್ಲಿ ಕನಿಷ್ಠ 15 ಸ್ಥಳಗಳಿಗೆ ಭೇಟಿ ನೀಡಿರುವ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಪ್ರಯಾಣ ವೆಚ್ಚ ನೀಡಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಹೇಳಿದರು. ಕೋನಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರವಾಸ ಸಮ್ಮೇಳನದ ಸಮಾರೋಪ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.      2022 ರೊಳಗೆ ದೇಶದ 15 ಸ್ಥಳಗಳಲ್ಲಿ ಪ್ರವಾಸ ಕೈಗೊಂಡವರಿಗೆ ಪ್ರವಾಸೋದ್ಯಮ ಸಚಿವಾಲಯ ಪ್ರಯಾಣದ ಖರ್ಚು ನೀಡಲಿದೆ. ಸಚಿವಾಲಯದ ವೆಬ್‌ಸೈಟ್‌ಗೆ ಫೋಟೊ ಅಪ್‍ ಲೋಡ್‍ ಮೂಡುವ ಮೂಲಕ ಪ್ರೋತ್ಸಾಹ […]

ಪ್ರೀತಿಯ ಕೋತಿಗೆ ದೇಗುಲ ಕಟ್ಟಿಸುತ್ತಿರುವ ಸಾರಾ ಮಹೇಶ್

   ಶಾಸಕ ಸಾರಾ ಮಹೇಶ್‍ ಅವರು ಮೈಸೂರಿನ ಸಾಲಿಗ್ರಾಮದ ಅವರ ತೋಟದ ಮನೆಯಲ್ಲಿ ಸಾಕಿದ್ದ ಕೋತಿ ಚಿಂಟು ಇತ್ತೀಚೆಗೆ ಸಾವನ್ನಪ್ಪಿತ್ತು. ಅದಕ್ಕಾಗಿ ಸಾರಾ ಮಹೇಶ್‍ ದೇಗುಲ ನಿರ್ಮಿಸುತ್ತಿದ್ದಾರೆಂದು ತಿಳಿದು ಬಂದಿದೆ.  ಕೋತಿಯ ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲೇ ಸುಮಾರು  20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದೆ. ಕಾಮಗಾರಿ ಬಹುತೇಕ ಮುಗಿದಿದೆ. ಸಾರಾ ಅವರ ತೋಟದಲ್ಲಿ ಕೋತಿ ಮರಿ ಚಿಂಟು ಮತ್ತು ಕುರಿಮರಿ ಹೆಚ್ಚು ಆಪ್ತವಾಗಿದ್ದವಂತೆ. ಚಿಂಟು ಕುರಿಮರಿಯ ಮೇಲೆ ಹತ್ತಿ ಆಟವಾಡುತ್ತಿತ್ತಂತೆ. ಆದರೆ ಕುರಿ ಮರಿ […]

ಭಾರತದಲ್ಲೂ ಕರೋನಾ ಭೀತಿ; ಬೆಂಗಳೂರಲ್ಲಿ ಒಬ್ಬರಿಗೆ ಚಿಕಿತ್ಸೆ

  ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಆಂತಕ ಸೃಷ್ಟಿಸಿದೆ. ಚೀನಾದಿಂದ ಬಂದಿರುವ 11 ಮಂದಿಯ ಪೈಕಿ 7 ಮಂದಿಯಲ್ಲಿ ಕೊರೋನಾ ವೈರಸ್  ಲಕ್ಷಣಗಳು ಕಂಡುಬಂದಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   ಚೀನಾ ರಾಷ್ಟ್ರದಿಂದ ಭಾರತಕ್ಕೆ ಇತ್ತೀಚೆಗೆ ಆಗಮಿಸಿರುವವರ ಪೈಕಿ ಹಲವಾರು ಜನರಲ್ಲಿ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7, ಮುಂಬೈನಲ್ಲಿ ಇಬ್ಬರು, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ ತಲಾ ಒಬ್ಬರನ್ನು ಪ್ರತ್ಯೇಕ ಕೋಣೆಯಲ್ಲಿ […]

ಟರ್ಕಿಯಲ್ಲಿ ಭಾರೀ ಭೂಕಂಪ; 20 ಮಂದಿ ಬಲಿ..!

  ಪೂರ್ವ ಟರ್ಕಿಯ ಎಲಾಜಿಂಗ್‌ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರೀ ಭೂಕಂಪ ಸಂಭವಿಸಿದೆ. ದುರಂತದಲ್ಲಿ 20 ಮಂದಿ ಸಾವಿಗೀಡಾಗಿದ್ದು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.   ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.7ರಷ್ಟು ದಾಖಲಾಗಿದೆ. ಪೂರ್ವ ಟರ್ಕಿ ಪ್ರಾಂತ್ಯದ ಸಿವ್ರೈಸ್‌ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪನದ ತೀವ್ರತೆಗೆ ಹತ್ತಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡ ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಎಲಾಜಿಂಗ್ ನಗರದಲ್ಲಿ 30 ಮಂದಿ […]